ಆದಾಯ ತೆರಿಗೆ ಬಜೆಟ್ 2025; ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆದಾಯ ತೆರಿಗೆ ಬಜೆಟ್ 2025; ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ, ಇಲ್ಲಿದೆ ವಿವರ

ಆದಾಯ ತೆರಿಗೆ ಬಜೆಟ್ 2025; ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ, ಇಲ್ಲಿದೆ ವಿವರ

ಆದಾಯ ತೆರಿಗೆ ಬಜೆಟ್ 2025: ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್‌ಗಳ ರಚನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಅದರ ವಿವರ ಇಲ್ಲಿದೆ.

ಕೇಂದ್ರ ಬಜೆಟ್‌ 2025; ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆಯ ವಿವರ ಇಲ್ಲಿದೆ.
ಕೇಂದ್ರ ಬಜೆಟ್‌ 2025; ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆಯ ವಿವರ ಇಲ್ಲಿದೆ.

ಆದಾಯ ತೆರಿಗೆ ಬಜೆಟ್ 2025; ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ 1) ಸತತ 8ನೇ ಬಜೆಟ್ ಮಂಡಿಸಿದ್ದು, ಆದಾಯ ತೆರಿಗೆ ವಿಚಾರವಾಗಿ ಮಹತ್ವದ ಘೋಷಣೆಯನ್ನು ಪ್ರಕಟಿಸಿದರು. ಇದು ಮಧ್ಯಮವರ್ಗದ ವೇತನದಾರರನ್ನು ಖುಷಿಪಡಿಸಿದೆ. ತೆರಿಗೆದಾರರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ, ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಹೆಚ್ಚು ಖರ್ಚು ಮಾಡಬಹುದಾದ ಆದಾಯವನ್ನು ಅವರ ಕೈಯಲ್ಲಿ ಬಿಡುವುದರ ಕಡೆಗೆ ಕೇಂದ್ರ ಬಜೆಟ್ ಗಮನ ಹರಿಸಿದ್ದು ಕಂಡುಬಂತು.

ಆದಾಯ ತೆರಿಗೆ ಬಜೆಟ್ 2025; ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ

ಕೇಂದ್ರ ಸರ್ಕಾರದಿಂದ ವ್ಯಾಪಕವಾಗಿ ನಿರೀಕ್ಷಿಸಲ್ಪಟ್ಟಿರುವ ಒಂದು ಕ್ರಮ ಇದು. ಕೇಂದ್ರ ಬಜೆಟ್‌ 2025-26 ಮಧ್ಯಮ ವರ್ಗದವರಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಲಾದ ಪರಿಷ್ಕೃತ ಆದಾಯ ತೆರಿಗೆ ರಚನೆಯನ್ನು ಪರಿಚಯಿಸಿತು. ಹೊಸ ತೆರಿಗೆ ಆಡಳಿತವು ಸಾಕಷ್ಟು ಸರಳವಾಗಿದ್ದರೂ, ಇದು ಇನ್ನಷ್ಟು ನಿರಾಳ ಭಾವವನ್ನು ಮಧ್ಯಮ ವರ್ಗದ ವೇತನದಾರರಲ್ಲಿ ಮೂಡಿಸಿದೆ. ಇದು ಮುಂದಿನ ಹಣಕಾಸು ವರ್ಷದ ಆರಂಭದಿಂದ ಅಂದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಹೊಸ ತೆರಿಗೆ ಪದ್ಧತಿಯ ಪರಿಷ್ಕೃತ ತೆರಿಗೆ ಸ್ಲ್ಯಾಬ್‌

  • 0- 4 ಲಕ್ಷ ರೂಪಾಯಿ ತನಕ ತೆರಿಗೆ ಇಲ್ಲ
  • 4 ಲಕ್ಷ ರೂ.- 8 ಲಕ್ಷ ರೂ ತನಕ ಶೇ 5 ತೆರಿಗೆ
  • 8 ಲಕ್ಷ ರೂ- 12 ಲಕ್ಷ ರೂ ತನಕ ಶೇ 10 ತೆರಿಗೆ
  • 12 ಲಕ್ಷ ರೂ- 16 ಲಕ್ಷ ರೂ ತನಕ ಶೇ 15 ತೆರಿಗೆ
  • 16 ಲಕ್ಷ ರೂ- 20 ಲಕ್ಷ ರೂ ತನಕ ಶೇ 20 ತೆರಿಗೆ
  • 20 ಲಕ್ಷ ರೂ - 24 ಲಕ್ಷ ರೂ ತನಕ ಶೇ 25 ತೆರಿಗೆ
  • 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ 30 ತೆರಿಗೆ

