ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚಂಡೀಗಢದಲ್ಲಿ ನಟಿ ಕಂಗನಾ ರನೌತ್ ಕಪಾಳಕ್ಕೆ ಹೊಡೆದ ಸಿಐಎಸ್‌ಎಫ್‌ ಮಹಿಳಾ ಕಾನ್‌ಸ್ಟೆಬಲ್‌, ಏನು ನಡೆಯಿತಲ್ಲಿ- ಇಲ್ಲಿದೆ ಪೂರ್ಣ ವಿವರ

ಚಂಡೀಗಢದಲ್ಲಿ ನಟಿ ಕಂಗನಾ ರನೌತ್ ಕಪಾಳಕ್ಕೆ ಹೊಡೆದ ಸಿಐಎಸ್‌ಎಫ್‌ ಮಹಿಳಾ ಕಾನ್‌ಸ್ಟೆಬಲ್‌, ಏನು ನಡೆಯಿತಲ್ಲಿ- ಇಲ್ಲಿದೆ ಪೂರ್ಣ ವಿವರ

ಚಂಡೀಗಢದ ವಿಮಾನ ನಿಲ್ಧಾಣದಲ್ಲಿ ಲೋಕಸಭೆಗೆ ಇತ್ತೀಚೆಗೆ ನಟಿ ಕಂಗನಾ ರನೌತ್ ಮೇಲೆ ಸಿಐಎಸ್‌ಎಫ್‌ ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಕೌರ್ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇಂದು (ಜೂನ್ 6) ಅಪರಾಹ್ನ ಈ ಘಟನೆ ನಡೆದಿದ್ದು ಈ ಕುರಿತು ದೂರು ದಾಖಲಾಗಿದೆ.

ಚಂಡೀಗಢ ವಿಮಾನ ನಿಲ್ಧಾಣದಲ್ಲಿ ನಟಿ ಕಂಗನಾ ರನೌತ್ ಮೇಲೆ ಹಲ್ಲೆ ನಡೆಸಿದ ಸಿಐಎಸ್‌ಎಫ್‌ ಮಹಿಳಾ ಕಾನ್‌ಸ್ಟೆಬಲ್‌
ಚಂಡೀಗಢ ವಿಮಾನ ನಿಲ್ಧಾಣದಲ್ಲಿ ನಟಿ ಕಂಗನಾ ರನೌತ್ ಮೇಲೆ ಹಲ್ಲೆ ನಡೆಸಿದ ಸಿಐಎಸ್‌ಎಫ್‌ ಮಹಿಳಾ ಕಾನ್‌ಸ್ಟೆಬಲ್‌

ಚಂಡೀಗಢ: ಹರಿಯಾಣದ ಮಂಡಿ ಲೋಕಸಭಾ ಕ್ಷೇತ್ರದಿಂದ ಇತ್ತೀಚೆಗಷ್ಟೇ ಲೋಕಸಭೆಗೆ ಚುನಾಯಿತರಾಗಿರುವ ನಟಿ-ರಾಜಕಾರಣಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಗುರುವಾರ ಕಪಾಳಕ್ಕೆ ಹೊಡೆದರು ಎಂದು ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ನಡುವೆ, ಮಹಿಳಾ ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಅಧಿಕಾರಿಗಳನ್ನು ಉಲ್ಲೇಖಸಿ ವರದಿ ಮಾಡಿದೆ.

ಘಟನೆ ನಡೆದ ಕೂಡಲೇ ಸಿಐಎಸ್‌ಎಫ್‌ ಅಧಿಕಾರಿಗಳಿಗೆ ಸ್ಥಳದಲ್ಲೇ ಕಂಗನಾ ದೂರು ನೀಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಹಿರಿಯ ಸಿಐಎಸ್ಎಫ್ ಅಧಿಕಾರಿಗಳನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಕಂಗನಾ ಅವರು ವಿಸ್ತಾರಾ ವಿಮಾನದಲ್ಲಿ ಮಧ್ಯಾಹ್ನ 3 ಗಂಟೆಗೆ ದೆಹಲಿಗೆ ತೆರಳಿದರು.

ದೆಹಲಿಗೆ ಆಗಮಿಸಿದ ನಂತರ ಕಂಗನಾ ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ವಿವರಿಸಿದರು. ಅವರಿಗೆ ಘಟನೆ, ಇಂಡಿಯಾ ಟುಡೇ ವರದಿ ಮಾಡಿದೆ.

ವಿಮಾನ ನಿಲ್ಧಾಣದಲ್ಲಿ ಏನು ನಡೆಯಿತು?

ಸೋಷಿಯಲ್ ಮೀಡಿಯಾಗಳಲ್ಲಿ ಚಂಡೀಗಢ ವಿಮಾನ ನಿಲ್ದಾಣದ ವಿಡಿಯೋಗಳು ವೈರಲ್ ಆಗುತ್ತಿದೆ.

