Hajj pilgrimage: 50 ಸಾವಿರ ರೂ.ಗೆ ಹಜ್ ಯಾತ್ರೆ, ಅರ್ಜಿ ಶುಲ್ಕವಿಲ್ಲ, ಹೆಚ್ಚುವರಿ ಶುಲ್ಕವಿಲ್ಲ, ಕೇಂದ್ರ ಸರಕಾರದ ನಿರ್ಧಾರ
ಈ ಬಾರಿ ಹಜ್ ಯಾತ್ರೆಯ ದರವನ್ನು ಪ್ರತಿವ್ಯಕ್ತಿಗೆ 50 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಅದೇ ರೀತಿ ಈ ಬಾರಿ ಹಜ್ ಯಾತ್ರೆಗೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಕಳೆದ ವರ್ಷ 400 ರೂ. ಅರ್ಜಿ ಶುಲ್ಕ ವಿಧಿಸಲಾಗಿತ್ತು.
ನವದೆಹಲಿ: ಈ ಬಾರಿ ಭಾರತದಿಂದ ಹಜ್‌ಗೆ ಯಾತ್ರೆ ಕೈಗೊಳ್ಳುವ ಮುಸ್ಲಿಂ ಯಾತ್ರಿಗಳಿಗೆ ಯಾತ್ರೆ ವೆಚ್ಚ ಕಡಿಮೆಯಾಗಲಿದೆ. ಏಕೆಂದರೆ, ಕೇಂದ್ರ ಸರಕಾರವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಜ್ ಯಾತ್ರೆಯ ದರವನ್ನು ಕಡಿಮೆ ಮಾಡಲು ಉದ್ದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಟ್ರೆಂಡಿಂಗ್ ಸುದ್ದಿ
ಈ ಬಾರಿ ಹಜ್ ಯಾತ್ರೆಯ ದರವನ್ನು ಪ್ರತಿವ್ಯಕ್ತಿಗೆ 50 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಅದೇ ರೀತಿ ಈ ಬಾರಿ ಹಜ್ ಯಾತ್ರೆಗೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಕಳೆದ ವರ್ಷ 400 ರೂ. ಅರ್ಜಿ ಶುಲ್ಕ ವಿಧಿಸಲಾಗಿತ್ತು.
"ಈ ಬಾರಿ ಹಜ್ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಎಲ್ಲಾ ಹಜ್ ಯಾತ್ರಿಗಳು ಯಾವುದೇ ವೆಚ್ಚ ಮಾಡದೆ ಅರ್ಜಿ ಸಲ್ಲಿಸಬಹುದು. ಈ ಬಾರಿ ಹಜ್ ಯಾತ್ರೆಯ ದರವನ್ನು 50 ಸಾವಿರ ರೂ.ಗೆ ತಗ್ಗಿಸಲಾಗುತ್ತದೆ. ಬ್ಯಾಗ್, ಸೂಟ್‌ಕೇಸ್, ಕೊಡೆ ಅಥವಾ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಹೀಗಿದ್ದರೂ, ಹಜ್ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ಸ್ವಂತ ಖರ್ಚಿನಲ್ಲೇ ಭರಿಸಬೇಕು. ಹಜ್ ಯಾತ್ರೆಗೆ ಹಿರಿಯರು, ವಿಶೇಷ ಚೇತನರು ಮತ್ತು ಮಹಿಳೆಯರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು" ಎಂದು ಮೂಲಗಳು ತಿಳಿಸಿವೆ.
ಸುಮಾರು 1.75 ಲಕ್ಷ ಜನರು ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಅಂದಾಜಿದೆ. ಅವರಲ್ಲಿ ಶೇಕಡ 80ರಷ್ಟು ಜನರು ಹಜ್ ಕಮಿಟಿ ಮೂಲಕ ಯಾತ್ರೆ ಕೈಗೊಳ್ಳುತ್ತಾರೆ. ಸುಮಾರು ಶೇಕಡ 20ರಷ್ಟು ಜನರು ಖಾಸಗಿ ಪ್ರವಾಸಿ ಆಪರೇಟರ್‌ಗಳ ನೆರವಿನಿಂದ ಯಾತ್ರೆ ಕೈಗೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.
"ಆರೋಗ್ಯ ತಪಾಸಣೆಯನ್ನು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದ ತಪಾಸಣೆಯನ್ನು ಪರಿಗಣಿಸಲಾಗುವುದಿಲ್ಲ. ಈ ಕುರಿತಂತೆ ಅಲ್ಪಸಂಖ್ಯಾತರ ಸಚಿವಾಲಯವು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದೆ. ಪ್ರತಿ ರಾಜ್ಯದಿಂದಲೂ ಒಬ್ಬರು ಹಜ್ ಕಮಿಟಿಯಿಂದ ಅಧಿಕಾರಿಯಾಗಿ ಯಾತ್ರೆ ಕೈಗೊಳ್ಳಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಹಜ್ ಯಾತ್ರೆ ಹೊರಡಲು ದೇಶದ ವಿವಿಧೆಡೆಯಲ್ಲಿ ಸುಮಾರು 25 ಸ್ಥಳಗಳನ್ನು ಗುರುತಿಸಲಾಗಿದೆ. ಒಂದು ಮಗುವಿರುವ ತಾಯಿಯಂದರಿಗೆ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಶ್ರೀನಗರ, ರಾಂಚಿ, ಗಯಾ, ಗುವಾಹಟಿ, ಇಂದೋರ್, ಭೋಪಾಲ್, ಮಂಗಳೂರು, ಗೋವಾ, ಔರಂಗಾಬಾದ್, ಬನಾರಸ್, ಜೈಪುರ, ನಾಗ್ಪುರ, ದೆಹಲಿ, ಮುಂಬಯಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ರಾಂಚಿ, ಚೆನ್ನೈ, ವಿಜಯವಾಡ ಮುಂತಾದ ಕಡೆಗಳಿಂದ ಯಾತ್ರೆ ಹೊರಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಹಜ್ ಸಮಿತಿಯು, ಈ ಬಾರಿ ಉತ್ತರ ಪ್ರದೇಶದಿಂದ 30 ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿತ್ತು. ಈ ಬಾರಿ ಮಹಿಳಾ ಯಾತ್ರಿಗಳು ಮಹ್ರಾಮ್ (ಪುರುಷ ಜತೆಗಾರ) ನೆರವಿಲ್ಲದೆ ಯಾತ್ರೆ ಕೈಗೊಳ್ಳಬಹುದೆಂದು ತಿಳಿಸಿತ್ತು.