Mohit Pandey: ಯಾರು ಈ ಮೋಹಿತ್‌ ಪಾಂಡೆ? ಅಯೋಧ್ಯೆ ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾದ ಗಜಿಯಾಬಾದ್‌ ವಿದ್ಯಾರ್ಥಿಯ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mohit Pandey: ಯಾರು ಈ ಮೋಹಿತ್‌ ಪಾಂಡೆ? ಅಯೋಧ್ಯೆ ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾದ ಗಜಿಯಾಬಾದ್‌ ವಿದ್ಯಾರ್ಥಿಯ ಪರಿಚಯ ಇಲ್ಲಿದೆ

Mohit Pandey: ಯಾರು ಈ ಮೋಹಿತ್‌ ಪಾಂಡೆ? ಅಯೋಧ್ಯೆ ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾದ ಗಜಿಯಾಬಾದ್‌ ವಿದ್ಯಾರ್ಥಿಯ ಪರಿಚಯ ಇಲ್ಲಿದೆ

Ayodhya Ram Temple Priest: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜಾಗಿದ್ದು, 2024ರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಈ ನಡುವೆ ಮೋಹಿತ್‌ ಪಾಂಡೆ ಎನ್ನುವ ವಿದ್ಯಾರ್ಥಿಯ ಹೆಸರು ಎಲ್ಲೆಡೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಇವರು ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿರುವುದು. ಹಾಗಾದರೆ ಯಾರು ಈ ಮೋಹಿತ್‌ ಪಾಂಡೆ ವಿವರ ಹೀಗಿದೆ.

ಮೋಹಿತ್‌ ಪಾಂಡೆ (ಎಡಚಿತ್ರ)
ಮೋಹಿತ್‌ ಪಾಂಡೆ (ಎಡಚಿತ್ರ)

ಉತ್ತರಪ್ರದೇಶ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ತಿಂಗಳು ಅಂದರೆ 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ಈ ನಡುವೆ ರಾಮಮಂದಿರಕ್ಕೆ ಸಂಬಂಧಿಸಿ ಮೋಹಿತ್‌ ಪಾಂಡೆ ಎಂಬ ವಿದ್ಯಾರ್ಥಿಯ ಹೆಸರು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಹಾಗಾದರೆ ಯಾರು ಈ ಮೋಹಿತ್‌ ಪಾಂಡೆ, ಅಯೋಧ್ಯೆಯ ರಾಮ ಮಂದಿರಕ್ಕೂ ಇವರಿಗೂ ಏನು ಸಂಬಂಧ? ಇಲ್ಲಿದೆ ವಿವರ.

ಮೋಹಿತ್‌ ಪಾಂಡೆ ಗಜಿಯಾಬಾದ್‌ ಮೂಲದ ವಿದ್ಯಾರ್ಥಿ. ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಮೋಹಿತ್‌ ಪಾಂಡೆ ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಅರ್ಚಕ ಸ್ಥಾನಕ್ಕೆ ಆಯ್ಕೆಯಾಗಿರುವ 50 ಮಂದಿಯಲ್ಲಿ ಇವರೂ ಇದ್ದಾರೆ. ನೇಮಕಾತಿಗೂ ಮೊದಲು ಅರ್ಚಕರಾಗುವ ಎಲ್ಲರಿಗೂ ಆರು ತಿಂಗಳಗಳು ತರಬೇತಿ ನೀಡಲಾಗುತ್ತದೆ.

ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಗಾಜಿಯಾಬಾದ್‌ನ ಶ್ರೀ ದೂಧೇಶ್ವರನಾಥ ಮಠ ದೇವಾಲಯದ ಆವರಣದಲ್ಲಿ ದೂಧೇಶ್ವರ ವೇದ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ಪ್ರಪಂಚದಾದ್ಯಂತ ಪ್ರತಿದಿನ ಪ್ರಪಂಚದಾದ್ಯಂತ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪ್ರಸ್ತುತ ಈ ವೇದ ವಿದ್ಯಾಪೀಠರದಲ್ಲಿ ಸುಮಾರು 70 ವಿದ್ಯಾರ್ಥಿಗಳು ದೇಶ ಮತ್ತು ವಿದೇಶದ ವಿವಿಧ ದೇವಾಲಯಗಳಲ್ಲಿ ಅರ್ಚಕರು ಹಾಗೂ ಆಚಾರ್ಯರಾಗಿ ಸೇವೆ ಸಲ್ಲಿಸಲು ತರಬೇತಿ ಪಡೆಯುತ್ತಿದ್ದಾರೆ.

