ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -Icse Result

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿ) 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಮೇ 6ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಿದೆ. ಫಲಿತಾಂಶ ನೋಡುವ ಲಿಂಕ್ ಮತ್ತು ವಿಧಾನ ಇಲ್ಲಿದೆ.

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ.

ದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ತನ್ನ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ICSE ಅಥವಾ 10 ನೇ ತರಗತಿ) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC ಅಥವಾ 12 ನೇ ತರಗತಿ) ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು (ಮೇ 6, ಸೋಮವಾರ) ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುತ್ತದೆ ಎಂದು ಭಾನುವಾರ (ಮೇ 5) ತಿಳಿಸಿದೆ. ಐಸಿಎಸ್ಇ, ಐಎಸ್‌ಸಿ ಫಲಿತಾಂಶ 2024 ರ ಸಂಪೂರ್ಣ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ವಿದ್ಯಾರ್ಥಿಗಳು ಐಸಿಎಸ್ಇ ಮತ್ತು ಐಎಸ್‌ಸಿ 2024 ರ ಪರೀಕ್ಷೆಯ ಫಲಿತಾಂಶಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ cisce.org ಹಾಗೂ results.cisce.org ಈ ಕೆಳಗಿನ ಮಾಹಿತಿಯನ್ನು ಒದಗಿಸುವ ಮೂಲಕ ಪರಿಶೀಲಿಸಬಹುದು.

ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ವೀಕ್ಷಿಸಲು ಬೇಕಾಗಿರುವ ದಾಖಲೆಗಳು

  • ವಿಶಿಷ್ಟ ಐಡಿ
  • ಸೂಚ್ಯಂಕ ಸಂಖ್ಯೆ
  • ಕ್ಯಾಪ್ಚಾ (ಪರದೆಯ ಮೇಲೆ ತೋರಿಸಿರುವಂತೆ)

ಮಂಡಳಿಯ ವೆಬ್‌ಸೈಟ್‌ಗಳ ಜೊತೆಗೆ, ಐಸಿಎಸ್ಇ ಮತ್ತು ಐಎಸ್‌ಸಿ ಫಲಿತಾಂಶಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುತ್ತವೆ ಎಂದು ಕೌನ್ಸಿಲ್ ತಿಳಿಸಿದೆ.

ಐಸಿಎಸ್ಇ, ಐಎಸ್‌ಸಿ ಫಲಿತಾಂಶ 2024 ಚೆಕ್ ಮಾಡುವುದು ಹೇಗೆ

  1. ಕೌನ್ಸಿಲ್ ವೆಬ್‌ಸೈಟ್‌ cisce.org ಅಥವಾ results.cisce.org ಗೆ ಭೇಟಿ ನೀಡಿ
  2. ಅಗತ್ಯಕ್ಕೆ ತಕ್ಕಂತೆ ಐಸಿಎಸ್ಇ ಅಥವಾ ಐಎಸ್‌ಸಿ ಫಲಿತಾಂಶ ಲಿಂಕ್ ತೆರೆಯಿರಿ
  3. ನಿಮ್ಮ ವಿಶಿಷ್ಟ ಐಡಿ, ಸೂಚ್ಯಂಕ ಸಂಖ್ಯೆ (ಇಂಡೆಕ್ಸ್ ನಂಬರ್) ಮತ್ತು ಪರದೆಯ ಮೇಲೆ ಪ್ರದರ್ಶಿಸಲಾದ ಸೆಕ್ಯೂರಿಟಿ ಕೋಡ್ ನಮೂದಿಸಿ.
  4. ಲಾಗ್ ಇನ್ ಮಾಡಿ ಮತ್ತು ನಿಮ್ಮ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿ.

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ಮಾಡುವ 10 ಸಾಮಾನ್ಯ ತಪ್ಪುಗಳಿವು

ಈ ವರ್ಷದ ಸಿಐಎಸ್‌ಸಿಇ ಅಂತಿಮ ಪರೀಕ್ಷೆಗಳು ಭಾರಿ ವಿವಾದಗಳಿಂದ ಕೂಡಿದ್ದವು. ಪರೀಕ್ಷಾ ಮಂಡಳಿ ಎರಡು ಪತ್ರಿಕೆಗಳನ್ನು ಮುಂದೂಡಿತ್ತು. ಫೆಬ್ರವರಿ 26 ರಂದು ನಿಗದಿಯಾಗಿದ್ದ ಐಎಸ್‌ಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮಾರ್ಚ್ 21 ಕ್ಕೆ ಮುಂದೂಡಲಾಗಿತ್ತು. ನಂತರ, ಪ್ರಶ್ನೆ ಪತ್ರಿಕೆ ಪ್ಯಾಕೆಟ್ ಕಳೆದುಹೋಗಿದೆ ಎಂದು ಪರೀಕ್ಷಾ ಕೇಂದ್ರವು ವರದಿ ಮಾಡಿದ ನಂತರ ಕೌನ್ಸಿಲ್ 12 ನೇ ತರಗತಿಯ ಮನಃಶಾಸ್ತ್ರ ಪರೀಕ್ಷೆಯನ್ನು ಮುಂದೂಡಿತು. ಪರೀಕ್ಷೆಯನ್ನು ಮಾರ್ಚ್ 27 ರಂದು ನಿಗದಿಪಡಿಸಲಾಗಿತ್ತು ಆದರೆ ಏಪ್ರಿಲ್ 4 ರಂದು ನಡೆಸಲಾಯಿತು.

ಐಸಿಎಸ್ಇ ಮತ್ತು ಐಎಸ್‌ಸಿ ಫಲಿತಾಂಶಗಳ ಮರುಪರಿಶೀಲನೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸಿಐಎಸ್ಇ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತದೆ. ಮರುಪರಿಶೀಲನೆಗೆ ವಿದ್ಯಾರ್ಥಿಗಳು ಪ್ರತಿ ಪತ್ರಿಕೆಗೆ 1,000 ರೂ., ಮರು ಮೌಲ್ಯಮಾಪನಕ್ಕೆ 1,500 ರೂಪಾಯಿಗಳನ್ನು ಪಾವತಿಸಬೇಕು. ಫಲಿತಾಂಶ ಪ್ರಕಟವಾದ ನಂತರ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಮರುಪರಿಶೀಲನೆ ಮತ್ತು ಮರು ಮೌಲ್ಯಮಾಪನಕ್ಕೆ ಅವಕಾಶ ನೀಡುವ ಆಯ್ಕೆಯನ್ನು ಸಕ್ರಿಯಗೊಳಿಸಲಾಗುತ್ತದೆ.

ಐಸಿಎಸ್ಇ ಮತ್ತು ಐಎಸ್‌ಸಿ ಕಂಪಾರ್ಟ್ಮೆಂಟ್ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ. ಈಗ, ವಿದ್ಯಾರ್ಥಿಗಳು ಗರಿಷ್ಠ ಎರಡು ವಿಷಯಗಳಲ್ಲಿ ಸುಧಾರಣಾ ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ಹೊಂದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ, ಪರೀಕ್ಷಾ ಮಂಡಳಿಯ ಸಿಐಎಸ್‌ಸಿಇ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಿ.

IPL_Entry_Point