ಕನ್ನಡ ಸುದ್ದಿ  /  Nation And-world  /  Horoscope Today Astrological Prediction For September 29 2022

Horoscope Today: ಈ ರಾಶಿಯವರು ದುಂದು ವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತೆ; ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಶುಭವೇ, ಅಶುಭವೇ? ಶುಭ ಸಂಖ್ಯೆ ಸೇರಿ ಪಂಚಾಗ, ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ (ಫೋಟೋ- HT File)
ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ (ಫೋಟೋ- HT File)

ಮೇಷ ರಾಶಿ

ಹೂಡಿಕೆಯ ಅವಕಾಶವನ್ನು ಪಡೆದುಕೊಳ್ಳುತ್ತೀರಿ. ಇದು ಮುಂದಿನ ದಿನಗಳಲ್ಲಿ ಉತ್ತಮ ಆದಾಯವನ್ನು ನೀಡುವ ಸಾಧ್ಯತೆಯಿದೆ. ಲಘು ವ್ಯಾಯಾಮ ಫಿಟ್ ಆಗಿ ಆಗಿರಲು ಸಹಾಯ ಮಾಡುತ್ತದೆ. ಮನೆಯ ವಿಚಾರದಲ್ಲಿ ಕೆಲವು ಆಚರಣೆಗಲನ್ನು ಮಾಡುತ್ತೀರಿ. ಇದು ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ. ಅದೃಷ್ಟ ಸಂಖ್ಯೆ: 4

ವೃಷಭ ರಾಶಿ

ಚಿಕಿತ್ಸೆಯು ನಿಮ್ಮನ್ನು ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ನಿಮಗೆ ಇಂದು ಒಳ್ಳೆ ದಿನವಾಗಿದೆ. ಆರ್ಥಿಕವಾಗಿ ಸದೃಢರಾಗಿದ್ದರೆ ಮಾತ್ರ ಹೊಸ ಸಾಹಸಕ್ಕೆ ಕೈ ಹಾಕಬೇಕು. ಮನೆಯಲ್ಲಿ ನಡೆಯುವ ಸಮಾರಂಭ ಅಥವಾ ಆಚರಣೆಯು ನಿಮ್ಮನ್ನು ಉತ್ಸಾಹಭರಿತ ಮನಸ್ಥಿತಿಯಲ್ಲಿರಿಸುತ್ತದೆ. ಪೂರ್ವ, ಉತ್ತರ ಅಥವಾ ಈಶಾನ್ಯದ ಕಡೆಗೆ ಪ್ರಯಾಣಿಸುವುದು ನಿಮಗೆ ಅದೃಷ್ಟವನ್ನು ತರುತ್ತದೆ. ಅದೃಷ್ಟ ಸಂಖ್ಯೆ: 6

ಮಿಥುನ ರಾಶಿ

ನಿಮ್ಮ ಆರ್ಥಿಕ ಶಕ್ತಿಯನ್ನು ಕ್ರೋಢೀಕರಿಸಲು ಮತ್ತು ಕೆಲವು ಸ್ವತ್ತುಗಳನ್ನು ಖರೀದಿಸಲು ನಿಮಗೆ ಇಂದು ಸಾಧ್ಯವಾಗುತ್ತದೆ. ಕೆಲ ಅನುಮಾನಗಳ ಹೊರತಾಗಿಯೂ ನೀವು ಉತ್ತಮ ಆರೋಗ್ಯವನ್ನು ಹೊಂದಲಿದ್ದೀರಿ. ರಸ್ತೆ ಮೂಲಕವಾಗಿ ಪ್ರಯಾಣಿಸುವಾಗ ಎಚ್ಚರದಿಂದಿರಬೇಕು. ದೃಷ್ಟ ಸಂಖ್ಯೆ: 7

ಕರ್ಕಾಟಕ ರಾಶಿ

ಹಣದ ವಿಷಯಗಳಿಗೆ ಸಂಬಂಧಿಸಿದ ಚರ್ಚೆಯು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ಸಾಕಷ್ಟು ಜಾಗರೂಕರಾಗಿರದಿದ್ದರೆ ತುರ್ತು ಮತ್ತು ಪ್ರಮುಖ ಕೆಲಸವನ್ನು ಕೆಟ್ಟದಾಗಿ ನಿರ್ವಹಿಸುವ ಸಾಧ್ಯತೆ ಇದೆ. ನಿಮ್ಮನ್ನು ಕಾಡುತ್ತಿದ್ದ ಹಳೆಯ ಕಾಯಿಲೆ ಶೀಘ್ರದಲ್ಲೇ ವಾಸಿಯಾಗುತ್ತದೆ. ಅದೃಷ್ಟ ಸಂಖ್ಯೆ: 18

