ಕನ್ನಡ ಸುದ್ದಿ  /  Nation And-world  /  Iim Indore Student Bags <Span Class='webrupee'>₹</span>1.14 Crore Pay Package

Campus Placement: ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ವರ್ಷಕ್ಕೆ 1.14 ಕೋಟಿ ರೂ. ವೇತನದ ಪ್ಯಾಕೇಜ್‌ ಪಡೆದ ಐಐಎಂ ಇಂದೋರ್‌ ವಿದ್ಯಾರ್ಥಿ

ಇಂದೋರ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವಿದ್ಯಾರ್ಥಿಯೊಬ್ಬರಿಗೆ ದೇಶಿ ಕಂಪನಿಯೊಂದು ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ವಾರ್ಷಿಕ 1.14 ಕೋಟಿ ರೂಪಾಯಿಗಳ ವೇತನದ ಭರ್ಜರಿ ಪ್ಯಾಕೇಜ್ ನೀಡಿದೆ

IIM Indore student bags  ₹1.14 crore pay package
IIM Indore student bags ₹1.14 crore pay package (Arun Mondhe/HT file photo)

ಇಂದೋರ್‌: ಈಗಷ್ಟೇ ಪದವಿ ಮುಗಿಸುತ್ತಿರುವ ವಿದ್ಯಾರ್ಥಿಗಳು ಅಚ್ಚರಿಯೆನಿಸುವ ಭರ್ಜರಿ ಪ್ಯಾಕೇಜ್‌ ಮೊತ್ತದ ವೇತನ ಪಡೆಯುತ್ತಿದ್ದಾರೆ. ವರ್ಷಕ್ಕೆ ಹಲವು ಲಕ್ಷ ರೂ.ನಿಂದ ಕೆಲವು ಕೋಟಿ ರೂ.ನ ವೇತನದ ಉದ್ಯೋಗದ ಆಫರ್‌ ಪಡೆಯುತ್ತಿದ್ದಾರೆ.

ಇಂದೋರ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯೊಬ್ಬರಿಗೆ ದೇಶಿ ಕಂಪನಿಯೊಂದು ವಾರ್ಷಿಕ 1.14 ಕೋಟಿ ರೂಪಾಯಿಗಳ ವೇತನ ಪ್ಯಾಕೇಜ್ ನೀಡಿದೆ ಎಂದು ಐಐಎಂ-ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾರಿಯ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ಅತ್ಯಧಿಕ ಮೊತ್ತದ ಆಫರ್‌ ಇದಾಗಿದೆ ಎಂದು ಅವರು ಹೇಳಿದೆ. ಹಿಂದಿನ ವರ್ಷದ ಪ್ಲೇಸ್‌ಮೆಂಟ್‌ನಲ್ಲಿ ವಿದ್ಯಾರ್ಥಿಯೊಬ್ಬರು ಪಡೆದ ಪ್ಯಾಕೇಜ್‌ಗಿಂತ ಇದು 65 ಲಕ್ಷ ರೂ. ಅತ್ಯಧಿಕ ಪ್ಯಾಕೇಜ್‌ ಆಗಿದೆ.

ಅಂದರೆ, ಕಳೆದ ವರ್ಷ ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ವಿದ್ಯಾರ್ಥಿಯೊಬ್ಬರು ಪಡೆದ ಗರಿಷ್ಠ ವೇತನ ಪ್ಯಾಕೇಜ್‌ 49 ಲಕ್ಷ ರೂ. ಆಗಿತ್ತು ಎಂದು ಐಐಎಂ-ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿಯ ಕ್ಯಾಂಪಲಸ್‌ ಪ್ಲೇಸ್‌ಮೆಂಟ್‌ನಲ್ಲಿ 160 ಕ್ಕೂ ಹೆಚ್ಚು ದೇಶೀಯ ಮತ್ತು ವಿದೇಶಿ ಕಂಪನಿಗಳು ಪಾಲ್ಗೊಂಡಿದ್ದವು. ಐಐಎಂನ ಸುಮಾರು 568 ವಿದ್ಯಾರ್ಥಿಗಳು ವಾರ್ಷಿಕ ಸರಾಸರಿ 30.21 ಲಕ್ಷ ರೂ. ವೇತನದ ಉದ್ಯೋಗದ ಆಫರ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಉತ್ತಮ ವೇತನದ ಆಫರ್‌ಗಳನ್ನು ಪಡೆದವರಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಕಾರ್ಯಕ್ರಮ (PGP) ಮತ್ತು ಐದು ವರ್ಷಗಳ ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ (IPM) ವಿದ್ಯಾರ್ಥಿಗಳು ಸೇರಿದ್ದಾರೆ. ಎರಡೂ ಕೋರ್ಸ್‌ಗಳನ್ನು ಎಂಬಿಎಗೆ ಸಮಾನವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಶ್ವ ದರ್ಜೆಯ ನಿರ್ವಹಣಾ ಶಿಕ್ಷಣವನ್ನು ನೀಡುವ ಮೂಲಕ ಉದ್ಯಮದೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಸವಾಲಿನ ಸಮಯದ ಹೊರತಾಗಿಯೂ ನಮ್ಮ ವಿದ್ಯಾರ್ಥಿಗಳು ಪಡೆದ ಅತ್ಯುತ್ತಮ ಉದ್ಯೋಗಗಳು ಇದಕ್ಕೆ ಪುರಾವೆಯಾಗಿದೆ ಎಂದು ಐಐಎಂ-ಐನ ಪ್ರೊ.ಹಿಮಾನ್ಶು ರೈ ಹೇಳಿದ್ದಾರೆ.

