Bypoll Results: 7 ರಾಜ್ಯಗಳ ಉಪ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ ಜಯಭೇರಿ; ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟ ಎನ್‌ಡಿಎ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bypoll Results: 7 ರಾಜ್ಯಗಳ ಉಪ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ ಜಯಭೇರಿ; ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟ ಎನ್‌ಡಿಎ

Bypoll Results: 7 ರಾಜ್ಯಗಳ ಉಪ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ ಜಯಭೇರಿ; ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟ ಎನ್‌ಡಿಎ

7 ರಾಜ್ಯಗಳ 13 ವಿಧಾಸನಭಾ ಉಪ ಚುನಾವಣಾ ಫಲಿತಾಂಶದಲ್ಲಿ ಇಂಡಿಯಾ ಕೂಡ ಭರ್ಜರಿ ಗೆಲುವು ಸಾಧಿಸಿದೆ. 13 ಕ್ಷೇತ್ರಗಳ ಪೈಕಿ 10 ರಲ್ಲಿ ಜಯ ಸಾಧಿಸಿದ್ದು, 2 ಕ್ಷೇತ್ರಗಳಿಗೆ ಮಾತ್ರ ಎನ್‌ಡಿಎ ಮೈತ್ರಿ ಕೂಟ ತೃಪ್ತಿಪಟ್ಟುಕೊಂಡಿದ್ದು, 1 ರಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.

7 ರಾಜ್ಯಗಳ ಉಪ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ ಜಯಭೇರಿ; ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟ ಎನ್‌ಡಿಎ
7 ರಾಜ್ಯಗಳ ಉಪ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ ಜಯಭೇರಿ; ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟ ಎನ್‌ಡಿಎ

ದೆಹಲಿ: 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ (Bypoll Results 2024) ಇಂದು ಶನಿವಾರ (ಜುಲೈ 13) ಪ್ರಕಟವಾಗಿದ್ದು, ಇಂಡಿಯಾ ಮೈತ್ರಿ ಎನ್‌ಡಿಎಗೆ ಬಿಗ್ ಶಾಕ್ ನೀಡಿದೆ. ಒಟ್ಟು 13 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಇಂಡಿಯಾ ಕೂಡ ಜಯಭೇರಿ ಬಾರಿಸಿದೆ. ಕೇವಲ 2 ರಲ್ಲಿ ಮಾತ್ರ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ 1 ರಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.

ಹಿಮಾಚಲ ಪ್ರದೇಶದ ಡೆಹ್ರಾಡೂನ್ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರನ್ನು ಕಣಕ್ಕಿಳಿಸಲಾಗಿತ್ತು. ಪಂಜಾಬ್‌ನ ಜಲಂಧರ್ ಪಶ್ಚಿಮದಿಂದ ಮೊಹಿಂದರ್ ಭಗತ್ ಅವರನ್ನು ಎಎಪಿ ಕಣಕ್ಕಿಳಿಸಿತ್ತು. ಭಗತ್ ಅವರು ತಮ್ಮ ಪ್ರತಿಸ್ಪರ್ಧಿ ಮತ್ತು ಬಿಜೆಪಿ ಅಭ್ಯರ್ಥಿ ಶೀತಲ್ ಅಂಗುರಾಲ್ ಅವರನ್ನು 37,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ

ಭಾರತದ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ಟಿಎಂಸಿ 4ಕ್ಕೆ ನಾಲ್ಕೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹಿಮಾಚಲ ಪ್ರದೇಶದಲ್ಲಿ ಮೂರರಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದು ಕೊಂಡಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಪತ್ನಿ ಕಮಲೇಶ್ ಠಾಕೂರ್ ಜಯಗಳಿಸಿದ್ದಾರೆ. ಪಂಜಾಬ್‌ನಲ್ಲಿನ ಏಕೈಕ 1 ಕ್ಷೇತ್ರವನ್ನು ಆಡಳಿತ ಎಎಪಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳ

1. ಕೃಷ್ಣ ಕಲ್ಯಾಣಿ, ರಾಯ್‌ಗಂಜ್ (ಟಿಎಂಸಿ)

2. ಮುಕುಟ್ ಮಣಿ ಅಧಿಕಾರಿ, ರಣಘಾಟ್ ದಕ್ಷಿಣ (ಟಿಎಂಸಿ)

3. ಮಧುಪರ್ಣ ಠಾಕು, ಬಾಗ್ಡಾ (ಟಿಎಂಸಿ)

4. ಸುಪ್ತಿ ಪಾಂಡೆ, ಮಾಣಿಕ್ತಾಲಾ (ಟಿಎಂಸಿ)

ಹಿಮಾಚಲ ಪ್ರದೇಶ

1. ಕಮಲೇಶ್ ಠಾಕೂರ್, ಡೆಹ್ರಾ (ಕಾಂಗ್ರೆಸ್)

2. ಆಶಿಶ್ ಶರ್ಮಾ, ಹಮೀರ್‌ಪುರ್ (ಬಿಜೆಪಿ)

3. ಹರ್ದೀಪ್ ಸಿಂಗ್ ಬಾವಾ, ನಲಗಢ (ಕಾಂಗ್ರೆಸ್)

ಉತ್ತರಾಖಂಡ್

ಖಾಜಿ ಮೊಹಮ್ಮದ್ ನಿಜಾಮುದ್ದೀನ್, ಮಂಗಳೌರ್ (ಕಾಂಗ್ರೆಸ್

ಲಖಪತ್ ಸಿಂಗ್ ಬುಟೋಲಾ, ಬದ್ರಿನಾಥ್ (ಕಾಂಗ್ರೆಸ್)

ಪಂಜಾಬ್

ಮೊಹಿಂದರ್ ಭಗತ್, ಜಲಂಧರ್ ಪಶ್ಚಿಮ (ಎಎಪಿ)

ತಮಿಳುನಾಡು

1 ಅಣ್ಣಿಯುರ್ ಶಿವ, ವಿಕ್ರವಾಂಡಿ (ಡಿಎಂಕೆ)

ಮಧ್ಯಪ್ರದೇಶ

ಕಮಲೇಶ್ ಷಾ, ಅಮರವಾಡ (ಬಿಜೆಪಿ)

ಬಿಹಾರ

ಶಂಕರ್ ಸಿಂಗ್, ರಾಪೌಲಿ (ಪಕ್ಷೇತರ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.