ಕನ್ನಡ ಸುದ್ದಿ  /  Nation And-world  /  Health News Too Much Insulin Can Be As Dangerous As Too Little Cell Metabolism University Of California Research Pcp

Health News: ದೇಹದಲ್ಲಿ ಅತ್ಯಧಿಕ ಇನ್ಸುಲಿನ್‌ ಪ್ರಮಾಣವು ಕಡಿಮೆ ಇನ್ಸುಲಿನ್‌ನಷ್ಟೇ ಅಪಾಯಕಾರಿ ಎಂದ ಸಂಶೋಧನೆ

ಇನ್ಸುಲಿನ್‌ (insulin) ಕೊರತೆಯಿಂದ ಸಾವು ಸಂಭವಿಸಬಹುದು. ಇದೇ ರೀತಿ ಹೆಚ್ಚಿನ ಇನ್ಸುಲಿನ್ ಸಹ ಮಾರಕವಾಗಬಹುದು ಎಂದು ಕ್ಯಾಲಿಫೋರ್ನಿಯಾ (University of California) ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ಅಧ್ಯಯನ ಕಂಡುಕೊಂಡಿದೆ.

Health News: ದೇಹದಲ್ಲಿ ಅತ್ಯಧಿಕ ಇನ್ಸುಲಿನ್‌ ಪ್ರಮಾಣವು ಕಡಿಮೆ ಇನ್ಸುಲಿನ್‌ನಷ್ಟೇ ಅಪಾಯಕಾರಿ ಎಂದ ಸಂಶೋಧನೆ
Health News: ದೇಹದಲ್ಲಿ ಅತ್ಯಧಿಕ ಇನ್ಸುಲಿನ್‌ ಪ್ರಮಾಣವು ಕಡಿಮೆ ಇನ್ಸುಲಿನ್‌ನಷ್ಟೇ ಅಪಾಯಕಾರಿ ಎಂದ ಸಂಶೋಧನೆ (Getty Images via AFP)

ವಾಷಿಂಗ್ಟನ್‌: ರಕ್ತದ ಗ್ಲೂಕೋಸ್‌ ಪ್ರಮಾಣವನ್ನು ನಿಯಂತ್ರಿಸುವ ಹಾರ್ಮೋನ್‌ "ಇನ್ಸುಲಿನ್‌" (insulin) ಕುರಿತು ಹೊಸ ಅಧ್ಯಯನವೊಂದು ನಡೆದಿದ್ದು, ಅಧ್ಯಯನದಲ್ಲಿ ಅತ್ಯಧಿಕ ಇನ್ಸುಲಿನ್‌ ಪ್ರಮಾಣವು ಕಡಿಮೆ ಇನ್ಸುಲಿನ್‌ನಷ್ಟೇ ಅಪಾಯಕಾರಿ ಎಂಬ ಅಂಶ ಬಹಿರಂಗಗೊಂಡಿದೆ. ಇನ್ಸುಲಿನ್ ಆವಿಷ್ಕಾರವಾಗಿ ಒಂದು ಶತಮಾನಕ್ಕಿಂತ ಹೆಚ್ಚು ಸಮಯ ಕಳೆದಿದೆ. ಅಂದಿನಿಂದ ಹಾರ್ಮೋನ್ ಚಿಕಿತ್ಸೆಯಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ಟೈಪ್ 1 ಡಯಾಬಿಟಿಸ್ ಮತ್ತು ಅನೇಕ ಸಂದರ್ಭಗಳಲ್ಲಿ ಟೈಪ್ 2 ಮಧುಮೇಹಕ್ಕೆ ಇನ್ಸುಲಿನ್ ಒಂದು ನಿರ್ಣಾಯಕ ಚಿಕಿತ್ಸೆಯಾಗಿದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, 8.4 ಮಿಲಿಯನ್ ಅಮೆರಿಕನ್ನರು ಇನ್ಸುಲಿನ್ ಅನ್ನು ಬಳಸುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ನೂರು ವರ್ಷಗಳಲ್ಲಿ ಇನ್ಸುಲಿನ್‌ ಹೇಗೆ ಕಾರ್ಯನಿರ್ವಹಿಸುತ್ತದೆ, ಇನ್ಸುಲಿನ್‌ ಕೊರತೆಯಿದ್ದಾಗ ಏನಾಗುತ್ತದೆ ಎಂದು ಸಾಕಷ್ಟು ವೈದ್ಯಕೀಯ ಮತ್ತು ಜೀವರಾಸಾಯನಿಕ ಸಂಶೋಧನೆಗಳು ನಡೆದಿವೆ. 2023 ರ ಏಪ್ರಿಲ್ 20 ರಂದು ಸೆಲ್ ಮೆಟಾಬಾಲಿಸಮ್‌ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾದ ಹೊಸ ಅಧ್ಯಯನವು ಇನ್ಸುಲಿನ್‌ನ ಸಾಧಕ ಬಾಧಕಗಳ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳ ತಂಡವು ಈ ಅಧ್ಯಯನ ನಡೆಸಿದ್ದಾರೆ.

