Shaliza Dhami IAF: ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳ ಮುನ್ನಡೆಸಲು ಮಹಿಳಾ ಅಧಿಕಾರಿ ನೇಮಕ, ವಾಯುಪಡೆಯಲ್ಲಿ ನಾರಿಶಕ್ತಿಗೆ ಜೈಹೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shaliza Dhami Iaf: ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳ ಮುನ್ನಡೆಸಲು ಮಹಿಳಾ ಅಧಿಕಾರಿ ನೇಮಕ, ವಾಯುಪಡೆಯಲ್ಲಿ ನಾರಿಶಕ್ತಿಗೆ ಜೈಹೋ

Shaliza Dhami IAF: ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳ ಮುನ್ನಡೆಸಲು ಮಹಿಳಾ ಅಧಿಕಾರಿ ನೇಮಕ, ವಾಯುಪಡೆಯಲ್ಲಿ ನಾರಿಶಕ್ತಿಗೆ ಜೈಹೋ

ಹೆಲಿಕಾಪ್ಟರ್‌ ಪೈಲೆಟ್‌ ಗ್ರೂಪ್‌ ಕ್ಯಾಪ್ಟನ್‌ ಶಾಲಿಜಾ ಧಾಮಿಯವರು ಪಶ್ಚಿಮ ವಲಯದ ಕ್ಷಿಪಣಿ ದಳವನ್ನು (missile squadron) ಮುನ್ನಡೆಸಲಿದ್ದಾರೆ

Shaliza Dhami IAF: ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳಕ್ಕೆ ಮಹಿಳಾ ಅಧಿಕಾರಿ ನೇಮಕ
Shaliza Dhami IAF: ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳಕ್ಕೆ ಮಹಿಳಾ ಅಧಿಕಾರಿ ನೇಮಕ

ನವದೆಹಲಿ: ಭಾರತದ ರಕ್ಷಣಾ ಪಡೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಇತ್ತೀಚೆಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದ್ದು, ಪುರುಷ ಸಹವರ್ತಿಗಳಿಗೆ ಸರಿಸಮಾನದ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಮಹಿಳಾ ದಿನಕ್ಕೆ ಕ್ಷಣಗಣನೆ ಆರಂಭವಾದ ಈ ಹೊತ್ತಿನಲ್ಲಿ ವಾಯುಪಡೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಯುದ್ಧಪಡೆಯ ಮುಂಚೂಣಿ ಪಡೆಗೆ ಮಹಿಳಾ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ.

ಹೆಲಿಕಾಪ್ಟರ್‌ ಪೈಲೆಟ್‌ ಗ್ರೂಪ್‌ ಕ್ಯಾಪ್ಟನ್‌ ಶಾಲಿಜಾ ಧಾಮಿಯವರು ಪಶ್ಚಿಮ ವಲಯದ ಕ್ಷಿಪಣಿ ದಳವನ್ನು (missile squadron) ಮುನ್ನಡೆಸಲಿದ್ದಾರೆ ಎಂದು ಐಎಎಫ್‌ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

2003ರಲ್ಲಿ ಭಾರತೀಯ ವಾಯುಪಡೆಗೆ ನೇಮಕಗೊಂಡ ಧಾಮಿಯವರು ಫ್ಲೈಯಿಂಗ್‌ ತರಬೇತುದಾರರಾಗಿಯೂ ಅರ್ಹತೆ ಪಡೆದಿದ್ದಾರೆ. 2 ಸಾವಿರ ಗಂಟೆಗೂ ಹೆಚ್ಚು ಕಾಲ ಹಾರಾಟದ ಅನುಭವ ಹೊಂದಿದ್ದಾರೆ ಎಂದು ವಾಯುಪಡೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶಾಲಿಜಾ ಧಾಮಿ
ಶಾಲಿಜಾ ಧಾಮಿ

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವ ಮತ್ತು ಪುರುಷ ಸಹವರ್ತಿಗಳಿಗೆ ಸರಿಸಮನಾಗಿ ಅವಕಾಶಗಳನ್ನು ನೀಡಲು ರಕ್ಷಣಾ ಇಲಾಖೆ ಪ್ರಯತ್ನಿಸುತ್ತಿದೆ. ಇದೀಗ ವಾಯುಪಡೆಯು ಕಾಂಬ್ಯಾಟ್‌ ಯೂನಿಟ್‌ನ ನೇತೃತ್ವವನ್ನು ಮಹಿಳಾ ಅಧಿಕಾರಿಗೆ ನೀಡಲಾಗಿದೆ.

ಶಾಲಿಜಾ ಧಾಮಿಯವರು ವಾಯುಪಡೆಯ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ವಾಯುಪಡೆಯ ಮೊದಲ ಫ್ಲೈಯಿಂಗ್‌ ಇನ್‌ಸ್ಟ್ರಕ್ಟರ್‌. ವೆಸ್ಟರ್ನ್‌ ಸೆಕ್ಟರ್‌ನ ಹೆಲಿಕಾಪ್ಟರ್‌ ಘಟಕಕ್ಕೆ ಫ್ಲೈಟ್‌ ಕಮಾಂಡರ್‌ ಆಗಿದ್ದರು. ಇಂತಹ ಸಾಧನೆ ಮಾಡಿರುವ ಮೊದಲ ಮಹಿಳಾ ಅಧಿಕಾರಿ ಇವರಾಗಿದ್ದಾರೆ.

