ಅಮೆರಿಕಾದ ಮೆಕ್ಸಿಕೋದಲ್ಲಿ ವಾಮಾಚಾರ ಶಂಕೆ, 110 ಮಂದಿ ಭೀಕರ ಹತ್ಯಾಕಾಂಡ, ಹಿರಿಯರೇ ಟಾರ್ಗೆಟ್; ಗ್ಯಾಂಗಸ್ಟರ್ ತಂಡಗಳ ಕೃತ್ಯ
ಉತ್ತರ ಅಮೆರಿಕಾದ ಮೆಕ್ಸಿಕೋ ದೇಶದಲ್ಲಿ ವಾಮಾಚಾರದ ಶಂಕೆಯಿಂದ 110 ಮಂದಿ ಹಿರಿಯರನ್ನು ಅಲ್ಲಿನ ಹೈಟಿ ಗ್ಯಾಂಗ್ ಸ್ಟರ್ ಗುಂಪುಗಳು ಭೀಕರವಾಗಿ ಹತ್ಯೆ ಮಾಡಿವೆ.
ಮೆಕ್ಸಿಕೋ: ವಾಮಾಚಾರದಿಂದ ತಮ್ಮ ಮಗುವಿನ ಅನಾರೋಗ್ಯದ ನಂತರ ಸಾವಿಗೂ ಕಾರಣರಾಗಿದಾರೆ ಎಂದು ಉತ್ತರ ಅಮೆರಿಕಾದ ಮೆಕ್ಸಿಕೋ ದೇಶದ ಸೈಟ್ ಸೋಲೈಲ್ ನಲ್ಲಿ 110 ಮಂದಿ ಹಿರಿಯ ನಾಗರೀಕರನ್ನು ಹತ್ಯೆ ಮಾಡಲಾಗಿದೆ. ಎರಡು ದಿನಗಳಲ್ಲಿ ಈ ಘಟನೆ ನಡೆದಿದ್ದು. ಮೆಕ್ಸಿಕೋ ಸರ್ಕಾರವು ಸಮಗ್ರ ತನಿಖೆಗೆ ಆದೇಶಿಸಿದೆ. ಗ್ಯಾಂಗ್ ತಂಡಗಳಿಗೆ ಸೂಚನೆ ಕೊಟ್ಟು ಹಿರಿಯರನ್ನು ಭೀಕರವಾಗಿ ಹತ್ಯೆ ಮಾಡಿರುವುದು ತಲ್ಲಣ ಮೂಡಿಸಿದೆ. ಮೆಕ್ಸಿಕೋದಲ್ಲಿ ಎರಡು ತಿಂಗಳ ಹಿಂದೆ ಇದೇ ರೀತಿ ಸಾಮೂಹಿಕ ಹತ್ಯಾಕಾಂಡ ಪ್ರಕರಣ ನಡೆದಿತ್ತು. ಈಗ ಮತ್ತೆ ನಡೆದಿರುವುದು ಚರ್ಚೆ ಹುಟ್ಟು ಹಾಕಿದೆ. ಗ್ಯಾಂಗಸ್ಟರ್‌ಗಳು ಮೆಕ್ಸಿಕೋದಲ್ಲಿ ಸಕ್ರಿಯರಾಗಿದ್ದು, ಅವರನ್ನು ಮಟ್ಟ ಹಾಕಲು ಕ್ರಮ ವಹಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಸೈಟ್ ಸೋಲೈಲ್ ನಗರದ ಕೊಳಗೇರಿ ಪ್ರದೇಶದಲ್ಲಿ ವಾಸವಿದ್ದ ಜನರಲ್ಲಿ 110 ಹಿರಿಯರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಗ್ಯಾಂಗ್ ಸದಸ್ಯರು ಶುಕ್ರವಾರ ಕನಿಷ್ಠ 60 ಜನರನ್ನು ಮತ್ತು ಶನಿವಾರ 50 ಜನರನ್ನು ಮಚ್ಚೆಗಳು ಮತ್ತು ಚಾಕುಗಳನ್ನು ಬಳಸಿ ಕೊಂದಿದ್ದಾರೆ ವಾಮಾಚಾರದ ಆರೋಪದ ಮೇಲೆ ಗ್ಯಾಂಗ್ ಲೀಡರ್ ವಯಸ್ಸಾದವರನ್ನು ಗುರಿಯಾಗಿಸಿ ಕೊಲ್ಲಲಾಗಿದೆ. ಫೆಲಿಕ್ಸ್ ಗ್ಯಾಂಗ್ ಹತ್ಯಾಕಾಂಡದಲ್ಲಿ ಮಾರಕಾಸ್ತ್ರಗಳು ಮತ್ತು ಚಾಕುಗಳನ್ನು ಬಳಸಲಾಗಿದೆ ಎಂದು ಮೆಕ್ಸಿಕೋದ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ನೆಟ್ವರ್ಕ್ (RNDDH) ತಿಳಿಸಿದೆ.
ವಾರ್ಫ್ ಜೆರೆಮಿ ಗ್ಯಾಂಗ್ ಲೀಡರ್ ಮೊನೆಲ್ "ಮಿಕಾನೊ" ಫೆಲಿಕ್ಸ್ ತನ್ನ ಮಗು ಅನಾರೋಗ್ಯಕ್ಕೆ ಒಳಗಾದ ನಂತರ ಮಾಹಿತಿ ಕಲೆ ಹಾಕಿದ್ದ. ಈ ವೇಳೆ ಕೊಳಗೇರಿ ಪ್ರದೇಶದವರು ವಾಮಾಚಾರ ನಡೆಸಿದ್ದಾರೆ ಎನ್ನುವ ಮಾಹಿತಿ ಆತನಿಗೆ ದೊರೆತಿತ್ತು. ಈ ಕಾರಣದಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಆತ ಕಾಯುತ್ತಿದ್ದ. ಕೊನೆಗೆ ಅಲ್ಲಿನ ಹಿರಿಯರ ಹತ್ಯಾಕಾಂಡಕ್ಕೆ ಆದೇಶಿಸಿದ್ದ. ಗ್ಯಾಂಗ್ ಸದಸ್ಯರು ಶುಕ್ರವಾರ 60 ಜನರನ್ನು ಮತ್ತು ಶನಿವಾರ 50 ಜನರನ್ನು ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಅನಾರೋಗ್ಯಕ್ಕೆ ತುತ್ತಾಗಿದ್ದ ಫೆಲಿಕ್ಸ್‌ನ ಮಗು ಶನಿವಾರ ಮಧ್ಯಾಹ್ನ ಮೃತಪಟ್ಟಿದೆ. ಇದರಿಂದ ಆಕ್ರೋಶಗೊಂಡ ಆತ ಅಲ್ಲಿದ್ದವನ್ನು ಕೊಂದು ಹಾಕಲು ತನ್ನ ಗುಂಪಿಗೆ ಹೇಳಿದ್ದ. ಇದರಿಂದಲೇ ಎರಡನೇ ದಿನವೂ ಹತ್ಯಾಕಾಂಡ ಮುಂದುವರಿಯಿತು.
ಅಕ್ಟೋಬರ್‌ನಲ್ಲಿ, ಹೈಟಿಯ ಬ್ರೆಡ್‌ಬಾಸ್ಕೆಟ್ ಆರ್ಟಿಬೊನೈಟ್ ಪ್ರದೇಶದ ಪಾಂಟ್-ಸೋಂಡೆ ಎಂಬ ಪಟ್ಟಣದಲ್ಲಿ ಕನಿಷ್ಠ 115 ಜನರನ್ನು ಕಗ್ಗೊಲೆ ಮಾಡಲಾಗಿತ್ತು. ಹೈಟಿಯ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ಬಂದರಿನ ದಟ್ಟವಾದ ಜನನಿಬಿಡ ಕೊಳೆಗೇರಿಯಲ್ಲಿ ವಾಮಾಚಾರ ಮಾಡುವವರ ಸಂಖ್ಯೆ ಅಧಿಕವಾಗಿದೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಎರಡು ತಿಂಗಳ ನಂತರ ಮತ್ತೆ ಇಲ್ಲಿ ಭಾರೀ ಹತ್ಯಾಕಾಂಡವೇ ನಡೆದಿದೆ.ಮೆಕ್ಸಿಕೋದ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆದೇಶಿಸಿದೆ. ಮಾನವಹಕ್ಕುಗಳ ವೇದಿಕೆಗಳು ಇದನ್ನು ಉಗ್ರವಾಗಿ ಖಂಡಿಸಿವೆ.
ಲಾ ಸಲೈನ್ ನವೆಂಬರ್ 2018 ರಲ್ಲಿ ಕನಿಷ್ಠ 71 ನಾಗರಿಕರ ಹತ್ಯಾಕಾಂಡದ ಸ್ಥಳವಾಗಿತ್ತು, ಆದರೆ ನೂರಾರು ಮನೆಗಳಿಗೆ ಬೆಂಕಿ ಹಚ್ಚಲಾಯಿತು.ರಾಜಕೀಯ ಕಲಹದಿಂದ ಜರ್ಜರಿತವಾಗಿರುವ ಸರ್ಕಾರವು ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಶಸ್ತ್ರ ಗ್ಯಾಂಗ್‌ಗಳ ಬೆಳೆಯುತ್ತಿರುವ ಶಕ್ತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದೆ.
ವಿಭಾಗ