ಪಿಎಂ-ಕಿಸಾನ್ 18ನೇ ಕಂತು ಇಂದು ಬಿಡುಗಡೆ; ಅರ್ಹತೆ ಮತ್ತು ಇ-ಕೆವೈಸಿ ಪ್ರಕ್ರಿಯೆ ಪರಿಶೀಲಿಸಿ, ಇಲ್ಲಿದೆ ವಿವರ
PM-KISAN Scheme: ಪಿಎಂ-ಕಿಸಾನ್ ಯೋಜನೆಯ 18ನೇ ಕಂತು ಇಂದು ಬಿಡುಗಡೆಯಾಗಲಿದೆ. ದೇಶಾದ್ಯಂತ 9.5 ಕೋಟಿಗೂ ಹೆಚ್ಚು ರೈತರಿಗೆ 2,000 ರೂಪಾಯಿಗಳನ್ನು ವರ್ಗಾಯಿಸಲು 20,000 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ.

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 18ನೇ ಕಂತಿನ ಹಣವನ್ನು ಇಂದು (ಅಕ್ಟೋಬರ್ 05, 2024) ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ದೇಶಾದ್ಯಂತ 9.5 ಕೋಟಿಗೂ ಹೆಚ್ಚು ರೈತರಿಗೆ 2,000 ರೂಪಾಯಿಗಳನ್ನು ವರ್ಗಾಯಿಸಲು 20,000 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಬಂದ 17ನೇ ಕಂತು ಜೂನ್ 18 ರಂದು ವಿತರಿಸಲಾಯಿತು. ಸುಮಾರು 9.25 ಕೋಟಿ ರೈತರಿಗೆ 2,000 ರೂಪಾಯಿಗಳ ಮೊತ್ತ ಜಮೆಯಾಗಿತ್ತು. ಈ ಯೋಜನೆಯಡಿಯಲ್ಲಿ ವರ್ಷಕ್ಕೆ 3 ಕಂತುಗಳಂತೆ ರೈತರು ಒಟ್ಟು 6 ಸಾವಿರ ಪಡೆಯುತ್ತಾರೆ. ಕೇವಲ ಎರಡು ಹೆಕ್ಟೇರ್ ವರೆಗೆ ಭೂಮಿಯನ್ನು ಹೊಂದಿರುವವರು ಅರ್ಹ ರೈತರು.
ಪಿಎಂ-ಕಿಸಾನ್ ಯೋಜನೆಗೆ ಅರ್ಹತೆ ಪರಿಶೀಲಿಸುವುದು ಹೇಗೆ?
- ಅಧಿಕೃತ ಪಿಎಂ-ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ.
- ಫಲಾನುಭವಿ ಪಟ್ಟಿ ಪುಟಕ್ಕೆ ನ್ಯಾವಿಗೇಟ್ ಮಾಡಿ.
- ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
- ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗಿದೆಯೇ ಎಂದು ನೋಡಲು 'Get Report' ಮೇಲೆ ಕ್ಲಿಕ್ ಮಾಡಿ.
ಇದಲ್ಲದೆ, ಫಲಾನುಭವಿಗಳ ಪಟ್ಟಿಯನ್ನು ಸ್ಥಳೀಯ ಪಂಚಾಯಿತಿಗಳಲ್ಲಿಯೂ ಪ್ರದರ್ಶಿಸಲಾಗುತ್ತದೆ.
ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ?
ಇ-ಕೆವೈಸಿ ಪೂರ್ಣಗೊಳಿಸಲು ಒಟ್ಟು 3 ಮಾರ್ಗಗಳಿವೆ. ಇದನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.
ಒಟಿಪಿ ಆಧಾರಿತ ಇ-ಕೆವೈಸಿ
ಒಟಿಪಿ ಆಧಾರಿತ ಇ-ಕೆವೈಸಿಯನ್ನು ಕಾರ್ಯಗತಗೊಳಿಸಲು ರೈತರು ಸಕ್ರಿಯ ಆಧಾರ್-ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.
