Gujarat News: ಒಂದು ಕೋಟಿ ರೂ. ಸುಲಿಗೆ ಆರೋಪ, ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಯುವರಾಜ್‌ಸಿನ್ಹ್‌ ಜಡೇಜಾ ಬಂಧನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gujarat News: ಒಂದು ಕೋಟಿ ರೂ. ಸುಲಿಗೆ ಆರೋಪ, ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಯುವರಾಜ್‌ಸಿನ್ಹ್‌ ಜಡೇಜಾ ಬಂಧನ

Gujarat News: ಒಂದು ಕೋಟಿ ರೂ. ಸುಲಿಗೆ ಆರೋಪ, ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಯುವರಾಜ್‌ಸಿನ್ಹ್‌ ಜಡೇಜಾ ಬಂಧನ

Gujarat: ಒಂದು ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಯುವರಾಜ್‌ಸಿನ್ಹ್‌ ಜಡೇಜಾ ಅವರನ್ನು ಗುಜರಾತ್‌ ಪೊಲೀಸರು ಭಾವನಗರದಲ್ಲಿ ಬಂಧಿಸಿದ್ದಾರೆ.

Gujarat News: ಒಂದು ಕೋಟಿ ರೂ. ಸುಲಿಗೆ ಆರೋಪ, ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಯುವರಾಜ್‌ಸಿನ್ಹ್‌ ಜಡೇಜಾ ಬಂಧನ
Gujarat News: ಒಂದು ಕೋಟಿ ರೂ. ಸುಲಿಗೆ ಆರೋಪ, ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಯುವರಾಜ್‌ಸಿನ್ಹ್‌ ಜಡೇಜಾ ಬಂಧನ

ಗುಜರಾತ್‌: ಇಬ್ಬರು ಅಭ್ಯರ್ಥಿಗಳಿಂದ ಸುಮಾರು ಒಂದು ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಯುವರಾಜ್‌ಸಿನ್ಹ್‌ (Yuvrajsinh Jadeja) ಜಡೇಜಾ ಅವರನ್ನು ಗುಜರಾತ್‌ ಪೊಲೀಸರು ಭಾವನಗರದಲ್ಲಿ ಬಂಧಿಸಿದ್ದಾರೆ. ಈ ರೀತಿ ವಸೂಲಿಗೆ ಒಳಗಾದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಇತ್ತೀಚೆಗೆ ಬಯಲಾದ ಸರ್ಕಾರಿ ಪರೀಕ್ಷೆ ಬರೆಯಲು ಡಮ್ಮಿ ಅಭ್ಯರ್ಥಿಗಳ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಗಂಟೆಗಳ ಸತತ ವಿಚಾರಣೆಯ ಬಳಿಕ ಶುಕ್ರವಾರ ರಾತ್ರಿ ಎಎಪಿಯ ಯುವ ಘಟಕದ ಮುಖಂಡ ಜಡೇಜಾ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸರಕಾರಿ ಉದ್ಯೋಗ ನೇಮಕಾತಿ ಪರೀಕ್ಷೆ ಬರೆಯಲು ಡಮ್ಮಿ ಅಭ್ಯರ್ಥಿಗಳನ್ನು ಬಳಸುವ ಬೃಹತ್‌ ಜಾಲವನ್ನು ಜಡೇಜಾ ಈ ತಿಂಗಳ ಆರಂಭದಲ್ಲಿ ಬಹಿರಂಗಪಡಿಸಿದ್ದರು.

