JEE Mains 2025: ಜೆಇಇ ಮುಖ್ಯ ಪರೀಕ್ಷೆ 2025 ಸೆಷನ್ 1 ರಲ್ಲಿ ಹೈದ್ರಾಬಾದ್‌ನ ನಾರಾಯಣ ಶಿಕ್ಷಣ ಸಂಸ್ಥೆಗಳ ಹೆಮ್ಮೆಯ ಸಾಧನೆ
JEE Main 2025: ಜೆಇಇ ಮುಖ್ಯ ಪರೀಕ್ಷೆ 2025 ರ ಮೊದಲ ಸೆಷನ್‌ನಲ್ಲಿ ಹೈದ್ರಾಬಾದ್‌ನ ನಾರಾಯಣ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಹೈದರಾಬಾದ್ : ಮೂರು ದಿನಗಳ ಹಿಂದೆ ಪ್ರಕಟವಾದ ಜೆಇಇ ಮುಖ್ಯ ಪರೀಕ್ಷೆ 2025ರ ಮೊದಲನೇ ಸೆಷನ್‌ನಲ್ಲಿ ಹೈದ್ರಾಬಾದ್‌ನ ಪ್ರತಿಷ್ಠಿತ ನಾರಾಯಣ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ನಾರಾಯಣ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮಹತ್ವವನ್ನು ಸಾರಿದ್ದಾರೆ. ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಬನಿ ಬ್ರತಾ ಮಜೀ ಅವರು 100 ಪರ್ಸೆಂಟೈಲ್ ಗಳಿಸಿದ್ದಾರೆ. ಎಲ್ಲಾ ವಿಷಯಗಳಲ್ಲೂ ಪೂರ್ಣ 300ಕ್ಕೆ 300 ಅಂಕಗಳನ್ನು ಬನಿ ಬ್ರತಾ ಮಜೀ ಗಳಿಸಿರುವುದು ವಿಶೇಷ, ಇದು ವಿದ್ಯಾರ್ಥಿಯ ಸಮರ್ಪಣೆ ಮನೋಭಾವದ ಓದು ಮತ್ತು ನಾರಾಯಣ ಸಂಸ್ಥೆಗಳ ಕಠಿಣ ಶೈಕ್ಷಣಿಕ ವಿಧಾನಕ್ಕೆ ಸಿಕ್ಕ ಗೌರವ ಎಂದು ಸಂಸ್ಥೆ ಹೇಳಿದೆ.
ಮಜೀ ಅವರ ಜತೆಗೆ ಆಯುಷ್ ಸಿಂಘಾಲ್, ಬೆಂಗಳೂರು ಮೂಲದ ಕುಶಾಗ್ರ ಗುಪ್ತಾ, ವಿಷಾದ್ ಜೈನ್ ಮತ್ತು ಶಿವೇನ್ ವಿಕಾಸ್ ತೋಷ್ನಿವಾಲ್ ಕೂಡ 100 ಪರ್ಸೆಂಟೈಲ್‌ಗಳ ಅಂಕಗಳ ಸಾಧನೆ ಮಾಡಿ ಹಿರಿಮೆ ತಂದಿದ್ದಾರೆ, ಇದು ಉನ್ನತ ಸಾಧಕರನ್ನು ಪೋಷಿಸುವ ನಾರಾಯಣ ಶಿಕ್ಷಣ ಸಂಸ್ಥೆಗಳ ಪರಂಪರೆಯನ್ನು ಮತ್ತಷ್ಟು ಬಲಪಡಿಸಿದೆ.
ಈ ಅಸಾಧಾರಣ ಯಶಸ್ಸಿನ ಹಿಂದೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಟಾಪರ್‌ಗಳ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದವರು ನಾರಾಯಣ ಶಿಕ್ಷಣ ಸಂಸ್ಥೆ ಮೂಲಕ ತರಬೇತಿ ಪಡೆದವರು ಎನ್ನುವುದು ಹೆಮ್ಮೆಪಡುವ ವಿಚಾರವೇ ಆಗಿದೆ. ಆಯುಷ್ ಸಿಂಘಾಲ್ ರಾಜಸ್ಥಾನ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದರು, ಕುಶಾಗ್ರ ಗುಪ್ತಾ ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆದರು, ವಿಷಾದ್ ಜೈನ್ ಮಹಾರಾಷ್ಟ್ರದಲ್ಲಿ ಅಗ್ರ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಬಾನಿ ಬ್ರತಾ ಮಜೀ ಹೊರ ಹೊಮ್ಮಿದ್ದರು ತೆಲಂಗಾಣದ ರಾಜ್ಯದ ಟಾಪರ್ ಆಗಿ.
ಪಂಜಾಬ್‌ನಲ್ಲಿ ಪಿಯುಸಾ ದಾಸ್ ಅತಿ ಹೆಚ್ಚು ಸ್ಕೋರರ್ ಆಗಿದ್ದರೆ, ಅರ್ನವ್ ಜಿಂದಾಲ್ ಮತ್ತು ಸುನಯ್ ಯಾದವ್ ಕ್ರಮವಾಗಿ ಚಂಡೀಗಢ ಮತ್ತು ತಮಿಳುನಾಡಿನಲ್ಲಿ ಅಗ್ರಸ್ಥಾನ ಪಡೆದರು. ಶಿವನ್ ವಿಕಾಸ್ ತೋಷ್ನಿವಾಲ್ ಅವರು ಗುಜರಾತ್‌ನಲ್ಲಿ ಉನ್ನತ ಶ್ರೇಣಿಯನ್ನು ಪಡೆದರು. ಇವೆಲ್ಲವೂ ರಾಷ್ಟ್ರೀಯ ಮಟ್ಟದ ವಿವಿಧ ರಾಜ್ಯಗಳಲ್ಲಿ ನಾರಾಯಣ ಶಿಕ್ಷಣ ಸಂಸ್ಥೆಗಳ ಸಾಧನೆಯ ಹಿಂದಿನ ಗರಿಮೆಯೂ ಹೌದು.