3000 ಮಂದಿಗೆ ನಡೆದ ಸಂದರ್ಶನದಲ್ಲಿ ಆಯ್ಕೆಯಾದ್ರೂ 50 ಮಂದಿ

ಅಯೋಧ್ಯೆ ರಾಮಮಂದಿರ ಅರ್ಚಕ ಹುದ್ದೆಗೆ ಭಾರತದಾದ್ಯಂತ ಸುಮಾರು 3000 ಮಂದಿ ಸಂದರ್ಶನ ನೀಡಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 50 ಜನರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೋಹಿತ್‌ ಪಾಂಡೆ ಕೂಡ ಒಬ್ಬರು.

ಪೀಠಾದೀಶ್ವರ ಶ್ರೀ ಮಹಾಂತ್‌ ನಾರಾಯಣ ಗಿರಿ ಮಾತನಾಡಿ, ದೂಧೇಶ್ವರ ದೇವರ ಕೃಪೆಯಿಂದ ಶ್ರೀರಾಮನ ಸೇವೆಗೆ ಮೋಹಿತ್‌ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ವೇದ, ಸಂಸ್ಕಾರ ಕಲಿಸಲಾಗಿದೆ. 23 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದ್ದಾಗಿ ಈಟಿವಿ ಭಾರತ್‌ ವರದಿ ತಿಳಿಸಿದೆ.

ಸಂಸ್ಥೆಯಲ್ಲಿ ಆಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ನಿತ್ಯಾನಂದ ಅವರು ಮಾತನಾಡಿ ʼಮೋಹಿತ್‌ ಪಾಂಡೆ ಅವರು ದೂದೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ತಿರುಪತಿಯ ವೆಂಕಟೇಶ್ವರ ವೇದಿಕ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿದ್ಯಾರ್ಥಿಗಳಿಗೆ ಧರ್ಮ, ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆʼ ಎಂದಿದ್ದಾರೆ.

ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ನಿಯಮಾವಳಿಗಳು ತುಂಬಾ ಕಟ್ಟುನಿಟ್ಟಾಗಿದ್ದು, ಇಲ್ಲಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ ಎಂದರ್ಥ. ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಗಳು ಬೆಳಿಗ್ಗೆ 4:00 ಗಂಟೆಗೆ ಏಳುತ್ತಾರೆ ಮತ್ತು ರಾತ್ರಿ 10:00 ರವರೆಗೆ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ ಎಂದು ಅವರು ತಮ್ಮ ವೇದಶಾಲೆಯ ವಿವರಗಳನ್ನು ತಿಳಿಸುತ್ತಾರೆ ಮೋಹಿತ್‌ ಪಾಂಡೆಯವರ ಕುರಿತೂ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೋಹಿತ್‌ ಸದ್ದು

ಫೇಸ್‌ಬುಕ್‌ನಲ್ಲಿ ಕಿರಣ್‌ ಕೆಎಸ್‌ ಎನ್ನುವವರು ಈ ಯುವಕ 2024ರ ಜನವರಿ 22ರ ಬಳಿಕ ಭಾರಿ ಜನಪ್ರಿಯರಾಗಲಿದ್ದಾರೆ, ಯಾಕೆ ಗೊತ್ತಾ? ಎಂದು ಬರೆದುಕೊಂಡಿದ್ದರು. ಅದಕ್ಕೆ ಹಲವರು ರಾಮ ಮಂದಿರ ಅರ್ಚಕರಾಗಿ ಆಯ್ಕೆಯಾಗಿರುವ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.