ಕನ್ನಡ ಸುದ್ದಿ  /  Nation And-world  /  India News Bjp Ends Tie Up With Jjp In Haryana Cm Khattar Ministers Resign New Team Take Oath Likely Today Evening Kub

Haryana Politics: ಮುರಿದು ಬಿದ್ದ ಮೈತ್ರಿ, ಹರಿಯಾಣ ಮುಖ್ಯಮಂತ್ರಿ ಕಟ್ಟರ್‌ ರಾಜೀನಾಮೆ

Lok sabha Elections ಲೋಕಸಭೆ ಚುನಾವಣೆ ಮೈತ್ರಿ ವಿಚಾರವಾಗಿ ಹರಿಯಾಣದಲ್ಲಿ ಬಿಜೆಪಿ( BJP) ಹಾಗೂ ಜೆಜೆಪಿ( JJP) ನಡುವೆ ಮಾತುಕತೆ ಮುರಿದು ಬಿದ್ದು ಸರ್ಕಾರವೇ ಪತನವಾಗಿದೆ. ಸಿಎಂ ಖಟ್ಟರ್‌ ಹಾಗೂ ಸಚಿವರು ರಾಜೀನಾಮೆ ನೀಡಿದ್ದು, ಸರ್ಕಾರ ರಚನೆ ಕಸರತ್ತು ನಡೆದಿದೆ.

ಹರಿಯಾಣದಲ್ಲಿ ಸಿಎಂ ಮನೋಹರಲಾಲ್‌ ಖಟ್ಟರ್‌ ಹಾಗೂ ಡಿಸಿಎಂ ದುಷ್ಯಂತ್‌ ಚೌತಾಲ  ಸರ್ಕಾರ ಪತನಗೊಂಡಿದೆ.
ಹರಿಯಾಣದಲ್ಲಿ ಸಿಎಂ ಮನೋಹರಲಾಲ್‌ ಖಟ್ಟರ್‌ ಹಾಗೂ ಡಿಸಿಎಂ ದುಷ್ಯಂತ್‌ ಚೌತಾಲ ಸರ್ಕಾರ ಪತನಗೊಂಡಿದೆ.

ಚಂಢೀಗಡ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಎನ್‌ಡಿಎ ಮೈತ್ರಿ ಕೂಟಕ್ಕೆ ಹೊಸ ಪಕ್ಷಗಳ ಸೇರ್ಪಡೆಗೆ ಮುಂದಾಗಿರುವ ನಡುವೆ ಹರಿಯಾಣದಲ್ಲಿದ್ದ ಮೈತ್ರಿ ಸರ್ಕಾರ ತೊಂದರೆಗೆ ಸಿಲುಕಿದೆ. ದುಷ್ಯಂತ್‌ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಾರ್ಟಿಯೊಂದಿಗಿನ ಮೈತ್ರಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಅವರ ಸಂಪುಟ ಸದಸ್ಯರೂ ರಾಜೀನಾಮೆ ನೀಡಿದ್ದು, ಮತ್ತೆ ಹೊಸ ಸರ್ಕಾರ ರಚನೆ ಸಾಧ್ಯತೆಗಳಿವೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ40 ಸ್ಥಾನದೊಂದಿಗೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್‌ 31, ಜೆಜೆಪಿ 10 ಹಾಗೂ ಪಕ್ಷೇತರ ಏಳು ಶಾಸಕರಿದ್ದಾರೆ. ಬಿಜೆಪಿ ಹಾಗೂ ಜೆಜೆಪಿ ಮೈತ್ರಿಯೊಂದಿಗೆ ವಿಧಾನಸಭೆ ಚುನಾವಣೆಯನ್ನು ಎದುರಿಸಿತ್ತು. ಇನ್ನು ಆರು ತಿಂಗಳ ಅವಧಿ ಮಾತ್ರ ಈಗಿನ ವಿಧಾನಸಭೆಗೆ ಇದೆ. ಅಂದರೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ.

