ಇಂಡಿಯಾ ಜಸ್ಟಿಸ್ ರಿಪೋರ್ಟ್ 2025: ಪೊಲೀಸ್‌ ಮತ್ತು ನ್ಯಾಯಾಂಗ ಸಂಬಂಧಿಸಿದ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂಬರ್ 1, ವರದಿಯ 11 ಮುಖ್ಯಾಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂಡಿಯಾ ಜಸ್ಟಿಸ್ ರಿಪೋರ್ಟ್ 2025: ಪೊಲೀಸ್‌ ಮತ್ತು ನ್ಯಾಯಾಂಗ ಸಂಬಂಧಿಸಿದ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂಬರ್ 1, ವರದಿಯ 11 ಮುಖ್ಯಾಂಶಗಳು

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025: ಪೊಲೀಸ್‌ ಮತ್ತು ನ್ಯಾಯಾಂಗ ಸಂಬಂಧಿಸಿದ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂಬರ್ 1, ವರದಿಯ 11 ಮುಖ್ಯಾಂಶಗಳು

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025 ಇಂದು ಬಿಡುಗಡೆಯಾಗಿದ್ದು, ಪೊಲೀಸ್‌ ಮತ್ತು ನ್ಯಾಯಾಂಗ ಸುಧಾರಣೆಗೆ ಸಂಬಂಧಿಸಿದ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದೆ. ಈ ವರದಿಯ 11 ಮುಖ್ಯ ಅಂಶಗಳ ವಿವರ ಹೀಗಿದೆ.

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025 ಇಂದು ಬಿಡುಗಡೆಯಾಗಿದ್ದು, ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಕಾಪಾಡಿಕೊಂಡಿದೆ.
ಇಂಡಿಯಾ ಜಸ್ಟಿಸ್ ರಿಪೋರ್ಟ್ 2025 ಇಂದು ಬಿಡುಗಡೆಯಾಗಿದ್ದು, ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಕಾಪಾಡಿಕೊಂಡಿದೆ.

ಬೆಂಗಳೂರು: ಇಂಡಿಯಾ ಜಸ್ಟಿಸ್ ರಿಪೋರ್ಟ್ 2025 ಇಂದು (ಏಪ್ರಿಲ್ 15) ಬಿಡುಗಡೆಯಾಗಿದ್ದು, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಸಂಬಂಧಿಸಿದಂತೆ 18 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಮೀಸಲು ಕೋಟಾ ಪೂರೈಸಿದ ರಾಜ್ಯವಾಗಿ ಕರ್ನಾಟಕ ಗಮನಸೆಳೆದಿದೆ. ಇನ್ನುಳಿದಂತೆ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡುಗಳು ನಂತರದ ಸ್ಥಾನದಲ್ಲಿವೆ. ಕರ್ನಾಟಕ ಕಳೆದ ಬಾರಿಯೂ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲೇ ಇತ್ತು.

ಪೊಲೀಸ್‌, ನ್ಯಾಯಾಂಗ ಸುಧಾರಣೆ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ನಂ 1

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025ರ ಪ್ರಕಾರ, 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ(ತಲಾ ಒಂದು ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ) ಕರ್ನಾಟಕಕ್ಕೆ 1ನೆ ಶ್ರೇಯಾಂಕ ನೀಡಿದ್ದು, ಕರ್ನಾಟಕವು ಹಿಂದಿನ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಾನೂನು ನೆರವಿನಲ್ಲೂ ನಮ್ಮ ರಾಜ್ಯಕ್ಕೆ 1ನೇ ಶ್ರೇಯಾಂಕ ದೊರಕಿದ್ದು (2022ರಲ್ಲಿದ್ದ 2ನೆ ಸ್ಥಾನದಿಂದ ಬಡ್ತಿ) ಸೆರೆಮನೆಗಳ ಸುಧಾರಣೆಯಲ್ಲೂ ತನ್ನ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿದೆ.

ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ, ಕರ್ನಾಟಕದ ನಂತರ ಆಂಧ್ರಪ್ರದೇಶ ಬಂದಿದ್ದು, 2022ದಲ್ಲಿದ್ದ ಐದನೇ ಸ್ಥಾನದಿಂದ ಎರಡಕ್ಕೆ ಬಂದಿದ್ದರೆ, ತೆಲಂಗಾಣ (2022 ಶ್ರೇಯಾಂಕ: 3), ಮತ್ತು ಕೇರಳ (2022 ಶ್ರೇಯಾಂಕ: 6). ಸಿಕ್ಕಿಂ (2022ರಲ್ಲಿ 1), ಏಳು ಸಣ್ಣ ರಾಜ್ಯಗಳ (ತಲಾ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳು) ಪೈಕಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಹಿಮಾಚಲ ಪ್ರದೇಶ (2022ರಲ್ಲಿ 6) ಮತ್ತು ಅರುಣಾಚಲಪ್ರದೇಶ (2022ರಲ್ಲಿ 2)ನೆ ಸ್ಥಾನಗಳಲ್ಲಿವೆ.

