̆Deadliest Cyclones: ಭಾರತ ಕಂಡ ಡೆಡ್ಲಿ ಸೈಕ್ಲೋನ್‌ಗಳು ಮತ್ತು ಅದರ ಪರಿಣಾಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ̆Deadliest Cyclones: ಭಾರತ ಕಂಡ ಡೆಡ್ಲಿ ಸೈಕ್ಲೋನ್‌ಗಳು ಮತ್ತು ಅದರ ಪರಿಣಾಮ

̆Deadliest Cyclones: ಭಾರತ ಕಂಡ ಡೆಡ್ಲಿ ಸೈಕ್ಲೋನ್‌ಗಳು ಮತ್ತು ಅದರ ಪರಿಣಾಮ

̆Deadliest Cyclones: ಬಿಪರ್‌ಜೋಯ್ ಎಂಬ ಹೆಸರಿನ ತೀವ್ರ ಚಂಡಮಾರುತವು ಈ ವಾರ ಭಾರತದ ಪಶ್ಚಿಮ ರಾಜ್ಯ ಗುಜರಾತ್ ಮತ್ತು ಪಾಕಿಸ್ತಾನದ ದಕ್ಷಿಣ ಭಾಗಗಳನ್ನು ಅಪ್ಪಳಿಸುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಮಿತ್ತವಾಗಿ ಈ ಹಿಂದಿನ ಡೆಡ್ಲಿ ಸೈಕ್ಲೋನ್‌ಗಳ ಪೈಕಿ ಆಯ್ದವುಗಳ ವಿವರ ಇಲ್ಲಿದೆ.

ಚಂಡಮಾರುತದ ಪರಿಣಾಮವಾಗಿ ಮುಂಬೈನ ಕೊಲಾಬಾದಲ್ಲಿ ಸಮುದ್ರದ ಮುಂಭಾಗದಲ್ಲಿ ಉಬ್ಬರವಿಳಿತಗಳು ಅಪ್ಪಳಿಸುತ್ತವೆ.
ಚಂಡಮಾರುತದ ಪರಿಣಾಮವಾಗಿ ಮುಂಬೈನ ಕೊಲಾಬಾದಲ್ಲಿ ಸಮುದ್ರದ ಮುಂಭಾಗದಲ್ಲಿ ಉಬ್ಬರವಿಳಿತಗಳು ಅಪ್ಪಳಿಸುತ್ತವೆ. (PTI)

ಭಾರತದ ಪಶ್ಚಿಮ ರಾಜ್ಯ ಗುಜರಾತ್ (Gujarat) ಮತ್ತು ಪಾಕಿಸ್ತಾನ (Pakistan)ದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಬಿಪರ್‌ಜೋಯ್ (Biparjoy) ಎಂಬ ಹೆಸರಿನ ಚಂಡಮಾರುತ (Cyclone) ಸದ್ದುಮಾಡುತ್ತಿದೆ. ಈ ಚಂಡಮಾರುತದ ಸುಳಿವನ್ನು ಈಗಾಗಲೇ ಭಾರತದ ಹವಾಮಾನ ಇಲಾಖೆ ನೀಡಿದೆ.

ಬಿಪರ್‌ಜೋಯ್, ಗಂಟೆಗೆ 125-135 ಕಿಲೋ ಮೀಟರ್‌ ( ಗಂಟೆಗೆ 78-84 ಮೈಲಿ) ಗರಿಷ್ಠ ವೇಗದೊಂದಿಗೆ ಹೋಗುತ್ತಿದ್ದು, ನಿರಂತರ ಗಾಳಿಯ ವೇಗವನ್ನು ಗಂಟೆಗೆ 150 ಕಿಲೋ ಮೀಟರ್‌ ವೇಗದಲ್ಲಿದೆ. ಗುಜರಾತ್‌ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಗುರುವಾರ ಭೂಕುಸಿತವನ್ನು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಚಂಡಮಾರುತ ಎದುರಿಸುವುದಕ್ಕೆ ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಬಹಳಷ್ಟು ಮುಂದುವರಿದಿದೆ. ಇಂತಹ ಸನ್ನಿವೇಶದಲ್ಲಿ ಸಹಜವಾಗಿಯೇ ಚಂಡಮಾರುತಗಳ ಇತಿಹಾಸದ ಕಡೆಗೆ ನೋಟ ಹರಿದುಬಿಡುತ್ತದೆ. ಭಾರತದ ಮಟ್ಟಿಗೆ ಅತ್ಯಂತ ಡೆಡ್ಲಿ ಆಗಿದ್ದ ಈ ಹಿಂದಿನ ಚಂಡಮಾರುತಗಳ ವಿವರ ಇಲ್ಲಿದೆ.

