Telangana Elections: ತೆಲಂಗಾಣದಲ್ಲಿ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೊಟೀಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Elections: ತೆಲಂಗಾಣದಲ್ಲಿ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೊಟೀಸ್‌

Telangana Elections: ತೆಲಂಗಾಣದಲ್ಲಿ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೊಟೀಸ್‌

EC Notice to Karnataka ಗ್ಯಾರಂಟಿ ಯೋಜನೆಗಳ ಜಾರಿ ವಿಚಾರವಾಗಿ ತೆಲಂಗಾಣದಲ್ಲಿ( Telangala Elections) ನೀಡುತ್ತಿರುವ ಜಾಹೀರಾತುಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಕೇಂದ್ರ ಚುನಾವಣೆ ಆಯೋಗ ( Election Commission of India) ಕರ್ನಾಟಕ ಸರ್ಕಾರಕ್ಕೆ( Karnataka Goverment) ತಾಕೀತು ಮಾಡಿದೆ.

ತೆಲಂಗಾಣ ಚುನಾವಣೆಗೆ ಜಾಹೀರಾತು ನೀಡಿದ ವಿಚಾರವಾಗಿ ಕರ್ನಾಟಕ ಸರ್ಕಾರಕ್ಕ ಕೇಂದ್ರ ಚುನಾವಣೆ ಆಯೋಗ ನೊಟೀಸ್‌ ನೀಡಿದೆ.
ತೆಲಂಗಾಣ ಚುನಾವಣೆಗೆ ಜಾಹೀರಾತು ನೀಡಿದ ವಿಚಾರವಾಗಿ ಕರ್ನಾಟಕ ಸರ್ಕಾರಕ್ಕ ಕೇಂದ್ರ ಚುನಾವಣೆ ಆಯೋಗ ನೊಟೀಸ್‌ ನೀಡಿದೆ.

ಹೈದರಾಬಾದ್​: ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಜಾಹೀರಾತು ನೀಡಿದ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ನೊಟೀಸ್‌ ಜಾರಿ ಮಾಡಿದೆ.

ಕರ್ನಾಟಕದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಕುರಿತಾಗಿ ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾಹೀರಾತುಗಳನ್ನು ನೀಡಿತ್ತು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ನೊಟೀಸ್‌ ಜಾರಿ ಮಾಡಿದೆ. ಅನುಮತಿ ಪಡೆಯದೇ ಜಾಹೀರಾತು ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ವಿರುದ್ದ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ನೊಟೀಸ್‌ನಲ್ಲಿ ಉಲ್ಲೇಖಿಸಿದೆ. ನವೆಂಬರ್​ 28ರ ಮಂಗಳವಾರ ಸಂಜೆ ಸಂಜೆ 5 ರ ಒಳಗೆ ನೊಟೀಸ್‌ಗೆ ವಿವರಣೆ ನೀಡುವಂತೆ ಆಯೋಗವು ತಾಕೀತು ಮಾಡಿದೆ.

ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಲೆಂದು ಕರ್ನಾಟಕ ಸರ್ಕಾರವು ಅಲ್ಲಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಕುರಿತು ಜಾಹೀರಾತುಗಳನ್ನು ನೀಡುತ್ತಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಬಿಜೆಪಿ ಹಾಗೂ ಭಾರತ ರಾಷ್ಟ್ರ ಸಮಿತಿ ಪಕ್ಷಗಳು ದೂರು ನೀಡಿದ್ದವು.

ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ನೊಟೀಸ್‌ ಜಾರಿ ಮಾಡಿ, ಈಗಾಗಲೇ ಯಾವುದೇ ಜಾಹೀರಾತು ಪ್ರಕಟಣೆ ಮುನ್ನ ಆಯೋಗದ ಅನುಮತಿ ಕಡ್ಡಾಯ ಎಂದು ಅಕ್ಟೋಬರ್‌ನಲ್ಲಿಯೇ ತಿಳಿಸಲಾಗಿತ್ತು. ಹೀಗಿದ್ದರೂ ಕರ್ನಾಟಕ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಜಾಹೀರಾತು ನೀಡಲಾಗಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಕೂಡಲೇ ಜಾಹೀರಾತು ನೀಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದೆ.

ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರಕ್ಕೆ ರೈತ ಬಂಧು ಯೋಜನೆಯಡಿ ರೈತರಿಗೆ ತಮ್ಮ ರಬಿ ಬೆಳೆಗಳನ್ನು ಬೆಳೆಯಲು ಹಣಕಾಸಿನ ನೆರವು ವಿತರಣೆಗೆ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗವು ಹಿಂಪಡೆದಿತ್ತು. ಈ ಕ್ರಮದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದ್ದ ತೆಲಂಗಾಣದ ರಾಜ್ಯದ ಸಚಿವರು ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಆಯೋಗ ಹೇಳಿತ್ತು. ಬಿಆರ್​ಎಸ್​ ಮೇಲೆ ನಿರ್ಬಂಧಗಳನ್ನು ಹೇರಬೇಕು ಎಂದು ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಇದರ ನಡುವೆ ಕರ್ನಾಟಕ ಸರ್ಕಾರಕ್ಕೆ ನೊಟೀಸ್‌ ಜಾರಿಯಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.