ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯ ನ್ಯಾಯ ಸಂಹಿತೆ ಸೇರಿ ಭಾರತದ 3 ಹೊಸ ಅಪರಾಧ ಕಾನೂನುಗಳು ಹೇಗೆ ಭಿನ್ನ - ಇಲ್ಲಿದೆ ವಿವರಣೆ

ಭಾರತೀಯ ನ್ಯಾಯ ಸಂಹಿತೆ ಸೇರಿ ಭಾರತದ 3 ಹೊಸ ಅಪರಾಧ ಕಾನೂನುಗಳು ಹೇಗೆ ಭಿನ್ನ - ಇಲ್ಲಿದೆ ವಿವರಣೆ

ಭಾರತದ ಆಡಳಿತ ವ್ಯವಸ್ಥೆ ಹೊಸ ಮೂರು ಅಪರಾಧ ಕಾನೂನುಗಳನ್ನು ಜಾರಿಗೊಳಸುವ ಸಿದ್ದತೆಯಲ್ಲಿದೆ. ಕಳೆದ ವರ್ಷ ಸಂಸತ್ತು ಅಂಗೀಕರಿಸಿದ್ದ ಮೂರು ಮಸೂದೆಗಳಿಗೆ ಕೆಲವು ತಿಂಗಳ ಹಿಂದೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೇರಿ ಭಾರತದ ಹೊಸ 3 ಅಪರಾಧ ಕಾನೂನುಗಳು ಹೇಗೆ ಭಿನ್ನ ಎಂಬುದರ ಕಿರು ವಿವರಣೆ ಇಲ್ಲಿದೆ.

ಭಾರತೀಯ ನ್ಯಾಯ ಸಂಹಿತೆ ಸೇರಿ ಭಾರತದ ಹೊಸ 3 ಅಪರಾಧ ಕಾನೂನುಗಳು ಹೇಗೆ ಭಿನ್ನ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
ಭಾರತೀಯ ನ್ಯಾಯ ಸಂಹಿತೆ ಸೇರಿ ಭಾರತದ ಹೊಸ 3 ಅಪರಾಧ ಕಾನೂನುಗಳು ಹೇಗೆ ಭಿನ್ನ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ) (Canva)

ಭಾರತೀಯ ನ್ಯಾಯ ಸಂಹಿತಾ (Bharatiya Nyaya Sanhita) ಅಥವಾ ಬಿಎನ್‌ಎಸ್‌ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Bharatiya Nagarik Suraksha Sanhita) ಅಥವಾ ಬಿಎನ್‌ಎಸ್‌ಎಸ್‌ (BNSS), ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (Bharatiya Sakshya Adhiniyam) ಅಥವಾ ಬಿಎಸ್‌ಎ (BSA) ಎಂಬ ಹೊಸ ಮೂರು ಕ್ರಿಮಿನಲ್ ಕಾನೂನುಗಳು ಭಾರತದಲ್ಲಿ ಜುಲೈ 1 ರಿಂದ ಜಾರಿಗೆ ಬರಲಿವೆ.

ಮೂರು ಹಳೆಯ ಕಾನೂನುಗಳಾದ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಜಾಗವನ್ನು ಈ ಮೂರು ಹೊಸ ಕಾನೂನುಗಳು ತುಂಬಲಿವೆ. ಅಪರಾಧ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿದೆ. 2023ರ ಆಗಸ್ಟ್‌ನಲ್ಲಿ ನಡೆದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗಳು ಅಂಗೀಕಾರವಾಗಿದ್ದವು.

