Gujarat election results: ಸೇತುವೆ ದುರಂತದ ಮೊರ್ಬಿ ಕ್ಷೇತ್ರದ ಮತದಾರರು ಯಾರಿಗೆ ಪಾಠ ಕಲಿಸಿದ್ರು? ಯಾರನ್ನು ಗೆಲ್ಲಿಸಿದ್ರು?
Gujarat election results: ದೇಶದ ಗಮನಸೆಳೆದ ಮೊರ್ಬಿ ಸೇತುವೆ ದುರಂತದ ಕ್ಷೇತ್ರದ ಮತದಾರರು ಯಾರಿಗೆ ಪಾಠ ಕಲಿಸಿದ್ರು? ಮೊರ್ಬಿ ಕ್ಷೇತ್ರದಲ್ಲಿ ಯಾರು ಗೆಲುವಿನ ನಗೆ ಬೀರಿದರು? ಇಲ್ಲಿದೆ ವರದಿ.
ದೇಶದ ಗಮನಸೆಳೆದ ಮೊರ್ಬಿ ಸೇತುವೆ ದುರಂತದ ಕ್ಷೇತ್ರದ ಮತದಾರರು ಯಾರಿಗೆ ಪಾಠ ಕಲಿಸಿದ್ರು? ಮೊರ್ಬಿ ಕ್ಷೇತ್ರದಲ್ಲಿ ಯಾರು ಗೆಲುವಿನ ನಗೆ ಬೀರಿದರು? ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಗಳು ದುರಂತವನ್ನು ಪ್ರಚಾರ ವಿಷಯವನ್ನಾಗಿಸಿದ್ದವು. ಹೀಗಾಗಿ ಈ ಕ್ಷೇತ್ರ ಗಮನಸೆಳೆದ ಕ್ಷೇತ್ರಗಳ ಪೈಕಿ ಒಂದಾಗಿತ್ತು.
ಈ ಕ್ಷೇತ್ರದಲ್ಲಿ ಬಿಜೆಪಿಯು ಐದು ಸಲದ ಶಾಸಕ ಕಾಂತಿಭಾಯ್ ಅಮೃತಿಯಾ ಅವರನ್ನು ಕಣಕ್ಕೆ ಇಳಿಸಿತ್ತು. ಈ ಕ್ಷೇತ್ರದಲ್ಲಿ ಪಟೇಲರ ಪಾರಮ್ಯ ಇದೆ. ಮೊರ್ಬಿ ಸೇತುವೆ ದುರಂತದಲ್ಲಿ 135 ಜನ ಮೃತಪಟ್ಟಿದ್ದರು. ಮಾಜಿ ಕಾಂಗ್ರೆಸ್ ನಾಯಕ ಬ್ರಿಜೇಶ್ ಮಿಶ್ರಾ ಈ ಕ್ಷೇತ್ರದ ಹಾಲಿ ಶಾಸಕರಾಗಿದ್ದರು. ಅಷ್ಟೇ ಅಲ್ಲ, ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಸಚಿವರೂ ಆಗಿದ್ದರು.
ಆದಾಗ್ಯೂ, ಸೇತುವೆ ದುರಂತದ ಕಾರಣ ಬಿಜೆಪಿ ಜಾಣ್ಮೆಯ ನಡೆ ಅನುಸರಿಸಿ ಬ್ರಿಜೇಶ್ ಮಿಶ್ರಾ ಅವರನ್ನು ಕಣಕ್ಕೆ ಇಳಿಸಿಲ್ಲ. ಇಲ್ಲಿ, ಸೇತುವೆ ದುರಂತದ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ಐದು ಸಲ ಶಾಸಕರಾಗಿದ್ದ ಕಾಂತಿಭಾಯ್ ಅಮೃತಿಯಾ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಪ್ರಚಾರಕ್ಕೆ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದ ಸಂದರ್ಭದ ಕಾಂತಿ ಭಾಯ್ ಫೋಟೋ, ವಿಡಿಯೋಗಳನ್ನು ಬಿಜೆಪಿ ಬಳಸಿತ್ತು. 1995ರಿಂದ 2012ರ ತನಕ ಐದು ಅವಧಿಗೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಕಾಂಗ್ರೆಸ್ ಪಕ್ಷ ಜಯಂತಿ ಪಟೇಲ್ ಅವರನ್ನು ಕಣಕ್ಕೆ ಇಳಿಸಿತ್ತು. ಆಮ್ ಆದ್ಮಿ ಪಾರ್ಟಿ ಇಲ್ಲಿ ಪಂಕಜ್ ರಣಸರಿಯಾ ಎಂಬ ಯುವ ನಾಯಕನನ್ನು ಕಣಕ್ಕೆ ಇಳಿಸಿತ್ತು. ಇವರು ಬಿಜೆಪಿ ಅಭ್ಯರ್ಥಿ ಕಾಂತಿಭಾಯ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ಇದುವರೆಗೆ ಲಭ್ಯ ಮಾಹಿತಿ ಪ್ರಕಾರ, ಕಾಂತಿಭಾಯ್ ಅವರ ಗೆಲುವು ನಿಶ್ಚಿತ. ಶೇಕಡ 60ರಷ್ಟು ಮತ ಕಾಂತಿಭಾಯ್ ಅವರಿಗೆ ಸಿಕ್ಕಿದೆ. ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯ ಗೆಲುವು ಘೋಷಣೆ ಆಗಬೇಕಷ್ಟೆ.
ಗಮನಿಸಬಹುದಾದ ಸುದ್ದಿಗಳು
ಗುಜರಾತ್ ಚುನಾವಣಾ ಫಲಿತಾಂಶ: ಬಿಜೆಪಿ ಮುನ್ನಡೆಯ ಸೀಕ್ರೆಟ್ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಗುಜರಾತ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಕಳೆದ ಎಲ್ಲ ಚುನಾವಣೆಗಳಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇದು ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ತಿಳಿದು ಬಂದಿತ್ತು. ಒಂದು ರಾಜ್ಯದಲ್ಲಿ ಸುಶಾಸನ ತಂದರೆ ಜನ ಬೆಂಬಲ ಕೊಡುತ್ತಾರೆ ಎಂಬುದಕ್ಕೆ ಇದು ನಿದರ್ಶನ ಎಂದಿದ್ದಾರೆ. ವಿವರ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ.
ಗುಜರಾತ್‌ನಲ್ಲಿ ಆಪ್ 'ಬೆಂಬಲ'ದಿಂದ ಬಿಜೆಪಿಗೆ ಗೆಲುವು: ಸಿದ್ದರಾಮಯ್ಯ ವಿಶ್ಲೇಷಣೆ!
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಯಾವ ಪರಿಣಾಮವೂ ಬೀರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಆಪ್ ಪಕ್ಷವು ಕಾಂಗ್ರೆಸ್ ಮತಗಳನ್ನು ಕಸಿಯುವಲ್ಲಿ ಸಫಲವಾಯಿತು ಎಂದು ವಿಶ್ಲೇಷಿಸಿದ್ದಾರೆ. ವಿವರ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ.
ಗುಜರಾತ್ ಬಿಜೆಪಿ ಐತಿಹಾಸಿಕ ಗೆಲುವು: ಬಿಎಸ್‌ವೈ ಪ್ರತಿಕ್ರಿಯೆ ಏನು?
ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗುಜರಾತ್‌ನಲ್ಲಿ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ದೇಶದ ಜನತೆಯ ಮನ್ನಣೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಎಸ್‌ವೈ ಹೇಳಿದ್ದಾರೆ. ವಿವರ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ.