Flight Ticket: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬಂಪರ್‌ ಆಫರ್‌, ಅತಿ ಕಡಿಮೆ ದರಕ್ಕೆ ವಿಮಾನ ಟಿಕೆಟ್‌ ಖರೀದಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Flight Ticket: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬಂಪರ್‌ ಆಫರ್‌, ಅತಿ ಕಡಿಮೆ ದರಕ್ಕೆ ವಿಮಾನ ಟಿಕೆಟ್‌ ಖರೀದಿಸಿ

Flight Ticket: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬಂಪರ್‌ ಆಫರ್‌, ಅತಿ ಕಡಿಮೆ ದರಕ್ಕೆ ವಿಮಾನ ಟಿಕೆಟ್‌ ಖರೀದಿಸಿ

Air India Ticket Price: ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ ಘೋಷಿಸಿದೆ. ನ್ಯೂ ಇಯರ್ ಸೇಲ್ ಮೂಲಕ ನೀವು ಕೇವಲ 1448 ರೂಪಾಯಿಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು. ಈ ಆಫರ್‌ ಯಾವ ದಿನಾಂಕದ ಪ್ರಯಾಣಕ್ಕೆ ಲಭ್ಯ ಎಂಬ ವಿವರ ಇಲ್ಲಿದೆ.

Flight Ticket: ಏರ್‌ ಇಂಡಿಯಾ ಬಂಪರ್‌ ಆಫರ್‌, ಅತಿ ಕಡಿಮೆ ದರಕ್ಕೆ ವಿಮಾನ ಟಿಕೆಟ್‌
Flight Ticket: ಏರ್‌ ಇಂಡಿಯಾ ಬಂಪರ್‌ ಆಫರ್‌, ಅತಿ ಕಡಿಮೆ ದರಕ್ಕೆ ವಿಮಾನ ಟಿಕೆಟ್‌

ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಕಡಿಮೆ ದರದಲ್ಲಿ ಪ್ರಯಾಣಿಸುವ ಅವಕಾಶ ನೀಡುತ್ತವೆ. ಸಾಕಷ್ಟು ಮುಂಚೆಯೇ ವಿಮಾನಯಾನ ಮಾಡಲು ಪ್ಲ್ಯಾನ್‌ ಮಾಡುವವರು ಆಗಾಗ ಕಡಿಮೆ ದರದ ವಿಮಾನ ಟಿಕೆಟ್‌ಗಳನ್ನು ಹುಡುಕುತ್ತಾ ಇರುತ್ತಾರೆ. ಇದೀಗ ಏರ್‌ ಇಂಡಿಯಾವು ಇದೇ ರೀತಿಯ ಅಗ್ಗದ ಟಿಕೆಟ್ ದರ ಪ್ರಕಟಿಸಿದೆ. ಜೀವನದಲ್ಲಿ ಒಮ್ಮೆ ವಿಮಾನದಲ್ಲಿ ಪ್ರಯಾಣಿಸಲು ಬಯಸುವವರಿಗೂ ಈ ಆಫರ್‌ ಉಪಯುಕ್ತವಾಗಿರುತ್ತದೆ. ದೇಶೀಯ ದೈತ್ಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹೊಸ ವರ್ಷದ ಮಾರಾಟದ ಅಡಿಯಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ನೀವು ಅಗ್ಗದ ವಿಮಾನ ಟಿಕೆಟ್ ಪಡೆಯಬಹುದು.

ಟಿಕೆಟ್‌ ದರ 1,448 ರೂಪಾಯಿ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೊಸ ವರ್ಷದ ಮಾರಾಟದ ಭಾಗವಾಗಿ ಲೈಟ್ ಆಫರ್ ಅಡಿಯಲ್ಲಿ 1,448 ರೂ ಮತ್ತು ವ್ಯಾಲ್ಯೂ ಕೊಡುಗೆಯ ಅಡಿಯಲ್ಲಿ 1,599 ರೂಪಾಯಿಯ ವಿಮಾನ ಟಿಕೆಟ್‌ ದರಗಳನ್ನು ಘೋಷಿಸಿದೆ. ಈ ಆಫರ್‌ ಮೂಲಕ ಜನವರಿ 5ರವರೆಗೆ ಬುಕ್ಕಿಂಗ್ ಮಾಡಬಹುದು. ಸೀಮಿತ ಸೀಟುಗಳು ಮತ್ತು ಮರುಪಾವತಿಸಲಾಗದ ನಿಬಂಧನೆಗಳನ್ನು (ಕ್ಯಾನ್ಸಲ್‌ ಮಾಡಿದ್ರೆ ರಿಫಂಡ್‌ ದೊರಕದು) ಈ ಬುಕ್ಕಿಂಗ್‌ ಒಳಗೊಂಡಿದೆ. 2025ರಲ್ಲಿ ಆಯ್ದ ಪ್ರಯಾಣದ ದಿನಾಂಕಗಳಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಮಾತ್ರ ಅವಕಾಶವಿದೆ.

ಯಾವಾಗ ಈ ಆಫರ್‌ ಪಡೆಯಬಹುದು?

ಜನವರಿ 5ರ ಮೊದಲು ಬುಕ್ಕಿಂಗ್‌ ಮಾಡಿರುವವರಿಗೆ ಜನವರಿ 8, 2025 ರಿಂದ ಸೆಪ್ಟೆಂಬರ್ 20, 2025ರವರೆಗೆ ಪ್ರಯಾಣ ಮಾಡುವವರಿಗೆ ಈ ಆಫರ್‌ ನೀಡಲಾಗುತ್ತದೆ. ಜನವರಿ ರವರೆಗೆ ಬುಕ್ಕಿಂಗ್ ಮಾಡಿದವರಿಗೆ ಲೈಟ್ ಆಫರ್ ಅಡಿಯಲ್ಲಿ 1,448 ರೂ. ಮತ್ತು ವ್ಯಾಲ್ಯೂ ಕೊಡುಗೆಯ ಅಡಿಯಲ್ಲಿ 1,599 ರೂ.ಗೆ ಟಿಕೆಟ್‌ ದೊರಕಲಿದೆ.

ಈ ಆಫರ್‌ ಪಡೆಯುವುದು ಹೇಗೆ?

ಏರ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್ www.airindiaexpress.com ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಲಾಯಲ್ಟಿ ಸದಸ್ಯರಿಗೆ ಲೈಟ್ ಕೊಡುಗೆ ಲಭ್ಯವಿದೆ. ಆಫರ್‌ಗಳಲ್ಲಿ ಮೂಲ ದರಗಳು, ತೆರಿಗೆಗಳು ಮತ್ತು ವಿಮಾನ ನಿಲ್ದಾಣ ಶುಲ್ಕಗಳು ಸೇರಿವೆ. ಆದರೆ, ಕೆಲವೊಂದು ಶುಲ್ಕಗಳು ಇರಬಹುದು. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ನೀಡಲಾದ ಹೊಸ ವರ್ಷದ ಆಫರ್‌ನ ನಿಯಮಗಳನ್ನು ಓದಿಕೊಳ್ಳಿ.

ವಿಮಾನ ಪ್ರಯಾಣ ಪೂರ್ಣಗೊಳಿಸಿದ ಬಳಿಕ ಪಿಎನ್‌ಆರ್‌ ಹೊಂದಿರುವ ಸದಸ್ಯರಿಗೆ NeuCoins ನೀಡಲಾಗುತ್ತದೆ. ಯಾರು ಬುಕ್ಕಿಂಗ್‌ ಮಾಡಿದ್ದಾರೆಯೋ ಅವರಿಗೆ ನ್ಯೂ ಕಾಯಿನ್‌ ನೀಡಲಾಗುವುದಿಲ್ಲ, ಯಾರ ಹೆಸರಲ್ಲಿ ಪಿಎನ್‌ಆರ್‌ ಇರುವುದೋ ಅವರಿಗೆ ಈ ನಿಯು ಕಾಯಿನ್‌ ನೀಡಲಾಗುತ್ತದೆ. ಈ ಕೊಡುಗೆಯು ಪೂರ್ಣಗೊಂಡಿರುವ ಮತ್ತು ರದ್ದುಗೊಳಿಸದ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ವಹಿವಾಟನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಬುಕಿಂಗ್ ಆಫರ್‌ಗೆ ಅರ್ಹವಾಗಿರುವುದಿಲ್ಲ. ಈ ಕೊಡುಗೆಯು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ಲಭ್ಯವಿದೆ. ಇದು ಏರ್ ಇಂಡಿಯಾ ವಿಮಾನಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಸೀಮಿತ ಸೀಟುಗಳಿಗೆ ಮಾತ್ರ ಹೊಸ ವರ್ಷದ ಆಫರ್‌ ಇರುತ್ತದೆ.

ಹೊಸ ವರ್ಷದ ಆಫರ್‌ನಡಿ ಟಿಕೆಟ್‌ ಖರೀದಿಸಿ, ಪಾವತಿಗಳನ್ನು ಮಾಡಿದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮರುಪಾವತಿಯನ್ನು ನೀಡುವುದಿಲ್ಲ. ರದ್ದತಿ ಶುಲ್ಕವು ಏರ್‌ಲೈನ್ಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ನಮೂದಿಸಲಾದ ಶುಲ್ಕಗಳಿಗೆ ಒಳಪಟ್ಟಿರುತ್ತದೆ. ಯಾವುದೇ ಪೂರ್ವ ಸೂಚನೆ ಅಥವಾ ಕಾರಣವಿಲ್ಲದೆ ಆಫರ್ ಅನ್ನು ರದ್ದುಗೊಳಿಸುವ ಮತ್ತು ಅಮಾನತುಗೊಳಿಸುವ ಹಕ್ಕನ್ನು ಏರ್‌ಲೈನ್ ಹೊಂದಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.