ಚಂಡೀಗಢದಲ್ಲಿ ನಟಿ ಕಂಗನಾ ರನೌತ್ ಕಪಾಳಕ್ಕೆ ಹೊಡೆದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕರ್ನಾಟಕಕ್ಕೆ ವರ್ಗಾವಣೆ
ಚಂಡೀಗಢದಲ್ಲಿ ನಟಿ ಕಂಗನಾ ರನೌತ್ ಕಪಾಳಕ್ಕೆ ಹೊಡೆದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕರ್ನಾಟಕಕ್ಕೆ ವರ್ಗಾವಣೆಯಾಗಿದೆ. ಕುಲ್ವಿಂದರ್ ವಿರುದ್ಧ ದೂರು ದಾಖಲಾದ ಬೆನ್ನಿಗೆ ಅವರನ್ನು ಬೆಂಗಳೂರಿನ ಘಟಕಕ್ಕೆ ವರ್ಗಾವಣೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ನವದೆಹಲಿ: ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಕಪಾಳ ಕಪಾಳಕ್ಕೆ ಹೊಡೆದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಶಿಸ್ತು ತನಿಖೆ ಬಾಕಿ ಇರುವಂತೆಯೇ ಬೆಂಗಳೂರಿನ ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ (ಜುಲೈ 3) ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಹೊಸದಾಗಿ ಸಂಸತ್‌ಗೆ ಚುನಾಯಿತರಾಗಿದ್ದ ನಟಿ ಕಂಗನಾ ರನೌತ್ ನವದೆಹಲಿಗೆ ಹೋಗುತ್ತಿದ್ದ ವೇಳೆ ಜೂನ್ 6 ರಂದು ಈ ಘಟನೆ ನಡೆದಿತ್ತು. ಅವರು ಕೂಡಲೇ ಈ ಸಂಬಂಧ ದೂರು ದಾಖಲಿಸಿದ್ದರು. ಈ ಘಟನೆಯ ನಂತರ ಕುಲ್ವಿಂದರ್ ಕೌರ್ ಅವರನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಐಎಸ್‌ಎಫ್) ಅಮಾನತುಗೊಳಿಸಿತು. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ದೂರಿನ ಮೇರೆಗೆ ಕಾನ್‌ಸ್ಟೆಬಲ್ ವಿರುದ್ಧ ಪೊಲೀಸ್ ಎಫ್‌ಐಆರ್ ಕೂಡ ದಾಖಲಾಗಿದೆ. ಇದಾಗಿ, ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಲಾಗಿದೆ.
ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕರ್ನಾಟಕಕ್ಕೆ ವರ್ಗಾವಣೆ
ಸಿಐಎಸ್ಎಫ್‌ನ ಶಿಸ್ತಿನ ವಿಚಾರಣೆಯ ಬಾಕಿ ಇರುವಾಗಲೇ ಅವರನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನ 10 ನೇ ಮೀಸಲು ಬೆಟಾಲಿಯನ್‌ಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ನ್ಯಾಯಯುತವಾಗಿ ನಡೆಸುವ ಹಿತದೃಷ್ಟಿಯಿಂದ ಘಟನೆ ನಡೆದ ಕೂಡಲೇ ಆಕೆಯನ್ನು ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಹಿರಿಯ ಕಮಾಂಡೆಂಟ್ ದರ್ಜೆಯ ಅಧಿಕಾರಿಯೊಬ್ಬರು ವಿಚಾರಣೆ ನಡೆಸುತ್ತಿದ್ದು, ಆ ದಿನ ವಿಮಾನ ನಿಲ್ದಾಣದಲ್ಲಿದ್ದ ಕಾನ್‌ಸ್ಟೆಬಲ್, ಆಕೆಯ ಸಹೋದ್ಯೋಗಿಗಳು, ಶಿಫ್ಟ್ ಇನ್‌ಚಾರ್ಜ್ ಮತ್ತು ಕೆಲವು ಏರ್‌ಲೈನ್ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ವಿಚಾರಣೆಗೆ ಸ್ವಲ್ಪ ಸಮಯ ಹಿಡಿಯಲಿದ್ದು, ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಕಂಗನಾ ರನೌತ್ ಕಪಾಳಕ್ಕೆ ಹೊಡೆದ ಕುಲ್ವಿಂದರ್ ಕೌರ್ ಯಾರು
ಪಂಜಾಬ್‌ನ ಕಪುರ್ತಲಾ ಜಿಲ್ಲೆಯವರಾದ ಕುಲ್ವಿಂದರ್ ಕೌರ್ 2009 ರಲ್ಲಿ ಸಿಐಎಸ್‌ಎಫ್‌ಗೆ ಸೇರ್ಪಡೆಯಾದರು. 2021 ರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಅದರ ವೈಮಾನಿಕ ಭದ್ರತಾ ಗುಂಪಿನೊಂದಿಗೆ ಇದ್ದು ಕರ್ತವ್ಯ ನಿರ್ವಹಿಸುತ್ತಿದ್ದರು.