ಈ ನಡುವೆ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಜೆಪಿ ನಡುವೆ ಮಾತುಕತೆಗಳು ಮುರಿದು ಬಿದ್ದಿವೆ. 10 ಲೋಕಸಭಾ ಸ್ಥಾನವಿರುವ ಹರಿಯಾಣದಲ್ಲಿ ಬಿಜೆಪಿ 9 ಹಾಗೂ ಜೆಜೆಪಿ ಒಂದು ಕಡೆ ಸ್ಪರ್ಧಿಸುವ ಮಾತುಕತೆ ಆಗಿದ್ದವು. ಆದರೆ ಜೆಜೆಪಿ ಎರಡು ಲೋಕಸಭಾ ಸ್ಥಾನಗಳಿಗೆ ಪಟ್ಟು ಹಿಡಿದಿತ್ತು. ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ.

ಇದರಿಂದ ಬಿಜೆಪಿಯೇ ಮೈತ್ರಿಯಿಂದ ಹೊರ ಬರುವ ನಿರ್ಣಯ ಮಾಡಿ ಈಗ ಸಿಎಂ ಹಾಗೂ ಸಚಿವರ ರಾಜೀನಾಮೆ ನೀಡಿದೆ.

ಇದರ ನಡುವೆ ಇಂದೇ ಹೊಸ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯಲು ಬಿಜೆಪಿ ಅಣಿಯಾಗಿದೆ. ಇದಲ್ಲದೇ ಜೆಜೆಪಿಯ ಐದು ಶಾಸಕರು ಪ್ರತ್ಯೇಕಗೊಂಡಿದ್ದು, ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈಗಾಗಲೇ ಬಿಜೆಪಿ ವರಿಷ್ಠರಾದ ಅರ್ಜುನ್‌ ಮುಂಡಾ ಹಾಗೂ ತರುಣ್‌ ಚುಗ್‌ ಅವರು ಚಂಢೀಗಡಕ್ಕೆ ಧಾವಿಸಿದ್ದು, ಸಭೆ ನಡೆಸುತ್ತಿದ್ದಾರೆ. ಸಂಜೆಯೇ ಸಿಎಂ ಅಭ್ಯರ್ಥಿ ಆಯ್ಕೆಗೊಂಡು ಪ್ರಮಾಣವಚನವೂ ಆಗಬಹುದು ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ ಹಾಲಿ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರನ್ನು ಬದಲಿಸಿ ಅವರನ್ನು ಲೋಕಸಭೆ ಚುನಾವಣೆ ಟಿಕೆಟ್‌ ನೀಡುವ ಸಾಧ್ಯತೆಗಳೂ ದಟ್ಟವಾಗಿದೆ. ಖಟ್ಟರ್‌ ಬದಲಿಗೆ ಕುರುಕ್ಷೇತ್ರ ಲೋಕಸಭಾ ಸದಸ್ಯ ನಯಾಬ್‌ ಸಿಂಗ್‌ ಸೈನಿ ಅಥವಾ ಕರ್ನಾಲ್‌ ಸಂಸದ ಸಂಜಯ್‌ ಭಾಟಿಯಾ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಮಾಡಿದಂತೆಯೇ ಇಬ್ಬರು ಉಪ,ಮುಖ್ಯಮಂತ್ರಿಗಳನ್ನು ನೇಮಿಸುವ ಸಾಧ್ಯತೆಯೂ ಇದೆ.

ಇದರ ನಡುವೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಹರಿಯಾಣದಲ್ಲಿ ಕಾಂಗ್ರೆಸ್‌ ಕೂಡ ಪ್ರಬಲವಾಗಿ ಬೆಳೆಯುತ್ತಿದೆ. ಮೂರು ದಿನದ ಹಿಂದೆಯಷ್ಟೇ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್‌ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದರು. ಈಗ ಮೈತ್ರಿ ಮುರಿದು ಬಿದ್ದಿರುವುದು ಹೊಸ ಮೈತ್ರಿಗೂ ದಾರಿ ಮಾಡಿಕೊಡಬಹುದು ಎನ್ನುವ ವಿಶ್ಲೇಷಣೆಗಳು ನಡೆದಿವೆ.