Independence Day: ಪಾಕಿಸ್ತಾನವು ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸುವುದು ಯಾಕೆ-independence day news why pakistan celebrates independence day a day before india on august 14th mohammed ali jinnah jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Independence Day: ಪಾಕಿಸ್ತಾನವು ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸುವುದು ಯಾಕೆ

Independence Day: ಪಾಕಿಸ್ತಾನವು ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸುವುದು ಯಾಕೆ

Pakistan Independence Day: ಭಾರತವು ಸ್ವಾತಂತ್ರ್ಯ ಪಡೆದ ದಿನದಂದೇ ಪಾಕಿಸ್ತಾನ ಕೂಡಾ ಸ್ವಾತಂತ್ರ್ಯ ಪಡೆಯಿತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಭಾರತಕ್ಕಿಂದ ಒಂದು ದಿನ ಮುಂಚಿತವಾಗಿ ಆಗಸ್ಟ್ 14ರಂದು ಆಚರಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನೋಡೋಣ.

ವಾಘಾ ಗಡಿಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಪರೇಡ್‌ನಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಮತ್ತು ಬಿಎಸ್‌ಎಫ್ ಸಿಬ್ಬಂದಿ ತಮ್ಮ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ವಾಘಾ ಗಡಿಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಪರೇಡ್‌ನಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಮತ್ತು ಬಿಎಸ್‌ಎಫ್ ಸಿಬ್ಬಂದಿ ತಮ್ಮ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. (Reuters file photo for representation)

ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾದ ಭಾರತವು, ಈ ವರ್ಷ 76ನೇ ವರ್ಷದ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಿದೆ. ಭಾರತದೊಂದಿಗೆ ನೆರೆಯ ಪಾಕಿಸ್ತಾನ ಕೂಡಾ ಇದೇ ವಾರ 77ನೇ ಸ್ವಾತಂತ್ರ್ಯ (77th Independence Day) ದಿನವನ್ನು ಆಚರಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನವು ಒಂದೇ ದಿನ ಸ್ವಾತಂತ್ರ್ಯವನ್ನು ಪಡೆದರೂ, ಪಾಕಿಸ್ತಾನ ದೇಶವು ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ.

1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು (The Indian Independence Act of 1947) ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳನ್ನು ವಿಭಜಿಸುವ ಮೂಲಕ ಎರಡು ಹೊಸ ಸ್ವತಂತ್ರ ಪ್ರಭುತ್ವಗಳನ್ನು ರಚಿಸಿತು. ಅವುಗಳೇ ಭಾರತ ಮತ್ತು ಪಾಕಿಸ್ತಾನ. ಕಾಯಿದೆ ಹೇಳುವ ಪ್ರಕಾರ, “ಸಾವಿರದ ಒಂಬೈನೂರ ನಲವತ್ತೇಳರ ಆಗಸ್ಟ್ ಹದಿನೈದರಂದು ಭಾರತದಲ್ಲಿ ಎರಡು ಸ್ವತಂತ್ರ ಪ್ರಭುತ್ವಗಳನ್ನು ಸ್ಥಾಪಿಸಲಾಗುವುದು, ಇದನ್ನು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಎಂದು ಕರೆಯಲಾಗುತ್ತದೆ.”

ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರು ತಮ್ಮ ಐತಿಹಾಸಿಕ ರೇಡಿಯೊ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. “ಆಗಸ್ಟ್ 15ರಂದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾದ ಪಾಕಿಸ್ತಾನದ ಜನ್ಮದಿನವಾಗಿದೆ. ಮುಸ್ಲಿಂ ರಾಷ್ಟ್ರವು ತನ್ನ ತಾಯ್ನಾಡನ್ನು ಹೊಂದಲು ಕಳೆದ ಕೆಲವು ವರ್ಷಗಳಲ್ಲಿ ಮಾಡಿದ ತ್ಯಾಗ ಹಾಗೂ ಬಲಿದಾನದ ಪ್ರತೀಕವೇ ಈ ಸ್ವತಂತ್ರ ದೇಶದ ಉದಯ” ಎಂದು ಅವರು ಹೇಳಿದ್ದರು.

ಬ್ರಿಟಿಷರ ದಾಸ್ಯತೆಯ ಸಂಕೋಲೆಗಳನ್ನು ಕಿತ್ತು ಹಾಕಿ ಭಾರತವು ಸ್ವಾತಂತ್ರ್ಯ ಪಡೆದ ಅದೇ ದಿನದಂದು ಪಾಕಿಸ್ತಾನ ಕೂಡಾ ಅಸ್ತಿತ್ವಕ್ಕೆ ಬಂದಿತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಭಾರತಕ್ಕಿಂದ ಒಂದು ದಿನ ಮುಂಚಿತವಾಗಿ ಆಗಸ್ಟ್ 14ರಂದು ಆಚರಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನೋಡೋಣ.

ಈ ಪ್ರಶ್ನೆಗೆ ಹಲವಾರು ಸಿದ್ಧಾಂತಗಳು ಉತ್ತರ ನೀಡಿವೆ. ಅವುಗಳನ್ನು ನೋಡುತ್ತಾ ಹೋಗೋಣ.

