ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ2023 ರ ಅಂತಿಮ ಫಲಿತಾಂಶ ಪಟ್ಟಿ ಶೀಘ್ರ, ರಿಸಲ್ಟ್ ನೋಡುವುದು ಹೀಗೆ

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ2023 ರ ಅಂತಿಮ ಫಲಿತಾಂಶ ಪಟ್ಟಿ ಶೀಘ್ರ, ರಿಸಲ್ಟ್ ನೋಡುವುದು ಹೀಗೆ

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2023 (UPSC Civil Service Exams 2023)ರ ಅಂತಿಮ ಫಲಿತಾಂಶ ಪಟ್ಟಿ ಶೀಘ್ರ ಪ್ರಕಟವಾಗುವ ನಿರೀಕ್ಷೆ ಇದೆ. ಈ ರಿಸಲ್ಟ್ ನೋಡುವುದು ಹೇಗೆ, ಮೌಲ್ಯಮಾಪನಕ್ಕೆ ಏನು ಮಾನದಂಡ ಇತ್ಯಾದಿ ವಿವರ ಇಲ್ಲಿದೆ.

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2023 - ಅಂತಿಮ ಫಲಿತಾಂಶ ಶೀಘ್ರ (ಸಾಂಕೇತಿಕ ಚಿತ್ರ)
ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2023 - ಅಂತಿಮ ಫಲಿತಾಂಶ ಶೀಘ್ರ (ಸಾಂಕೇತಿಕ ಚಿತ್ರ)

ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗವು 2023ರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲು ಸಜ್ಜಾಗಿದೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2023 (UPSC Civil Service Exams 2023 - UPSC CSE 2023) ಫಲಿತಾಂಶ ಶೀಘ್ರವೇ ಪ್ರಕಟವಾಗುವ ನಿರೀಕ್ಷೆ ಇದೆ. ಆದಾಗ್ಯೂ ಈ ವರೆಗೆ ಕೇಂದ್ರೀಯ ಲೋಕಸೇವಾ ಆಯೋಗದಿಂದ ಈ ಕುರಿತು ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಕೆಲವು ಮಾಧ್ಯಮಗಳು ಯುಪಿಎಸ್‌ಸಿ ಸಿಎಸ್‌ಇ 2023ರ ಫಲಿತಾಂಶ ಇಂದು ಪ್ರಕಟವಾಗಬಹುದು ಎಂದು ವರದಿ ಮಾಡಿವೆ. ಒಂದೊಮ್ಮೆ ಫಲಿತಾಂಶ ಘೋಷಣೆಯಾದರೆ, ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಫಲಿತಾಂಶ ವೀಕ್ಷಣೆಗೆ ಕೇಂದ್ರೀಯ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ಅಥವಾ upsconline.nic.in ಅನ್ನು ಗಮನಿಸಬಹುದು.

ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪ್ರಿಲಿಮ್ಸ್ ಪರೀಕ್ಷೆ 2023ರ ಮೇ 28 ರಂದು ನಡೆಯಿತು. ಪ್ರಿಲಿಮ್ಸ್ ಸುತ್ತಿನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಸೆಪ್ಟೆಂಬರ್ 15, 16, 17, 23 ಮತ್ತು 24, 2023 ರಂದು ಎರಡು ಪಾಳಿಗಳಲ್ಲಿ ನಡೆದ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದರು - ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಪರೀಕ್ಷೆ ನಡೆದಿತ್ತು. ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್ ಫಲಿತಾಂಶವನ್ನು ಡಿಸೆಂಬರ್ 8 ರಂದು ಪ್ರಕಟಿಸಲಾಯಿತು. ಸಿಎಸ್‌ಇ 2023 ರ ಸಂದರ್ಶನಗಳು ಅಥವಾ ವ್ಯಕ್ತಿತ್ವ ಪರೀಕ್ಷೆಗಳನ್ನು ಜನವರಿ 2 ಮತ್ತು ಏಪ್ರಿಲ್ 9 ರ ನಡುವೆ ಹಂತಗಳಲ್ಲಿ ನಡೆಸಲಾಯಿತು. ಈಗ ಅಂತಿಮ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ 2023ರ ಮೂಲಕ ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಮತ್ತು ಭಾರತೀಯ ವಿದೇಶಾಂಗ ಸೇವೆ (IFS) ಸೇರಿ ವಿವಿಧ ಕೇಂದ್ರ ಸರ್ಕಾರಿ ಸೇವೆಗಳು ಮತ್ತು ಇಲಾಖೆಗಳಲ್ಲಿ ಒಟ್ಟು 1,105 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ನಾಗರಿಕ ಸೇವಾ ಪರೀಕ್ಷೆ 2023ರ ಅಂತಿಮ ಫಲಿತಾಂಶ ವೀಕ್ಷಣೆಗೆ ಹೀಗೆ ಮಾಡಿ