ಆಕೆಯ ವಿರುದ್ಧ ಈವರೆಗೆ ಯಾವುದೇ ವಿಜಿಲೆನ್ಸ್ ವಿಚಾರಣೆ ಅಥವಾ ಶಿಕ್ಷೆಯನ್ನು ವಿಧಿಸಲಾಗಿಲ್ಲ. ಆಕೆಯ ಪತಿಯನ್ನೂ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು.
ಪಂಜಾಬ್ ಹರಿಯಾಣ ಭಾಗದ ರೈತರ ಪ್ರತಿಭಟನೆಗಳ ಬಗ್ಗೆ ಕಂಗನಾ ರನೌತ್ ಅವರ ನಿಲುವಿನ ಬಗ್ಗೆ ಕುಲ್ವಿಂದರ್ ಕೌರ್ ಬಹಳ ಅಸಮಾಧಾನಗೊಂಡಿದ್ದರು ಎಂಬುದು ಬಹಳ ಸ್ಷಷ್ಟ.
ಅಂದು ವಿಮಾನ ನಿಲ್ದಾಣದಲ್ಲಿ ಏನು ನಡೆಯಿತು?
ಹರಿಯಾಣದ ಮಂಡಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದ ನಟಿ-ರಾಜಕಾರಣಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಗುರುವಾರ (ಜೂನ್ 6) ಕಪಾಳಕ್ಕೆ ಹೊಡೆದ ಘಟನೆ ದೇಶದ ಗಮನಸೆಳೆದಿತ್ತು.
ಅದಾಗಿ, ನಟಿ ಕಂಗನಾ ರನೌತ್ ಅವರು ದೆಹಲಿಗೆ ತೆರಳಿದ್ದು, ಅಲ್ಲಿಂದ ವಿಡಿಯೋ ಹೇಳಿಕೆ ಪ್ರಕಟಿಸಿದ್ದರು. ಭಯೋತ್ಪಾದನೆ ಕುರಿತು ಕಳವಳ ವ್ಯಕ್ತಪಡಿಸಿದ್ದರಲ್ಲದೆ, ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಈ ಘಟನೆ ನಡೆದಿದೆ ಎಂದು ಹೇಳಿದ ಕಂಗನಾ, ಸಿಐಎಸ್ಎಫ್ ಸಿಬ್ಬಂದಿ "ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದರಿಂದ" ತನ್ನ ಕಪಾಳಕ್ಕೆ ಹೊಡೆದರು ಎಂದು ವಿವರಿಸಿದ್ದರು. ವಿವರ ಓದಿಗೆ - ಚಂಡೀಗಢದಲ್ಲಿ ನಟಿ ಕಂಗನಾ ರನೌತ್ ಕಪಾಳಕ್ಕೆ ಹೊಡೆದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್, ಏನು ನಡೆಯಿತಲ್ಲಿ- ಇಲ್ಲಿದೆ ಪೂರ್ಣ ವಿವರ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ವಿಭಾಗ