ಕನ್ನಡ ಸುದ್ದಿ  /  Nation And-world  /  Haj 2023 Application Begins; Here's How To Apply, Eligibility, And Other Details

Haj 2023 application begins: ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ, ಅರ್ಜಿ ಸಲ್ಲಿಕೆ ಹೇಗೆ? ಯಾರ ಅರ್ಜಿ ಸಲ್ಲಿಸಬಹುದು?

ಹಜ್‌ ಯಾತ್ರೆ ಕೈಗೊಳ್ಳಬೇಕೆಂಬ ಹಂಬಲದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಅಮೂಲ್ಯ ಅವಕಾಶವಾಗಿರುವ ಈ ಯಾತ್ರೆಗೆ ಈಗಾಗಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ನೀವು ಹಜ್‌ ಯಾತ್ರೆ ಕೈಗೊಳ್ಳಲು ಉದ್ದೇಶಿಸಿದರೆ ಈಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Haj 2023 application begins: ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
Haj 2023 application begins: ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

Haj 2023: ಭಾರತದ ಹಜ್‌ ಕಮಿಟಿಯು ಹಜ್‌ 2023ಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿ 10ರಿಂದಲೇ ಆರಂಭವಾಗಿದೆ. ಹಜ್‌ ಯಾತ್ರೆ ಕೈಗೊಳ್ಳಬೇಕೆಂಬ ಹಂಬಲದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಅಮೂಲ್ಯ ಅವಕಾಶವಾಗಿರುವ ಈ ಯಾತ್ರೆಗೆ ಈಗಾಗಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ.

ಪ್ರಮುಖ ದಿನಾಂಕಗಳು

  • ಹಜ್‌ ಯಾತ್ರೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆಬ್ರವರಿ 10, 2023
  • ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 10, 2023
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: https://hajcommittee.gov.in/

ಹಜ್‌ ಯಾತ್ರೆ ಕೈಗೊಳ್ಳಲು ಬಯಸುವವರು ಮಾರ್ಚ್‌ 10ರ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಸೌದಿ ಅರೇಬಿಯಾದ ಮೆಕ್ಕಕ್ಕೆ ವಾರ್ಷಿಕ ಯಾತ್ರೆ ಕೈಗೊಳ್ಳುವುದನ್ನು ಹಜ್‌ ಯಾತ್ರೆ ಎನ್ನುತ್ತಾರೆ. ಇದು ಮುಸ್ಲಿಂ ಧರ್ಮಿಯರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ.

ಈಗ ಸೌದಿ ಅರೇಬಿಯಾವು ಕೋವಿಡ್‌ 19 ಪೂರ್ವದಲ್ಲಿ ನಿಗದಿಪಡಿಸಿದಷ್ಟೇ ಕೋಟಾ ಬಿಡುಗಡೆ ಮಾಡಿದೆ. ಹೀಗಾಗಿ, ಅತ್ಯಧಿಕ ಸಂಖ್ಯೆಯಲ್ಲಿ ಜನರಿಗೆ ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶ ದೊರಕಿದೆ. ಭಾರತ ಮತ್ತು ಸೌದಿ ಅರೇಬಿಯಾ ದೇಶಗಳ ದ್ವಿಪಕ್ಷೀಯ ಮಾತುಕತೆಯ ಬಳಿಕ ಈ ಬಾರಿ 1,75,020 ಜನರಿಗೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಹಜ್‌ ಆಡಳಿತ ಮತ್ತು ಕೇಂದ್ರ ಸರಕಾರದ ನಡುವೆ ಈ ಕುರಿತು ಹಲವು ಚರ್ಚೆಗಳು ನಡೆದು ಕೊರೊನಾ ಪೂರ್ವದಷ್ಟೇ ಜನರಿಗೆ ಯಾತ್ರೆ ಕೈಗೊಳ್ಳಲು ಅವಕಾಶ ದೊರಕಿದೆ.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಜ್‌ ಸಮಿತಿಗಳು, ಅಲ್ಪಾ ಸಂಖ್ಯಾಕ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ, ಹಜ್‌ ಮ್ಯಾನೇಜ್‌ಮೆಂಟ್‌ ಮತ್ತು ಇತರೆ ಸ್ಟೇಕ್‌ಹೋಲ್ಡರ್‌ಗಳ ನಡುವೆ ಈಗಾಗಲೇ ಮಾತುಕತೆಗಳು ನಡೆದಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಇಸ್ಲಾಂ ಅನುಯಾಯಿಗಳಿಗೆ ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶ ದೊರಕಿದೆ. ಇದರೊಂದಿಗೆ ಈ ಬಾರಿ ಈ ಹಿಂದಿನ ವರ್ಷಗಳಿಗಿಂತ ಕಡಿಮೆ ಮೊತ್ತಕ್ಕೆ ಯಾತ್ರೆ ಕೈಗೊಳ್ಳುವ ಅವಕಾಶ ನೀಡಲಾಗಿದೆ. ಯಾವುದೇ ಅರ್ಜಿ ಶುಲ್ಕವಿಲ್ಲದೆ ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.

ಹಜ್‌ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ?

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು: ವೆಬ್‌ಸೈಟ್‌ ವಿಳಾಸ: https://hajcommittee.gov.in/
  • ವೆಬ್‌ಸೈಟ್‌ನ ಮುಖಪುಟದಲ್ಲಿಯೇ ಹಜ್‌ 2023 ಎಂಬ ಲಿಂಕ್‌ ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿ ಆನ್‌ಲೈನ್‌ ಅಪ್ಲಿಕೇಷನ್‌ ಫಾರ್ಮ್‌ ಕ್ಲಿಕ್‌ ಮಾಡಬೇಕು.
  • ನ್ಯೂ ರಿಜಿಸ್ಟ್ರೇಷನ್‌ (ಹೊಸ ನೋಂದಣಿ) ಲಿಂಕ್‌ ಅನ್ನು ಕ್ಲಿಕ್‌ ಮಾಡಿ.
  • ಅಲ್ಲಿ ಕೇಳಲಾದ ವಿವರವನ್ನು ಭರ್ತಿ ಮಾಡಿ
  • ಒಟಿಪಿ ನಮೂದಿಸಿದ ಬಳಿಕ ಕನ್ಫರ್ಮೆಷನ್‌ ಸಂದೇಶ ಕಾಣಿಸಿಕೊಳ್ಳುತ್ತದೆ.
  • ಯೂಸರ್‌ ಐಡಿ (ಮೊಬೈಲ್‌ ಸಂಖ್ಯೆ) ಮತ್ತು ಪಾಸ್‌ವರ್ಡ್‌ ನಮೂದಿಸಿ
  • ಅರ್ಜಿ ನಮೂನೆ ಭರ್ತಿ ಮಾಡಿ. ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸಿದ ಬಳಿಕ ನಿಗದಿಪಡಿಸಿದ ದಾಖಲೆಗಳನ್ನು ಸಲ್ಲಿಸಿ. ಅಂದರೆ, ಪಾಸ್‌ಪೋರ್ಟ್‌ ಗಾತ್ರದ ಫೋಟೊಗ್ರಾಪ್‌, ಪಾಸ್‌ಪೋರ್ಟ್‌ನ ಮೊದಲ ಪುಟ, ಪಾಸ್‌ಪೋರ್ಟ್‌ನ ಕೊನೆಯ ಪುಟ, ಕೊರೊನಾ ಲಸಿಕೆ ಸರ್ಟಿಫಿಕೇಟ್‌ ಲಗ್ಗತ್ತಿಸಿ.
  • ಫೈನಲ್‌ ಸಬ್‌ಮಿಟ್‌ ಕ್ಲಿಕ್‌ ಮಾಡಿ
  • ಭರ್ತಿ ಮಾಡಿದ ಅರ್ಜಿ ನಮೂನೆಯನ್ನು "ಡೌನ್‌ಲೋಡ್‌ HAF2023" ಬಟನ್‌ ಕ್ಲಿಕ್‌ ಮಾಡಿ.

