Hit and run Case: ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣ; ಸಂತ್ರಸ್ತರಿಗೆ ಪರಿಹಾರ ನೀಡುತ್ತೆ ಸರ್ಕಾರ- ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hit And Run Case: ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣ; ಸಂತ್ರಸ್ತರಿಗೆ ಪರಿಹಾರ ನೀಡುತ್ತೆ ಸರ್ಕಾರ- ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ

Hit and run Case: ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣ; ಸಂತ್ರಸ್ತರಿಗೆ ಪರಿಹಾರ ನೀಡುತ್ತೆ ಸರ್ಕಾರ- ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ

Hit and run Case: ಮೋಟಾರು ವಾಹನ ಅಪಘಾತ ನಿಧಿ ಎಂದರೆ ಸೆಕ್ಷನ್ 164B ಅಡಿಯಲ್ಲಿ ರಚಿತವಾದ ನಿಧಿ, ಮತ್ತು ವಿಮೆ ಮಾಡಲಾದ ವಾಹನಗಳ ಖಾತೆ, ವಿಮೆ ಮಾಡದ ವಾಹನಗಳು ಅಥವಾ ಹಿಟ್ ಆಂಡ್‌ ರನ್ ಮೋಟಾರು ಆಕ್ಸಿಡೆಂಟ್‌ ಅಕೌಂಟ್‌ ಮತ್ತು ಹಿಟ್ ಆಂಡ್‌ ರನ್ ಕಾಂಪನ್ಸೇಶನ್‌ ಅಕೌಂಟ್‌ ಅನ್ನು ಒಳಗೊಂಡಿರುತ್ತದೆ.

ಹಿಟ್‌ ಆಂಡ್‌ ರನ್‌ ಅಪಘಾತ ಸಂತ್ರಸ್ತರಿಗೆ ಗಂಭೀರ ಗಾಯಗಳಾದ ಸಂದರ್ಭದಲ್ಲಿ 50,000 ರೂಪಾಯಿ, ಸಾವು ಸಂಭವಿಸಿದರೆ 2 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ನೀಡುತ್ತದೆ. (ಸಾಂಕೇತಿಕ ಚಿತ್ರ)
ಹಿಟ್‌ ಆಂಡ್‌ ರನ್‌ ಅಪಘಾತ ಸಂತ್ರಸ್ತರಿಗೆ ಗಂಭೀರ ಗಾಯಗಳಾದ ಸಂದರ್ಭದಲ್ಲಿ 50,000 ರೂಪಾಯಿ, ಸಾವು ಸಂಭವಿಸಿದರೆ 2 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ನೀಡುತ್ತದೆ. (ಸಾಂಕೇತಿಕ ಚಿತ್ರ) (HT)

ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡುತ್ತೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿ ತನಕ ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣಗಳ ಸಂತ್ರಸ್ತರಿಗೆ 147 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ವಿತರಿಸಲಾಗಿದೆ ಎಂಬ ಅಂಶದ ಕಡೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಇಂದು ಸಂಸತ್‌ನ ಗಮನಸೆಳೆದಿದ್ದಾರೆ.

ಅವರು ಲೋಕಸಭೆಯಲ್ಲಿ ಸದಸ್ಯರ ಪ್ರ‍ಶ್ನೆಗೆ ಲಿಖಿತ ಉತ್ತರ ನೀಡುತ್ತ ಈ ವಿಚಾರ ಬಹಿರಂಗಗೊಳಿಸಿದ್ದಾರೆ.

ಈ ಪರಿಹಾರ ನೀಡುವ ಯೋಜನೆಗಾಗಿ ಸರ್ಕಾರವು ಮೋಟಾರ್‌ ವೆಹಿಕಲ್‌ ಆಕ್ಸಿಡೆಂಟ್‌ ಫಂಡ್‌ ಅನ್ನು ಸ್ಥಾಪಿಸಿದೆ. ಅದರಿಂದ ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರು ಸರ್ಕಾರದಿಂದ ಪರಿಹಾರ ಪಡೆಯಲು ಕೆಲವೊಂದು ಮಾರ್ಗಸೂಚಿ ಇದೆ. ಇದರ ಪ್ರಕಾರ, ರಸ್ತೆ ಅಪಘಾತದ ವಿಸ್ತೃತ ತನಿಖೆ, ವಿಸ್ತೃತ ಅಪಘಾತ ವರದಿ (ಡಿಎಆರ್‌) ಮತ್ತು ಕ್ಲೈಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ ವಿವಿಧ ಮಧ್ಯಸ್ಥಗಾರರಿಗೆ ಸಮಯಮಿತಿಯೊಳಗೆ ಅದರ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಇದೇ ನಿಧಿಯಿಂದ ಅಪಘಾತದ ಸಂತ್ರಸ್ತರ ಚಿಕಿತ್ಸೆಗೂ ಹಣ ಬಿಡುಗಡೆ ಮಾಡಲಾಗುತ್ತದೆ.

ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣದ ಸಂತ್ರಸ್ತರಿಗೆ ಎಷ್ಟು ಪರಿಹಾರ?:

ಹಿಟ್‌ ಆಂಡ್‌ ರನ್‌ ಅಪಘಾತ ಪ್ರಕರಣದಲ್ಲಿ ಈ ಪರಿಹಾರವನ್ನು ಪಡೆಯಲು ವಿವರವಾದ ಕಾರ್ಯವಿಧಾನವನ್ನು ಸಂತ್ರಸ್ತರು ಅನುಸರಿಸಬೇಕು. ಹಿಟ್‌ ಆಂಡ್‌ ರನ್‌ ಅಪಘಾತ ಸಂತ್ರಸ್ತರಿಗೆ ಗಂಭೀರ ಗಾಯಗಳಾದ ಸಂದರ್ಭದಲ್ಲಿ 50,000 ರೂಪಾಯಿ, ಸಾವು ಸಂಭವಿಸಿದರೆ 2 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ನೀಡುತ್ತದೆ.

ಅಧಿಕೃತ ಗೆಜೆಟ್ ಅಧಿಸೂಚನೆಯ ಪ್ರಕಾರ 'ಹಿಟ್ ಆಂಡ್‌ ರನ್ ಕಾಂಪನ್ಶೇಶನ್‌ ಅಕೌಂಟ್‌' ಎಂದರೆ ಮೋಟಾರು ವಾಹನ ಅಪಘಾತ ನಿಧಿಯ ಭಾಗವಾಗಿದ್ದು, ವಿಮೆ ಮಾಡದ ವಾಹನಗಳ ಖಾತೆಗೆ ಅಥವಾ ಹಿಟ್ ಆಂಡ್‌ ರನ್ ಮೋಟಾರ್ ಆಕ್ಸಿಡೆಂಟ್‌ ಸಂಭವಿಸಿದರೆ, ಆಗ ಅಪಘಾತಕ್ಕೀಡಾದವರಿಗೆ ಪರಿಹಾರವನ್ನು ಪಾವತಿಸಲು ಮತ್ತು ಹಿಟ್ ಮತ್ತು ರನ್ ಮೋಟಾರು ಅಪಘಾತದ ಸಂತ್ರಸ್ತರ ನಗದು ರಹಿತ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ಬಳಸಲಾಗುತ್ತದೆ".

ಮೋಟಾರು ವಾಹನ ಅಪಘಾತ ನಿಧಿ ಎಂದರೆ ಸೆಕ್ಷನ್ 164B ಅಡಿಯಲ್ಲಿ ರಚಿತವಾದ ನಿಧಿ, ಮತ್ತು ವಿಮೆ ಮಾಡಲಾದ ವಾಹನಗಳ ಖಾತೆ, ವಿಮೆ ಮಾಡದ ವಾಹನಗಳು ಅಥವಾ ಹಿಟ್ ಆಂಡ್‌ ರನ್ ಮೋಟಾರು ಆಕ್ಸಿಡೆಂಟ್‌ ಅಕೌಂಟ್‌ ಮತ್ತು ಹಿಟ್ ಆಂಡ್‌ ರನ್ ಕಾಂಪನ್ಸೇಶನ್‌ ಅಕೌಂಟ್‌ ಅನ್ನು ಒಳಗೊಂಡಿರುತ್ತದೆ.

ಅಪಘಾತಗಳ ಅಂಕಿ ನೋಟ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ 2022ರ ವಾರ್ಷಿಕ ವರದಿಯ ಪ್ರಕಾರ, 2021ರಲ್ಲಿ 4,12,432 ದುರದೃಷ್ಟಕರ ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,53,972 ಜನ ಮೃತಪಟ್ಟಿದ್ದು, 3,84,448 ಜನ ಗಾಯಗೊಂಡಿದ್ದಾರೆ. ಹಿಂದಿನ ವರ್ಷ 2020 ರಲ್ಲಿ, ದೇಶವು ಅಪಘಾತಗಳು, ಸಾವುಗಳು ಮತ್ತು ಗಾಯಗಳಲ್ಲಿ ಅಭೂತಪೂರ್ವ ಇಳಿಕೆ ದಾಖಲಿಸಿತ್ತು. ಇದು COVID-19 ಸಾಂಕ್ರಾಮಿಕದ ಅಸಾಮಾನ್ಯ ಏಕಾಕಿ ಹೆಚ್ಚಳ ಮತ್ತು ಅದರ ಪರಿಣಾಮವಾಗಿ ಕಟ್ಟುನಿಟ್ಟಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ ಆಗಿರುವಂಥದ್ದು. 2019 ಕ್ಕೆ ಹೋಲಿಸಿದರೆ 2021 ರಲ್ಲಿ ಅಪಘಾತ ಪ್ರಮಾಣ ಕಡಿಮೆ ಆಗಿದೆ. ರಸ್ತೆ ಅಪಘಾತಗಳು 2019 ಕ್ಕೆ ಹೋಲಿಸಿದರೆ 2021 ರಲ್ಲಿ ಶೇಕಡಾ 8.1 ರಷ್ಟು ಮತ್ತು ಗಾಯಗಳು ಶೇಕಡಾ 14.8 ರಷ್ಟು ಕಡಿಮೆಯಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.