"ಇನ್ಸುಲಿನ್ ಅತ್ಯಗತ್ಯವಾದ ಹಾರ್ಮೋನ್‌ಗಳಲ್ಲಿ ಒಂದಾಗಿದೆ ನಿಜ. ಇನ್ಸುಲಿನ್‌ ಕೊರತೆಯಿಂದ ಸಾವು ಸಂಭವಿಸಬಹುದು. ಇದೇ ರೀತಿ ಹೆಚ್ಚಿನ ಇನ್ಸುಲಿನ್ ಸಹ ಮಾರಕವಾಗಬಹುದು" ಎಂದು ಅಧ್ಯಯನದ ಹಿರಿಯ ಲೇಖಕರಾದ ಮೈಕೆಲ್ ಕರಿನ್ ಹೇಳಿದ್ದಾರೆ. ಅವರು ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಫಾರ್ಮಾಕಾಲಜಿ ಮತ್ತು ಪೆಥಾಲಜಿ ವಿಭಾಗದ ಪ್ರೊಫೆಸರ್‌.

"ನಮ್ಮ ದೇಹವು ಇನ್ಸುಲಿನ್ ಉತ್ಪಾದನೆಯನ್ನು ಸೂಕ್ಷ್ಮವಾಗಿ ಟ್ಯೂನ್ ಮಾಡುವಂತಹ ಸಂದರ್ಭದಲ್ಲಿ ಇನ್ಸುಲಿನ್ ಅಥವಾ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುವ ಔಷಧಿಯ ಜತೆಗೆ ಚಿಕಿತ್ಸೆ ಪಡೆಯುವ ರೋಗಿಗಳು ಸಾಮಾನ್ಯವಾಗಿ ಹೈಪೊಗ್ಲಿಸಿಮಿಯಾವನ್ನು ಅನುಭವಿಸುತ್ತಾರೆ. ಈ ಸ್ಥಿತಿಯನ್ನು ಗುರುತಿಸದೆ ಮತ್ತು ಚಿಕಿತ್ಸೆ ನೀಡದಿದ್ದರೆ ಕಾಯಿಲೆ ಪೀಡಿತರಾಗಬಹುದು, ಕೋಮಾ ಮತ್ತು ಸಾವಿಗೂ ಕಾರಣವಾಗಬಹುದು" ಎಂದು ಅವರು ಹೇಳಿದ್ದಾರೆ.

ಹೈಪೊಗ್ಲಿಸಿಮಿಯಾ (ರಕ್ತದಲ್ಲಿ ಕಡಿಮೆ ಸಕ್ಕರೆ) ಮಧುಮೇಹ ಹೊಂದಿರುವ ವ್ಯಕ್ತಿಗಳ ಸಾವಿಗೆ ಕಾರಣವಾಗುವ ಗಮನಾರ್ಹ ಅಂಶವಾಗಿದೆ. ಈ ಅಧ್ಯಯನದಲ್ಲಿ ದೇಹದ ನೈಸರ್ಗಿಕ ರಕ್ಷಣೆ ಅಥವಾ ಸುರಕ್ಷತಾ ಕವಾಟದ ಕುರಿತು ಹೇಳಲಾಗಿದೆ. ಇದರಿಂದ ಇನ್ಸುಲಿನ್‌ ಆಘಾತದ ಅಪಾಯ ಕಡಿಮೆಯಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆ ಕವಾಟವು ಫ್ರಕ್ಟೋಸ್-1,6-ಬಿಸ್ಫಾಸ್ಫೇಟ್ ಫಾಸ್ಫೇಟೇಸ್ ಅಥವಾ FBP1 ಎಂಬ ಮೆಟಾಬಾಲಿಕ್ ಕಿಣ್ವವಾಗಿದೆ. ಇದು ಗ್ಲುಕೋನೋಜೆನೆಸಿಸ್ ಅನ್ನು ನಿಯಂತ್ರಿಸಲು ನೆರವಾಗುತ್ತದೆ. ಈ ಅಧ್ಯಯನ ವರದಿಯನ್ನು ಇಲ್ಲಿ ಓದಿ.

ಹೈಪೊಗ್ಲಿಸಿಮಿಯಾಕ್ಕೆ ಕಾರಣಗಳು

ದೇಹವು ನೈಸರ್ಗಿಕ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿರುವುದು. ದೇಹವು ಇನ್ಸುಲಿನ್ ಮೂಲಕ ದೇಹದಲ್ಲಿ ಉಂಟಾಗುವ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಸಮತೋಲನಗೊಳಿಸಲು ಸಾಧ್ಯವಾಗದಿದ್ದಾಗ ಹೈಪೊಗ್ಲಿಸಿಮಿಯಾ ಉಂಟಾಗಬಹುದು. ಮಧುಮೇಹ ಔಷಧ ಮತ್ತು ಇತರ ಇನ್ಸುಲಿನ್ ಪ್ರಮಾಣಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗಲೂ ಹೈಪೊಗ್ಲಿಸಿಮಿಯಾ ಉಂಟಾಗಬಹುದು. ಸಕ್ಕರೆಕಾಯಿಲೆ ಹೊಂದಿದ್ದು ಮತ್ತು ನೀವು ದೈಹಿಕವಾಗಿ ಸಕ್ರಿಯವಾಗಿಲ್ಲದಿದ್ದರೂ ಇದು ಉಂಟಾಗಬಹುದು. ಭಾವನಾತ್ಮಕ ಮತ್ತು ಮಾನಸಿಕ ಒತ್ತಡ ಕೂಡ ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗಬಹುದು.