Hero Bikes: ಹೀರೋ ಬೈಕ್‌ಗಳ ಬೆಲೆ ಹೆಚ್ಚಳ: ನಿಮ್ಮ ನೆಚ್ಚಿನ ಬೈಕ್ ಈಗ ಎಷ್ಟಕ್ಕೆ ದೊರೆಯಲಿದೆ?
ದೇಶದ ಪ್ರಖ್ಯಾತ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾದ ಹೀರೋ ಮೋಟೋಕಾರ್ಪ್(Hero Motocorp) ತನ್ನ ಮೋಟಾರ್‌ಸೈಕಲ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯ ಸ್ಕೂಟರ್‌ಗಳ ಎಕ್ಸ್-ಶೋರೂಂ ಬೆಲೆ ಕೂಡ ಹೆಚ್ಚಾಗಿದ್ದು, ಡಿಸೆಂಬರ್ 1, 2022ರಿಂದಲೇ ಹೊಸ ಪರಿಷ್ಕೃತ ದರ ಜಾರಿಯಾಗಿದೆ. ಹೀರೋ ಬೈಕ್‌ಗಳ ಮೇಲೆ ಕನಿಷ್ಠ 1,500 ರೂ. ವರೆಗೆ ಹೆಚ್ಚಳ ಮಾಡಲಾಗಿದೆ.
ನವದೆಹಲಿ: ದೇಶದ ಪ್ರಖ್ಯಾತ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾದ ಹೀರೋ ಮೋಟೋಕಾರ್ಪ್(Hero Motocorp) ತನ್ನ ಮೋಟಾರ್‌ಸೈಕಲ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯ ಸ್ಕೂಟರ್‌ಗಳ ಎಕ್ಸ್-ಶೋರೂಂ ಬೆಲೆ ಕೂಡ ಹೆಚ್ಚಾಗಿದ್ದು, ಡಿಸೆಂಬರ್ 1, 2022ರಿಂದಲೇ ಹೊಸ ಪರಿಷ್ಕೃತ ದರ ಜಾರಿಯಾಗಿದೆ.
ಹೀರೋ ಬೈಕ್‌ಗಳ ಮೇಲೆ ಕನಿಷ್ಠ 1,500 ರೂ. ವರೆಗೆ ಹೆಚ್ಚಳ ಮಾಡಲಾಗಿದ್ದು, ನಿರ್ದಿಷ್ಟ ಮಾದರಿಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ಹೆಚ್ಚಳದ ನಿಖರವಾದ ಪ್ರಮಾಣ ಬದಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ. ಹೀರೋ ಮೋಟೋಕಾರ್ಪ್ ಬಹುತೇಕ ಎಲ್ಲಾ ಮಾದರಿಯ ಬೈಕ್ ಮತ್ತು ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸುವ ನಿರ್ಣಯ ಕೈಗೊಂಡಿದೆ.
ಈ ಕುರಿತು ಮಾತನಾಡಿರುವ ಹೀರೋ ಮೋಟೋಕಾರ್ಪ್ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ, ಒಟ್ಟಾರೆ ಹಣದುಬ್ಬರ, ವೆಚ್ಚಗಳ ಕಾರಣದಿಂದಾಗಿ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಗ್ರಾಹಕರ ಮೇಲೆ ಪ್ರಭಾವವನ್ನು ತಗ್ಗಿಸಲು ಕಂಪನಿಯು ನವೀನ ಹಣಕಾಸು ಪರಿಹಾರಗಳನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ನಿರಂಜನ್ ಗುಪ್ತಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 2022ರಲ್ಲಿ, ಹೀರೋ ಮೋಟೋಕಾರ್ಪ್ ಒಟ್ಟು 4,54,582 ದ್ವಿಚಕ್ರ ವಾಹನಗಳನ್ನು ದೇಶಾದ್ಯಂತ ಮಾರಾಟ ಮಾಡಿದೆ. ಈ ಪೈಕಿ 4,42,825 ಯುನಿಟ್‌ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಉಳಿದ 11,757 ಯುನಿಟ್‌ಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗಿದೆ. ಅಂದರೆ ಕಂಪನಿಯ ಒಟ್ಟು ಮಾರಾಟದಲ್ಲಿ ಶೇ.17ರಷ್ಟು ರಷ್ಟು ಕುಸಿತ ದಾಖಲಿಸಿದೆ.
ಕಂಪನಿಯು ಉಳಿತಾಯ ಕಾರ್ಯಕ್ರಮಗಳಿಗೆ ಹೆಚ್ಚಿನ ವೇಗ ನೀಡಿದ್ದು, ಇದು ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಮತ್ತು ಅಂಚುಗಳಲ್ಲಿ ಸುಧಾರಣೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೀರೋ ಮೋಟೋಕಾರ್ಪ್ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಸೂಚಕಗಳು ಬೇಡಿಕೆಯ ಬೆಳವಣಿಗೆಗೆ ಅನುಕೂಲಕರವಾಗಿವೆ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಉದ್ಯಮದ ಪ್ರಮಾಣವು ಹೆಚ್ಚಾಗುತ್ತದೆ ಎಂದು ಕಂಪನಿಯು ನಿರೀಕ್ಷಿಸುತ್ತದೆ ಎಂದು ನಿರಂಜನ್ ಗುಪ್ತಾ ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.
ಹೀರೋ ಕಂಪನಿಯ ಮೋಟಾರ್‌ಸೈಕಲ್‌ಗಳ ಬೆಲೆ ಇದುವರೆಗೂ ಒಟ್ಟು ನಾಲ್ಕು ಬಾರಿ ಏರಿಕೆಯಾಗಿದ್ದು, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಯದಾಗಿ ಬೆಲೆ ಏರಿಕೆ ಘೋಷಿಸಲಾಗಿತ್ತು. ಆಗ ಎಲ್ಲಾ ಮಾದರಿಯ ಬೈಕ್‌ಗಳ ಮೇಲೆ 1,000 ರೂ.ವರೆಗೆ ಬೆಲೆ ಹೆಚ್ಚಿಸಲಾಗಿತ್ತು.
ಇದೀಗ ಮತ್ತೆ ಕಂಪನಿಯು ತನ್ನ ಬೈಕ್ ಹಾಗೂ ಸ್ಕೂಟರ್ ಬೆಲೆಗಳಲ್ಲಿ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದ್ದು, ಹೀರೋ ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿಕೊಂಡಿದೆ.
ಇಂದಿನ ಪ್ರಮುಖ ಸುದ್ದಿಗಳು
Fuel Price Today December 7: ಇಷ್ಟು ಬೇಗ ಹೊರಟಿರಾ?: ನೋಡಿಕೊಂಡು ಹೋಗಿ ಪೆಟ್ರೋಲ್, ಡೀಸೆಲ್ ದರ..
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳು ಮತ್ತು ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ಇಂದಿನ(ಡಿ.07-ಬುಧವಾರ) ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
Gold Price Today December 7: ಶುಭ ಬುಧವಾರ, ಇಳಿದಿದೆ ಬೆಳ್ಳಿ-ಬಂಗಾರದ ದರ: ಆದರೂ ಕಷ್ಟವೇಕೆ ಶೃಂಗಾರ?
ಇಂದು(ಡಿ.07-ಬುಧವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.