Covid Updates: ಕೇರಳದಲ್ಲಿಯೇ ಅಧಿಕ ಕೋವಿಡ್‌ ಸಕ್ರಿಯ ಪ್ರಕರಣ, ನಂತರದ ಸ್ಥಾನದಲ್ಲಿ ಕರ್ನಾಟಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಕೇರಳದಲ್ಲಿಯೇ ಅಧಿಕ ಕೋವಿಡ್‌ ಸಕ್ರಿಯ ಪ್ರಕರಣ, ನಂತರದ ಸ್ಥಾನದಲ್ಲಿ ಕರ್ನಾಟಕ

Covid Updates: ಕೇರಳದಲ್ಲಿಯೇ ಅಧಿಕ ಕೋವಿಡ್‌ ಸಕ್ರಿಯ ಪ್ರಕರಣ, ನಂತರದ ಸ್ಥಾನದಲ್ಲಿ ಕರ್ನಾಟಕ

Covid ಭಾರತದಲ್ಲಿ ಮಂಗಳವಾರದಂದು 4,170 ಸಕ್ರಿಯ ಪ್ರಕರಣ ಕಂಡು ಬಂದಿದ್ದು, ಇದರಲ್ಲಿ ಕೇರಳವೇ ಅಧಿಕ.ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.

ಭಾರತದಲ್ಲಿ ಕೋವಿಡ್‌ನ ಸಕ್ರಿಯ ಪ್ರಕರಣದಲ್ಲಿ ಏರಿಕೆಯಾಗಿದ್ದು, ಕೇರಳದಲ್ಲಿ ಅತ್ಯಧಿಕ ಪ್ರಕರಣ ವರದಿಯಾಗಿವೆ,
ಭಾರತದಲ್ಲಿ ಕೋವಿಡ್‌ನ ಸಕ್ರಿಯ ಪ್ರಕರಣದಲ್ಲಿ ಏರಿಕೆಯಾಗಿದ್ದು, ಕೇರಳದಲ್ಲಿ ಅತ್ಯಧಿಕ ಪ್ರಕರಣ ವರದಿಯಾಗಿವೆ,

ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 4,170 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ.

ಮಂಗಳವಾರ ಸಂಜೆ ಹೊತ್ತಿಗೆ ಇಡೀ ದೇಶದಲ್ಲಿ 4,170 ಪ್ರಕರಣಗಳು ಸಕ್ರಿಯವಾಗಿರುವುದು ಕಂಡುಬಂದಿದ್ದು. ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈ ಪ್ರಕರಣದಲ್ಲಿ ಕೇರಳದಲ್ಲಿಯೇ ಅತ್ಯಧಿಕ ಪ್ರಕರಣಗಳು ಕಂಡು ಬಂದಿವೆ. ಕೇರಳದಲ್ಲಿ ಈವರೆಗೂ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ3096. ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಕರ್ನಾಟಕದಲ್ಲಿ 436 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ168, ತಮಿಳುನಾಡಿನಲ್ಲಿ 139 ಹಾಗೂ ಗುಜರಾತ್‌ ರಾಜ್ಯದಲ್ಲಿ 56 ಸಕ್ರಿಯ ಪ್ರಕರಣಗಳು ಕಂಡು ಬಂದಿವೆ.

ಇನ್ನು ಈ ಬಾರಿ ಸದ್ದು ಮಾಡುತ್ತಿರುವ ಜೆಎನ್‌ 1 ತಳಿಯ ಕೋವಿಡ್‌ ಪ್ರಕರಣಗಳೂ ಹೆಚ್ಚಾಗಿವೆ. ಒಟ್ಟು 69 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಲಾಗಿದೆ.

ಕರ್ನಾಟಕದಲ್ಲಿಯೇ ಜೆಎನ್‌ 1 ತಳಿಯ 34 ಪ್ರಕರಣ ಕಂಡು ಬಂದರೆ, ಬೆಂಗಳೂರು ನಗರದಲ್ಲಿಯೇ 20 ಪ್ರಕರಣಗಳು ವರದಿಯಾಗಿವೆ. ಕೋವಿಡ್‌ನ ಹೊಸ 74 ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರೂ ಇತರೆ ರೋಗಗಳ ಹಿನ್ನೆಲೆ ಉಳ್ಳವರು. ಇವರಲ್ಲಿ ಒಬ್ಬರು ಮೈಸೂರು ಹಾಗೂ ಮತ್ತೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.