Delhi Heat: ದೆಹಲಿಯಲ್ಲಿ ದಾಖಲೆಯ 52.3 ಡಿಗ್ರಿ ಭಾರೀ ಉಷ್ಣಾಂಶ, ಬಿಸಿಲಿಗೆ ಬಳಲಿದ ಉತ್ತರ ಭಾರತ ಜನ
ದೆಹಲಿಯಲ್ಲಿ ( Delhi Temperature) ಬುಧವಾರ ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋದರು. ಅದೂ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ದಾಖಲೆಯನ್ನೂ ದೆಹಲಿ ಮಹಾನಗರ ಬರೆಯಿತು.

ದೆಹಲಿ: ಇನ್ನೇನು ಮುಂಗಾರು ಮಳೆ ಆರಂಭವಾಗಬೇಕು. ಜೂನ್ ಮೊದಲ ವಾರವೇ ಮುಂಗಾರು ಪ್ರವೇಶಿಸಲಿದೆ ಎನ್ನುವ ವರದಿಗಳು ಬರುತ್ತಿರುವ ನಡುವೆಯೇ ಉತ್ತರ ಭಾರತ ಬೆಂಕಿಯಂತಹ ಬಿಸಿಲಿನಿಂದ ಬಸವಳಿದಿದೆ. ಭಾರತದ ರಾಜಧಾನಿ ನಗರಿ ದೆಹಲಿಯಲ್ಲಿ ಬುಧವಾರ ದಾಖಲೆಯ ಉಷ್ಣಾಂಶ ದಾಖಲಾಗಿದೆ. ಬುಧವಾರರಂದು ಈವರೆಗಿನ ಅತಿ ಹೆಚ್ಚಿನ 52.3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಂಡು ಬಂದಿದೆ. ಬಿಸಿಲಿನಿಂದ ಉತ್ತರ ಭಾರತದ ಹಲವು ರಾಜ್ಯಗಳ ಜನ ಸುಸ್ತಾಗಿ ಹೋಗಿದ್ದಾರೆ.
2002ರಲ್ಲಿ ದಾಖಲಾಗಿದ್ದು 49.2 ಡಿಗ್ರಿ ಸೆಲ್ಸಿಯಸ್ ಈವರೆಗಿನ ಅತಿ ಹೆಚ್ಚಿನ ಉಷ್ಣಾಂಶವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ದಾಖಲಾದ 52.3 ಡಿಗ್ರಿ ಸೆಲ್ಸಿಯಸ್ ಈವರೆಗಿನ ದಾಖಲೆಯಾಗಿದೆ. ದೆಹಲಿಯ ಜನ ಬಿಸಿಲಿನ ಝಳದಿಂದ ಬಳಲಿದ್ದು. ಸಂಜೆ ಹೊತ್ತಿಗೆ ಸುರಿದ ಮಳೆ ಕೊಂಚ ತಂಪನ್ನೆರೆಯಿತು.
ಬುಧವಾರ, ವಾಯುವ್ಯ ದೆಹಲಿಯ ಮುಂಗೇಶ್ಪುರದಲ್ಲಿ ಗರಿಷ್ಠ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ರಾಜಧಾನಿಯಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಸುಡುವ ಬಿಸಿಗಾಳಿ ಮಂಗಳವಾರದ ತೀವ್ರ ತಾಪಮಾನದ ಮುಂದುವರೆದ ಭಾಗ. ಮುಂಗೇಶ್ಪುರದ ಅದೇ ಹವಾಮಾನ ಕೇಂದ್ರವು ಮಂಗಳವಾರ 49.9 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿತ್ತು.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ದೆಹಲಿ ಕೇಂದ್ರದ ಅಧಿಕಾರಿ ಕುಲದೀಪ್ ಶ್ರೀವಾಸ್ತವ, ದೆಹಲಿಯ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಬಿಸಿಯ ವಾತಾವರಣವಿದೆ. ಮಂಗೇಶಪುರ, ನರೇಲಾ,ನಾಜಫ್‌ಗರ್ ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚು ಕಂಡು ಬಂದಿದೆ. ಅದರಲ್ಲೂ ಬಿಸಿ ಗಾಳಿಯ ವಾತಾವರಣವೂ ಇದ್ದು. ಜನ ಹೊರಗೆ ಬರುವುದು ಕಡಿಮೆ ಇತ್ತು ಎಂದು ಹೇಳಿದ್ದಾರೆ.
ದೆಹಲಿಯ ಸಾಮಾನ್ಯ ಉಷ್ಣಾಂಶಗಿಂತ ಇದು 9 ಡಿಗ್ರಿ ಸೆಲ್ಸಿಯಸ್‌ನು ಅಧಿಕ. ಈಗಾಗಲೆ ಬಿರು ಬಿಸಿಲ ರೆಡ್ ಅಲರ್ಟ್ ಅನ್ನು ಘೋಷಿಲಾಗಿದೆ. ಬಿಸಿಲಿನಿಂದ ನಿರ್ಜಲೀಕರಣ ಉಂಟಾಗಿ ತೊಂದರೆಯಾಗುವ ಸಾಧ್ಯತೆ ಅಧಿಕ. ಹೊರಗಡೆ ಹೋಗುವವರು ಬಿಸಿಲಿನಿಂದ ತಪ್ಪಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು ಎನ್ನುವ ಸಲಹೆ ನೀಡಲಾಗಿದೆ.
ಇದಲ್ಲದೇ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಸಹಿತ ಹಲವು ರಾಜ್ಯಗಳಲ್ಲಿಯೂ ಬಿಸಿಲಿನ ವಾತಾವರಣ ಜೋರಾಗಿದೆಯೇ ಇದೆ. ಕೆಲವು ಕಡೆಗಳಲ್ಲಿ ಶಾಲಾ ಮಕ್ಕಳು ಕುಸಿದು ಬಿದ್ದ ಘಟನೆಯೂ ವರದಿಯಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
