ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upi Transactions: ಯುಪಿಐ ಪಾವತಿಗೆ ಸಂಬಂಧಿಸಿ ಆರ್‌ಬಿಐ ಮಾಡಿದೆ 3 ಪ್ರಮುಖ ಘೋಷಣೆಗಳು; ವಿವರ ವರದಿ ಇಲ್ಲಿದೆ

UPI transactions: ಯುಪಿಐ ಪಾವತಿಗೆ ಸಂಬಂಧಿಸಿ ಆರ್‌ಬಿಐ ಮಾಡಿದೆ 3 ಪ್ರಮುಖ ಘೋಷಣೆಗಳು; ವಿವರ ವರದಿ ಇಲ್ಲಿದೆ

UPI transactions: ವಿತ್ತೀಯ ನೀತಿ ಸಮಿತಿಯ ದ್ವೈಮಾಸಿಕ ಸಭೆಯ ಬಳಿಕ ಅದರ ನಿರ್ಣಯಗಳನ್ನು ಘೋಷಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌, ಯುಪಿಐ ಪಾವತಿಗೆ ಸಂಬಂಧಿಸಿ ಸಂಭಾಷಣಾ ಪಾವತಿ, ನಿಯರ್‌ ಫೀಲ್ಡ್‌ ಕಮ್ಯೂನಿಷಕೇಶನ್‌ನ ಯುಪಿಐ ಲೈಟ್‌, ಸಣ್ಣ ವಹಿವಾಟಿನ ಪಾವತಿ ಮೌಲ್ಯದ ಮಿತಿಗಳ 3 ಪ್ರಮುಖ ವಿಚಾರಗಳನ್ನು ಘೋಷಿಸಿದರು.

ಯುಪಿಐ ಪಾವತಿಗೆ ಸಂಬಂಧಿಸಿ ಆರ್‌ಬಿಐ  3 ಪ್ರಮುಖ ಘೋಷಣೆಗಳು ಮಾಡಿದೆ. (ಸಾಂಕೇತಿಕ ಚಿತ್ರ)
ಯುಪಿಐ ಪಾವತಿಗೆ ಸಂಬಂಧಿಸಿ ಆರ್‌ಬಿಐ 3 ಪ್ರಮುಖ ಘೋಷಣೆಗಳು ಮಾಡಿದೆ. (ಸಾಂಕೇತಿಕ ಚಿತ್ರ) (Shutterstock)

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ಅವರು ಗುರುವಾರ ವಿತ್ತೀಯ ನೀತಿ ಸಮಿತಿ ಸಭೆಯ ನಿರ್ಣಯ ವಿವರವನ್ನು ಪ್ರಕಟಿಸಿದ ಸಂದರ್ಭದಲ್ಲಿ ಯುಪಿಐ ಪಾವತಿಗೆ (UPI transactions) ಸಂಬಂಧಿಸಿದ ಮಹತ್ವದ ವಿಷಯ ಘೋಷಿಸಿದರು.

ಟ್ರೆಂಡಿಂಗ್​ ಸುದ್ದಿ

ವಿತ್ತೀಯ ನೀತಿ ಸಮಿತಿ ನಿರ್ಣಯದ ಪ್ರಕಾರ, ರೆಪೋದರ ಶೇಕಡ 6.5ರಲ್ಲಿ ಸ್ಥಿರವಾಗಿ ಇಡುವ ತೀರ್ಮಾನವನ್ನು ಶಕ್ತಿಕಾಂತ ದಾಸ್‌ ಘೋಷಿಸಿದರು. ಇದರ ಜತೆಗೆ ಮೂರು ಪ್ರಮುಖ ವಿಷಯಗಳನ್ನು ಅವರು ಘೋಷಣೆ ಮಾಡಿದರು.

1. ಯುಪಿಐನಲ್ಲಿ ಸಂಭಾಷಣಾ ಪಾವತಿ

ಯುಪಿಐನಲ್ಲಿ ಸಂಭಾಷಣಾ ಪಾವತಿ ಶೀಘ್ರವೇ ಚಾಲ್ತಿಗೆ ಬರಲಿದೆ ಎಂದು ಆರ್‌ಬಿಐ ಘೋಷಿಸಿದೆ. ಈ ಸಂಭಾಷಣಾ ಪಾವತಿ ವ್ಯವಸ್ಥೆಯಲ್ಲಿ ಯುಪಿಐನಲ್ಲಿ ಪಾವತಿ ಮಾಡುವ ಸಂದರ್ಭದಲ್ಲಿ ಬಳಕೆದಾರರು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಹೊಂದಿದ ವ್ಯವಸ್ಥೆಯ ಜತೆಗೆ ಮಾತನಾಡುತ್ತ ಪಾವತಿ ಮಾಡಬಹುದು.

"ಈ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್‌ ಮತ್ತು ಫೀಚರ್ ಫೋನ್‌ಗಳ ಆಧಾರಿತ ಯುಪಿಐ ಚಾನೆಲ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರಿಂದಾಗಿ ದೇಶದಲ್ಲಿ ಡಿಜಿಟಲ್ ವಿಸ್ತರಣೆಯನ್ನು ಇನ್ನಷ್ಟು ಸಾಧಿಸಲು ಸಾಧ್ಯವಾಗುತ್ತದೆ" ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾಗಿ ಪಿಟಿಐ ವಿವರಿಸಿದೆ.