ಗುಜರಾತ್‌ ಮೇ 2021

ಟೌಕ್ಟೇ ಎಂಬ ಹೆಸರಿನ ಚಂಡಮಾರುತ 2021ರ ಮೇ ತಿಂಗಳಲ್ಲಿ ಗುಜರಾತ್‌ ಕರಾವಳಿಗೆ ಅಪ್ಪಳಿಸಿತ್ತು. ಅತ್ಯಂತ ತೀವ್ರ ವೇಗದಲ್ಲಿದ್ದ ಚಂಡಮಾರುತವು ಕರಾವಳಿಗೆ ಅಪ್ಪಳಿಸಿದಾಗ ಅದರ ವೇಗ 210 ಕಿಲೋಮೀಟರ್‌ ಇತ್ತು. 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಒಡಿಶಾ ಮೇ 2019

ಫಣಿ ಹೆಸರಿನ ಚಂಡಮಾರುತ ಭಾರತದ ಪೂರ್ವ ಕರಾವಳಿಗೆ 2019ರ ಮೇ ತಿಂಗಳಲ್ಲಿ ಅಪ್ಪಳಿಸಿತ್ತು. ಬಲಿಷ್ಠ ಚಂಡಮಾರುತ ಅಪ್ಪಳಿಸಿದ ಕಾರಣ 100 ಜನ ಮೃತಪಟ್ಟಿದ್ದಾರೆ. ಒಂದೊಮ್ಮೆ ಮುಂಜಾಗ್ರತಾ ಕ್ರಮವಾಗಿ ಜನರನ್ನು ಸ್ಥಳಾಂತರ ಮಾಡದೇ ಇರುತ್ತಿದ್ದರೆ ಸಾವು ನೋವಿನ ಸಂಖ್ಯೆ 12 ಲಕ್ಷ ದಷ್ಟಾಗುತ್ತಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

ಒಡಿಶಾ ಅಕ್ಟೋಬರ್‌ 1999

'ಸೂಪರ್ ಸೈಕ್ಲೋನಿಕ್ ಚಂಡಮಾರುತʼವು 1999ರ ಅಕ್ಟೋಬರ್‌ನಲ್ಲಿ ಗಂಟೆಗೆ 260 ಕಿಲೋ ಮೀಟರ್‌ ವೇಗದಲ್ಲಿ ಒಡಿಶಾದ ಕರಾವಳಿಗೆ ಅಪ್ಪಳಿಸಿತ್ತು. ಇದರ ಪರಿಣಾಮ ಭೂಕುಸಿತ ಸಂಭವಿಸಿತ್ತು. ಹೀಗಾಗಿ ಅಧಿಕೃತ ಅಂದಾಜಿನ ಪ್ರಕಾರ, 9,885 ಜನರು ಸಾವನ್ನಪ್ಪಿದರು. 2,142 ಮಂದಿ ಗಾಯಗೊಂಡರು.

ಗುಜರಾತ್‌ ಜೂನ್‌ 1998

ಗುಜರಾತ್‌ ಕರಾವಳಿ, ಪೋರ್‌ಬಂದರ್‌ ಸಮೀಪಕ್ಕೆ 1998ರ ಜೂನ್‌ ತಿಂಗಳು ಅಪ್ಪಳಿಸಿದ್ದ ಚಂಡಮಾರುತ 167 ಕಿಲೋ ಮೀಟರ್‌ ವೇಗ ಹೊಂದಿತ್ತು. ಈ ಚಂಡಮಾರುತದ ಪರಿಣಾಮ ಸಂಭವಿಸಿದ ಭೂಕುಸಿತದಿಂದಾಗಿ 1,173 ಜನ ಮೃತಪಟ್ಟು, 1,774 ಜನ ನಾಪತ್ತೆಯಾದರು ಎಂಬುದು ಅಧಿಕೃತ ಮಾಹಿತಿ. ಆದರೆ, ಮಾಧ್ಯಮ ವರದಿಗಳ ಪ್ರಕಾರ ಕನಿಷ್ಠ 4,000 ಜನ ಮೃತರಾಗಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.