Sports Quota: ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದ 1899 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, ವಿವರ ಹೀಗಿದೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sports Quota: ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದ 1899 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, ವಿವರ ಹೀಗಿದೆ ನೋಡಿ

Sports Quota: ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದ 1899 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, ವಿವರ ಹೀಗಿದೆ ನೋಡಿ

ಅಂಚೆ ಇಲಾಖೆಯಲ್ಲಿ ಒಟ್ಟು 1899 ಹುದ್ದೆಗಳನ್ನು ಕ್ರೀಡಾ ಕೋಟಾದಡಿ ಭರ್ತಿ ಮಾಡಲು ಇಲಾಖೆ ತೀರ್ಮಾನಿಸಿದೆ. ಇದರಂತೆ ಅರ್ಹ ಅಭ್ಯರ್ಥಿಗಳು ನವೆಂಬರ್ 10 ರಿಂದ ಅರ್ಜಿ ಸಲ್ಲಿಸಬಹುದು. ಇದರ ವಿವರ ಇಲ್ಲಿದೆ.

ಭಾರತೀಯ ಅಂಚೆ ಇಲಾಖೆಯಲ್ಲಿವೆ ಕ್ರೀಡಾ ಕೋಟಾದ 1899 ಹುದ್ದೆಗಳು
ಭಾರತೀಯ ಅಂಚೆ ಇಲಾಖೆಯಲ್ಲಿವೆ ಕ್ರೀಡಾ ಕೋಟಾದ 1899 ಹುದ್ದೆಗಳು (HT Photo)

ಸಂವಹನ ಸಚಿವಾಲಯದ ಅಧೀನ ಇರುವಂತಹ ಭಾರತೀಯ ಅಂಚೆ ಇಲಾಖೆಯು ಕ್ರೀಡಾ ಕೋಟಾದಲ್ಲಿರುವ ಪೋಸ್ಟಲ್ ಅಸಿಸ್ಟೆಂಟ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ dopsportsrecruitment.cept.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಅಂಚೆ ಇಲಾಖೆಯಲ್ಲಿರುವ ಒಟ್ಟು 1899 ಹುದ್ದೆಗಳನ್ನು ಕ್ರೀಡಾ ಕೋಟಾದಡಿ ಭರ್ತಿ ಮಾಡಲು ಇಲಾಖೆ ತೀರ್ಮಾನಿಸಿದೆ. ಇದರಂತೆ ಅರ್ಹ ಅಭ್ಯರ್ಥಿಗಳು ನವೆಂಬರ್ 10 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಡಿಸೆಂಬರ್ 10 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿರುತ್ತದೆ. ಡಿಸೆಂಬರ್ 10ರಿಂದ 14ರ ತನಕ ಸಲ್ಲಿಸಿದ ಅರ್ಜಿಯ ಲೋಪ ದೋಷ ಸರಿಪಡಿಸುವುದಕ್ಕೆ ಅವಕಾಶ ಇದೆ.

ಅಂಚೆ ಇಲಾಖೆಯಲ್ಲಿರುವ ಕ್ರೀಡಾ ಕೋಟಾದ 1899 ಖಾಲಿ ಹುದ್ದೆಗಳ ವಿವರ ಹೀಗಿದೆ

  • ಪೋಸ್ಟಲ್ ಅಸಿಸ್ಟೆಂಟ್ : 598 ಹುದ್ದೆಗಳು
  • ಸೋರ್ಟಿಂಗ್ ಅಸಿಸ್ಟೆಂಟ್ : 143 ಹುದ್ದೆಗಳು
  • ಪೋಸ್ಟ್‌ಮ್ಯಾನ್ : 585 ಹುದ್ದೆಗಳು
  • ಮೇಲ್‌ ಗಾರ್ಡ್‌ : 3 ಹುದ್ದೆಗಳು
  • ಮಲ್ಟಿ ಟಾಸ್ಕಿಂಗ್ ಸ್ಟಾಫ್ : 570 ಹುದ್ದೆಗಳು

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡ

ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.

ಅಂಚೆ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ

ಆದ್ಯತೆಯ ಮೇರೆಗೆ ಯಾವ ಹುದ್ದೆ ಎಂಬುದನ್ನು ನಮೂದಿಸಿದ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್‌ "https://dopsportsrecruitment.cept.gov.in" ನಲ್ಲಿ ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ಸಲ್ಲಿಸಬೇಕು. ಆದ್ಯತೆ ಹುದ್ದೆಗಳು ಎಂದರೆ, ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮುಂತಾದ ಘೋಷಿತ ಹುದ್ದೆಗಳು.

ಅರ್ಜಿ ಶುಲ್ಕ ಎಷ್ಟು

ಅರ್ಜಿ ಶುಲ್ಕ 100 ರೂಪಾಯಿ. ಮಹಿಳಾ ಅಭ್ಯರ್ಥಿಗಳು, ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮಾನದಂಡ ಪ್ರಕಾರ ಅಂಗವಿಕಲರಾಗಿರುವ ವ್ಯಕ್ತಿಗಳು (PwBD) ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (EWS) ಗೆ ಸೇರಿದ ಅಭ್ಯರ್ಥಿಗಳು ಶುಲ್ಕ ಪಾವತಿಯಿಂದ ವಿನಾಯಿತಿ ಪಡೆದಿದ್ದಾರೆ. ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಇತ್ಯಾದಿಗಳ ಮೂಲಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.