ಸಿಂಹ ರಾಶಿ

ನೀವು ಅತ್ಯುತ್ತಮ ಆರೋಗ್ಯವನ್ನು ಆನಂದಿಸುವ ಸಾಧ್ಯತೆಯಿದೆ. ಬೆಟ್ಟಿಂಗ್‌ನಲ್ಲಿ ಹಣವನ್ನು ಕಳೆದುಕೊಳ್ಳುವುದು ಸಾಧ್ಯ, ಆದ್ದರಿಂದ ನೀವು ಹಣವನ್ನು ಉಳಿಸಲು ಬಯಸಿದರೆ ಇದರಿಂದ ದೂರವಿರಿ! ಇನ್‌ಕ್ರಿಮೆಂಟ್‌ಗಾಗಿ ಕಾಯುತ್ತಿರುವವರು ಹತಾಶೆಯನ್ನು ಎದುರಿಸಬಹುದು. ನಿಮ್ಮ ಸಂಗಾತಿಗೆ ಇಂದು ಕಾಳಜಿ ವಹಿಸುತ್ತೀರಿ. ನಿಮ್ಮ ಇಂದಿನ ಪ್ರಯಾಣ ಹೆಚ್ಚಿನ ಖುಷಿ ನೀಡುತ್ತದೆ. ಅದೃಷ್ಟ ಸಂಖ್ಯೆ: 6

ಕನ್ಯಾರಾಶಿ

ಯಾರಿಗಾದರೂ ಸಾಲವನ್ನು ನೀಡಿದ್ದರೆ ಅದು ಇವತ್ತು ವಾಪಸ್ ಬರುತ್ತದೆ. ವೃತ್ತಿಪರ ವಿಚಾರದಲ್ಲಿ ನೀವು ಮುಗ್ಗರಿಸುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚಿನ ಕಾಳಜಿ ವಹಿಸಿ. ಆರೋಗ್ಯದ ಕಾರಣಗಳಿಗಾಗಿ ಕೆಲವು ರೀತಿಯ ದೈಹಿಕ ಚಟುವಟಿಕೆಯನ್ನು ಪ್ರಾರಂಭಿಸಲು ಮನಸು ಮಾಡುತ್ತೀರಿ.

ಮನೆಯ ವಾತಾವರಣವನ್ನು ಸುಧಾರಿಸುವಲ್ಲಿ ಗೃಹಿಣಿಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಟ್ರೆಕ್ಕಿಂಗ್ ಅಥವಾ ಬೈಸಿಕಲ್‌ನಲ್ಲಿ ದೂರದ ಸ್ಥಳಕ್ಕೆ ಹೋಗುವುದು ರೋಮಾಂಚನಕಾರಿ ಮತ್ತು ಉಲ್ಲಾಸದಾಯಕವಾಗಿದೆ. ಅದೃಷ್ಟ ಸಂಖ್ಯೆ: 5

ತುಲಾ ರಾಶಿ

ತುರ್ತಾಗಿ ಬೇಕಾಗಿರುವ ಸಾಲ ಇಂದು ನಿಮಗೆ ಸಿಗುವ ಸಾಧ್ಯತೆ ಇದೆ. ವಹಿಸಿಕೊಟ್ಟ ಕೆಲಸವನ್ನು ನೀವು ತೃಪ್ತಿಕರವಾಗಿ ನಿರ್ವಹಿಸುತ್ತೀರಿ. ಕೆಲವು ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಗಮನ ವಹಿಸಬೇಕಾಗಿದೆ. ಆರ್ಥಿಕ ಶಕ್ತಿಯನ್ನು ಹೊಂದಿರುವುದರಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಮನಸು ಮಾಡುತ್ತೀರಿ. ಅದೃಷ್ಟ ಸಂಖ್ಯೆ: 15

ವೃಶ್ಚಿಕ ರಾಶಿ

ಹಿಂದೆ ನೀಡಿರುವ ಬಾಕಿ ಹಣ ನಿಮ್ಮನ್ನು ಆರ್ಥಿಕವಾಗಿ ಬಲಪಡಿಸುತ್ತವೆ. ನಿಮ್ಮ ಕನಸುಗಳನ್ನು ನನಸಾಗಿಸಲು ಇದು ಅನುವು ಮಾಡಿಕೊಡುತ್ತದೆ. ಈ ದಿನ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಕೆಲಸದಲ್ಲಿ ಅನುಕೂಲಕರವಾಗಿದೆ. ಆಹಾರದ ನಿಯಂತ್ರಣದ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಧಾರ್ಮಿಕ ಮನೋಭಾವ ಹೊಂದಿರುವವರು ತೀರ್ಥಯಾತ್ರೆಗೆ ಹೋಗಲು ಪ್ಲಾನ್ ಮಾಡಬಹುದು. ಅದೃಷ್ಟ ಸಂಖ್ಯೆ: 8

ಧನು ರಾಶಿ

ಇತರರ ಮೇಲೆ ಹಣವನ್ನು ವ್ಯರ್ಥ ಮಾಡುವ ನಿಮ್ಮ ಪ್ರವೃತ್ತಿಯನ್ನು ನೀವು ನಿಗ್ರಹಿಸಬೇಕಾಗಿದೆ. ನೀವು ನಂಬುವ ಸಹೋದ್ಯೋಗಿ ಕೆಲಸದ ವಿಚಾರದಲ್ಲಿ ಸಮಸ್ಯೆಯನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತಾರೆ. ಆಹಾರ ಮತ್ತು ಪಾನೀಯದ ಬಗ್ಗೆ ನಿಮ್ಮ ಸ್ವಯಂ-ಶಿಸ್ತು ನಿಮ್ಮನ್ನು ಉನ್ನತ ದೈಹಿಕ ಸ್ಥಿತಿಯಲ್ಲಿ ಇರಿಸುತ್ತದೆ. ಅದೃಷ್ಟ ಸಂಖ್ಯೆ: 22

ಮಕರ ರಾಶಿ

ಆರ್ಥಿಕವಾಗಿ ದಿನವು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಉದ್ಯೋಗಾಕಾಂಕ್ಷಿಗಳು ನಿರಾಶೆಗೆ ಒಳಗಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಕುಟುಂಬದೊಂದಿಗೆ ಕಾಲ ಕಳೆಯಲು ನಿಮ್ಮ ಕೆಲಸದ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳಬಹುದು. ವಿದ್ಯಾವಂತರಿಗೆ ಸಂಬಂಧಿಸಿದಂತೆ ಇವತ್ತು ಅದೃಷ್ಟದ ದಿನ, ಏಕೆಂದರೆ ನಿಮ್ಮಿಂದ ನಿರೀಕ್ಷಿಸಿದ್ದನ್ನು ನೀವು ನೀಡಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ: 22

ಕುಂಭ ರಾಶಿ

ಇವತ್ತಿನ ಕೆಲಸದಲ್ಲಿ ನಿಮಗೆ ಹೆಚ್ಚಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.ಆರೋಗ್ಯದ ವಿಷಯದಲ್ಲಿ ನೀವು ಹೆಚ್ಚಿನ ಬೆಳವಣಿಗೆಯನ್ನು ಕಾಣುವಿರಿ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಅದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನೀವು ಹಲವು ನಿರ್ಧಾರವನ್ನು ಪರಿಶೀಲಿಸಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಶೀಘ್ರದಲ್ಲೇ ಪ್ರಯಾಣಿಸುವ ಸಾಧ್ಯತೆಯಿದೆ. ಕೆಲವರಿಗೆ ಆಸ್ತಿ ವಿವಾದ ಅನಿವಾರ್ಯವಾಗಿ ಕಾಣುತ್ತದೆ. ಅದೃಷ್ಟ ಸಂಖ್ಯೆ: 6

ಮೀನ ರಾಶಿ

ವರ್ಗಾವಣೆಯಾಗಲು ಕಾಯುತ್ತಿರುವವರು ತಮ್ಮ ಪೋಸ್ಟಿಂಗ್ ಆಯ್ಕೆಯನ್ನು ಪಡೆಯುವುದು ಖಚಿತ. ನಿಮ್ಮಲ್ಲಿ ಕೆಲವರು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಆಯಾಸವನ್ನು ಅನುಭವಿಸಬಹುದು. ಖರೀದಿ ಮತ್ತು ಮಾರಾಟಕ್ಕೆ ಮುಂದಾಗಿರುವವರು ಹಣಕಾಸಿನ ವಿಚಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು. ಅದೃಷ್ಟ ಸಂಖ್ಯೆ: 3

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point

ವಿಭಾಗ