ಆಂಧ್ರದಿಂದ ಬೆಂಗಳೂರು, ಯಶವಂತಪುರಕ್ಕೆ 4 ವಿಶೇಷ ರೈಲುಗಳು, ಸಂಚಾರ ಸೇವೆ ಜುಲೈ ಕೊನೆ ತನಕ ವಿಸ್ತರಣೆ
ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿರ್ವಹಿಸುವುದಕ್ಕಾಗಿ ಭಾರತೀಯ ರೈಲ್ವೆ ಕೆಲವು ವಿಶೇಷ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಪರಿಚಯಿಸಿದೆ. ಇದರಲ್ಲಿ, ಆಂಧ್ರದಿಂದ ಬೆಂಗಳೂರು, ಯಶವಂತಪುರಕ್ಕೆ 4 ವಿಶೇಷ ರೈಲುಗಳು ಸೇರಿವೆ. ಈ ರೈಲುಗಳ ಸಂಚಾರ ಸೇವೆ ಜುಲೈ ಕೊನೆ ತನಕ ವಿಸ್ತರಣೆಯಾಗಿದೆ. ಇದರ ವಿವರ ಇಲ್ಲಿದೆ.

ಹೈದರಾಬಾದ್/ಬೆಂಗಳೂರು: ಭಾರತೀಯ ರೈಲ್ವೆಯು ಆಂಧ್ರ ಪ್ರದೇಶದಿಂದ ಬೆಂಗಳೂರು, ಯಶವಂತಪುರಕ್ಕೆ ಸಂಚರಿಸುತ್ತಿರುವ 4 ವಿಶೇಷ ರೈಲು ಸಂಚಾರ ಸೇವೆಯನ್ನು ಜುಲೈ ಕೊನೆ ತನಕ ವಿಸ್ತರಿಸಿದೆ. ಇವು ಸಾಪ್ತಾಹಿಕ ವಿಶೇಷ ರೈಲುಗಳಾಗಿದ್ದು, ಇದರ ಸಂಚಾರ ಸೇವೆಯ ಅವಧಿ ಮುಕ್ತಾಯವಾಗಿತ್ತು. ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಭಾರತೀಯ ರೈಲ್ವೆ ಈಗ ಈ ವಿಶೇಷ ರೈಲುಗಳ ಸಂಚಾರ ಸೇವೆಯನ್ನು ಜುಲೈ 28ರ ತನಕ ವಿಸ್ತರಿಸಿದೆ. ಆದ್ದರಿಂದ ಈ ವಿಶೇಷ ರೈಲುಗಳು ಇನ್ನೂ ಕೆಲವು ವಾರ ಓಡಲಿವೆ ಎಂದು ವಾಲ್ಟೇರ್ ರೈಲ್ವೆ ವಿಭಾಗ ತಿಳಿಸಿದೆ.
ಹೌರಾ ಯಶವಂತಪುರ (ರೈಲು ಸಂಖ್ಯೆ 02863/ 02864) ವಿಶೇಷ ರೈಲು
ಹೌರಾ-ಯಶವಂತಪುರ (02863) ಜುಲೈ 4, 11, 18, 25 ರಂದು ಸಾಪ್ತಾಹಿಕ ವಿಶೇಷ ಸಂಚಾರ ನಡೆಸಲಿದೆ. ಅಂದರೆ ಈ ರೈಲು ಪ್ರತಿ ಗುರುವಾರ ಹೌರಾದಿಂದ ಹೊರಡುತ್ತದೆ. ನಿಗದಿತ ವೇಳಾಪಟ್ಟಿ ಪ್ರಕಾರ, ಮುಂದಿನ ನಾಲ್ಕುವಾರಗಳ ಕಾಲ ಪ್ರತಿ ಗುರುವಾರ ಮಧ್ಯಾಹ್ನ 12:40 ಕ್ಕೆ ಹೌರಾದಿಂದ (ಪಶ್ಚಿಮ ಬಂಗಾಳ) ನಿರ್ಗಮಿಸುತ್ತದೆ ಮತ್ತು ಮರುದಿನ (ಶುಕ್ರವಾರ) 2:43 AM ಕ್ಕೆ ದುವ್ವಾಡ (ವಿಶಾಖಪಟ್ಟಣಂ) ತಲುಪುತ್ತದೆ. ಅದೇ ದಿನ ಮಧ್ಯರಾತ್ರಿ 12:15 ಕ್ಕೆ ಯಶವಂತಪುರ (ಕರ್ನಾಟಕ) ತಲುಪುತ್ತದೆ.
ಯಶವಂತಪುರ-ಹೌರಾ (02864) ಸಾಪ್ತಾಹಿಕ ವಿಶೇಷ ರೈಲು ಜುಲೈ 6, 13, 20, 27 ರಂದು ಚಲಿಸುತ್ತದೆ. ಅಂದರೆ ಈ ರೈಲು ಪ್ರತಿ ಶನಿವಾರ ಸಂಚಾರ ಯಶವಂತಪುರದಿಂದ ಶುರುವಾಗುತ್ತದೆ. ಕರ್ನಾಟಕದ ಯಶವಂತಪುರದಿಂದ ಪ್ರತಿ ಶನಿವಾರ ಮುಂಜಾನೆ 5 ಗಂಟೆಗೆ ಹೊರಟು ಅದೇ ದಿನ ರಾತ್ರಿ 11:05 ಗಂಟೆಗೆ ದುವ್ವಾಡ (ವಿಶಾಖಪಟ್ಟಣ) ತಲುಪುತ್ತದೆ. ಇದು ಮರುದಿನ ಭಾನುವಾರ ಮಧ್ಯಾಹ್ನ 1:25 ಕ್ಕೆ ಹೌರಾ (ಪಶ್ಚಿಮ ಬಂಗಾಳ) ತಲುಪುತ್ತದೆ.
ಈ ಹೌರಾ-ಯಶವಂತಪುರ-ಹೌರಾ ರೈಲುಗಳು ಎರಡು ಸೆಕೆಂಡ್ ಎಸಿ, ಎಂಟು ಥರ್ಡ್ ಎಸಿ ಎಕಾನಮಿ, ನಾಲ್ಕು ಸ್ಲೀಪರ್, ನಾಲ್ಕು ಜನರಲ್, ಒಂದು ಸೆಕೆಂಡ್ ಕ್ಲಾಸ್ ಕಮ್ ಲಗೇಜ್, ಅಂಗವಿಕಲರು, ಮಹಿಳೆಯರು ಮತ್ತು ಒಂದು ಮೋಟಾರು ಕಾರ್ ಕೋಚ್‌ಗಳನ್ನು ಹೊಂದಿರುತ್ತದೆ.
ಸಂತ್ರಗಚ್ಚಿ -ಎಸ್‌ಎಂವಿ ಬೆಂಗಳೂರು (ರೈಲು ಸಂಖ್ಯೆ (08845/ (08846) ವಿಶೇಷ ರೈಲು
ಸಂತ್ರಗಚ್ಚಿ-ಎಸ್‌ಎಂವಿ ಬೆಂಗಳೂರು (08845) ಸಾಪ್ತಾಹಿಕ ವಿಶೇಷ ರೈಲು (ವಾರದ ವಿಶೇಷ ರೈಲು) ಜುಲೈ 5, 12, 19, 26 ರಂದು ಲಭ್ಯವಿರುತ್ತದೆ. ಈ ರೈಲು ಪ್ರತಿ ಶುಕ್ರವಾರ ಚಲಿಸುತ್ತದೆ. ಈ ರೈಲು ಸಂಜೆ 7 ಗಂಟೆಗೆ ಸಂತ್ರಗಚ್ಚಿಯಿಂದ ಹೊರಡುತ್ತದೆ. ಮರುದಿನ (ಶನಿವಾರ) ಬೆಳಗ್ಗೆ 9 ಗಂಟೆಗೆ ದುವ್ವಾಡ (ವಿಶಾಖಪಟ್ಟಣ) ತಲುಪಲಿದೆ. ಮರುದಿನ (ಭಾನುವಾರ) 2 ಗಂಟೆಗೆ ಎಸ್‌ಎಂವಿ ಬೆಂಗಳೂರು ತಲುಪಲಿದೆ.
ಹಿಂದಿರುಗುವ ಪ್ರಯಾಣದಲ್ಲಿ, ಎಸ್ಎಂವಿ ಬೆಂಗಳೂರು-ಸಂತ್ರಗಚಿ (08846) ಸಾಪ್ತಾಹಿಕ ವಿಶೇಷ ರೈಲು ಜುಲೈ 7, 14, 21, 28 ರಂದು ಚಲಿಸುತ್ತದೆ. ಅಂದರೆ ಈ ರೈಲು ಪ್ರತಿ ಭಾನುವಾರ ಲಭ್ಯವಿರುತ್ತದೆ. ಈ ರೈಲು ಎಸ್‌ಎಂವಿ ಬೆಂಗಳೂರಿನಿಂದ ಬೆಳಗಿನ ಜಾವ 3:15 ಕ್ಕೆ ಹೊರಡುತ್ತದೆ. ಅದೇ ದಿನ ಭಾನುವಾರ ರಾತ್ರಿ 8:55 ಗಂಟೆಗೆ ದುವ್ವಾಡ (ವಿಶಾಖಪಟ್ಟಣ) ತಲುಪಲಿದೆ. ಮರುದಿನ (ಸೋಮವಾರ) ಬೆಳಗ್ಗೆ 10:45ಕ್ಕೆ ಸಂತ್ರಗಚಿ ತಲುಪಲಿದೆ. ಸಂತ್ರಗಚ್ಚಿ-ಎಸ್‌ಎಂವಿ ಬೆಂಗಳೂರು-ಸಂತ್ರಗಚ್ಚಿ ರೈಲುಗಳು 19 ಸಾಮಾನ್ಯ, ಒಂದು ಎರಡನೇ ದರ್ಜೆಯ ಕಮ್ ಲಗೇಜ್, ಅಂಗವಿಕಲರು, ಮಹಿಳಾ ಮತ್ತು ಒಂದು ಮೋಟಾರು ಕಾರ್ ಕೋಚ್‌ಗಳಿವೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