ಹಲ್ಲೆ ನಡೆಸಿದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಅನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಂದರ್ಭದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಮತ್ತು ನಟಿ ಕಂಗನಾ ನಡುವೆ ಬಿರುಸಿನ ವಾಕ್ಸಮರ ನಡೆಯಿತು. ಫೋನ್ ಅನ್ನು ಟ್ರೇನಲ್ಲಿ ಇರಿಸಲು ನಿರಾಕರಿಸಿದ್ದರಿಂದಾಗಿ ಈ ವಾಕ್ಸಮರ ನಡೆಯಿತು. ಇದರಿಂದ ಕೋಪಗೊಂಡ ಕಾನ್‌ಸ್ಟೆಬಲ್‌ ಕಂಗನಾ ಕಪಾಳಕ್ಕೆ ಹೊಡೆದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಚಂಡೀಗಢ ವಿಮಾನ ನಿಲ್ಧಾಣದ ಘಟನೆ ಕುರಿತು ಕಂಗನಾ ಏನು ಹೇಳಿದ್ರು

ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಕಂಗನಾ ವಿಡಿಯೋ ಹೇಳಿಕೆ ನೀಡಿದ್ದು, ನಾನು ಸುರಕ್ಷಿತವಾಗಿದ್ಧೇನೆ. ನನಗೆ ಮಾಧ್ಯಮ ಮತ್ತು ಹಿತೈಷಿಗಳಿಂದ ಸಾಕಷ್ಟು ಫೋನ್‌ಕರೆಗಳು ಬರುತ್ತಿವೆ" ಎನ್ನುತ್ತ ಘಟನೆಯ ವಿವರ ನೀಡಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಈ ಘಟನೆ ನಡೆದಿದೆ ಎಂದು ಹೇಳಿದ ಕಂಗನಾ, ಸಿಐಎಸ್ಎಫ್ ಸಿಬ್ಬಂದಿ "ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದರಿಂದ" ತನ್ನ ಕಪಾಳಕ್ಕೆ ಹೊಡೆದರು ಎಂದು ವಿವರಿಸಿದರು.

“ಸೆಕ್ಯುರಿಟಿ ಚೆಕ್ ಮುಗಿಸಿ ನಾನು ಹೊರಗೆ ಬಂದ ತಕ್ಷಣ, ಎರಡನೇ ಕ್ಯಾಬಿನ್‌ನಲ್ಲಿದ್ದ ಮಹಿಳೆ, ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ಕಡೆಯಿಂದ ಬಂದು ನನ್ನ ಮುಖಕ್ಕೆ ಹೊಡೆದು ನಿಂದಿಸಲು ಪ್ರಾರಂಭಿಸಿದರು. ಯಾಕೆ ಹೀಗೆ ಮಾಡಿದಿರಿ ಎಂದು ನಾನು ಕೇಳಿದಾಗ, ರೈತ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದರು'' ಎಂದು ಕಂಗನಾ ವಿವರಿಸಿದರು. "ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿ ಇದೆ..." ಎಂದು ತಮ್ಮ ಮಾತು ಮುಗಿಸಿದ್ದಾರೆ.

ಕುಲ್ವಿಂದರ್ ಕೌರ್ ಹೇಳಿದ್ದೇನು - ಚಂಡೀಗಡ ವಿಮಾನ ನಿಲ್ಧಾಣದ ವಿಡಿಯೋ ವೈರಲ್‌

ಹನ್ಸರಾಜ್ ಮೀನಾ ಎಂಬುವವರು ಕುಲ್ವಿಂದರ್ ಕೌರ್ ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ಅವರು ಮಾತುಗಳು ಗಮನಸೆಳೆದಿವೆ. ಅದನ್ನು ಹನ್ಸರಾಜ್ ಮೀನಾ ಉಲ್ಲೇಖಿಸಿದ್ದಾರೆ.

"ರೈತರ ಚಳವಳಿಯಲ್ಲಿ, ಕಂಗನಾ ರಣಾವತ್ ಧರಣಿ ಕುಳಿತ ಮಹಿಳೆಯರಿಗೆ ತಲಾ 100 ರೂ.ಗೆ ಧರಣಿ ಮಾಡುವುದಾಗಿ ಹೇಳಿದ್ದರು, ಆಗ ನನ್ನ ತಾಯಿ ಕೂಡ ಅಲ್ಲಿ ಕುಳಿತಿದ್ದರು." ಸಿಐಎಸ್ಎಫ್ ಮಹಿಳಾ ಯೋಧ ಕುಲ್ವಿಂದರ್ ಕೌರ್ ತೀವ್ರ ಕೋಪಗೊಂಡಿದ್ದಾರೆ. ಒಬ್ಬ ರೈತನ ಮಗನಾಗಿ ನಾನು ಅವರ ಸ್ವಾಭಿಮಾನದ ಜೊತೆ ನಿಲ್ಲುತ್ತೇನೆ ಎಂದು ಹನ್ಸರಾಜ್‌ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

 

ಸುದ್ದಿ ಅಪ್ಡೇಟ್ ಆಗುತ್ತಿದೆ..

ಟಿ20 ವರ್ಲ್ಡ್‌ಕಪ್ 2024