ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ, ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್, ಕೋವಿಶೀಲ್ಡ್ ಕೊಟ್ಟ ಕಂಪನಿ

ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ, ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್, ಕೋವಿಶೀಲ್ಡ್ ಕೊಟ್ಟ ಕಂಪನಿ

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್ 19 ಸಂಕಷ್ಟ ಪರಿಹಾರಕ್ಕೆ ಒದಗಿಸಿದ್ದ ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ ಎಂದು ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್ ಸಲ್ಲಿಸಿದೆ. ಭಾರತದಲ್ಲಿ ಕೋವಿಶೀಲ್ಡ್ ಕೊಟ್ಟ ಕಂಪನಿಯೂ ಇದುವೇ ಆಗಿದ್ದು, ವಿದ್ಯಮಾನದ ವಿವರ ಇಲ್ಲಿದೆ.

ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ ಎಂದು ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್ ಸಲ್ಲಿಸಿದೆ. ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಕೊಟ್ಟ ಕಂಪನಿಯೂ ಇದುವೇ ಆಗಿದೆ. (ಸಾಂಕೇತಿಕ ಚಿತ್ರ)
ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ ಎಂದು ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್ ಸಲ್ಲಿಸಿದೆ. ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಕೊಟ್ಟ ಕಂಪನಿಯೂ ಇದುವೇ ಆಗಿದೆ. (ಸಾಂಕೇತಿಕ ಚಿತ್ರ) (REUTERS)

ನವದೆಹಲಿ/ ಬೆಂಗಳೂರು: ಔಷಧೋತ್ಪನ್ನ ವಲಯದ ದೈತ್ಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಡ್ -19 ಲಸಿಕೆಯಾಗಿರುವ ಎಝೆಡ್ ಲಸಿಕೆಯು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್' (ಟಿಟಿಎಸ್) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿರುವುದಾಗಿ ಲಂಡನ್ ಮೂಲದ ಪತ್ರಿಕೆ ದಿ ಟೆಲಿಗ್ರಾಫ್ ವರದಿ ಮಾಡಿದೆ. ಲಸಿಕೆಯನ್ನು ಹೊರತಂದ ನಂತರ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಸಲ್ಲಿಸಿದ ಕಡತಗಳಲ್ಲಿ ಇದನ್ನು ಕಂಪನಿ ಒಪ್ಪಿಕೊಂಡಿದೆ ಎಂದು ವರದಿ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಔಷಧ ಕಂಪನಿಯು, ಆ ಲಸಿಕೆ ಸ್ವೀಕರಿಸಿದವರ ಸಾವು ನೋವು, ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂಬ ಆರೋಪದ ಮೊಕದ್ದಮೆಯನ್ನು ಎದುರಿಸುತ್ತಿದೆ.

ಎರಡು ಮಕ್ಕಳ ತಂದೆ ಜಮೀ ಸ್ಕಾಟ್‌ ಕಳೆದ ವರ್ಷ ಈ ಲಸಿಕೆಯ ಪರಿಣಾಮ ರಕ್ತ ಹೆಪ್ಪುಗಟ್ಟುವಿಕೆ ತೊಂದರೆ ಅನುಭವಿಸಿದ್ದಾರೆ. ಉದ್ಯೋಗ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. 2021ರ ಏಪ್ರಿಲ್‌ನಲ್ಲಿ ಲಸಿಕೆ ಸ್ವೀಕರಿಸಿದ ಬಳಿಕ ಈಗ ಕಾಯಂ ಮಿದುಳಿನ ಗಾಯದಿಂದ ಬಳಲಿದ್ದಾರೆ. ಇದೇ ಕಾರಣಕ್ಕೆ ಅವರು ಕಂಪನಿಯ ವಿರುದ್ಧ ದಾವೆ ಹೂಡಿದ್ದಾರೆ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ.

ಅಸ್ಟ್ರಾಜೆನೆಕಾ ಎಝೆಡ್‌ ಲಸಿಕೆ; ಲಂಡನ್ ಹೈಕೋರ್ಟ್‌ನಲ್ಲಿ 51 ದಾವೆ

ಕೋವಿಡ್ ಕಾಯಿಲೆ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡ ವಿವಿಧ ಸಂತ್ರಸ್ತರು, ದುಃಖಿತ ಸಂಬಂಧಿಕರು ಲಂಡನ್ ಹೈಕೋರ್ಟ್‌ನಲ್ಲಿ 51 ದಾವೆಗಳನ್ನು ಹೂಡಿದ್ದಾರೆ. ಅವುಗಳ ವಿಚಾರಣೆ ಪ್ರಗತಿಯಲ್ಲಿದ್ದು, 100 ದಶಲಕ್ಷ ಪೌಂಡ್ (1047.32 ಕೋಟಿ ರೂಪಾಯಿ) ನಷ್ಟ ಪರಿಹಾರ ಕೋರಿದ್ದಾರೆ.