"ಯುಪಿಐ ಬಳಸಿಕೊಂಡು ಸಂಭಾಷಣಾ ಪಾವತಿಗಳ ಅನುಷ್ಠಾನವು ಒಂದು ಮಹತ್ವದ ಪರಿಕಲ್ಪನೆಯಾಗಿದೆ. ಬಳಕೆದಾರರು ನೈಸರ್ಗಿಕ ಭಾಷಾ ಸಂವಹನಗಳನ್ನು ಬಳಸಿಕೊಂಡು ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಅಧಿಕೃತಗೊಳಿಸಲು ಸಾಧ್ಯವಾಗುತ್ತದೆ. ಪಾವತಿಗಳನ್ನು ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿ ಮಾಡುವ ವಿಧಾನವನ್ನು ಸಕ್ರಿಯಗೊಳಿಸುತ್ತದೆ ”ಎಂದು ಆರ್‌ಪಿಎಸ್‌ ಗ್ರೂಪ್‌ನ ಪಾಲುದಾರ ಸುರೇನ್ ಗೋಯಲ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು.

2. ಯುಪಿಐ ಲೈಟ್‌ ಮತ್ತು ಎನ್‌ಎಫ್‌ಸಿ ತಂತ್ರಜ್ಞಾನ

ಆರ್‌ಬಿಐ 'ಯುಪಿಐ-ಲೈಟ್' ಆನ್-ಡಿವೈಸ್ ವ್ಯಾಲೆಟ್ ಮೂಲಕ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ತಂತ್ರಜ್ಞಾನವನ್ನು ಬಳಸಿಕೊಂಡು ಯುಪಿಐನಲ್ಲಿ ಆಫ್‌ಲೈನ್ ಪಾವತಿಗಳನ್ನು ಪರಿಚಯಿಸಿದೆ.

ಏನಿದು ನಿಯರ್‌ ಫೀಲ್ಡ್‌ ಕಮ್ಯೂನಿಕೇಶನ್‌

ವೆಬ್‌ಸೈಟ್ ಇನ್ವೆಸ್ಟೋಪೀಡಿಯಾ ಪ್ರಕಾರ, ನಿಯರ್ ಫೀಲ್ಡ್ ಕಮ್ಯುನಿಕೇಶನ್ ಅನ್ನು ಅಲ್ಪ-ಶ್ರೇಣಿಯ ವೈರ್‌ಲೆಸ್ ತಂತ್ರಜ್ಞಾನ ಎಂದು ವ್ಯಾಖ್ಯಾನಿಸಲಾಗಿದೆ, ಇದು ಒಂದೇ ಸ್ಪರ್ಶದಿಂದ ಸಾಧನಗಳ ನಡುವೆ ಮಾಹಿತಿಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ.

ಇದು ಎನ್‌ಎಫ್‌ಸಿ ಎಂದೇ ಜನಪ್ರಿಯವಾಗಿದೆ. ಸಾಧನಗಳನ್ನು ಒಟ್ಟಿಗೆ ಸ್ಪರ್ಶಿಸಿದಾಗ ಅವುಗಳ ನಡುವಿನ ಸಂವಹನಕ್ಕಾಗಿ ಮ್ಯಾಗ್ನೆಟಿಕ್ ಫೀಲ್ಡ್ ಇಂಡಕ್ಷನ್ ಅನ್ನು ಬಳಸುತ್ತದೆ.

ಪಾವತಿ ಸಂಸ್ಕಾರಕಗಳ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಪಾವತಿಗಳಿಗೆ ಕ್ರೆಡಿಟ್ ಕಾರ್ಡ್‌ಗಳಿಗಿಂತ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸುವುದು ಸೇರಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ಬಳಕೆದಾರರಿಗೆ ಬಹು ಕಾರ್ಡ್‌ಗಳನ್ನು ಬಳಸುವುದಕ್ಕೆ ಅನುವು ಮಾಡಿಕೊಡುತ್ತದೆ.

ಆದಾಗ್ಯೂ, ಇದು ಕೆಲವು ಮಿತಿಗಳನ್ನು ಹೊಂದಿದೆ. ಅಲ್ಲದೆ, ಇದು ಸ್ಮಾರ್ಟ್‌ಫೋನ್‌ನಲ್ಲಿ ಸೂಕ್ಷ್ಮ ಡೇಟಾ ಅಗತ್ಯವಿರುವ ಅಪ್ಲಿಕೇಶನ್‌ಗಳ ಬಳಕೆಯನ್ನು ಮಿತಿಗೊಳಿಸಬಹುದು.

3. ಸಣ್ಣ ಮೌಲ್ಯದ ಡಿಜಿಟಲ್‌ ಪಾವತಿ ಮಿತಿ ಹೆಚ್ಚಳ

ಆಫ್-ಲೈನ್ ಮೋಡ್‌ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳ ವಹಿವಾಟಿನ ಮಿತಿಯನ್ನು 200 ರೂಪಾಯಿಯಿಂದ 500 ರೂಪಾಯಿಗೆ ಪ್ರತಿ ಪಾವತಿ ಸಾಧನದ ಒಟ್ಟಾರೆ ಮಿತಿಯ 2000 ರೂಪಾಯಿ ಒಳಗೆ ಹೆಚ್ಚಿಸುವುದಕ್ಕೆ ಸಂಬಂಧಿಸಿದೆ.

"ಎರಡು ಅಂಶಗಳ ದೃಢೀಕರಣದ ಸಡಿಲಿಕೆಗೆ ಸಂಬಂಧಿಸಿದ ಅಪಾಯಗಳನ್ನು ಎದುರಿಸುವುದಕ್ಕಾಗಿ ಒಟ್ಟಾರೆ ಮಿತಿಯನ್ನು 2,000 ರೂಪಾಯಿಯಲ್ಲಿ ಉಳಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸೂಚನೆಗಳನ್ನು ಶೀಘ್ರದಲ್ಲೇ ನೀಡಲಾಗುವುದು" ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

( ಪಿಟಿಐ ಸುದ್ದಿ ಮಾಹಿತಿಯೊಂದಿಗೆ)

IPL_Entry_Point