ಭಾರತೀಯ ನ್ಯಾಯ ಸಂಹಿತಾ: ದಂಡದ ಕಾನೂನು ನವೀಕರಣ

ಭಾರತೀಯ ನ್ಯಾಯ ಸಂಹಿತಾ ಅಥವಾ ಬಿಎನ್‌ಎಸ್‌ 163 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡ ಸಂಹಿತೆ (Indian Penal Code) ಅಥವಾ ಐಪಿಸಿ (IPC) 1860 ಅನ್ನು ರದ್ದುಗೊಳಿಸುತ್ತದೆ. ಬಿಎನ್‌ಎಸ್‌ನಲ್ಲಿ 358 ವಿಭಾಗಗಳಿದ್ದು, ಹಳೆಯ ಐಪಿಸಿಯ 511 ಸೆಕ್ಷನ್‌ಗಳಿಗಿಂತ ಕಡಿಮೆ ಇದೆ. ಹೊಸ ಅಪರಾಧ ಕಾನೂನು ಬಿಎನ್‌ಎಸ್‌ನಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಜೈಲು ಶಿಕ್ಷೆ ಅವಧಿ ಹೆಚ್ಚಳವಾಗಿದೆ. 83 ಅಪರಾಧಗಳ ದಂಡ ಪ್ರಮಾಣ ಹೆಚ್ಚಾಗಿದೆ. ಅದೂ ಅಲ್ಲದೆ ಕನಿಷ್ಠ ಶಿಕ್ಷೆಯನ್ನೂ ಕಡ್ಡಾಯಗೊಳಿಸಿದೆ. ವಿಶೇಷವಾಗಿ ಆರು ಅಪರಾಧಗಳಿಗೆ ಸಮುದಾಯ ಸೇವೆಯನ್ನು ಶಿಕ್ಷೆಯಾಗಿ ಪರಿಚಯಿಸಲಾಗಿದೆ. 19 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮದುವೆ ನೆಪದ ವಂಚನೆಗಳಿಗೆ 10 ವರ್ಷಗಳ ತನಕ ಜೈಲು ಶಿಕ್ಷೆ ಇದೆ. ಅದೇ ರೀತಿ, ಲೈಂಗಿಕ ಅಪರಾಧಗಳಿಗೂ ಕಠಿಣ ಸಜೆ, ದಂಡ ಎರಡೂ ಇದೆ. ಅಪಹರಣ, ಸುಲಿಗೆ, ಮತ್ತು ಕಳ್ಳಸಾಗಣೆ ಮುಂತಾದ ಸಂಘಟಿತ ಅಪರಾಧಗಳನ್ನು ಸಹ ಬಿಎನ್‌ಎಸ್‌ ಕಠಿಣವಾಗಿ ಶಿಕ್ಷಿಸುತ್ತದೆ. ಭಯೋತ್ಪಾದಕ ಚಟುವಟಿಕೆ ಮತ್ತು ಗುಂಪು ಹತ್ಯೆ, ತಾರತಮ್ಯದ ಉದ್ದೇಶಗಳ ಆಧಾರದ ಮೇಲೆ, ಮರಣ ಅಥವಾ ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ.

ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ: ಅಪರಾಧ ದಂಡ ಸಂಹಿತೆಯ ಸ್ಥಾನ ತುಂಬುವ ಹೊಸ ಕಾನೂನು

ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಅಥವಾ ಬಿಎನ್‌ಎಸ್‌ಎಸ್‌ ಎಂಬುದು 1973ರ ಸಿಆರ್‌ಪಿಸಿ ಬದಲಿಗೆ ಇರುವ ಹೊಸ ಕಾನೂನು. ಜೀವಾವಧಿ ಶಿಕ್ಷೆಗೆ ಒಳಗಾದವರನ್ನು ಹೊರತುಪಡಿಸಿ ಅಥವಾ ಬಹು ಆರೋಪಗಳನ್ನು ಎದುರಿಸುತ್ತಿರುವ ಮೊದಲ ಬಾರಿಗೆ ಅಪರಾಧಿಗಳಾದವರು ತಮ್ಮ ಶಿಕ್ಷೆಯ ಮೂರನೇ ಒಂದು ಭಾಗವನ್ನು ಪೂರೈಸಿದ ನಂತರ ಜಾಮೀನು ಪಡೆಯಬಹುದು. ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಒಳಪಡುವ ಅಪರಾಧಗಳಿಗೆ ಫೋರೆನ್ಸಿಕ್ ತನಿಖೆಗಳನ್ನು ಕಾನೂನು ಕಡ್ಡಾಯಗೊಳಿಸುತ್ತದೆ/ ಸಂಪೂರ್ಣ ಪುರಾವೆಗಳ ಸಂಗ್ರಹಣೆಯನ್ನು ಸುಗಮಗೊಳಿಸುತ್ತದೆ ಮತ್ತು ವಿಧಿವಿಜ್ಞಾನ ಸೌಲಭ್ಯಗಳಿಲ್ಲದ ರಾಜ್ಯಗಳಿಗೆ ಇತರ ಪ್ರದೇಶಗಳಲ್ಲಿರುವುದನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತದೆ.

ಭಾರತೀಯ ಸಾಕ್ಷ್ಯ ಅಧಿನಿಯಮ: ಭಾರತೀಯ ಸಾಕ್ಷ್ಯ ಕಾಯ್ದೆಯ ಹೊಸ ರೂಪ

ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ) ಎಂಬುದು ಈಗಾಗಲೇ ಚಾಲ್ತಿಯಲ್ಲಿರುವ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಿ, ವಿಶೇಷವಾಗಿ ಎಲೆಕ್ಟ್ರಾನಿಕ್ ಸಾಕ್ಷ್ಯಕ್ಕಾಗಿ ನಿರ್ಣಾಯಕ ನವೀಕರಣಗಳನ್ನು ಪರಿಚಯಿಸುತ್ತದೆ. ಇದು ಹಿಂದೆ ಅಫಿಡವಿಟ್‌ಗಳು ಮತ್ತು ಸ್ವಯಂ ಘೋಷಣೆಗಳ ಮೂಲಕ ನಿರ್ವಹಿಸುತ್ತಿದ್ದ ಎಲೆಕ್ಟ್ರಾನಿಕ್ ದಾಖಲೆಗಳ ದೃಢೀಕರಣವನ್ನು ಬಹಿರಂಗಪಡಿಸಲು ವಿಸ್ತೃತ ಸ್ವರೂಪದ ವಿವರಣೆಯ ಅವಕಾಶ ಹೊಂದಿದೆ. ಬಿಎಸ್‌ಎಯ ಪರಿಣಾಮಗಳು ಇತರ ನಾಗರಿಕ ಕಾನೂನುಗಳಿಗೆ ವಿಸ್ತರಿಸುತ್ತವೆ, ಕಾನೂನು ಪ್ರಕ್ರಿಯೆಗಳಲ್ಲಿ ಸಾಕ್ಷ್ಯದ ವಿಧಾನವನ್ನು ಆಧುನೀಕರಿಸುತ್ತವೆ.