ಯುಪಿಎಸ್‌ಸಿ ಸಿಎಸ್‌ಇ 2023ರ ಅಂತಿಮ ಫಲಿತಾಂಶ ಪರಿಶೀಲಿಸುವುದಕ್ಕೆ ಇರುವ 5 ಹಂತಗಳಿವು

1) ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಬೇಕು.

2) ಹೋಮ್‌ ಪೇಜ್‌ನಲ್ಲಿ ವಾಟ್ಸ್‌ ನ್ಯೂ ಎಂಬ ಸೆಕ್ಷನ್‌ಗೆ ಹೋಗಬೇಕು.

3) ಅಲ್ಲಿ “Civil Service Examinations 2023 Final Results” ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

4) ಹೊಸ ವಿಂಡೋ ಓಪನ್ ಆಗಿ, ಅದರಲ್ಲಿ ಅಂತಿಮ ಫಲಿತಾಂಶದ ವಿವರ ಇರುವ ಪಿಡಿಎಫ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ಉತ್ತೀರ್ಣರಾದವರ ವಿವರ ಇರುತ್ತದೆ.

5) ಈ ಫಲಿತಾಂಶದ ಪಿಡಿಎಫ್‌f ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬಹುದು. ಇದರ ಪ್ರಿಂಟ್ ಔಟ್ ಅನ್ನು ತೆಗೆದು ಇಟ್ಟುಕೊಂಡರೆ ಭವಿಷ್ಯದ ಅಗತ್ಯಗಳಿಗೆ ಬಳಸಬಹುದು.

ನಾಗರಿಕ ಸೇವಾ ಪರೀಕ್ಷೆಯ ಮೌಲ್ಯಮಾಪನ ಹೇಗೆ

ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಯು ಎರಡು ಭಾಗಗಳನ್ನು ಹೊಂದಿದೆ - ಲಿಖಿತ ಪರೀಕ್ಷೆ ಮತ್ತು ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ. ಲಿಖಿತ ಪರೀಕ್ಷೆಯು ವಿಷಯಗಳಲ್ಲಿ ಸಾಂಪ್ರದಾಯಿಕ ಪ್ರಬಂಧ ಪ್ರಕಾರದ 9 ಪೇಪರ್‌ಗಳನ್ನು ಹೊಂದಿದೆ. ಅದರಲ್ಲಿ ಎರಡು ಪತ್ರಿಕೆಗಳನ್ನು ಆಯ್ಕೆ ಮಾಡಿಕೊಂಡು ಬರೆಯಬೇಕಾದ್ದು ಅಗತ್ಯ. ಶ್ರೇಯಾಂಕಕ್ಕಾಗಿ, ಕಡ್ಡಾಯ ಪತ್ರಿಕೆಗಳಲ್ಲಿ (ಪತ್ರಿಕೆ 1 ರಿಂದ ಪತ್ರಿಕೆ 6) ಪೈಕಿ 2 ಮತ್ತು ಸಂದರ್ಶನ/ವ್ಯಕ್ತಿತ್ವ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶ್ರೇಯಾಂಕ/ಅಂತಿಮ ಫಲಿತಾಂಶಕ್ಕಾಗಿ ಪರಿಗಣಿಸಲಾಗುತ್ತದೆ.

ಇನ್ನು, ಎಸ್‌ಸಿ/ಎಸ್‌ಟಿ ಸಮುದಾಯದವರು ಎಷ್ಟು ಸಲ ಬೇಕಾದರೂ ಯುಪಿಎಸ್‌ಸಿ ಸಿಎಸ್‌ಇ ಎದುರಿಸಬಹುದು. ಉಳಿದಂತೆ ಒಬಿಸಿಯವರು 9 ಸಲ, ಅಂಗವೈಕಲ್ಯ ಹೊಂದಿರುವವರು (ಜಿಎಲ್‌/ ಇಡಬ್ಲ್ಯುಎಸ್‌/ ಒಬಿಸಿ) 9 ಸಲ, ಇತರರು 6 ಸಲ ಯುಪಿಎಸ್‌ಸಿ ಸಿಎಸ್‌ಇ ಎದುರಿಸಬಹುದು.

IPL_Entry_Point