ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೆಕ್ಸಿಕೋದಲ್ಲಿ ಹಕ್ಕಿಜ್ವರಕ್ಕೆ 59 ವರ್ಷದ ವ್ಯಕ್ತಿ ಸಾವು; ಜಗದ ಮೊದಲ ಘಟನೆ, ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ

ಮೆಕ್ಸಿಕೋದಲ್ಲಿ ಹಕ್ಕಿಜ್ವರಕ್ಕೆ 59 ವರ್ಷದ ವ್ಯಕ್ತಿ ಸಾವು; ಜಗದ ಮೊದಲ ಘಟನೆ, ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ

ಮೆಕ್ಸಿಕೋದಲ್ಲಿ ಹಕ್ಕಿಜ್ವರಕ್ಕೆ 59 ವರ್ಷದ ವ್ಯಕ್ತಿಯ ಸಾವು ಸಂಭವಿಸಿದ ಪ್ರಕರಣ ವರದಿಯಾಗಿದೆ. ಇದು ಜಗದ ಮೊದಲ ಘಟನೆ ಎಂದು ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ, ಈ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದೆ. ಈ ಹಕ್ಕಿ ಜ್ವರ ರೋಗಲಕ್ಷಣ ಮತ್ತು ಇತರೆ ಮಾಹಿತಿ ಇಲ್ಲಿದೆ.

ಮೆಕ್ಸಿಕೋದಲ್ಲಿ ಹಕ್ಕಿಜ್ವರಕ್ಕೆ 59 ವರ್ಷದ ವ್ಯಕ್ತಿ ಸಾವು; ಜಗದ ಮೊದಲ ಘಟನೆ, ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ. (ಸಾಂಕೇತಿಕ ಚಿತ್ರ)
ಮೆಕ್ಸಿಕೋದಲ್ಲಿ ಹಕ್ಕಿಜ್ವರಕ್ಕೆ 59 ವರ್ಷದ ವ್ಯಕ್ತಿ ಸಾವು; ಜಗದ ಮೊದಲ ಘಟನೆ, ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ. (ಸಾಂಕೇತಿಕ ಚಿತ್ರ) (PTI)

ನವದೆಹಲಿ: ಮೆಕ್ಸಿಕೋದಲ್ಲಿ ಹಕ್ಕಿ ಜ್ವರದ ಕಾರಣ 59 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹಕ್ಕಿ ಜ್ವರಕ್ಕೆ ಒಳಗಾಗಿ ಮನುಷ್ಯ ಮೃತಪಟ್ಟಿರುವುದನ್ನು ದೃಢೀಕರಿಸಿದೆ. ಮೆಕ್ಸಿಕೊ ನಿವಾಸಿಯಾದ ಸಂತ್ರಸ್ತ ವ್ಯಕ್ತಿ ಹಕ್ಕಿಜ್ವರ ಎ (ಎಚ್ 5 ಎನ್ 2) ರೋಗಲಕ್ಷಣಗಳಿಂದ ಬಳಲುತ್ತಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ನಂತರ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಅದು ಫಲಿಸದೇ ಮೃತಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಪರಿಶೀಲನೆ ಮುಂದುವರಿಸಿದ್ದು, ವ್ಯಕ್ತಿ ವಾಸವಿದ್ದ ಪರಿಸರ, ಸುತ್ತಮುತ್ತಲಿನ ಪ್ರದೇಶ, ಅಲ್ಲಿನ ಜನರ ಆರೋಗ್ಯದ ಮೇಲೆ ಕೂಡ ನಿಗಾವಹಿಸಲಾಗಿದೆ. ಅದರ ವರದಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮೆಕ್ಸಿಕೋ ಆಡಳಿತ ವಿಶ್ವ ಆರೋಗ್ಯ ಸಂಸ್ಥೆಯ ಗಮನವನ್ನೂ ಸೆಳೆದಿತ್ತು. ಇದರ ಬೆನ್ನಿಗೆ ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಗಮನಿಸಿದ್ದು, ಜಗತ್ತನ್ನು ಎಚ್ಚರಿಸಿದೆ.

ಮೆಕ್ಸಿಕನ್ ಆರೋಗ್ಯ ಅಧಿಕಾರಿಗಳ ಹೇಳಿಕೆಯ ಪ್ರಕಾರ, 59 ವರ್ಷದ ವ್ಯಕ್ತಿಯೊಬ್ಬರು "ಜ್ವರ, ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ ಮತ್ತು ಸಾಮಾನ್ಯ ಅಸ್ವಸ್ಥತೆ" ಮುಂತಾದ ರೋಗಲಕ್ಷಣಗಳನ್ನು ಹೊಂದಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಂತರ ಏಪ್ರಿಲ್ 24 ರಂದು ನಿಧನರಾದರು.