ಆದಾಯ ತೆರಿಗೆ ಬಜೆಟ್ 2025; ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ವಿವರ

ಕೇಂದ್ರ ಬಜೆಟ್ 2025ರಲ್ಲಿ ಉಲ್ಲೇಖವಾಗಿರುವ ಹೊಸ ಆದಾಯ ತೆರಿಗೆ ಸ್ಲ್ಯಾಬ್ ವಿವರ
ಕೇಂದ್ರ ಬಜೆಟ್ 2025ರಲ್ಲಿ ಉಲ್ಲೇಖವಾಗಿರುವ ಹೊಸ ಆದಾಯ ತೆರಿಗೆ ಸ್ಲ್ಯಾಬ್ ವಿವರ

ಹಳೆ ತೆರಿಗೆ ಪದ್ಧತಿಯ ತೆರಿಗೆ ಸ್ಲ್ಯಾಬ್‌

ಕೇಂದ್ರ ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನು ಎಲ್ಲರೂ ಸ್ವೀಕರಿಸುವುದಕ್ಕೆ ಬೇಕಾದಂತೆ ಪರಿಷ್ಕರಣೆಗಳನ್ನು ಮಾಡುತ್ತಿದ್ದು, ಅದಕ್ಕೆ ಉತ್ತೇಜನ ನೀಡುವುದನ್ನು ಮುಂದುವರಿಸಿದೆ. ಹೀಗಾಗಿ ಹಳೆಯ ತೆರಿಗೆ ಪದ್ಧತಿಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಪದ್ಧತಿಯಲ್ಲಿ ಅದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಪ್ರಕಾರ 70ಕ್ಕೂ ಹೆಚ್ಚು ವಿನಾಯಿತಿ ಪಡೆಯುವುದಕ್ಕೆ ಅವಕಾಶ ಇದೆ. ಆದರೆ, ಹೊಸ ತೆರಿಗೆ ಪದ್ಧತಿಗೆ ಹೋಲಿಸಿದರೆ ಇದರಲ್ಲಿ ತೆರಿಗೆ ದರ ಹೆಚ್ಚು.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ತನಕ ತೆರಿಗೆ ಇಲ್ಲ

ವಾರ್ಷಿಕ ಆದಾಯ 2.5 ಲಕ್ಷ ರೂ- 5 ಲಕ್ಷ ರೂ ತನಕ ಶೇ 5 ತೆರಿಗೆ

5,00,001 ರೂ - 10 ಲಕ್ಷ ರೂ - ಶೇ 20 ತೆರಿಗೆ

10,00,001 ರೂಪಾಯಿ ಮೇಲ್ಪಟ್ಟು ಶೇ 30 ತೆರಿಗೆ

ಮಧ್ಯಮ ವರ್ಗದ ಜನರ ಬದುಕಿನ ಮಟ್ಟ ಸುಧಾರಿಸುವಂತೆ ಹೊಸ ತೆರಿಗೆ ರಚನೆ ಮಾಡಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಈ ಕ್ಷಣದ ಅಗತ್ಯವನ್ನು ಉಲ್ಲೇಖಿಸಿದರು.

ಹಣಕಾಸಿನ ಹೊರೆ ಕಡಿಮೆ ಮಾಡಲು, ಆ ಮೂಲಕ ಮಧ್ಯಮ ವರ್ಗದವರು ಖರ್ಚು ಮಾಡಬಹುದಾದ ಆದಾಯವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು, ವಿಶೇಷವಾಗಿ ಮನೆಯ ಬಳಕೆಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

ಆದಾಯ ತೆರಿಗೆ ಸ್ಲ್ಯಾಬ್‌ಗಳ ಪರಿಷ್ಕರಣೆ, ತೆರಿಗೆ ಪರಿಹಾರದ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವತ್ತ ಸರ್ಕಾರದ ಗಮನವಿದ್ದು, ಪ್ರಮಾಣಿತ ಕಡಿತಗಳು ಮತ್ತು ರಿಯಾಯಿತಿಗಳಲ್ಲಿನ ಸಂಭಾವ್ಯ ಹೆಚ್ಚಳದೊಂದಿಗೆ, ಮಧ್ಯಮ ವರ್ಗವನ್ನು ಬೆಂಬಲಿಸಲು ಮತ್ತು ಬಳಕೆ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸ್ಪಷ್ಟ ಪ್ರಯತ್ನವನ್ನು ತೋರಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ವಿವರಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.