ನಾರಾಯಣ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಪಿ. ಸಿಂಧೂರ ನಾರಾಯಣ ಅವರು ಈ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಅಪಾರವಾದ ಹೆಮ್ಮೆಯನ್ನು ವ್ಯಕ್ತಪಡಿಸಿದರು,
"ನಾರಾಯಣದಲ್ಲಿ ನಾವು ಕೇವಲ ಕಲಿಸುವುದಿಲ್ಲ. ನಾವು ಅವರಿಗೆ ಕಲಿಯುವ ಮಾರ್ಗ ತೋರಿಸಿ ಅವರನ್ನು ತಮ್ಮ ಮಾರ್ಗದಲ್ಲಿ ಯಶಸ್ಸು ಸಾಧಿಸಲು ಬೇಕಾಗಿ ಸಶಕ್ತರನ್ನಾಗಿ ಮಾಡುತ್ತೇವೆ. ನಮ್ಮ ವಿಶಿಷ್ಟ ವಿಧಾನವು ಸಮಸ್ಯೆ-ಪರಿಹರಿಸುವ ತಂತ್ರಗಳೊಂದಿಗೆ ಪರಿಕಲ್ಪನೆಯ ಸ್ಪಷ್ಟತೆಯ ಮಾರ್ಗೋಪಾಯಗಳನ್ನು ಒಳಗೊಂಡಿದೆ. ಪ್ರತಿ ವಿದ್ಯಾರ್ಥಿಯು ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎನ್ನುವುದನ್ನು ನಿರಂತರವಾಗಿ ಖಚಿತಪಡಿಸುತ್ತದೆ " ಎಂದು ಸಿಂಧೂರ ಹೇಳುತ್ತಾರೆ.
ನಾರಾಯಣ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪಿ.ಶರಣೀ ನಾರಾಯಣ ಅವರು ನಾರಾಯಣದ ಕಲಿಕಾ ವೇದಿಕೆಯಾದ ಎನ್ ಲರ್ನ್ ಎನ್ನುವ ವಿಶಿಷ್ಟ ಶೈಕ್ಷಣಿಕ ಕ್ರಮದ ಪಾತ್ರವನ್ನು ತಿಳಿಸಿದರು. " ಎನ್ ಲರ್ನ್ ನಮ್ಮ ವಿದ್ಯಾರ್ಥಿಗಳು ತಯಾರಾಗುವ ವಿಧಾನವನ್ನೇ ಮಾರ್ಪಡಿಸಿದೆ. ನೈಜ-ಸಮಯದ ಪ್ರಗತಿ ಟ್ರ್ಯಾಕಿಂಗ್ ಮತ್ತು ದೃಢವಾದ ಪರೀಕ್ಷಾ ಸರಣಿಯೊಂದಿಗೆ, ನಮ್ಮ ಅಧ್ಯಾಪಕರ ತಂಡವು ಎಲ್ಲಾ ರೀತಿಯ ಗೊಂದಲಗಳನ್ನು ಬಗೆಹರಿಸುವ ಪರಿಕ್ರಮ ಹೊಂದಿದೆ. ಯಾವುದೇ ವಿದ್ಯಾರ್ಥಿಯು ಹಿಂದುಳಿದಿಲ್ಲ ಎಂದು ಇದರ ಮೂಲಕ ನಾವು ಖಚಿತಪಡಿಸಿಕೊಳ್ಳಬಹುದು ಎನ್ನುತ್ತಾರೆ.
ನಾರಾಯಣ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಪುನೀತ್ ಕೊತಪ ಅವರ ಪ್ರಕಾರ, ವಿದ್ಯಾರ್ಥಿಗಳು ಈಗ ಜೆಇಇ ಅಡ್ವಾನ್ಸ್ಡ್ 2025 ರ ಪರೀಕ್ಷೆ ಮೇಲೆ ತಮ್ಮ ಗುರಿಯನ್ನು ಹೊಂದಿದ್ದಾರೆ. ಅವರಿಗೆಲ್ಲ ತಮ್ಮ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುವೆ, ನಾರಾಯಣದಲ್ಲಿ ಶಿಕ್ಷಣ ಪಡೆಯುವ ಎಲ್ಲರೂ ಇನ್ನೂ ಉತ್ಕೃಷ್ಟ ಸಾಧನೆ ಮಾಡುವ ವಿಶ್ವಾಸವಿದೆ ಎನ್ನುತ್ತಾರೆ.
ನಾಲ್ಕು ದಶಕಗಳಿಂದ, ನಾರಾಯಣ ಶಿಕ್ಷಣ ಸಂಸ್ಥೆಗಳು ಭಾರತದಾದ್ಯಂತ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿವೆ. ಈ ಫಲಿತಾಂಶಗಳು ನಾರಾಯಣ ಅವರ ಶ್ರೇಷ್ಠತೆಯ ಅಚಲ ಬದ್ಧತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ, ಏಕೆಂದರೆ ನಾರಾಯಣದಲ್ಲಿರುವುದು ನಿಮ್ಮ ಕನಸುಗಳು ನಮ್ಮ ಕನಸುಗಳು ಎನ್ನುವ ಧ್ಯೇಯದ ಶಿಕ್ಷಣ ಕ್ರಮ.
ನಾರಾಯಣ ಶಿಕ್ಷಣ ಸಂಸ್ಥೆಗಳ ಮಾಹಿತಿಗಾಗಿ : https://www.narayanagroup.com / ಸಂಪರ್ಕಿಸಬಹುದು.