"ಇದು ಜಾಗತಿಕವಾಗಿ ವರದಿಯಾದ ಇನ್ಫ್ಲುಯೆನ್ಸ ಎ (ಎಚ್ 5 ಎನ್ 2) ವೈರಸ್ ಸೋಂಕಿನ ಮೊದಲ ಪ್ರಯೋಗಾಲಯದಿಂದ ದೃಢಪಡಿಸಿದ ಮಾನವ ಪ್ರಕರಣ ಮತ್ತು ಮೆಕ್ಸಿಕೊದಲ್ಲಿ ವರದಿಯಾದ ವ್ಯಕ್ತಿಯಲ್ಲಿ ಮೊದಲ ಏವಿಯನ್ ಎಚ್ 5 ವೈರಸ್ ಸೋಂಕು" ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮೆಕ್ಸಿಕೊದ ಹಕ್ಕಿ ಜ್ವರದಿಂದ ಸಾವು; ಜಗತ್ತಿನ ಮೊದಲ ಪ್ರಕರಣ

ಪರಿಸ್ಥಿತಿಯನ್ನು ವಿವರಿಸಿದ ವಿಶ್ವ ಆರೋಗ್ಯ ಸಂಸ್ಥೆ ಮೇ 23 ರಂದು ಮೊದಲ ಪ್ರಕರಣದ ಮಾಹಿತಿ ಲಭ್ಯವಾಗಿದೆ ಎಂದು ದೃಢೀಕರಿಸಿದೆ. ಸಂತ್ರಸ್ತ ವ್ಯಕ್ತಿಗೆ ಕೋಳಿ ಅಥವಾ ಇತರ ಪ್ರಾಣಿಗಳೊಂದಿಗೆ ಯಾವುದೇ ಪೂರ್ವ ಸಂಪರ್ಕ ಇರಲಿಲ್ಲ ಎಂದು ವರದಿಯಾಗಿದೆ.

ಆದಾಗ್ಯೂ, ಮೃತ ವ್ಯಕ್ತಿಗೆ ಈ ಮೊದಲೇ ಹಲವು ರೀತಿಯ ಅನಾರೋಗ್ಯ ಲಕ್ಷಣಗಳಿದ್ದವು ಎಂಬುದನ್ನು ಗಮನಿಸಬೇಕು. ಆರೋಗ್ಯ ಹದಗೆಡುವುದಕ್ಕೆ ಅದು ಕೂಡ ಕಾರಣವಾಗಿರಬಹುದು ಎಂಬುದರ ಕಡೆಗೂ ಅದು ಗಮನಸೆಳೆದಿದೆ.

ಅಧಿಕಾರಿಗಳ ಪ್ರಕಾರ, 59 ವರ್ಷದ ವ್ಯಕ್ತಿಯು ಹಕ್ಕಿ ಜ್ವರದ ತೀವ್ರ ಲಕ್ಷಣಗಳನ್ನು ಅನುಭವಿಸುವ ಮೊದಲು ಮೂರು ವಾರ ತೀವ್ರ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಕೊರೊನಾ ವೈರಸ್‌ಗಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿಯಾಗುವ ಸಾಮರ್ಥ್ಯವನ್ನು ಉಲ್ಲೇಖಿಸಿ, ಹಕ್ಕಿ ಜ್ವರದ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ತಜ್ಞರು ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು.

ಮಾನವನಲ್ಲಿ ಹಕ್ಕಿ ಜ್ವರದ ಪ್ರಮುಖ ಲಕ್ಷಣಗಳು

 • ಗಂಭೀರವಲ್ಲದ ಫ್ಲೂ ಮಾದರಿಯ ಉಸಿರಾಟದ ತೊಂದರೆ ಇರುವಂತಹ ರೋಗಲಕ್ಷಣಗಳು
 • ಕಣ್ಣು ಕೆಂಪಾಗುವುದು (ಕಂಜಂಕ್ಟಿವಿಟಿಸ್)
 • ತೀವ್ರ ಜ್ವರ ಅಥವಾ ಜ್ವರದ ಅನುಭವ
 • ಕೆಮ್ಮು
 • ಗಂಟಲು ನೋವು
 • ಗಂಟಲು ಸೋರುವಿಕೆ ಅಥವಾ ಮೂಗು ಕಟ್ಟುವಿಕೆ
 • ಸ್ನಾಯು ಅಥವಾ ದೇಹದ ನೋವುಗಳು
 • ತಲೆನೋವು
 • ಆಯಾಸ
 • ಉಸಿರಾಟದ ತೊಂದರೆ ಅಥವಾ ಉಸಿರಾಟದ ತೊಂದರೆ
 • ಅತಿಸಾರ,
 • ವಾಕರಿಕೆ,
 • ವಾಂತಿ
 • ಸೆಳೆತಗಳು

ಮೆಕ್ಸಿಕೋದಲ್ಲಿ ಪತ್ತೆಯಾದ ಹಕ್ಕಿ ಜ್ವರವು ಜಾನುವರುಗಳಲ್ಲಿ ಬೇರೆಯದೇ ರೀತಿಯಲ್ಲಿರುತ್ತವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಮಾರ್ಚ್‌ನಲ್ಲಿ ಡೈರಿ ಹಿಂಡುಗಳಲ್ಲಿ H5N1 ವೈರಸ್ ತಳಿ ಪತ್ತೆಯಾಯಿತು. ಇದು ಮೂವರು ಡೇರಿ ಕೆಲಸಗಾರರಲ್ಲಿ ಕಂಡುಬಂದಿರುವುದನ್ನು ದೃಢಪಡಿಸಲಾಗಿತ್ತು. ಆದರೆ ಇದು ಗಂಭೀರ ಪ್ರಕರಣವಾಗಿರಲಿಲ್ಲ. ಮನುಷ್ಯರಿಗೆ ಬರುವ ಹಕ್ಕಿಜ್ವರದಲ್ಲೂ ಬೇರೆ ಬೇರೆ ರೀತಿಯಲ್ಲಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024