ಗುಜರಾತ್: ಸಂಭೋಗದ​ ನಂತರ ತೀವ್ರ ರಕ್ತಸ್ರಾವದಿಂದ ಯುವತಿ ಸಾವು; ರಕ್ತಸ್ರಾವ ತಡೆಗೆ ಗಂಟೆಗಟ್ಟಲೆ ಗೂಗಲ್ ಮಾಡಿದ್ದ ಯುವಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುಜರಾತ್: ಸಂಭೋಗದ​ ನಂತರ ತೀವ್ರ ರಕ್ತಸ್ರಾವದಿಂದ ಯುವತಿ ಸಾವು; ರಕ್ತಸ್ರಾವ ತಡೆಗೆ ಗಂಟೆಗಟ್ಟಲೆ ಗೂಗಲ್ ಮಾಡಿದ್ದ ಯುವಕ

ಗುಜರಾತ್: ಸಂಭೋಗದ​ ನಂತರ ತೀವ್ರ ರಕ್ತಸ್ರಾವದಿಂದ ಯುವತಿ ಸಾವು; ರಕ್ತಸ್ರಾವ ತಡೆಗೆ ಗಂಟೆಗಟ್ಟಲೆ ಗೂಗಲ್ ಮಾಡಿದ್ದ ಯುವಕ

Gujarat Crime News: ಸಂಭೋಗದ ನಂತರ ರಕ್ತಸ್ರಾವವಾಗಿ 23 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗೆಳತಿಗೆ ಆಗುತ್ತಿದ್ದ ರಕ್ತಸ್ರಾವ ನಿಲ್ಲಿಸಲು ಆನ್​​ಲೈನ್​ನಲ್ಲಿ ಹುಡುಕಾಟ ನಡೆಸಿದ್ದಾನೆ.

ಸೆಕ್ಸ್​ ನಂತರ ತೀವ್ರ ರಕ್ತಸ್ರಾವದಿಂದ ಯುವತಿ ಸಾವು
ಸೆಕ್ಸ್​ ನಂತರ ತೀವ್ರ ರಕ್ತಸ್ರಾವದಿಂದ ಯುವತಿ ಸಾವು

ಗುಜರಾತ್: ಗುಜರಾತ್​​ನ 23 ವರ್ಷದ ನರ್ಸಿಂಗ್ ಪದವೀಧರೆಯೊಬ್ಬರು ಸಂಭೋಗದ ನಂತರ ಹೋಟೆಲ್ ಕೋಣೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಲೈಂಗಿಕ ಕ್ರಿಯೆಯ ನಂತರ ನಿರ್ಲಕ್ಷ್ಯ ವಹಿಸಿ ಆಕೆಯ ಸಾವಿಗೆ ಕಾರಣವಾದ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಏಕೆಂದರೆ, ಆತ, ಆಕೆಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯುವ ಬದಲಿಗೆ ಆನ್​ಲೈನ್​ನಲ್ಲಿ ರಕ್ತಸ್ರಾವ ನಿಲ್ಲಿಸಲು ಪರಿಹಾರ ಹುಡುಕಾಡಲು ಯತ್ನಿಸಿದ್ದ.

ಗುಜರಾತ್​​ನ ನವಸಾರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದೆ. ಆಂಬ್ಯುಲೆನ್ಸ್​​​ಗೆ ಕರೆ ಮಾಡುವ ಬದಲಿಗೆ ಆತ ‘ಸಂಭೋಗದ ಸಮಯದಲ್ಲಿ ರಕ್ತಸ್ರಾವ (Blood Bleed) ನಿಲ್ಲಿಸಲು ಏನು ಮಾಡಬೇಕು’ ಎಂದು ತನ್ನ ಗೂಗಲ್​ನಲ್ಲಿ ಹುಡುಕಿದ್ದಾನೆ. ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಆಕೆ ಜೀವ ಕಳೆದುಕೊಳ್ಳಬೇಕಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಕೆ ತೀವ್ರ ರಕ್ತಸ್ರಾವದ ಹೊರತಾಗಿಯೂ ಆತ ಮತ್ತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

