ಬಿಲ್ಕಿಸ್ ಬಾನೊ ಕೇಸ್: ಸುಪ್ರಿಂಕೋರ್ಟ್ ನೀಡಿದ್ದು ಐತಿಹಾಸಿಕ ತೀರ್ಪು ಎಂದ ನೆಟ್ಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರಕ್ಕೆ ಇದೀಗ ಭಾರಿ ಹಿನ್ನೆಡೆಯಾಗಿದೆ. ಗುಜರಾತ್ ಸರ್ಕಾರ ನೀಡಿದ್ದ ಆದೇಶವನ್ನು ಸುಪ್ರಿಂಕೋರ್ಟ್ ರದ್ದುಗೊಳಿಸಿದೆ. ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ತೀರ್ಪು ಎಂದಿದ್ದಾರೆ.
2002ರಲ್ಲಿ ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರಕ್ಕೆ ಇದೀಗ ಭಾರಿ ಹಿನ್ನೆಡೆಯಾಗಿದೆ. ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಪರ ಗುಜರಾತ್ ಸರ್ಕಾರ ನೀಡಿದ್ದ ಆದೇಶವನ್ನು ಇಂದು ಸುಪ್ರಿಂ ಕೋರ್ಟ್ ರದ್ದುಗೊಳಿಸಿದೆ. ಕ್ಷಮಾದಾನದ ಮೇಲೆ ಬಿಡುಗಡೆಗೊಂಡಿದ್ದ 11 ಮಂದಿ ಆರೋಪಿಗಳು ಈಗ ಪುನಃ ಜೈಲಿಗೆ ಹೋಗಬೇಕಾಗಿದೆ. ಗುಜರಾತ್ ಸರ್ಕಾರ ಆದೇಶವನ್ನು ರದ್ದಗೊಳಿಸುವ ಮೂಲಕ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಪ್ರಿಂ ಕೋರ್ಟ್ ತೀರ್ಪಿನ ಬಗ್ಗೆ ಜನರು ಭಾರಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ʼಧನ್ಯವಾದ ಸುಪ್ರಿಂಕೋರ್ಟ್, ಅತ್ಯಾಚಾರ ಸಂತ್ರಸ್ತೆಯ ನೋವು ನಿಮಗಾದ್ರೂ ಅರ್ಥ ಆಯ್ತುʼ ಎಂದು ದಿ ದಲಿತ್ ವಾಯ್ಸ್ ಖಾತೆ ಹೊಂದಿರುವ ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ʼಸುಪ್ರಿಂ ಕೋರ್ಟ್ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ 11 ಮಂದಿ ಅತ್ಯಾಚಾರಿಗಳು ಶರಣಾಗಿದ್ದಾರೆ, ಅಲ್ಲದೆ ಇನ್ನೆರಡು ವಾರಗಳಲ್ಲಿ ಜೈಲು ಸೇರಲಿದ್ದಾರೆ. ಇಂತಹ ತೀರ್ಪುಗಳು ನ್ಯಾಯಲಯದ ಮೇಲೆ ನಂಬಿಕೆ ಹುಟ್ಟಿಸುವಂತೆ ಮಾಡುತ್ತವೆʼ ಎಂದು ಮೀರಾ ಚೋಪ್ರಾ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಸುಪ್ರಿಂ ಕೋರ್ಟ್ ನಿಮಗಾದ್ರೂ ಆ ಸಂತ್ರಸ್ತೆಯ ನೋವು ಅರ್ಥ ಆಯ್ತು, ಧನ್ಯವಾದ ಎಂದು ಆದಿಲ್ ವಾನಿ ಎನ್ನುವವರು ಬರೆದುಕೊಂಡಿದ್ದಾರೆ.
ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಉಳಿದಿರುವ ತೀರ್ಪು ಇದಾಗಿದೆ ಎಂದು ರಾಹುಲ್ ಎನ್ನುವವರು ಬರೆದುಕೊಂಡಿದ್ದಾರೆ
ʼನ್ಯಾಯಕ್ಕಾಗಿ ತನ್ನ ಹೋರಾಟವನ್ನು ಎಂದಿಗೂ ಬಿಡದ ಬಲಿಷ್ಠ ಮಹಿಳೆ ಬಿಲ್ಕಿಸ್ ಬಾನೊಗೆ ಮೇಲೆ ಗೌರವ ಹೆಚ್ಚುತ್ತಿದೆ. ನಿಮ್ಮಂತಹವರು ಇನ್ನಷ್ಟು ಬೆಳೆಯಲಿʼ ಎಂದು ಪ್ರಿಯಾಂಕ ಚತುರ್ವೇದಿ ಬರೆದುಕೊಂಡಿದ್ದಾರೆ.
ʼಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಹನ್ನೊಂದು ಮಂದಿ ಅತ್ಯಾ ಚಾರಿಗಳ ವಿರುದ್ಧ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ನರೇಂದ್ರ ಮೋದಿ ಸರ್ಕಾರ ಕೋರ್ಟ್ ನೀಡಿರುವ ಕಟು ಸಂದೇಶ. ಇದು ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು ಎನ್ನುವುದರಲ್ಲಿ ಅನುಮಾನವಿಲ್ಲʼ ಎಂದು ನೆಟ್ಟಾ ಡಿಸೋಜಾ ಎನ್ನುವವರು ಬರೆದುಕೊಂಡಿದ್ದಾರೆ.