ಒಂದು ಸಿದ್ಧಾಂತದ ಪ್ರಕಾರ, ಬ್ರಿಟಿಷ್ ಇಂಡಿಯಾದ ಕೊನೆಯ ವೈಸ್‌ರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಲಾರ್ಡ್ ಮೌಂಟ್‌ಬ್ಯಾಟನ್‌ನ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಉಭಯ ರಾಷ್ಟ್ರಗಳ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಒಂದು ದಿನದ ವ್ಯತ್ಯಾಸಗಳಿವೆ. ಆರಂಭದಲ್ಲಿ ಅಧಿಕಾರ ಪಾಕಿಸ್ತಾನಕ್ಕೆ ವರ್ಗಾವಣೆಯನ್ನು 1948ರ ಜೂನ್ ತಿಂಗಳಿಗಿಂತ ಮೊದಲು ಮಾಡುವುದಾಗಿ ಯೋಜಿಸಲಾಗಿತ್ತು. ಆದರೆ ಉಭಯ ದೇಶಗಳಿಗೆ ಸ್ವಾತಂತ್ರ್ಯ ದಿನವನ್ನು ಘೋಷಿಸುವ ಮೌಂಟ್‌ಬ್ಯಾಟನ್‌ನ ಯೋಜನೆಯು ವೇಗ ಪಡೆಯಿತು. 1947ರ ಆಗಸ್ಟ್ 14ರಂದು ಪಾಕಿಸ್ತಾನಕ್ಕೆ ಆಡಳಿತದ ಅಧಿಕಾರವನ್ನು ಹಸ್ತಾಂತರಿಸಲು ಕರಾಚಿಗೆ ತೆರಳಿದ ಮೌಂಟ್‌ಬ್ಯಾಟನ್‌, ಅಲ್ಲಿ ಮಹಮ್ಮದ್ ಅಲಿ ಜಿನ್ನಾಗೆ ಅಧಿಕಾರ ವರ್ಗಾಯಿಸಿದನು. ಹೀಗಾಗಿ ಆಡಳಿತ ಅಧಿಕಾರ ಸಿಕ್ಕಿದ ದಿನವನ್ನೇ ಸ್ವಾತಂತ್ರ್ಯ ದಿನವೆಂದು ಪಾಕಿಸ್ತಾನದಲ್ಲಿ ಆಚರಿಸಲಾಗುತ್ತಿದೆ.

ಸಂಪುಟದ ನಿರ್ಧಾರ

ಮತ್ತೊಂದು ಸಿದ್ಧಾಂತವು ಸಂಪುಟದ ನಿರ್ಧಾರಕ್ಕೆ ಸಂಬಂಧಿಸಿದೆ. 1948ರ ಜೂನ್ ತಿಂಗಳಲ್ಲಿ ಪಾಕಿಸ್ತಾನದ ಪ್ರಥಮ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಭಾರತಕ್ಕಿಂತ ಮೊದಲು ಪಾಕಿಸ್ತಾನವು ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರಸ್ತಾಪಿಸಲಾಯಿತು. ಪ್ರಸ್ತಾವನೆಯನ್ನು ಜಿನ್ನಾ ಅವರು ಅನುಮೋದಿಸಿದರು. ಹೀಗಾಗಿ ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯ್ತು.

ರಂಜಾನ್‌ ತಿಂಗಳು

ಮುಸ್ಲಿಮರ ಧಾರ್ಮಿಕ ತಿಂಗಳು ರಂಜಾನ್ ಕೂಡ ಒಂದು ಇದಕ್ಕೆ ಒಂದು ಕಾರಣವೆಂದು ಉಲ್ಲೇಖಿಸಲಾಗಿದೆ. ಕೆಲವು ಪ್ರತಿಪಾದಕರ ಪ್ರಕಾರ 1947ರ ಆಗಸ್ಟ್ 14 ಮತ್ತು 15ರ ಮಧ್ಯರಾತ್ರಿಯು ರಂಜಾನ್‌ನ 27ನೇ ದಿನವೆಂದು ಹೇಳಲಾಗಿದೆ. ಇದನ್ನು ಪವಿತ್ರ ತಿಂಗಳ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಆಗಸ್ಟ್ 14ರಂದೇ ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತಿದೆ.

ಭಾರತಕ್ಕಿಂತ ಪಾಕಿಸ್ತಾನದ ಸಮಯ ಅರ್ಧ ಗಂಟೆ ಮುಂದಿದೆ

ಮತ್ತೊಂದೆಡೆ ಭಾರತೀಯ ಪ್ರಮಾಣಿತ ಸಮಯ (IST)ವು ಪಾಕಿಸ್ತಾನದ ಪ್ರಮಾಣಿತ ಸಮಯಕ್ಕಿಂತ (PST) 30 ನಿಮಿಷಗಳಷ್ಟು ಮುಂದಿರುವುದು ಕೂಡ ಒಂದು ಕಾರಣವೆಂದು ಉಲ್ಲೇಖಿಸಲಾಗಿದೆ. ಭಾರತವು ಆಗಸ್ಟ್ 15ರಂದು 00:00(ಮಧ್ಯರಾತ್ರಿ 12) ಗಂಟೆಗೆ ಸ್ವತಂತ್ರ ರಾಷ್ಟ್ರವಾದ ಸಮಯದಲ್ಲಿ, ಪಾಕಿಸ್ತಾನದ ಸಮಯವು ಆಗಸ್ಟ್ 14ರಂದು ರಾತ್ರಿ 11:30 ಆಗಿತ್ತು. ಹೀಗಾಗಿ ಒಂದು ದಿನ ಮುಂಚಿತವಾಗಿ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನು ಆವರಿಸಲಾಗುತ್ತಿದೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.