ಈ ಬಾರಿ ಭಾರತದಿಂದ ಹಜ್‌ಗೆ ಯಾತ್ರೆ ಕೈಗೊಳ್ಳುವ ಮುಸ್ಲಿಂ ಯಾತ್ರಿಗಳಿಗೆ ಯಾತ್ರೆ ವೆಚ್ಚ ಕಡಿಮೆಯಾಗಲಿದೆ. ಏಕೆಂದರೆ, ಕೇಂದ್ರ ಸರಕಾರವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಜ್‌ ಯಾತ್ರೆಯ ದರವನ್ನು ಕಡಿಮೆ ಮಾಡಿದೆ.

ಈ ಬಾರಿ ಹಜ್‌ ಯಾತ್ರೆಯ ದರವನ್ನು ಪ್ರತಿವ್ಯಕ್ತಿಗೆ 50 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಅದೇ ರೀತಿ ಈ ಬಾರಿ ಹಜ್‌ ಯಾತ್ರೆಗೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಕಳೆದ ವರ್ಷ 400 ರೂ. ಅರ್ಜಿ ಶುಲ್ಕ ವಿಧಿಸಲಾಗಿತ್ತು.

"ಈ ಬಾರಿ ಹಜ್‌ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಎಲ್ಲಾ ಹಜ್‌ ಯಾತ್ರಿಗಳು ಯಾವುದೇ ವೆಚ್ಚ ಮಾಡದೆ ಅರ್ಜಿ ಸಲ್ಲಿಸಬಹುದು. ಈ ಬಾರಿ ಹಜ್‌ ಯಾತ್ರೆಯ ದರವನ್ನು 50 ಸಾವಿರ ರೂ.ಗೆ ತಗ್ಗಿಸಲಾಗುತ್ತದೆ. ಬ್ಯಾಗ್‌, ಸೂಟ್‌ಕೇಸ್‌, ಕೊಡೆ ಅಥವಾ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಹೀಗಿದ್ದರೂ, ಹಜ್‌ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ಸ್ವಂತ ಖರ್ಚಿನಲ್ಲೇ ಭರಿಸಬೇಕು. ಹಜ್‌ ಯಾತ್ರೆಗೆ ಹಿರಿಯರು, ವಿಶೇಷ ಚೇತನರು ಮತ್ತು ಮಹಿಳೆಯರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು" ಎಂದು ಮೂಲಗಳು ತಿಳಿಸಿವೆ.

ಸುಮಾರು 1.75 ಲಕ್ಷ ಜನರು ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸುವ ಅಂದಾಜಿದೆ. ಅವರಲ್ಲಿ ಶೇಕಡ 80ರಷ್ಟು ಜನರು ಹಜ್‌ ಕಮಿಟಿ ಮೂಲಕ ಯಾತ್ರೆ ಕೈಗೊಳ್ಳುತ್ತಾರೆ. ಸುಮಾರು ಶೇಕಡ 20ರಷ್ಟು ಜನರು ಖಾಸಗಿ ಪ್ರವಾಸಿ ಆಪರೇಟರ್‌ಗಳ ನೆರವಿನಿಂದ ಯಾತ್ರೆ ಕೈಗೊಳ್ಳುತ್ತಾರೆ.

ಆರೋಗ್ಯ ತಪಾಸಣೆಯನ್ನು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದ ತಪಾಸಣೆಯನ್ನು ಪರಿಗಣಿಸಲಾಗುವುದಿಲ್ಲ. ಈ ಕುರಿತಂತೆ ಅಲ್ಪಸಂಖ್ಯಾತರ ಸಚಿವಾಲಯವು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದೆ. ಪ್ರತಿ ರಾಜ್ಯದಿಂದಲೂ ಒಬ್ಬರು ಹಜ್‌ ಕಮಿಟಿಯಿಂದ ಅಧಿಕಾರಿಯಾಗಿ ಯಾತ್ರೆ ಕೈಗೊಳ್ಳಲಿದ್ದಾರೆ. ಈ ಕುರಿತು ಇನ್ನಷ್ಟು ವಿವರ ಓದಲು ಇಲ್ಲಿ ಕ್ಲಿಕ್‌ ಮಾಡಿ.