First Sunrise 2024: ವರ್ಷದ ಮೊದಲ ಸೂರ್ಯೋದಯವನ್ನು ಕಣ್ತುಂಬಿಕೊಂಡ ಜನ, ಇಲ್ಲಿವೆ ಕೆಲವು ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  First Sunrise 2024: ವರ್ಷದ ಮೊದಲ ಸೂರ್ಯೋದಯವನ್ನು ಕಣ್ತುಂಬಿಕೊಂಡ ಜನ, ಇಲ್ಲಿವೆ ಕೆಲವು ವಿಡಿಯೋ

First Sunrise 2024: ವರ್ಷದ ಮೊದಲ ಸೂರ್ಯೋದಯವನ್ನು ಕಣ್ತುಂಬಿಕೊಂಡ ಜನ, ಇಲ್ಲಿವೆ ಕೆಲವು ವಿಡಿಯೋ

ಕ್ಯಾಲೆಂಡರ್ ವರ್ಷ 2023 ಮುಗಿಯುವ ಹೊತ್ತಿನಲ್ಲಿ ವರ್ಷದ ಕೊನೆಯ ಸೂರ್ಯಾಸ್ತವನ್ನು ಜನ ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದರು ಇದೇ ರೀತಿ, ಭಾರತದ ಉದ್ದಗಲಕ್ಕೂ ವಿವಿಧೆಡೆ 2024ರ ಮೊದಲ ಸೂರ್ಯೋದಯವನ್ನು ಕೂಡ ಜನ ಕಣ್ತುಂಬಿಕೊಂಡಿದ್ದಾರೆ. ಇಲ್ಲಿವೆ ಕೆಲವು ಆಯ್ದ ಸ್ಥಳಗಳಲ್ಲಿ ಕಂಡ ವರ್ಷದ ಮೊದಲ ಸೂರ್ಯೋದಯದ ವಿಡಿಯೋ.

ಅಸ್ಸಾಂನ ಗುವಾಹಟಿಯಲ್ಲಿ ಕ್ಯಾಮೆರಾ ಕಣ್ಣಿಗೆ ಕಂಡ ವರ್ಷದ ಮೊದಲ ಸೂರ್ಯೋದಯದ ದೃಶ್ಯ ಮೊದಲನೇಯದು. ಕೋಲ್ಕತದ ಹೌರಾ ಸೇತುವೆಯಿಂದ ಕಂಡ 2024ರ ಮೊದಲ ಸೂರ್ಯೋದಯ.
ಅಸ್ಸಾಂನ ಗುವಾಹಟಿಯಲ್ಲಿ ಕ್ಯಾಮೆರಾ ಕಣ್ಣಿಗೆ ಕಂಡ ವರ್ಷದ ಮೊದಲ ಸೂರ್ಯೋದಯದ ದೃಶ್ಯ ಮೊದಲನೇಯದು. ಕೋಲ್ಕತದ ಹೌರಾ ಸೇತುವೆಯಿಂದ ಕಂಡ 2024ರ ಮೊದಲ ಸೂರ್ಯೋದಯ. (ANI )

ಬಹಳ ನಿರೀಕ್ಷೆ, ಹೊಸತನ ಮತ್ತು ಶುಭ ಫಲಗಳನ್ನು ಬಯಸುತ್ತ ಜಗತ್ತು ಹೊಸ ವರ್ಷ 2024 ಅನ್ನು ಬರಮಾಡಿಕೊಂಡಿದೆ. ನಾಡಿನ ಉದ್ದಗಲಕ್ಕೂ ದೇವಸ್ಥಾನ, ಚರ್ಚ್‌ ಮತ್ತು ಇತರೆ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದಿವೆ.

ಹಿಂದು ಸಂಪ್ರದಾಯಕದ ದಿನದರ್ಶಿ ಪ್ರಕಾರ ಈಗ ಕಾರ್ತಿಕ/ ಮಾರ್ಗಶಿರಾ ಮಾಸ ನಡೆಯುತ್ತಿದ್ದು, ಅರುಣೋದಯದಲ್ಲಿ ಭಗವಂತನ ಆರಾಧನೆ, ಪೂಜೆ ನಡೆಯುತ್ತಿವೆ. ಹೊಸ ಕ್ಯಾಲೆಂಡರ್ ವರ್ಷ 2024ರ ಮೊದಲ ಸೂರ್ಯೋದಯದ ಹಿನ್ನೆಲೆಯಲ್ಲೂ ಜನ ದೇವಸ್ಥಾನ, ಚರ್ಚ್ ಮತ್ತು ಇತರೆ ಧಾರ್ಮಿಕ ಶ್ರದ್ರ್ಧಾ ಕೇಂದ್ರಗಳಿಗೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಅಷ್ಟೇ ಅಲ್ಲ, ಮೊದಲ ದಿನದ ಸೂರ್ಯೋದಯ ವೀಕ್ಷಿಸುವುದಕ್ಕೆ ಕಾತರರಾಗಿದ್ದರು.

ಎಎನ್‌ಐ ಸುದ್ದಿ ಸಂಸ್ಥೆ ಕೆಲವು ಪ್ರದೇಶಗಳಲ್ಲಿ ಕಂಡ 2024ರ ಮೊದಲ ಸೂರ್ಯೋದಯದ ವಿಡಿಯೋವನ್ನು ಶೇರ್ ಮಾಡಿದೆ.

ಕೋಲ್ಕತದ ಹೌರಾ ಸೇತುವೆಯಿಂದ ಸೆರೆ ಹಿಡಿದ ವರ್ಷದ ಮೊದಲ ಸೂರ್ಯೋದಯ ಹೀಗಿತ್ತು..

ಒಡಿಶಾದ ಪುರಿ ಬೀಚ್‌ನಲ್ಲಿ 2024ರ ಸೂರ್ಯೋದಯದ ದೃಶ್ಯ…

ಅಸ್ಸಾಂನ ಗುವಾಹಟಿಯಲ್ಲಿ 2024ರ ಮೊದಲ ಸೂರ್ಯೋದಯ ಗೋಚರವಾದುದು ಹೀಗೆ

ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಿಂದ ಇಂದು ಇಸ್ರೋ ಈ ವರ್ಷದ ಮೊದಲ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇಂತಹ ವಿಶೇಷ ಸಂದರ್ಭದಲ್ಲಿ 2024ರ ಮೊದಲ ಸೂರ್ಯೋದಯ ಕಂಡದ್ದು ಹೀಗೆ..

ಒಡಿಶಾದ ಭುವನೇಶ್ವರದಲ್ಲಿ ಕಂಡ 2024ರ ಮೊದಲ ಸೂರ್ಯೋದಯ

ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದಿಂದ ಗೋಚರಿಸಿದ 2024ರ ಮೊದಲ ಸೂರ್ಯೋದಯ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.