- ಪಿಎಂ-ಕಿಸಾನ್ ಪೋರ್ಟಲ್ ಓಪನ್ ಮಾಡಿ.
- ವೆಬ್ಸೈಟ್ನಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಒಟಿಪಿ ಸಲ್ಲಿಸಿದ ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಮತ್ತು ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿ.
ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ
ಬಯೋಮೆಟ್ರಿಕ್ ಇ-ಕೆವೈಸಿ ದೇಶಾದ್ಯಂತ 4 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಮತ್ತು ವಿವಿಧ ರಾಜ್ಯ ಸೇವಾ ಕೇಂದ್ರಗಳಲ್ಲಿ (ಎಸ್ಎಸ್ಕೆ) ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಬಹುದು.
- ನಿಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಹತ್ತಿರದ ಸಿಎಸ್ಸಿ/ಎಸ್ಎಸ್ಕೆಗೆ ಭೇಟಿ ನೀಡಿ
- ಆಧಾರ್ ಆಧಾರಿತ ಪರಿಶೀಲನೆಯನ್ನು ಬಳಸಿಕೊಂಡು ಬಯೋಮೆಟ್ರಿಕ್ ದೃಢೀಕರಣವನ್ನು ನಿರ್ವಹಿಸಲು ಸಿಎಸ್ಸಿ/ಎಸ್ಎಸ್ಕೆ ಆಪರೇಟರ್ ಸಹಾಯ ಮಾಡುತ್ತಾರೆ.
- ಇ-ಕೆವೈಸಿಗೆ ಪಾವತಿಸಬೇಕಾದ ಶುಲ್ಕ 15 ರೂಪಾಯಿ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣ ದರ ಶೇ 15-25ರಷ್ಟು ಏರಿಕೆ ಸಂಭವ; ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ!
ಫೇಸ್ ದೃಢೀಕರಣದ ಮೂಲಕ ಇ-ಕೆವೈಸಿ
ತಮ್ಮ ಮೊಬೈಲ್ ಫೋನ್ ಮುಖಾಂತರವೇ ಇ-ಕೆವೈಸಿ ಮಾಡಬಹುದು.
- ಗೂಗಲ್ ಪ್ಲೇ ಸ್ಟೋರ್ನಿಂದ ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮತ್ತು ಆಧಾರ್ ಫೇಸ್ ಆರ್ಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
- ಅಪ್ಲಿಕೇಶನ್ ತೆರೆಯಿರಿ ಮತ್ತು ಪಿಎಂ-ಕಿಸಾನ್ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿ.
- ಬೆನಿಫಿಷಿಯರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ಇ-ಕೆವೈಸಿ ಸ್ಥಿತಿಯನ್ನು ಇಲ್ಲ ಎಂದು ತೋರಿಸಿದರೆ, ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಫೇಸ್ ಸ್ಕ್ಯಾನ್ ಮಾಡಿ.
- ನಿಮ್ಮ ಫೇಸ್ ಸ್ಕ್ಯಾನ್ ಮಾಡಿದ ನಂತರ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. 24 ಗಂಟೆಗಳ ನಂತರ ಫಲಾನುಭವಿಯ ಸ್ಥಿತಿಯಲ್ಲಿ ಪ್ರತಿಫಲಿಸುತ್ತದೆ.
ಇದನ್ನೂ ಓದಿ: ಮೈಸೂರು ದಸರಾದಲ್ಲಿ ಸಂಚಾರ ಕಿರಿಕಿರಿ, ಪ್ರಮುಖ ರಸ್ತೆಯಲ್ಲೇ ಅವ್ಯವಸ್ಥೆ, ವ್ಯಾಪಾರಸ್ಥರ ಆಕ್ರೋಶ: ಬದಲಾವಣೆ ಗಮನಿಸಿ
ವಿಭಾಗ