Hero Electric Scooter: ಹೀರೋ ಎಲೆಕ್ಟ್ರಿಕ್‌ನಿಂದ ಮಾರ್ಚ್ 15 ಹೊಸ ಸ್ಕೂಟರ್ ಲಾಂಚ್, ಇಲ್ಲಿದೆ ವಿವರ
ಟ್ವಿಟ್ಟರ್‌ನಲ್ಲಿ ಹನ್ನೆರಡು ಸೆಕೆಂಡ್‌ನ ಟೀಸರ್ ಅನ್ನೂ ಹಂಚಿಕೊಂಡಿದೆ. ಅಲ್ಲಿ ಕತ್ತಲಲ್ಲಿ ತುಸುವೇ ಕಾಣಿಸುವಂತೆ ಎಲೆಕ್ಟ್ರಿಕ್ ಸ್ಕೂಟರ್ ಇಡಲಾಗಿದೆ. ಜತೆಗೆ, ಅದರ ಹೆಡ್‌ಲೈಟ್ ಪ್ಲಾಷ್ ಆಗುತ್ತಿರುತ್ತದೆ.
ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ ತನ್ನ ನೂತನ ಉತ್ಪನ್ನ ಲಾಂಚ್ ಕುರಿತು ಟೀಸರ್ ಬಿಡುಗಡೆ ಮಾಡಿದೆ. ಕಂಪನಿಯು ನೂತನ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲಿದ್ದು, ಈಗಾಗಲೇ ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಈ ಸ್ಕೂಟರ್‌ನ ಟೀಸರ್ ಬಿಡುಗಡೆ ಮಾಡಿದೆ.
“ಬುದ್ಧಿವಂತಿಕೆಯ ಮತ್ತು ಸುಸ್ಥಿರ ಚಲನಶೀಲತೆಯ ಹೊಸ ಯುಗವು ಉದಯಿಸಲು ಸಿದ್ಧವಾಗಿದೆ! ಹೀರೋ ಎಲೆಕ್ಟ್ರಿಕ್‌ನಿಂದ ಹೊಸ ಎಲೆಕ್ಟ್ರಿಫೈಯಿಂಗ್ ರೈಡ್ ಅನ್ನು ಅನುಭವಿಸಲು ನೀವು ಸಿದ್ಧರಿದ್ದೀರಾ? ಇನ್ನಷ್ಟು ತಿಳಿದುಕೊಳ್ಳಲು ಈ ಪುಟವನ್ನು ಗಮನಿಸುತ್ತ ಇರಿ" ಎಂದು ಕಂಪನಿಯು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
ಟ್ವಿಟ್ಟರ್‌ನಲ್ಲಿ ಹನ್ನೆರಡು ಸೆಕೆಂಡ್‌ನ ಟೀಸರ್ ಅನ್ನೂ ಹಂಚಿಕೊಂಡಿದೆ. ಅಲ್ಲಿ ಕತ್ತಲಲ್ಲಿ ತುಸುವೇ ಕಾಣಿಸುವಂತೆ ಎಲೆಕ್ಟ್ರಿಕ್ ಸ್ಕೂಟರ್ ಇಡಲಾಗಿದೆ. ಜತೆಗೆ, ಅದರ ಹೆಡ್‌ಲೈಟ್ ಪ್ಲಾಷ್ ಆಗುತ್ತಿರುತ್ತದೆ. ಕಂಪನಿಯು ಹಳೆಯ ವಿನ್ಯಾಸ ಅಥವಾ ತಂತ್ರಜ್ಞಾನವನ್ನೇ ನೀಡುತ್ತಿದೆಯೇ, ಹೊಸ ಮಾದರಿಯ ಸ್ಕೂಟರ್ ಬಿಡುಗಡೆ ಮಾಡುತ್ತಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಕಂಪನಿಯು ಇದೇ ಮಾರ್ಚ್ 15ರಂದು ನೂತನ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ.
ಟೀಸರ್‌ನಲ್ಲಿ ಇದರ ಹೆಡ್‌ಲೈಟ್ ಹೆಚ್ಚು ಎತ್ತರದಲ್ಲಿರುವುದು ಗೋಚರಿಸುತ್ತದೆ. ಅಂದರೆ, ಹ್ಯಾಂಡಲ್ ಬಾರ್‌ಗೆ ಸರಿ ಸಮಾನಾಗಿ ಇದನ್ನು ಜೋಡಿಸಿರುವುದು ಗೋಚರಿಸುತ್ತದೆ. ಇದರೊಂದಿಗೆ ಎಲ್‌ಇಡಿ ಟರ್ನ್ ಇಂಟಿಕೇಟರ್ ಗೋಚರಿಸುತ್ತದೆ. ಇನ್ನುಳಿದಂತೆ ಡಿಸ್ಕ್ ಬ್ರೇಕ್, ಆಕರ್ಷಕ ಸೀಟು ಇತ್ಯಾದಿ ಫೀಚರ್‌ಗಳನ್ನು ನಿರೀಕ್ಷಿಸಬಹುದು.