ಈ ಬಾರಿ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ಅತ್ಯಧಿಕ ಹುದ್ದೆಗಳು ಸಲಹಾ ಕ್ಷೇತ್ರದಿಂದ ಬಂದಿವೆ. ಅಂದರೆ, ಶೇಕಡ 29ರಷ್ಟು ಉದ್ಯೋಗಗಳು ಸಲಹಾ ಕ್ಷೇತ್ರಕ್ಕೆ ಸಂಬಂಧಪಟ್ಟಿವೆ. ಶೇಕಡ 19ರಷ್ಟು ಉದ್ಯೋಗಗಳು ಸಾಮಾನ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ (ಜನರಲ್‌ ಮ್ಯಾನೇಜ್‌ಮೆಂಟ್‌ ಆಂಡ್‌ ಆಪರೇಷನ್ಸ್‌) ಮತ್ತು ಹಣಕಾಸು ಮತ್ತು ಮಾರ್ಕೆಟಿಂಗ್‌ಗೆ ಸಂಬಂಧಪಟ್ಟ ಉದ್ಯೋಗಗಳ ಪಾಲು ತಲಾ ಶೇಕಡ 18 ಆಗಿವೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯೋಗಗಳ ಪಾಲು ಶೇಕಡ 16ರಷ್ಟಿದ್ದವು.

ಕ್ಯಾಂಪಸ್‌ ಸಂದರ್ಶನದಲ್ಲಿ ಅತ್ಯುತ್ತಮ ವೇತನದ ಆಫರ್‌ ಪಡೆಯಲು ನಿಮ್ಮ ಶೈಕ್ಷಣಿಕ ಅರ್ಹತೆ ಮತ್ತು ಪಡೆದ ಅಂಕಗಳ ಪಾಲು ಅತ್ಯಂತ ಅವಶ್ಯಕ. ಆದರೆ, ಕಲಿಕೆಯಲ್ಲಿ ನೀವು ಜಾಣರಾಗಿದ್ದರೆ ಸಾಲದು. ಅತ್ಯುತ್ತಮವಾಗಿ ವೇತನ ಚೌಕಾಶಿ ಮಾಡುವ ಗುಣವೂ ನಿಮ್ಮಲ್ಲಿರಬೇಕು. ಅತ್ಯುತ್ತಮ ನಾಯಕತ್ವದ ಗುಣ, ಸಂವಹನ ಕೌಶಲ ಇತ್ಯಾದಿಗಳೂ ಯಶಸ್ಸಿಗೆ ಅಗತ್ಯವಿರುತ್ತವೆ.

ಇದರೊಂದಿಗೆ ಅತ್ಯುತ್ತಮವಾದ ರೆಸ್ಯೂಮೆ ಕೂಡ ಉತ್ತಮ ಮೊತ್ತದ ವೇತನ ಪಡೆಯಲು ನೆರವಾಗುತ್ತದೆ. ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅತ್ಯುತ್ತಮ ರೆಸ್ಯೂಮೆ ಅಥವಾ ಸಿವಿ ರಚಿಸಲು ಹೆಚ್ಚಿನ ಗಮನ ನೀಡಿ.

IPL_Entry_Point