ಹೊಸ ಅಪರಾಧ ಕಾನೂನುಗಳು vs ಹಳೆ ಅಪರಾಧ ಕಾನೂನುಗಳು

ಭಾರತದ ಹಳೆಯ ಅಪರಾಧ ಕಾನೂನುಗಳು ಪ್ರಸ್ತುತ ಸನ್ನಿವೇಶಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಭಾರತದ ಸಾಮಾಜಿಕ, ಸಾಂಸ್ಕೃತಿಕ ಚೌಕಟ್ಟಿಗೆ ಅನುಗುಣವಾದ ಹೊಸ ಅಪರಾಧ ಕಾನೂನುಗಳನ್ನು ಪರಿಚಯಿಸುವುದಾಗಿ ಭಾರತ ಸರ್ಕಾರ ಹೇಳಿಕೊಂಡಿದೆ. ಜುಲೈ 1 ರಿಂದ ಜಾರಿಗೊಳ್ಳುತ್ತಿರುವ ಮೂರು ಹೊಸ ಅಪರಾಧ ಕಾನೂನುಗಳ ಬಗ್ಗೆ ಟೀಕೆ ಮತ್ತು ಕಾಳಜಿಗಳು ವ್ಯಕ್ತವಾಗುತ್ತಿವೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊ ತರುಣಾಭ್ ಖೈತಾನ್ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಒಂದರಲ್ಲಿ, ಹೊಸಕಾನೂನುಗಳಲ್ಲಿರುವ ಹಳೆಯ ಕಾನೂನುಗಳ ಅಂಶಗಳನ್ನು ಪತ್ತೆ ಹಚ್ಚಲು ಟರ್ನಿಟಿನ್ ಆಪ್‌ ಬಳಸಿದಾಗ ಅದರಲ್ಲಿ ಭಾರತೀಯ ನ್ಯಾಯ ಸಂಹಿತೆಯಲ್ಲಿ ಭಾರತೀಯ ದಂಡ ಸಂಹಿತೆಯ ಶೇಕಡ 83 ಅಂಶಗಳು ಹಾಗೆಯೇ ಬಳಕೆಯಾಗಿವೆ. ಅದೇ ರೀತಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಶೇಕಡ 82 ಅಂಶಗಳು ಹಾಗೆಯೇ ಬಳಕೆಯಾಗಿದೆ. ಇನ್ನು, ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆಯ ಶೇಕಡ 82 ಅಂಶ ಬದಲಾವಣೆ ಇಲ್ಲದೇ ಬಳಕೆಯಾಗಿದೆ" ಎಂಬುದನ್ನು ತೋರಿಸಿರುವುದಾಗಿ ಹೇಳಿದ್ದಾರೆ.

ಇನ್ನೊಂದೆಡೆ, ಹೊಸ ಕಾನೂನುಗಳು ವಸಾಹತುಶಾಹಿ ಪರಂಪರೆಯನ್ನು ಕಿತ್ತುಹಾಕುವ ಬದಲು, ಅವರು ರಾಜ್ಯದ ನಿಯಂತ್ರಣವನ್ನು ವಿಸ್ತರಿಸುವ ಮೂಲಕ ಮತ್ತು ಅಸ್ಪಷ್ಟ ನಿಬಂಧನೆಗಳು ಮತ್ತು ವಿಶಾಲವಾದ ಪೊಲೀಸ್ ಅಧಿಕಾರಗಳನ್ನು ಉಳಿಸಿಕೊಳ್ಳುವ ಮೂಲಕ ಅದನ್ನು ಶಾಶ್ವತಗೊಳಿಸುತ್ತಾರೆ, ಹೀಗಾಗಿ ಅಪರಾಧ ನ್ಯಾಯ ಸಂಸ್ಥೆಗಳನ್ನು ಮೂಲಭೂತವಾಗಿ ಸುಧಾರಿಸಲು ವಿಫಲರಾಗಿದ್ದಾರೆ. ವಸಾಹತುಶಾಹಿ ತರ್ಕವು ಮುಂದುವರಿಯುತ್ತದೆ, ಈ ಕಾನೂನುಗಳು ಕೇವಲ ಅವುಗಳ ಪೂರ್ವವರ್ತಿಗಳ ಮರು-ಪ್ಯಾಕೇಜ್ ಮಾಡಿದ ಆವೃತ್ತಿಗಳಾಗಿವೆ ಎಂದು ಸೂಚಿಸುತ್ತದೆ. ಹೊಸ ಕಾನೂನುಗಳು ನಿಜವಾದ ಪರಿವರ್ತನೆಯ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಪ್ರೊ.ಅನುಪ್ ಸುರೇಂದ್ರನಾಥ್ ಅವರು ವಾದಿಸುತ್ತಿರುವುದಾಗಿ ನ್ಯೂಸ್ ಮೀಟರ್ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.