Bihar Heat: ಬಿಹಾರದಲ್ಲಿ ಬಿರು ಬಿಸಿಲಿಗೆ ಎರಡೇ ಗಂಟೆಯಲ್ಲಿ 16 ಮಂದಿ ಸಾವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar Heat: ಬಿಹಾರದಲ್ಲಿ ಬಿರು ಬಿಸಿಲಿಗೆ ಎರಡೇ ಗಂಟೆಯಲ್ಲಿ 16 ಮಂದಿ ಸಾವು

Bihar Heat: ಬಿಹಾರದಲ್ಲಿ ಬಿರು ಬಿಸಿಲಿಗೆ ಎರಡೇ ಗಂಟೆಯಲ್ಲಿ 16 ಮಂದಿ ಸಾವು

Hot Summer ಬಿಹಾರದಲ್ಲಿ ಗುರುವಾರ ಕಂಡು ಬಂದ ಬಿರು ಬಿಸಿಲಿಗೆ ಅಸ್ವಸ್ಥರಾದ 16 ಮಂದಿ ಮೃತಪಟ್ಟಿದ್ದಾರೆ.

ಬಿಹಾರದಲ್ಲಿ ಗುರುವಾರ ಬಿರು ಬಿಸಿಲಿಗೆ ತಲೆ ಮೇಲೆ ವೇಲ್‌ ಹೊತ್ತು ಹೊರಟ ಯುವತಿಯರು
ಬಿಹಾರದಲ್ಲಿ ಗುರುವಾರ ಬಿರು ಬಿಸಿಲಿಗೆ ತಲೆ ಮೇಲೆ ವೇಲ್‌ ಹೊತ್ತು ಹೊರಟ ಯುವತಿಯರು

ಪಾಟ್ನಾ: ಉತ್ತರ ಭಾರತ ಬಿರು ಬಿಸಿಲಿಂದ ತತ್ತರಿಸಿ ಹೋಗಿದೆ. ಬಿಹಾರದಲ್ಲಿ ಬಿಸಿಲಿನಿಂದ ಅಸ್ವಸ್ಥರಾದ 16 ಮಂದಿ ಎರಡು ಗಂಟೆ ಅವಧಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಬಿಹಾರ ಔರಂಗಾಬಾದ್‌ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ದುರ್ಘಟನೆ ನಡೆದಿದೆ. ಬಿಹಾರದಲ್ಲಿ ಎರಡು ಮೂರು ದಿನದಿಂದ ಭಾರೀ ಬಿಸಿಲು ಇದೆ. ಗುರುವಾರ 48.2 ಡಿಗ್ರಿ ಸೆಲ್ಸಿಯಸ್‌ ನಷ್ಟು ಉಷ್ಣಾಂಶ ದಾಖಲಾಗಿದೆ. ಬಿಸಿಲಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ವಿವಿಧ ವಯೋಮಾನದವರು ಮೃತಪಟ್ಟಿದಾರೆ. ಆಸ್ಪತ್ರೆ ಎದುರು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಿಹಾರದ ಹಲವು ಭಾಗಗಳಲ್ಲಿ ಬುಧವಾರವೂ 44 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಔರಂಗಾಬಾದ್‌ನಲ್ಲೂ ಇಷ್ಟೇ ಪ್ರಮಾಣದಲ್ಲಿ ಉಷ್ಣಾಂಶ ಕಂಡು ಬಂದಿತ್ತು. ಗುರುವಾರ ಏಕಾಏಕಿ 4 ಡಿಗ್ರಿ ಸೆಲ್ಸಿಯಸ್‌ ನಷ್ಟು ಉಷ್ಣಾಂಶ ಏರಿಕೆ ಕಂಡಿದ್ದು ಜನ ನಿರ್ಜಲೀಕರಣ, ತಲೆ ಸುತ್ತುವಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಒಂದೇ ದಿನದಲ್ಲಿ 35 ಮಂದಿ ಬಿಸಿಲಿನಿಂದ ಅಸ್ವಸ್ಥರಾಗಿಯೇ ಆಸ್ಪತ್ರೆಗೆ ಬಂದಿದ್ದರು. ಇವರಲ್ಲಿ ಕೆಲವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಬಿಸಿಲ ಹೊಡೆತದಿಂದ ಅವರು ಬಳಲಿರುವುದು ಕಂಡು ಬಂದಿತ್ತು. ಕೂಡಲೇ ಬಂದವರಿಗೆ ಚಿಕಿತ್ಸೆ ನೀಡಿದರೂ ಎರಡೇ ಗಂಟೆ ಅವಧಿಯಲ್ಲಿ 16 ಮಂದಿ ಜೀವ ಕಳೆದುಕೊಂಡರು. ಒಬ್ಬೊಬ್ಬರಾಗಿ ಮೃತಪಟ್ಟಿರುವುದನ್ನು ಔರಂಗಾಬಾದ್‌ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪ್ರಕಟಿಸಿದರು. ಈ ವೇಳೆ ಅಲ್ಲಿ ಸೇರಿದ್ದ ಕುಟುಂಬಸ್ಥರು ಆತಂಕದಲ್ಲಿಯೇ ಇದ್ದರು. ಸಾವಿನ ಮಾಹಿತಿ ದೊರೆಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮನ ಕಲಕುವಂತೆ ಇತ್ತು.