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025ರ 11 ಮುಖ್ಯ ಅಂಶಗಳಿವು

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025ರಲ್ಲಿ ಗಮನಿಸಬೇಕಾದ ಹಲವು ಅಂಶಗಳಿದ್ದು ಈ ಪೈಕಿ 11 ಮುಖ್ಯ ಅಂಶಗಳಿ ಹೀಗಿವೆ.

ಬಿಹಾರದ ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:

1) ರಾಜ್ಯಗಳ ಒಟ್ಟಾರೆ ಶ್ರೇಯಾಂಕದಲ್ಲಿ ಬಿಹಾರ 13ನೇ ಸ್ಥಾನದಿಂದ 3 ಸ್ಥಾನ ಮೇಲಕ್ಕೇರಿದೆ. ಪೊಲೀಸ್‌ ಶ್ರೇಯಾಂಕದಲ್ಲಿ ಸುಧಾರಣೆ ಇದ್ದು, ಬಿಹಾರ 16ನೇ ಸ್ಥಾನದಿಂದ 10ನೆ ಸ್ಥಾನಕ್ಕೆ ಏರಿದೆ. ಇನ್ನು ಕಾನೂನು ನೆರವಿನಲ್ಲಿ ಸುಧಾರಿತ ಶ್ರೇಯಾಂಕದಲ್ಲಿ ಬಿಹಾರ 16ನೇ ಸ್ಥಾನದಿಂದ 12ನೆ ಸ್ಥಾನಕ್ಕೆ ಬಂದಿದೆ.

ಸತತ ಲೋಪದೋಷಗಳು:

2) ಪೋಲಿಸ್ ಮತ್ತು ನ್ಯಾಯಾಂಗದಲ್ಲಿ ಬಿಹಾರ ಅತಿಕಡಿಮೆ ತಲಾವಾರು ವ್ಯಯ ಕಂಡಿದೆ.ಜಿಲ್ಲಾ ನ್ಯಾಯಾಲಯಗಳಲ್ಲಿ 71% ಕೇಸ್‌ಗಳು 3 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಬಾಕಿ ಇದ್ದು, ದೇಶದಲ್ಲಿ ಇದು ಅತ್ಯಧಿಕವಾಗಿದೆ

ಕರ್ನಾಟಕದ ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:

3) ಕರ್ನಾಟಕದಲ್ಲಿ ಅಧಿಕಾರಿ ಮಟ್ಟದ ಖಾಲಿ ಸ್ಥಾನಗಳು ಶೇಕಡ 1.2 ಮಾತ್ರ. ಇದು ಎಲ್ಲ ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕನಿಷ್ಠ ಪ್ರಮಾಣ.

4) ಪೊಲೀಸ್ ಮತ್ತು ನ್ಯಾಯಾಂಗ ಎರಡರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡ ಮತ್ತು ಒಬಿಸಿ ಮೀಸಲು ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ ಕರ್ನಾಟಕ. ಅದೇ ರೀತಿ, ಅತ್ಯಧಿಕ ಸಂಖ್ಯೆಯ ಪ್ಯಾರಾಲೀಗಲ್ ಸ್ವಯಂಸೇವಕರು ಇರುವಂತಹ ರಾಜ್ಯವೂ ಕರ್ನಾಟಕ

ಸತತ ಲೋಪದೋಷಗಳು:

5) ಕರ್ನಾಟಕದಲ್ಲಿ 2015 ರಿಂದೀಚೆಗೆ ಶೇಕಡ 80ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು ಸೆರೆಮನೆವಾಸಿಗಳಾಗಿದ್ದಾರೆ.

6) ಕಾನೂನು ಸೇವಾ ಕೇಂದ್ರಗಳು ಗ್ರಾಮ ಮಟ್ಟದಲ್ಲಿ 157 ಇದ್ದದ್ದು ಈಗ 32ಕ್ಕೆ ಇಳಿಕೆಯಾಗಿದೆ.

7) ಕರ್ನಾಟಕ ಪೋಲಿಸ್ ಇನ್ನೂ ಕೂಡ ಪುರುಷ ಪ್ರಧಾನವಾಗಿಯೇ ಇದ್ದು, ಪೋಲಿಸ್‌ನಲ್ಲಿ ಕೇವಲ ಸ ರಿಸುಮಾರು 9% ಮಹಿಳೆಯರು ಮತ್ತು ಅಧಿಕಾರಿ ಮಟ್ಟದಲ್ಲಿ ಅತ್ಯಲ್ಪ ಶೇ 6 ಮಹಿಳೆಯರಷ್ಟೇ ಇದ್ದಾರೆ.