"ಎರಡು ಸಂದರ್ಭಗಳಲ್ಲಿ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿರುವ ಅಧಿಕಾರಿಯನ್ನು ಇದೀಗ ಫ್ರಂಟ್‌ಲೈನ್‌ ಕಮಾಂಡ್‌ನ ಹೆಡ್‌ಕ್ವಾರ್ಟರ್‌ಗೆ ನೇಮಕ ಮಾಡಲಾಗಿದೆ" ಎಂದು ವಾಯುಪಡೆಯ ಅಧಿಕಾರಿ ಹೇಳಿದ್ದಾರೆ.

"ಇದು ಯುದ್ಧ ಮತ್ತು ಕಮಾಂಡ್ ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಅವಕಾಶ ನೀಡುವ ಉಪಕ್ರಮದಲ್ಲಿ ಮತ್ತೊಂದು ಮೈಲಿಗಲ್ಲು. ವಾಯುಪಡೆಯ ನಿರ್ಣಾಯಕ ಕಾರ್ಯಾಚರಣೆಗಳ ಘಟಕವನ್ನು ಮುನ್ನಡೆಸುವ ಅವಕಾಶವನ್ನು ಲೇಡಿ ಆಫೀಸರ್‌ ಪಡೆದಿದ್ದಾರೆ" ಎಂದು ಸೆಂಟರ್‌ ಫಾರ್‌ ಏರ್‌ ಪವರ್‌ ಸ್ಟಡೀಸ್‌ನ ಪ್ರಧಾನ ನಿರ್ದೇಶಕರಾದ ಆರ್‌ ಮಾರ್ಷಲ್‌ ಅನಿಲ್‌ ಚೋಪ್ರಾ (ನಿವೃತ್ತ) ಅಭಿಪ್ರಾಯಪಟ್ಟಿದ್ದಾರೆ.

ಸಮವಸ್ತ್ರದಲ್ಲಿರುವ ಮಹಿಳೆಯರು ಅವಕಾಶ ವಂಚಿತರಾಗಬೇಕಾಗಿಲ್ಲ. ಅವರನ್ನು ಪುರುಷ ಸಹವರ್ತಿಗಳಿಗೆ ಸರಿಸಮಾನಾಗಿ ಪ್ರಮುಖ ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ. ಅವರು ಫೈಟರ್‌ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಯುದ್ಧ ವಿಮಾನಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಪಿಬಿಒಆರ್‌ ಕೇಡರ್‌ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಪರ್ಮನೆಂಟ್‌ ಕಮಿಷನ್‌ಗೂ ಅವರು ಅರ್ಹರು. ಇವರಿಗೆ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯು ಪುರುಷ ಸಹವರ್ತಿಗಳಿಗೆ ಸರಿಸಮನಾದ ತರಬೇತಿ ನೀಡುತ್ತಿದೆ.

ತಮ್ಮ ವಿಶೇಷ ಪಡೆಗಳಿಗೆ ಸೇರಲು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯು ಅವಕಾಶ ನೀಡುತ್ತಿದೆ. ಗರುಡ್‌ ಕಮಾಂಡೊ ಫೋರ್ಸ್‌ ಮತ್ತು ಮರೀನ್‌ ಕಮಾಂಡೊಗಳಾಗಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡುತ್ತಿದೆ. ಈ ಮೂಲಕ ಅವರವರ ರ್ಯಾಂಕ್‌ಗೆ ತಕ್ಕಂತೆ ಲಿಂಗ ತಾರತಮ್ಯ ತಪ್ಪಿಸಲು ಯತ್ನಿಸುತ್ತಿದೆ.

ಇದೇ ಮೊದಲ ಬಾರಿಗೆ ಫೆಬ್ರವರಿ ತಿಂಗಳಲ್ಲಿ ಭಾರತೀಯ ಸೇನೆಯು ಮಹಿಳಾ ಅಧಿಕಾರಿಗಳನ್ನು ಕಮಾಂಡ್‌ ಹುದ್ದೆಗಳಿಗೆ ಇದೇ ಮೊದಲ ಬಾರಿಗೆ ನೇಮಕ ಮಾಡಲು ಆರಂಭಿಸಿತ್ತು. ಇವರಲ್ಲಿ ಸುಮಾರು 50 ಮಹಿಳೆಯರು ಯುದ್ಧ ಭೂಮಿಯಲ್ಲಿ ಸೇನಾ ಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಭೂಮಿ ಮೇಲಿನ ಅತಿ ಎತ್ತರ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲಿನ ಕುಮಾರ್ ಪೋಸ್ಟ್ ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಲು ಈ ವರ್ಷದ ಆರಂಭದಲ್ಲಿ ಕ್ಯಾಪ್ಟನ್ ಶಿವ ಚೌಹಾಣ್ ನೇಮಕಗೊಂಡಿದ್ದರು. ಈ ರೀತಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ ಇವರಾಗಿದ್ದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.