Raghav Chadha: ದೆಹಲಿ ಸೇವಾ ಮಸೂದೆ ಆಯ್ಕೆ ಸಮಿತಿಯಲ್ಲಿ ನಕಲಿ ಸಹಿ ಆರೋಪ; ಎಎಪಿ ಸಂಸದ ರಾಘವ್ ಚಡ್ಡಾ ವಿರುದ್ಧ ವಿವಿಧ ಪಕ್ಷದ ಸಂಸದರ ದೂರು
ದೆಹಲಿ ಸೇವಾ ಮಸೂದೆಯ ಆಯ್ಕೆ ಸಮಿತಿಗೆ ತಮ್ಮ ಒಪ್ಪಿಗೆ ಇಲ್ಲದೆ, ನಕಲಿ ಸಹಿ ಮಾಡಿದ್ದಾರೆ ಎಂದು ಆರೋಪಿಸಿ ಐವರು ಸಂಸದರು ಎಎಪಿ ಸಂಸದ ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಈ ಪ್ರಕರಣವು ರಾಘವ್ ಅವರಿಗೆ ಉರುಳಾಗುವ ಸಾಧ್ಯತೆ ಇದೆ.
ನವದೆಹಲಿ: ರಾಜ್ಯಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗಿಕಾರಕ್ಕೆ ನಡೆದ ಮತದಾನ ವೇಳೆ ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸಚಿವರಾದ ಹರ್‌ದೀಪ್ ಸಿಂಗ್ ಪುರಿ ಮತ್ತು ವಿ ಮುರುಳೀಧರನ್ ತನಿಖೆಗೆ ಆದೇಶಿಸಿದ್ದಾರೆ. ಆಪ್ ಸಂಸದ ರಾಘವ್ ಚಡ್ಡಾ ತಮ್ಮ ನಕಲಿ ಸಹಿ ಹಾಕಿದ್ದಾರೆ ಎಂದು ಐವರು ಸದಸ್ಯರು ಆರೋಪ ಮಾಡಿದ್ದು, ಇದು ಗಂಭೀರ ಪ್ರಕರಣ ಎಂದು ಕರೆದಿದ್ದಾರೆ.
ಬಿಜೆಪಿಯ ಎಸ್ ಫಾಂಗ್ಯಾನ್ ಕೊನ್ಯಾಕ್, ನರಹರಿ ಅಮೀನ್, ಸುಧಾಂಶು ತ್ರಿವೇದಿ, ಎಐಎಡಿಎಂಕೆ ಎಂ. ತಂಬಿದುರೈ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಪ್ರಸ್ತಾವಿಯ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ದೂರಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಘವ್ ವಿರುದ್ಧ ವಿಶೇಷ ಹಕ್ಕು ಮಂಡಿಸಲು ಐವರು ರಾಜ್ಯಸಭಾ ಸಂಸದರು ಒತ್ತಾಯಿಸಿರುವ ಕಾರಣ ರಾಘವ್ ಚಡ್ಡಾ ದೊಡ್ಡ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.
ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರು ದೂರಗಳ ಕುರಿತು ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಮಸೂದೆಯನ್ನು ಪರಿಶೀಲಿಸಲು ಮೇಲ್ಮನೆಯಲ್ಲಿ ರಾಘವ್ ಚಡ್ಡಾ ಆಯ್ಕೆ ಸಮಿತಿಯಲ್ಲಿ ಪ್ರಸ್ತಾವನೆ ಮುಂದಿಟ್ಟರು.
ಈ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ಚಡ್ಡಾ ʼವಿಶೇಷಾಧಿಕಾರ ಸಮಿತಿ ನನಗೆ ನೋಟಿಸ್ ಕಳುಹಿಸಲು, ನಾನು ಸಮಿತಿಗೆ ನನ್ನ ಉತ್ತರ ನೀಡುತ್ತೇನೆʼ ಎಂದಿದ್ದಾರೆ.
ಚಡ್ಡಾ ಅವರ ತಿದ್ದುಪಡಿಯ ವಿವಾದಾತ್ಮಕ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಲು ವಾಯ್ಸ್ ನೋಟ್ ಮೂಲಕ ನಿರಾಕರಿಸಲಾಯಿತು.
ವಿಭಾಗ