ರಾಷ್ಟ್ರಮಟ್ಟದ ಕೆಲವು ಸುಧಾರಣೆಗಳು

8) ಭಾರತದ ಒಟ್ಟು ಪೊಲೀಸ್ ಠಾಣೆಗಳ ಪೈಕಿ ಶೇ 78ರಲ್ಲಿ ಮಹಿಳಾ ಸಹಾಯ ಘಟಕವಿದೆ. ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಸಂಖ್ಯೆ ಶೇಕಡ 38 ಇದು. ಇನ್ನು ಸೆರೆಮನೆಗಳ ಪೈಕಿ ಶೇಕಡ 86ರಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವಿದೆ.

9) 2019 ಮತ್ತು 2023 ನಡುವೆ ಕಾನೂನು ನೆರವಿನ ಮೇಲಿನ ತಲಾವಾರು ವೆಚ್ಚ ಹೆಚ್ಚುಕ ಡಿಮೆ ದ್ವಿಗುಣಗೊಂಡು 6.46 ರೂಪಾಯಿ ತಲುಪಿದೆ.

ರಾಷ್ಟ್ರಮಟ್ಟದಲ್ಲಿ ಕಂಡುಬಂದ ಸತತ ಲೋಪಗಳು:

10) ಒಂದೇ ಒಂದು ರಾಜ್ಯ/ಕೇಂದ್ರಾಡಳಿತ ಪ್ರದೇಶ ಕೂಡ ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲು ಕೋಟಾ ಪೂರೈಸಿಲ್ಲ. ಪೊಲೀಸ್‌ ಪಡೆಯೊಳಗೇ, ಎಸ್‌ಟಿ(ಪರಿಶಿಷ್ಟ ವರ್ಗದ ಪಾಲು 12% ಆಗಿದ್ದರೆ ಎಸ್‌ಸಿ(ಪರಿಶಿಷ್ಟ ಜಾತಿ)ಯ ಪಾಲು 17% ಕಂಡುಬಂದಿದೆ.

11) ಜಿಲ್ಲಾ ನ್ಯಾಯಾಂಗದೊಳಗೆ, ಎಸ್‌ಟಿ(ಪರಿಶಿಷ್ಟ ವರ್ಗ)ದ ಪಾಲು 5% ಆಗಿದ್ದರೆ ಎಸ್‌ಸಿ(ಪರಿಶಿಷ್ಟ ಜಾತಿ)ಯ ಪಾಲು 14% ಇದ್ದು, ಪ್ಯಾರಾಲೀಗಲ್ ಸ್ವಯಂಸೇವಕರ ಸಂಖ್ಯೆ ದಾಖಲೆಯ ಅಂದರೆ, ಕಳೆದ ಐದು ವರ್ಷಗಳಲ್ಲಿ ಶೇಕಡ 38ಕ್ಕೆ ಇಳಿದಿದೆ. ಇದೇ ರೀತಿ, ರಾಷ್ಟ್ರವ್ಯಾಪಿಯಾಗಿ ಇರುವ ಸೆರೆಮನೆಗಳಾದ್ಯಂತ ಕೇವಲ 25 ಮಾನಸಿಕ ಆರೋಗ್ಯ ತಜ್ಞರು/ಮನೋವೈದ್ಯರು ಇದ್ದಾರೆ.

ಟಾಟಾ ಟ್ರಸ್ಟ್‌ ಇಂಡಿಯಾ ಜಸ್ಟಿಸ್ ರಿಪೊರ್ಟ್(IJR) ಅನ್ನು ಶುರುಮಾಡಿದ್ದು, ಮೊದಲ ಆವೃತ್ತಿಯನ್ನು 2019ರಲ್ಲಿ ಪ್ರಕಟಿಸಲಾಗಿತ್ತು. ಇದು ನಾಲ್ಕನೇ ಆವೃತ್ತಿಯ ವರದಿಯಾಗಿದ್ದು, ಸಾಮಾಜಿಕ ನ್ಯಾಯ ಕೇಂದ್ರ, ಕಾಮನ್ ಕಾಸ್, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್‌, ದಕ್ಷ್, ಟಿಸ್ ಪ್ರಯಾಸ್‌, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಐಜೆಆರ್‌’ನ ಡೇಟಾ ಭಾಗೀದಾರನಾದ ಹೌ ಇಂಡಿಯಾ ಲಿವ್ಸ್ (How India Lives)ನ ಸಹಯೋಗವೂ ಇದರಲ್ಲಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.