ಈ ರೀತಿ ಡಮ್ಮಿ ಅಭ್ಯರ್ಥಿಗಳ ಜಾಲದ ಕುರಿತು ಪತ್ರಿಕಾಗೋಷ್ಠಿಯನ್ನು ಜಡೇಜಾ ನಡೆಸಿದ್ದರು. ಆ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಪ್ರಮುಖ ಆರೋಪಿಗಳ ಹೆಸರು ಬಹಿರಂಗಪಡಿಸದಿರಲು ಜಡೇಜಾ ಅವರು ಲಂಚ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಡಮ್ಮಿ ಅಭ್ಯರ್ಥಿ ಜಾಲದ ಮಾಸ್ಟರ್‌ ಮೈಂಡ್‌ ಪ್ರಕಾಶ್ ದವೆ ಅವರಿಂದ 45 ಲಕ್ಷ ರೂಪಾಯಿ ಮತ್ತು ಪ್ರದೀಪ್ ಬಾರಯ್ಯ ಅವರಿಂದ 55 ಲಕ್ಷ ರೂಪಾಯಿಗಳನ್ನು ಜಡೇಜಾ ಸುಲಿಗೆ ಮಾಡಿದ್ದಾರೆ ಎಂದು ಭಾವನಗರ ವ್ಯಾಪ್ತಿಯ ಪೊಲೀಸ್ ಮಹಾನಿರೀಕ್ಷಕ ಗೌತಮ್ ಪರ್ಮಾರ್ ಹೇಳಿದ್ದಾರೆ.

ಜಡೇಜಾ ಬಂಧನದ ವಿಚಾರವು ಈಗ ರಾಜಕೀಯವಾಗಿಯೂ ಸದ್ದು ಮಾಡುತ್ತಿದೆ. ಈ ಘಟನೆ ಕುರಿತು ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಡಮ್ಮಿ ಅಭ್ಯರ್ಥಿ ಪ್ರಕರಣಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಜಡೇಜಾ ಬಂಧನವಾಗಿದೆ ಎಂದು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಆರೋಪಿಸಿವೆ.

ಏಪ್ರಿಲ್ 5 ರಂದು ರಾಜ್ಯ ರಾಜಧಾನಿ ಗಾಂಧಿನಗರದಲ್ಲಿ ಡಮ್ಮಿ ಅಭ್ಯರ್ಥಿಗಳ ಪ್ರಕರಣದ ಕುರಿತು ಜಡೇಜಾ ಪತ್ರಿಕಾಗೋಷ್ಠಿ ನಡೆಸಿದ್ದರು. ಬಳಿಕ ಜಡೇಜಾ ಅವರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 161 ರ ಅಡಿಯಲ್ಲಿ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.

ವಿಚಾರಣೆ ನಡೆಸಿದ ಬಳಿಕ ಆತನ ಮತ್ತು ಆತನ ಸಹಾಯಕನ ವಿರುದ್ಧ ನಗರದ ನೀಲಂಬಾಗ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್‌ 386 (ಕೊಲೆ ಬೆದರಿಕೆ ಅಥವ ಗಂಭೀರ ಗಾಯ ಮಾಡುವ ಬೆದರಿಕೆ), 388 (ಬೆದರಿಸಿ ಸುಲಿಗೆ), 120 (ಬಿ) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್‌ ಸಾಖಲಿಸಲಾಗಿದೆ ಎಂದು ಪರ್ಮಾರ್‌ ಹೇಳಿದ್ದಾರೆ.

ಪ್ರಕರಣದ ವಿಚಾರಣೆಯ ಪ್ರಕಾರ ಜಡೇಜಾ ಅವರ ಸಹಾಯಕರು ಡಮ್ಮಿ ಅಭ್ಯರ್ಥಿಯ ವಿಡಿಯೋ ರೆಕಾರ್ಡ್‌ ಮಾಡಿದ್ದರು. ಪ್ರಕಾಶ್ ದವೆ ಅವರಿಗೆ ವಿಡಿಯೋ ತೋರಿಸಿ ಪ್ರಕರಣದಲ್ಲಿ ಹೆಸರು ಬಹಿರಂಗ ಪಡಿಸುವುದು ಬೇಡ ಎಂದಾದರೆ 70 ಲಕ್ಷ ರೂ. ನೀಡಬೇಕೆಂದು ಬೆದರಿಸಿದ್ದರು. ಕೊನೆಗೆ, 45 ಲಕ್ಷಕ್ಕೆ ಒಪ್ಪಂದ ಅಂತಿಮಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.