60-90 ನಿಮಿಷ ಗೂಗಲ್​ನಲ್ಲಿ ಸರ್ಚ್

ಆದರೆ, ರಕ್ತಸ್ರಾವ ಹೆಚ್ಚಾಗುತ್ತಿರುವುದನ್ನು ನೋಡಿದ ಆತ, ಪರಿಹಾರಕ್ಕಾಗಿ 60 ರಿಂದ 90 ನಿಮಿಷಗಳ ಕಾಲ ತನ್ನ ಫೋನ್​​ನಲ್ಲಿ ಹುಡುಕಾಟ ನಡೆಸಿದ್ದಾನೆ. ರಕ್ತಸ್ರಾವ ನಿಲ್ಲಿಸಲು ಇಬ್ಬರು ಸಹ ಬಟ್ಟೆಯನ್ನು ಬಳಸಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಆಕೆ ಕೊನೆಗೆ ಮೂರ್ಛೆ ತಪ್ಪಿ ಬಿದ್ದಳು. ಬಳಿಕ ಯುವಕ ತನ್ನ ಸ್ನೇಹಿತನನ್ನು ಕರೆದನು. ಹೋಟೆಲ್ ಕೋಣೆಯಲ್ಲಿನ ರಕ್ತದ ಕಲೆಗಳನ್ನು ಸಹ ಅವರು ಸ್ವಚ್ಛಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ಅತಿಯಾದ ರಕ್ತಸ್ರಾವದಿಂದಾಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ವಿಧಿವಿಜ್ಞಾನ ವರದಿ ಹೇಳಿದೆ. 108 ಅಥವಾ ವೈದ್ಯಕೀಯ ಸಹಾಯಕ್ಕೆ ಕರೆ ಮಾಡುವ ಬದಲಿಗೆ ಸ್ನೇಹಿತರನ್ನು ಸಂಪರ್ಕಿಸಿ, ಅವರಿಗಾಗಿ ಕಾಯುತ್ತಿದ್ದ ನಂತರ ಖಾಸಗಿ ವಾಹನದಲ್ಲಿ ಆಕೆಯನ್ನು ಕರೆದುಕೊಂಡು ಹೋದರು. ಆಕೆಗೆ ಐವಿ ದ್ರವಗಳು, ರಕ್ತ ಮತ್ತು ಔಷಧಿಗಳೊಂದಿಗೆ ವೈದ್ಯಕೀಯ ನೆರವು ದೊರೆತಿದ್ದರೆ, ಅವಳು ಬದುಕುಳಿಯುತ್ತಿದ್ದಳು ನವಸಾರಿ ಸಂಸದ ಸುಶೀಲ್ ಅಗರ್ವಾಲ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಫೇಸ್​ಬುಕ್ ಮೂಲಕ ಮತ್ತೆ ಸಂಪರ್ಕಕ್ಕೆ

ಆಸ್ಪತ್ರೆಗೆ ಹೋಗುವಾಗ ಗೆಳೆಯ ಮಹಿಳೆಯ ಪೋಷಕರಿಗೆ ಕರೆ ಮಾಡಿದ್ದಾನೆ ಎಂದು ವರದಿಯಾಗಿದೆ. ಆದರೆ ಅವರು ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಜಲಾಲ್ಪುರ ಪೊಲೀಸರು ಆ ವ್ಯಕ್ತಿಯ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಮವಲ್ಲದ ನರಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯ ಮರಣೋತ್ತರ ವರದಿಯು ಆಕೆಯ ಖಾಸಗಿ ಭಾಗಗಳಲ್ಲಿ ಗಂಭೀರ ಗಾಯಗಳು, ಯೋನಿ ಹರಿದುಹೋಗಿದೆ ಮತ್ತು ಭಾರಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ ಎಂದು ಸೂಚಿಸಿದೆ.

ಬಾಲಕಿ ಮೂರು ವರ್ಷಗಳ ಹಿಂದೆ ಆರೋಪಿಗಳನ್ನು ಭೇಟಿಯಾಗಿದ್ದಳು. ಆದರೆ, ಅವರು ಎರಡು ವರ್ಷಗಳಿಂದ ಸಂಪರ್ಕದಲ್ಲಿರಲಿಲ್ಲ. ಆದರೆ ಸುಮಾರು ಏಳು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದ ಮೂಲಕ ಇಬ್ಬರು ಮರುಸಂಪರ್ಕಕ್ಕೆ ಬಂದರು. ತದನಂತರ ಮೊಬೈಲ್ ನಂಬರ್ ಬದಲಿಸಿಕೊಂಡು ಸಂಪರ್ಕ ಮುಂದುವರೆಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.