ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today: ಕರ್ನಾಟಕದಲ್ಲಿ ಚಿನ್ನದ ದರ ತಟಸ್ಥ, ಬೆಳ್ಳಿದರ ಇಳಿಕೆ, ಚಿನಿವಾರ ಪೇಟೆಯ ಶನಿವಾರದ ಧಾರಣೆ

Gold Price Today: ಕರ್ನಾಟಕದಲ್ಲಿ ಚಿನ್ನದ ದರ ತಟಸ್ಥ, ಬೆಳ್ಳಿದರ ಇಳಿಕೆ, ಚಿನಿವಾರ ಪೇಟೆಯ ಶನಿವಾರದ ಧಾರಣೆ

Gold Rate in Karnataka: ಕರ್ನಾಟಕದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಇಂದು ತಟಸ್ಥಗೊಂಡಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ ಕಂಡಿತ್ತು. ಬೆಳ್ಳಿ ದರ ತುಸು ಇಳಿಕೆ ಕಂಡಿದೆ.

Gold Price Today: ಕರ್ನಾಟಕದಲ್ಲಿ ಚಿನ್ನದ ದರ ತಟಸ್ಥ, ಬೆಳ್ಳಿದರ ಇಳಿಕೆ
Gold Price Today: ಕರ್ನಾಟಕದಲ್ಲಿ ಚಿನ್ನದ ದರ ತಟಸ್ಥ, ಬೆಳ್ಳಿದರ ಇಳಿಕೆ (Ashok Munjani)

ಬೆಂಗಳೂರು: ಕಳೆದ ಕೆಲವು ದಿನಗಳಿಂದ ತುಸುತುಸುವೇ ಏರಿಕೆ ಕಾಣುತ್ತಿದ್ದ ಚಿನ್ನದ ದರ ಇಂದು ತಟಸ್ಥವಾಗಿದೆ. ವಾರಾಂತ್ಯದಲ್ಲಿ ಚಿನ್ನಾಭರಣ ಖರೀದಿಸಲು ಬಯಸುವವರು ನಿನ್ನೆಯ ದರದಲ್ಲಿಯೇ ಇಂದು ಚಿನ್ನ ಖರೀದಿಸಬಹುದು. ಈ ಸಂದರ್ಭದಲ್ಲಿ ಬೆಳ್ಳಿದರ ತುಸು ಇಳಿಕೆ ಕಂಡಿದೆ. ಕರ್ನಾಟಕದ ಬೆಂಗಳೂರು, ಮೈಸೂರು, ಬಳ್ಳಾರಿ, ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಬೆಳಗ್ಗಿನ ಧಾರಣೆಯ ಪ್ರಕಾರ ಚಿನ್ನದ ದರ ಈ ಮುಂದಿನಂತೆ ಇದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,450 ರೂ ಇದೆ. 8 ಗ್ರಾಂ ಚಿನ್ನದ ಬೆಲೆ 43,600 ರೂಪಾಯಿ ಇದೆ. ಹತ್ತು ಗ್ರಾಂ ಚಿನ್ನದ ದರ 54,500 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,45,000 ರೂ. ನೀಡಬೇಕು.

ಅಪರಂಜಿ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,945 ರೂ. ಇದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,560 ರೂ. ನೀಡಬೇಕಾಗುತ್ತದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,450 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,94,500 ರೂ. ನೀಡಬೇಕು.

ಟ್ರೆಂಡಿಂಗ್​ ಸುದ್ದಿ

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಶನಿವಾರದ ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,500 ರೂ. ಇದೆ. ಮಂಗಳೂರು 54,500 ರೂ., ಮೈಸೂರಿನಲ್ಲಿ 54,500 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು.

ಚೆನ್ನೈನಲ್ಲಿ 54,750 ರೂ., ಮುಂಬೈನಲ್ಲಿ 54,500 ರೂ., ದೆಹಲಿಯಲ್ಲಿ 54,650 ರೂ., ಕೋಲ್ಕತಾದಲ್ಲಿ 54,500 ರೂ., ಹೈದರಾಬಾದ್‌ 54,500 ರೂ., ಕೇರಳ 54,500 ರೂ., ಪುಣೆ 54,500 ರೂ., ಅಹಮದಾಬಾದ್‌ 54,550 ರೂ., ಜೈಪುರ 54,650 ರೂ., ಲಖನೌ 54,650 ರೂ., ಕೊಯಮುತ್ತೂರು 54,750 ರೂ., ಮಧುರೈ 54,750 ರೂ. ಹಾಗೂ ವಿಜಯವಾಡ 54,500 ರೂ., ಇದೆ.

ಪ್ರಮುಖ ನಗರಗಳಲ್ಲಿ ಅಪರಂಜಿ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,450 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 59,730 ರೂ., ಮುಂಬೈನಲ್ಲಿ 59,450 ರೂ., ದೆಹಲಿಯಲ್ಲಿ 59,600 ರೂ., ಕೋಲ್ಕತಾದಲ್ಲಿ 59,450 ರೂ., ಹೈದರಾಬಾದ್‌ 59,450 ರೂ., ಕೇರಳ 59,450 ರೂ., ಪುಣೆ 59,450 ರೂ., ಅಹಮದಾಬಾದ್‌ 59,500 ರೂ., ಜೈಪುರ 59,600 ರೂ., ಲಖನೌ 59,600 ರೂ., ಕೊಯಮುತ್ತೂರು 59,730 ರೂ., ಮದುರೈ 59,730, ವಿಜಯವಾಡ 59,230 ರೂ. ಇದೆ.

ಬೆಳ್ಳಿ ದರ

ಒಂದು ಗ್ರಾಂ ಬೆಳ್ಳಿಗೆ 76.40 ರೂ., 8 ಗ್ರಾಂ ಬೆಳ್ಳಿಗೆ 611.20 ರೂ., 10 ಗ್ರಾಂ ಬೆಳ್ಳಿ ದರ 764 ರೂ., 100 ಗ್ರಾಂ ಬೆಳ್ಳಿಗೆ 7,640 ಮತ್ತು 1 ಕೆ.ಜಿ. ಬೆಳ್ಳಿ ದರ 76,400 ರೂಪಾಯಿ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.