ಇತ್ತೀಚೆಗೆ, ಕಂಪನಿಯು ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗಾಗಿ ಅಮೆರಿಕ ಮೂಲದ ಝೀರೋ ಮೋಟಾರ್‌ಸೈಕಲ್ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿತು. ಈ ಸಹಯೋಗವು ಹೀರೋ ಮೋಟೋಕಾರ್ಪ್‌ನ ಉತ್ಪಾದನೆ, ಸೋರ್ಸಿಂಗ್ ಮತ್ತು ಮಾರುಕಟ್ಟೆಯ ಪ್ರಮಾಣದೊಂದಿಗೆ ಪವರ್ ಟ್ರೈನ್‌ಗಳು ಮತ್ತು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗಲಿದೆ. ಇದೇ ಒಪ್ಪಂದದ ಮುಂದುವರೆದ ಭಾಗವಾಗಿ ನೂತನ ಸ್ಕೂಟರ್ ಲಾಂಚ್ ಆಗುತ್ತಿರಬಹುದೇ ಎನ್ನುವ ಸಂದೇಹವೂ ಇದೆ.
ರಸ್ತೆಗಿಳಿದ ಹೊಸ ಹೀರೋ ಸ್ಪ್ಲೆಂಡರ್ ಬೈಕ್
ಹೀರೋ ಮೋಟೊಕಾರ್ಪ್ ಕಂಪನಿಯ ನೂತನ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್ ದೇಶದ ದ್ವಿಚಕ್ರವಾಹನ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರ ದೆಹಲಿ ಎಕ್ಸ್‌ಶೋರೂಂ ದರ 83,368 ರೂ. ಇದೆ. ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಗಳಲ್ಲಿ ಈ ಬೈಕ್ ಲಭ್ಯವಿದೆ.
ಈಗಾಗಲೇ ಹೀರೋ ಮೋಟೋಕಾರ್ಪ್ ಕಂಪನಿಯ ಸ್ಪ್ಲೆಂಡರ್ ಬೈಕ್‌ಗಳಿಗೆ ದೇಶದಲ್ಲಿ ಬೇಡಿಕೆ ಉತ್ತಮವಾಗಿದೆ. ಇದು ಕಂಪನಿಯ ಯಶಸ್ವಿ ಬೈಕ್ ಎಂದರೆ ತಪ್ಪಾಗದು. ವಿಶೇಷವಾಗಿ ಗ್ರಾಮೀಣ ಭಾಗದ ತರುಣರಿಂದ ಹಿರಿಯರವರೆಗೆ ಎಲ್ಲರಿಗೂ ಸ್ಪ್ಲೆಂಡರ್ ಅಚ್ಚುಮೆಚ್ಚು. ನಗರಗಳ ರಸ್ತೆಗಳಲ್ಲಿಯೂ ಸ್ಪ್ಲೆಂಡರ್ ಬೈಕ್‌ಗಳಿಗೆ ಕೊರತೆಯಿಲ್ಲ. ಅತ್ಯುತ್ತಮ ಇಂಧನ ದಕ್ಷತೆ ಮತ್ತು ಕಡಿಮೆ ಮೇಂಟೆನ್ಸ್ ವೆಚ್ಚದಿಂದಾಗಿ ಸ್ಪ್ಲೆಂಡರ್ ಬೈಕ್ ದೇಶದಲ್ಲಿ ಫೇಮಸ್ಸು. ಈ ಬೈಕ್ ಕುರಿತು ವಿವರ ಇಲ್ಲಿದೆ
ಅತ್ಯಾಧುನಿಕ 110ಸಿಸಿ ಸ್ಕೂಟರ್ 'XOOM' ಪರಿಚಯಿಸಿದ ಹೀರೋ
ಜಗತ್ತಿನ ಅತಿದೊಡ್ಡ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಇತ್ತೀಚೆಗೆ ಹೊಸ 110cc ಸ್ಕೂಟರ್ Xoomಅನ್ನು ಪರಿಚಯಿಸಿದೆ. ಮೂರು ವೈವಿಧ್ಯಗಳಲ್ಲಿ-ಶೀಟ್ ಡ್ರಮ್, ಕ್ಯಾಸ್ಸ್ಟ್ ಡ್ರಮ್ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯಗಳಲ್ಲಿ ಪರಿಚಯಿಸಲಾಗಿರುವ ಹೀರೋ Xoom ಸ್ಕೂಟರ್, 68,599 ರೂಪಾಯಿ (LX –ಶೀಟ್ ಡ್ರಮ್), 71,799 ರೂಪಾಯಿ(VX – ಕ್ಯಾಸ್ಟ್ ಡ್ರಮ್) ಮತ್ತು 76,699 ರೂಪಾಯಿ(ZX – ಕ್ಯಾಸ್ಟ್ ಡ್ರಮ್) ಪ್ರಾರಂಭಿಕ ಬೆಲೆಗಳಲ್ಲಿ ದೇಶಾದ್ಯಂತ ಇರುವ ಹೀರೋ ಮೋಟೋಕಾರ್ಪ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ.