ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಉತ್ತರ ಪ್ರದೇಶ: ಹುಟ್ಟಲಿರುವ ಮಗು ಗಂಡಾ ಹೆಣ್ಣಾ ಎಂದು ತಿಳಿಯಲು ಗರ್ಭಿಣಿ ಹೊಟ್ಟೆಯನ್ನು ಸೀಳಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶ: ಹುಟ್ಟಲಿರುವ ಮಗು ಗಂಡಾ ಹೆಣ್ಣಾ ಎಂದು ತಿಳಿಯಲು ಗರ್ಭಿಣಿ ಹೊಟ್ಟೆಯನ್ನು ಸೀಳಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ

ಹುಟ್ಟಲಿರುವ ಮಗು ಗಂಡಾ ಇಲ್ಲವೇ ಹೆಣ್ಣಾ ಅಂತ ಮೊದಲೇ ತಿಳಿಯಲು ಗರ್ಭಿಯ ಹೊಟ್ಟೆಯನ್ನೇ ಸೀಳಿದಿದ್ದ ಉತ್ತರ ಪ್ರದೇಶ ರಾಕ್ಷಸ ವ್ಯಕ್ತಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದಲ್ಲಿ ಹುಟ್ಟಲಿರುವ ಮಗು ಗಂಡಾ ಹೆಣ್ಣಾ ಎಂದು ತಿಳಿಯಲು ಗರ್ಭಿಣಿ ಹೊಟ್ಟೆಯನ್ನು ಸೀಳಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಹುಟ್ಟಲಿರುವ ಮಗು ಗಂಡಾ ಹೆಣ್ಣಾ ಎಂದು ತಿಳಿಯಲು ಗರ್ಭಿಣಿ ಹೊಟ್ಟೆಯನ್ನು ಸೀಳಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಲಕ್ನೋ (ಉತ್ತರ ಪ್ರದೇಶ): ಹುಟ್ಟುವ ಮಗು ಗಂಡಾ ಅಥವಾ ಹೆಣ್ಣಾ ಅಂತ ತಳಿಯಲು ಗರ್ಭಿಣಿಯ ಹೊಟ್ಟೆಯನ್ನು ಕೊಯ್ದಿದ್ದ ಪಾಪಿ ಪತಿಗೆ ಕೊನೆಗೂ ತಕ್ಕ ಶಿಕ್ಷೆಯಾಗಿದೆ. ಪತ್ನಿಯ ಹೊಟ್ಟೆಯನ್ನು ಸೀಳಿದ್ದ ರಾಕ್ಷಿಸಿ ಪತಿಗೆ ಜೀವಾವಧಿ ಶಿಕ್ಷೆಯಾಗಿದೆ. 2020 ರಲ್ಲಿ ಉತ್ತರ ಪ್ರದೇಶದ ಬದೌನ್‌ನಲ್ಲಿ (Uttar Pradesh Crime News) ಪನ್ನಾ ಲಾಲ್ ಎಂಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿ ಅನಿತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಭೀಕರ ದಾಳಿಯಿಂದ ಅನಿತಾ ಅದೃಷ್ಟವಶಾತ್ ಪಾರಾಗಿದ್ದಾರೆ. ಆದರೆ ಆಕೆಯ ಹೊಟ್ಟೆಯಲ್ಲಿದ್ದ ಗಂಡು ಮಗು ಸಾವನ್ನಪಿತ್ತು.

ಟ್ರೆಂಡಿಂಗ್​ ಸುದ್ದಿ

ಬದೌನ್‌ನ ನಿವಾಸಿ ಪನ್ನಾ ಲಾಲ್ ಮತ್ತು ಅನಿತಾ 22 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡುವಂತೆ ಪನ್ನಾಲಾಲ್ ಆಗಾಗ್ಗೆ ಅನಿತಾ ಮೇಲೆ ಹಲ್ಲೆ ಮಾಡುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪನ್ನಾಲಾಲ್‌ಗೆ ಮಗ ಬೇಕೆಂಬುದನ್ನುತಿಳಿದ ಅನಿತಾ ಮನೆಯವರು ಈ ವಿಚಾರದಲ್ಲಿ ಜಗಳವಾಡದಂತೆ ಮನವೊಲಿಸಲು ಪ್ರಯತ್ನಿಸಿದ್ದರು.

ಮತ್ತೊಮ್ಮೆ ಅನಿತಾ ಗರ್ಭಿಣಿಯಾದಳು. ಈ ಬಾರಿ ಗಂಡು ಮಗುವಿಗೆ ಜನ್ಮ ನೀಡದಿದ್ದರೆ ವಿಚ್ಛೇದನ ನೀಡಿ ಬೇರೆ ಯುವತಿಯನ್ನು ಮದುವೆಯಾಗುವುದಾಗಿ ಪನ್ನಾಲಾಲ್ ಅನಿತಾಗೆ ಬೆದರಿಕೆ ಹಾಕುತ್ತಿದ್ದ. ಹುಟ್ಟಲಿರುವ ಮಗಿನ ವಿಚಾರದಲ್ಲಿ ಮತ್ತೆ ಜಗಳ ತೆಗೆದಿದ್ದಾನೆ. ಗಲಾಟೆ ತಾರಕಕ್ಕೇರಿ ಮಚ್ಚಿನಿಂದ 8 ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಸೀಳಿದ್ದಾನೆ. ಆಕೆಯ ಗರ್ಭವನ್ನು ಕತ್ತರಿಸಿದ ನಂತರ ಅವರು ಹುಟ್ಟಲಿರುವ ಮಗುವಿನ ಲಿಂಗವನ್ನು ತಿಳಿದುಕೊಳ್ಳಲು ಬಯಸಿದ್ದರು. ಮಚ್ಚಿನಿಂದ ಗರ್ಭಿಣಿ ಪತ್ನಿ ಅನಿತಾ ಅವರ ಹೊಟ್ಟೆ ಸೀಳಿದ್ದಾನೆ. ತೀವ್ರ ರಕ್ತಸ್ರಾವವಾಗಿದ್ದರೂ ಬಿಡದ ಪಾಪಿ ಪತಿ ಹಲ್ಲೆ ಮುಂದಾಗಿದ್ದಾನೆ. ಕೂಡಲೇ ಅನಿತಾ ಪ್ರಾಣಭಯದಿಂದ ಬೀದಿಗೆ ಓಡಿ ಹೋಗಿ ಜೋರಾಗಿ ಕಿರುಚಿಕೊಂಡಿದ್ದಾಳೆ.

ಅನಿತಾ ಅವರ ಕಿರಿಯ ಸಹೋದರ ಸ್ಥಳೀಯರು ಸೇರಿ ಸಮೀಪದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಷಯ ತಿಳಿದು ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಅನಿತಾಳನ್ನು ಉಳಿಸುವಲ್ಲಿ ಯಶಸ್ವಿಯಾದರು. ಆದರೆ ಆಕೆಯ ಹೊಟ್ಟೆಯಲ್ಲಿದ್ದ ಗಂಡು ಮಗುವನ್ನು ಮೃತಪಟ್ಟಿತ್ತು. ಘಟನೆ ಬಳಿಕ ಪನ್ನಾಲಾಲ್ ನಾಪತ್ತೆಯಾಗಿದ್ದ.

ಅಪರಾಧಿಗೆ ಜೀವಾವಧಿ ಶಿಕ್ಷೆ

ಘಟನೆ ಕುರಿತು ಅನಿತಾ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರೊಂದಿಗೆ ಪನ್ನಾಲಾಲ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕೋರ್ಟ್ ವಿಚಾರಣೆ ವೇಳೆ ಅನಿತಾ ತನಗೆ ಆದ ದೌರ್ಜನ್ಯವನ್ನು ಕೋರ್ಟ್ ಗೆ ವಿವರಿಸಿದ್ದಾಳೆ. ಆದರೆ, ಪನ್ನಾಲಾಲ್ ಅವರು ಅನಿತಾ ಅವರ ಮೇಲೆ ಹಲ್ಲೆ ನಡೆಸಿಲ್ಲ, ಆದರೆ ಅವರು ಸ್ವತಃ ಗಾಯಗೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದ.

ತನಗೆ ತನ್ನ ಸಹೋದರರೊಂದಿಗೆ ಆಸ್ತಿ ವಿವಾದವಿದ್ದು, ಆ ಕೋಪದಲ್ಲಿ ಆಕೆ ತನ್ನನ್ನು ತಾನು ಗಾಯಗೊಳಿಸಿಕೊಂಡು ಆತನ ವಿರುದ್ಧ ದೂರು ನೀಡಿದ್ದಾಳೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾನೆ. ವಿಚಾರಣೆಯ ನಂತರ, ಉತ್ತರ ಪ್ರದೇಶದ ಕೋರ್ಟ್ ಪನ್ನಾಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024