ಕನ್ನಡ ಸುದ್ದಿ  /  Nation And-world  /  Himachal Congress Expels 30 Leaders For Anti Party Activities

Himachal Pradesh: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 30 ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್!

ಬ್ಲಾಕ್ ಕಮಿಟಿ ಅಂಗೀಕರಿಸಿದ ನಿರ್ಣಯದ ಮೇರೆಗೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ (ಹೆಚ್‌ಪಿಸಿಸಿ) ಅಧ್ಯಕ್ಷೆ ಪ್ರತಿಭಾ ಸಿಂಗ್ ತಕ್ಷಣವೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪದಾಧಿಕಾರಿಗಳನ್ನು ಹೊರಹಾಕಿದ್ದಾರೆ.

ಪಕ್ಷದಿಂದ 30 ಮುಖಂಡರ ಉಚ್ಛಾಟನೆ
ಪಕ್ಷದಿಂದ 30 ಮುಖಂಡರ ಉಚ್ಛಾಟನೆ (File)

ಕಳೆದ ತಿಂಗಳು ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕೇವಲ ಒಂದು ದಿನ ಬಾಕಿ ಇರುವಂತೆಯೇ, ಕಾಂಗ್ರೆಸ್‌ ಪಕ್ಷ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ರಾಜ್ಯದ ಚೋಪಾಲ್ ಬ್ಲಾಕ್ ಸಮಿತಿಯ 30 ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಛಾಟಿಸಿದೆ.

ಬ್ಲಾಕ್ ಕಮಿಟಿ ಅಂಗೀಕರಿಸಿದ ನಿರ್ಣಯದ ಮೇರೆಗೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ (ಹೆಚ್‌ಪಿಸಿಸಿ) ಅಧ್ಯಕ್ಷೆ ಪ್ರತಿಭಾ ಸಿಂಗ್ ತಕ್ಷಣವೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪದಾಧಿಕಾರಿಗಳನ್ನು ಹೊರಹಾಕಿದ್ದಾರೆ. ಉಚ್ಛಾಟಿತ ಸದಸ್ಯರಲ್ಲಿ ಉಪಾಧ್ಯಕ್ಷ ಧೀರೇನ್ ಸಿಂಗ್ ಚೌಹಾಣ್ ಮತ್ತು ಸಂತೋಷ್ ಡೋಗ್ರಾ ಕೂಡಾ ಸೇರಿದ್ದಾರೆ. ಮುಂದಿನ ಆರು ವರ್ಷಗಳಿಗೆ ಅನ್ವಯವಾಗುವಂತೆ ಪಕ್ಷದಿಂದ ಗೇಟ್‌ಪಾಸ್‌ ನೀಡಲಾಗಿದೆ.

ಕಳೆದ ತಿಂಗಳು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ನಾಳೆ ನಡೆಯಲಿದೆ. ಸೋಮವಾರ ನಡೆದ ಎಕ್ಸಿಟ್ ಪೋಲ್‌ ಸಮೀಕ್ಷಾ ವರದಿಗಳ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ 24ರಿಂದ 41 ಸೀಟುಗಳು ಬರಲಿವೆಯಂತೆ. ಇದೇ ವೇಳೆ ಕಾಂಗ್ರೆಸ್‌ಗೆ 20ರಿಂದ 40 ಸೀಟುಗಳು ಬರಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದ್ದವು. ಇಲ್ಲಿ ಬಹುಮತ ಬರಲು ಗೆಲ್ಲಬೇಕಾದ ಸೀಟುಗಳ ಸಂಖ್ಯೆ 35. ಹೀಗಾಗಿ ರಾಜ್ಯದಲ್ಲಿ ಬಿಗಿ ಫೈಟ್‌ ಏರ್ಪಡುವ ಸಾಧ್ಯತೆ ಇದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟು 68ರಲ್ಲಿ 40 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತವೆ ಎಂದು ಹೇಳಿಕೊಂಡಿವೆ.

ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ಸುರೇಶ್ ಕಶ್ಯಪ್ ಮಾತನಾಡಿ, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ.76.61ರಷ್ಟು ಮತದಾನವಾಗಿದೆ. ಇದು ರಾಜ್ಯದಲ್ಲಿ ಕೇಸರಿ ಪಕ್ಷ ಮತ್ತೆ ಸರ್ಕಾರ ರಚಿಸುವ ಸೂಚನೆಯಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರೇಶ್ ಚೌಹಾಣ್ ಕೂಡ ವಿಧಾನಸಭೆಯಲ್ಲಿ ತಮ್ಮ ಪಕ್ಷವು ಬಹುಮತ ಪಡೆಯುತ್ತದೆ ಎಂದು ಹೇಳಿದ್ದಾರೆ. “ಫಲಿತಾಂಶ ಹೊರಬರಲು ಎರಡು ದಿನ ಕಾಯಿರಿ. ಪರಿಸ್ಥಿತಿ ತಿಳಿಯಾಗಲಿದ್ದು, ಕಾಂಗ್ರೆಸ್ 40ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.‌

ಹಿಮಾಚಲ ಪ್ರದೇಶ ವಿಧಾನಸಭೆಗೆ ಕಳೆದ ತಿಂಗಳು ನವೆಂಬರ್ 12 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಮತದಾನದ ಪ್ರಮಾಣ ಶೇ.74ರಷ್ಟಿತ್ತು. ಇದು 2017ರ ಮತದಾನ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ. ಡೂನ್ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ ಶೇಕಡಾ 85.25 ಮತದಾನವಾಗಿದೆ. ಶಿಮ್ಲಾದಲ್ಲಿ ಅತೀ ಕಡಿಮೆ, ಅಂದರೆ 62.53ರಷ್ಟು ಮತದಾನವಾಗಿದೆ.

ನಾಳೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಸಂಜೆಯ ವೇಳೆಗೆ ಉಭಯ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂಬುದು ಸ್ಪಷ್ಟವಾಗಲಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಎಎಪಿ ದಿಗ್ವಿಜಯ; 15 ವರ್ಷಗಳ ಬಿಜೆಪಿ ಆಳ್ವಿಕೆ ಅಂತ್ಯ

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷವು ಬಿಜೆಪಿ ಎದುರು ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ನಗರದಲ್ಲಿ ಬಿಜೆಪಿಯ 15 ವರ್ಷಗಳ ಆಳ್ವಿಕೆ ಕೊನೆಗೊಂಡಿದೆ. ಕಳೆದ ಹದಿನೈದು ವರ್ಷಗಳಿಂದ ನಗರದಲ್ಲಿ ಆಡಳಿತ ವಹಿಸಿದ್ದ ಬಿಜೆಪಿಯನ್ನು ಸೋಲಿಸುವಲ್ಲಿ ಎಎಪಿ ಯಶಸ್ವಿಯಾಗಿದೆ. ಇಂದು ಬಿಜೆಪಿ ಮತ್ತು ಎಎಪಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿ, ಬಹುಮತ ಸಾಬೀತುಮಾಡಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point