ಬಿಸಿಲಿನ ಕಾರಣಕ್ಕೆ ಹೆಚ್ಚಿನ ಮಂದಿ ಆಸ್ಪತ್ರೆಗೆ ಬರುತ್ತಿದ್ದು. ಚಿಕಿತ್ಸೆ ನೀಡಲಾಗುತ್ತಿದೆ. ಹಲವರು ಗುಣಮುಖರಾಗಿದ್ದು,ಗುರುವಾರ ಮಾತ್ರ ಹೆಚ್ಚಿನ ಸಾವು ಸಂಭವಿಸಿವೆ. ನಮ್ಮ ಬಳಿ ಸಾಕಷ್ಟು ವೈದ್ಯರು. ಸಿಬ್ಬಂದಿ ಇದ್ದಾರೆ. ಔಷಧ ಕೊರತೆಯೂ ಇಲ್ಲ. ಐಸ್‌ಪಾರ್ಕ್‌, ಕೂಲರ್‌ ಗಳನ್ನು ಸಂಗ್ರಹಿಸಿಟ್ಟುಕೊಂಡು ಚಿಕಿತ್ಸೆ ನೀಡುತ್ತದ್ದೇವೆ ಎನ್ನುವುದು ಔರಂಗಾಬಾದ್‌ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ನೀಡುವ ವಿವರಣೆ.

ಬಿಹಾರದಲ್ಲಿ ಹಲವಾರು ಶಾಲೆಗಳಲ್ಲಿ ಮಕ್ಕಳು ಬಿಸಿಲಿಗೆ ಕುಸಿದು ಬಿದ್ದಿರುವ ಸನ್ನಿವೇಶವೂ ಎದುರಾಗಿದೆ. ಕೆಲವು ಖಾಸಗಿ ಶಾಲೆಗಳು ಬಿಸಿಲಿನ ಹಿನ್ನೆಲೆಯಲ್ಲಿ ರಜೆಯನ್ನೂ ಘೋಷಿಸಿವೆ. ಅಂಗನವಾಡಿ, ಕೋಚಿಂಗ್‌ ಕೇಂದ್ರಗಳಿಗೆ ಜೂನ್‌ 8ರವರೆಗೆ ರಜೆ ಘೋಷಿಸಲಾಗಿದೆ.

ಹಲವು ಕಡೆ ಮಕ್ಕಳು ಬಿಸಿಲಿಗೆ ಕುಸಿದು ಬಿದ್ದು ಅಸ್ವಸೃರಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಶೇಖ್‌ ಪುರ ಜಿಲ್ಲೆಯಲ್ಲಿಯೇ ಅಂಬುಲೆನ್ಸ್‌ ಇಲ್ಲದೇ ಮಕ್ಕಳನ್ನು ಬೈಕ್‌ ಇಲ್ಲವೇ ಆಟೋದಲ್ಲಿ ಕರೆ ತಂದು ಚಿಕಿತ್ಸೆ ಕೊಡಿಸಿರುವುದು ನಡೆದಿದೆ. ಜಮು ಹಾಗೂ ಬೇಗುಸುರೈ ಜಿಲ್ಲೆಯಲ್ಲಿ ಮಕ್ಕಳ ಕುಸಿತದ ಪ್ರಕರಣ ಹೆಚ್ಚು ವರದಿಯಾಗಿವೆ.

ಈ ನಡುವೆ ಬಿಹಾರದಲ್ಲಿ ಇನ್ನೂ ಎರಡು ದಿನ ಬಿಸಿ ಗಾಳಿ ಇರುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು. ಆದಷ್ಟು ಜನ ಹೊರಗೆ ಬಾರದಂತೆ ಸೂಚನೆ ನೀಡಿದೆ.

ಉತ್ತರ ಭಾರತದಲ್ಲಿ ನಾಲ್ಕೈದು ದಿನದಿಂದ ಬಿಸಿಲ ಪ್ರಮಾಣ ಏರಿಕೆ ಕಂಡಿದೆ. ದೆಹಲಿಯಲ್ಲಂತೂ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ ಕಂಡುಬಂದಿದೆ. ರಾಜಸ್ತಾನ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಲು ಹೆಚ್ಚಿ ಜನಜೀವನಕ್ಕೆ ತೊಂದರೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಬಿಸಿಲ ಪ್ರಮಾಣ ಹೀಗೆಯೇ ಇರಲಿದ್ದು. ಮುಂಗಾರು ಆರಂಭಗೊಂಡ ನಂತರ ತಗ್ಗಬಹುದು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.