Vande Bharat Sleeper: ವಂದೇ ಭಾರತ್ ಸ್ಲೀಪರ್ ಕೋಚ್‌ನ ಫಸ್ಟ್ ಲುಕ್ ವೈರಲ್
ವಂದೇ ಭಾರತ್ ಸ್ಲೀಪರ್ ಕೋಚ್‌ನ ಒಳಾಂಗಣದ ಪೋಟೋಸ್ ಎಕ್ಸ್‌ನಲ್ಲಿ ವೈರಲ್ ಆಗಿದೆ. ವಂದೇ ಭಾರತ್ ಸ್ಲೀಪರ್ ಕೋಚ್‌ನ ಫಸ್ಟ್ ಲುಕ್ ಕುತೂಹಲ ಕೆರಳಿಸಿದ್ದು, ಅದರ ವಿವರ ಹೀಗಿದೆ.
ಭಾರತದಾದ್ಯಂತ 2024ರ ಫೆಬ್ರವರಿ ವೇಳೆ ಸಂಚಾರ ಆರಂಭಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲಿನ ಫಸ್ಟ್ ಲುಕ್ ಇಮೇಜಸ್ ಬಹಿರಂಗವಾಗಿವೆ. ಹೊಸ ವಿನ್ಯಾಸದ ವಂದೇ ಭಾರತ್ ಸ್ಲೀಪರ್ ರೈಲನ್ನು ಭಾರತೀಯ ರೈಲ್ವೆ ತಯಾರಿಸುತ್ತಿದ್ದು, ಕೆಲವು ಟ್ವಿಟರ್ ಬಳಕೆದಾರರು ಇದರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
“ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಮೊದಲ ನೋಟ ಅಥವಾ ಫಸ್ಟ್ ಲುಕ್. ವಂದೇ ಭಾರತ್ ಸ್ಲೀಪರ್ ರೈಲು 857 ಬರ್ತ್‌ಗಳನ್ನು ಹೊಂದಿರುತ್ತದೆ. ಈ ಪೈಕಿ ಪ್ರಯಾಣಿಕರಿಗೆ 823 ಮತ್ತು ಸಿಬ್ಬಂದಿಗೆ 34. ಪ್ರತಿ ಕೋಚ್‌ನಲ್ಲಿ ಮಿನಿ ಪ್ಯಾಂಟ್ರಿ ಇರುತ್ತದೆ”ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಈ ಸ್ಲೀಪರ್ ರೈಲುಗಳನ್ನು ಭಾರತದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್) ಮತ್ತು ರಷ್ಯಾದ ಟಿಎಂಎಚ್ ಗ್ರೂಪ್‌ನ ಒಕ್ಕೂಟವು ತಯಾರಿಸುತ್ತಿದೆ. ಇದು ವಂದೇ ಭಾರತ್ ಸ್ಲೀಪರ್ ಟ್ರೈನ್‌ಗಳ 200 ಹೊಸ ಆವೃತ್ತಿಗಳಲ್ಲಿ 120 ಅನ್ನು ಪೂರೈಸಲು ಕಡಿಮೆ ಬಿಡ್ ಮಾಡಿತ್ತು. ಆದರೆ ಇತರ 80 ಟ್ರೇನ್ ಅನ್ನು ಟಿಟಾಗಢ್ ವ್ಯಾಗನ್ಸ್ ಮತ್ತು ಬಿಎಚ್‌ಇಎಲ್‌ನ ಒಕ್ಕೂಟ ತಯಾರಿಸಲಿದೆ ಎಂದು ಅವರು ಬರೆದುಕೊಂಡಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲಿನ ಫಸ್ಟ್ ಲುಕ್
ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಹೊಸ ವಿನ್ಯಾಸವನ್ನು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ತಯಾರಿಸಲಿದೆ. ಪ್ರಯಾಣಿಕರು ರಾತ್ರಿ ಇಡೀ ಈ ಹೈಸ್ಪೀಡ್ ರೈಲುಗಳಲ್ಲಿ ದೂರ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳು ಭಾರತೀಯ ರೈಲ್ವೇ ಫ್ಲೀಟ್‌ಗೆ ಗಮನಾರ್ಹ ಸೇರ್ಪಡೆಯಾದಂತಾಗಲಿವೆ ಎಂದು ಎಎನ್‌ಐ ಸುದ್ದಿಸಂಸ್ಥೆಯ ವರದಿ ಹೇಳಿದೆ.
ಪ್ರಗತಿಶೀಲ ಮತ್ತು ಸ್ವಾವಲಂಬಿ ಭಾರತದ ಸಂಕೇತ
ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಗತಿಶೀಲ ಮತ್ತು ಸ್ವಾವಲಂಬಿ ಭಾರತದ ಸಂಕೇತವಾಗಿ ಕಾಣಲಾಗುತ್ತದೆ. ಸ್ಥಳೀಯ ಸೆಮಿ ಸ್ಪೀಡ್ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಫೀಚರ್‌ಗಳಾಗಿವೆ ಎಂದು ನಂಬಲಾಗಿದೆ.
ವಿಶ್ವದರ್ಜೆಯ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ ನೀಡುತ್ತದೆ. ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 15 ರಂದು ಚಾಲನೆ ನೀಡಿದರು.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾದ ಈ ರೈಲು ಸೆಟ್ 'ಮೇಕ್-ಇನ್-ಇಂಡಿಯಾ' ಉಪಕ್ರಮದ ಸಂಕೇತವಾಗಿದೆ ಮತ್ತು ಭಾರತದ ಎಂಜಿನಿಯರಿಂಗ್ ಪರಾಕ್ರಮದ ಪ್ರತೀಕವಾಗಿದೆ. ಸ್ಥಳೀಯ ಸೆಮಿ ಹೈ ಸ್ಪೀಡ್ ರೈಲು ಸೆಟ್‌ಗಳನ್ನು ತಯಾರಿಸುವ ಯೋಜನೆಯು 2017ರ ಮಧ್ಯದಲ್ಲಿ ಪ್ರಾರಂಭವಾಯಿತು ಮತ್ತು 18 ತಿಂಗಳೊಳಗೆ, ಚೆನ್ನೈನ ಐಸಿಎಫ್ ರೈಲು-18 ಅನ್ನು ಪೂರ್ಣಗೊಳಿಸಿತು.
ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲಿಗೆ 2019 ರ ಜನವರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಯಿತು. ಈ ರೈಲು ಕೋಟಾ-ಸವಾಯಿ ಮಾಧೋಪುರ್ ವಿಭಾಗದಲ್ಲಿ ಗಂಟೆಗೆ 180 ಕಿಮೀ ಗರಿಷ್ಠ ವೇಗವನ್ನು ಸಾಧಿಸಿತು.
ವಿಭಾಗ