ವಿಚಾರಣಾ ಹಂತದಲ್ಲಿ 2023ರ ಮೇ ತಿಂಗಳಲ್ಲಿ ಸ್ಕಾಟ್‌ ಅವರ ವಕೀಲರ ಬಳಿ ಕಂಪನಿಯು, ಜೆನೆರಿಕ್ ಮಟ್ಟದಲ್ಲಿ ಲಸಿಕೆಯಿಂದ ಟಿಟಿಎಸ್‌ ಉಂಟಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲಾಗದ ಎಂದು ಹೇಳಿತ್ತು. ಆದಾಗ್ಯೂ, ಫೆಬ್ರವರಿ ತಿಂಗಳಲ್ಲಿ ಹೈಕೋರ್ಟ್‌ಗೆ ಅಸ್ಟ್ರಾಜೆನೆಕಾ ಸಲ್ಲಿಸಿದ ದಾಖಲೆಗಳಲ್ಲಿ “ಎಝೆಡ್ ಲಸಿಕೆ ಬಹಳ ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್‌ಗೆ ಕಾರಣವಾಗಬಹುದು ಎಂದು ಒಪ್ಪಿಕೊಳ್ಳಲಾಗಿದೆ. ಆದರೆ, ಅದಕ್ಕೆ ಕಾರಣವಾಗಿರುವ ಕಾರ್ಯವಿಧಾನವು ತಿಳಿದಿಲ್ಲ” ಎಂದು ವಿವರಿಸಿದೆ.

ಸ್ಕಾಟ್‌ ಕುಟುಂಬದವರ ವಾದವೇನು

“ಲಸಿಕೆಗಳಿಂದ ಉಂಟಾಗುವ ರೋಗನಿರೋಧಕ ಥ್ರಂಬೋಸೈಟೋಪೆನಿಯಾ ಮತ್ತು ಥ್ರಂಬೋಸಿಸ್ (VITT) ಲಸಿಕೆಯಿಂದ ಉಂಟಾಗುತ್ತದೆ ಎಂಬುದನ್ನು ವೈದ್ಯಕೀಯ ಪ್ರಪಂಚವು ಬಹುಕಾಲ ಹಿಂದೆಯೇ ಒಪ್ಪಿಕೊಂಡಿದೆ” ಎಂದು ಸ್ಕಾಟ್ ಅವರ ಪತ್ನಿ ಕಟೆ ಅವರು ಟೆಲಿಗ್ರಾಫ್‌ ಜೊತೆ ಮಾತನಾಡುತ್ತ ವಿವರಿಸಿದ್ದಾರೆ.

ಈ ವಿಷಯವನ್ನು ಒಪ್ಪಿಕೊಳ್ಳುವುದಕ್ಕೆ ಔ‍ಷಧ ಕಂಪನಿಯು 3 ವರ್ಷ ತೆಗೆದುಕೊಂಡಿತು. ಇದಕ್ಕಾಗಿ ಅದು ಕ್ಷಮೆಯಾಚಿಸಬೇಕು. ನ್ಯಾಯಯುತವಾದ ಪರಿಹಾರವನ್ನೂ ತಮ್ಮ ಕುಟುಂಬಕ್ಕೆ ಮತ್ತು ಸಂತ್ರಸ್ತರಾದ ಇತರೆ ಕುಟುಂಬದವರಿಗೂ ನೀಡಬೇಕು. ನ್ಯಾಯ ನಮ್ಮ ಪರವಾಗಿ ಇದೆ. ನಮ್ಮ ವಾದದಲ್ಲಿ ನಿಜವಿದೆ. ನಾವು ಇದನ್ನು ಇಲ್ಲಿಗೇ ನಿಲ್ಲಿಸಲ್ಲ ಎಂದು ಕಟೆ ಹೇಳಿರುವುದಾಗಿ ವರದಿ ವಿವರಿಸಿದೆ.

ಭಾರತದಲ್ಲಿ ಆಸ್ಟ್ರಾಜೆನೆಕಾ - ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪಾಲುದಾರಿಕೆಯ ಲಸಿಕೆ

ಕೋವಿಡ್ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಕಂಪನಿಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಜೊತೆಗೆ ಪಾಲುದಾರಿಕೆ ಮಾಡಿಕೊಂಡಿತ್ತು. ಇದು ಭಾರತ ಸರ್ಕಾರಕ್ಕೆ ಕೋವಿಶೀಲ್ಡ್‌ (CoviShield) ಲಸಿಕೆಯನ್ನು ಪೂರೈಸಿತ್ತು.

ಭಾರತದಲ್ಲೂ ಕೋವಿಡ್ ಲಸಿಕೆ ಪಡೆದವರ ಪೈಕಿ ಅನೇಕರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆಗಳು ವರದಿಯಾಗಿವೆ. ಆದರೆ, ಅವರಿಗೆ ಬೇರೆ ಬೇರೆ ರೋಗಗಳಿದ್ದವು ಎಂಬ ಕಾರಣಕ್ಕೆ ಲಸಿಕೆಯೇ ಸಾವಿಗೆ ಕಾರಣ ಎಂಬುದನ್ನು ದೃಢೀಕರಿಸುವುದು ಸಾಧ್ಯವಾಗಿಲ್ಲ. ಆದರೆ, ಈ ಕುರಿತು ಅಧ್ಯಯನ ನಡೆಯಬೇಕು ಎಂಬ ಆಗ್ರಹ ಈಗಲೂ ವ್ಯಾಪಕವಾಗಿ ಇದೆ.

IPL_Entry_Point