Gold Price: ಶನಿವಾರ ಇಳಿಕೆ ಕಂಡ ಬಂಗಾರ, ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price: ಶನಿವಾರ ಇಳಿಕೆ ಕಂಡ ಬಂಗಾರ, ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ತಿಳಿದುಕೊಳ್ಳಿ

Gold Price: ಶನಿವಾರ ಇಳಿಕೆ ಕಂಡ ಬಂಗಾರ, ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ತಿಳಿದುಕೊಳ್ಳಿ

Gold Rate in Karnataka: ಇಂದು ಕರ್ನಾಟಕದಲ್ಲಿ ಅಪರಂಜಿ ಮತ್ತು 22 ಕ್ಯಾರೆಟ್‌ ಚಿನ್ನದ ದರ ಇಳಿಕೆ ಕಂಡಿದೆ. ದೆಹಲಿ ಮುಂಬೈ ಚೆನ್ನೈ ಸೇರಿದಂತೆ ಹೊರರಾಜ್ಯಗಳ ನಗರಗಳಲ್ಲಿಯೂ ದರ ಇಳಿಕೆ ಕಂಡಿದೆ. ಆದರೆ, ಬೆಳ್ಳಿ ದರ ಏರಿಕೆ ಕಂಡಿದೆ.

Gold Price: ಶನಿವಾರ ಇಳಿಕೆ ಕಂಡ ಬಂಗಾರ, ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮಾಹಿತಿ
Gold Price: ಶನಿವಾರ ಇಳಿಕೆ ಕಂಡ ಬಂಗಾರ, ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮಾಹಿತಿ (PTI)

ಬೆಂಗಳೂರು: ವಾರಾಂತ್ಯಗಳಲ್ಲಿ ಬಹುತೇಕರು ಬಿಡುವಿನಲ್ಲಿ ಇರುತ್ತಾರೆ. ಚಿನ್ನ ಬೆಳ್ಳಿಯಂತಹ ಖರೀದಿಯನ್ನು ವಾರಾಂತ್ಯದಲ್ಲಿ ಮಾಡುವವರು ಹೆಚ್ಚು. ಇಂದು ಕರ್ನಾಟಕದ ವಿವಿಧ ಚಿನ್ನದಂಗಡಿಗಳಿಗೆ ಹೋಗುವವರಿಗೆ ಬೇಸರವಾಗದು. ಏಕೆಂದರೆ, ನಿನ್ನೆಗೆ ಹೋಲಿಸಿದರೆ ಇಂದು ಕರ್ನಾಟಕದಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ಹೊರರಾಜ್ಯಗಳಲ್ಲಿಯೂ ಇದೇ ಇಳಿಕೆ ಟ್ರೆಂಡ್‌ ಇದೆ. ಆದರೆ, ಚಿನ್ನಕ್ಕೆ ವ್ಯತಿರಿಕ್ತವಾಗಿ ಇಂದು ಬೆಳ್ಳಿ ದರ ಏರಿಕೆ ಕಂಡಿದೆ. ರಾಜ್ಯ ಮತ್ತು ಹೊರರಾಜ್ಯದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದು ಕರ್ನಾಟಕದಲ್ಲಿ ಅಪರಂಜಿ ಮತ್ತು 22 ಕ್ಯಾರೆಟ್‌ ಚಿನ್ನದ ದರ ಇಳಿಕೆ ಕಂಡಿದೆ. ಶನಿವಾರ ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,415 ರೂ ಇದೆ. ಆದರೆ, ಒಂದು ಗ್ರಾಂ ಅಪರಂಜಿ ಚಿನ್ನದ ದರ 5,907 ರೂ. ಇದೆ. ಇದೇ ಸಮಯದಲ್ಲಿ ಬೆಳ್ಳಿ ದರ ಗ್ರಾಂಗೆ 0.45 ಪೈಸೆ ಏರಿಕೆ ಕಂಡಿದೆ. ಮುಂದಿನ ತಿಂಗಳು ಹಬ್ಬ ಹರಿದಿನಗಳು ಹೆಚ್ಚಾಗಲಿದ್ದು ಚಿನ್ನ ಬೆಳ್ಳಿ ದರವೂ ದುಬಾರಿಯಾಗುವ ಸಾಧ್ಯತೆ ಇದೆ ಎಂದು ಚಿನಿವಾರ ಪೇಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಅಪರಂಜಿ ಚಿನ್ನದ ದರ ಎಷ್ಟಿದೆ?

ಬಹುತೇಕರು 24 ಕ್ಯಾರೆಟ್‌ ಪರಿಶುದ್ಧ ಅಪರಂಜಿ ಚಿನ್ನ ಖರೀದಿಸಲು ಬಯಸುತ್ತಾರೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಅಪರಂಜಿ ಚಿನ್ನದ ದರ ಇಳಿಮುಖವಾಗಿದೆ. ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,907 ರೂ. ಇದೆ. ನಿನ್ನೆಯ 5,916 ರೂ.ಗೆ ಹೋಲಿಸಿದರೆ -9 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,256 ರೂ. ನೀಡಬೇಕಾಗುತ್ತದೆ. ನಿನ್ನೆ 47,328 ರೂ. ಇತ್ತು. ಇಂದು -72 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,070 ರೂ. ಇದೆ. ನಿನ್ನೆಯ 59,160 ರೂ. ಗೆ ಹೋಲಿಸಿದರೆ -90 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,90,700 ರೂ. ನೀಡಬೇಕು. ನಿನ್ನೆಯ 5,91,600 ರೂ.ಗೆ ಹೋಲಿಸಿದರೆ ಇಂದು 900 ರೂ. ಇಳಿಕೆಯಾಗಿದೆ

22 ಕ್ಯಾರೆಟ್‌ ಚಿನ್ನದ ದರ ಎಷ್ಟಿದೆ?

ಅಪರಂಜಿ ಬೇಡ, 22 ಕ್ಯಾರೆಟ್‌ ಚಿನ್ನದ ಓಲೆ, ಸರ, ನೆಕ್ಲಸ್‌, ಬಳೆ ಖರೀದಿಸೋಣ ಎಂದುಕೊಳ್ಳುವವರಿಗೂ ಇಂದು ನಿರಾಸೆಯಾಗದು. ಕರ್ನಾಟಕ ಮತ್ತು ಹೊರರಾಜ್ಯಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ದರ ಇಳಿಕೆ ಕಂಡಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,415 ರೂ ಇದೆ. ನಿನ್ನೆಯ 5,425 ರೂ ದರಕ್ಕೆ ಹೋಲಿಸಿದರೆ -10 ರೂ., ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,320 ರೂ ಆಗಿದೆ. ನಿನ್ನೆ 43,400 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು -80 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,150 ರೂ. ಇದೆ. ನಿನ್ನೆಯ 54,250 ರೂ. ಗೆ ಹೋಲಿಸಿದರೆ -100 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,41,500 ರೂ. ನೀಡಬೇಕು. ನಿನ್ನೆಯ 5,42,500 ರೂ.ಗೆ ಹೋಲಿಸಿದರೆ ಇಂದು 1000 ರೂ. ಇಳಿಕೆಯಾಗಿದೆ.

ಕರ್ನಾಟಕದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,150 ರೂ. ಇದೆ. ಮಂಗಳೂರು 54,150 ರೂ., ಮೈಸೂರಿನಲ್ಲಿ 54,150 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,070 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ.

ಹೊರರಾಜ್ಯಗಳಲ್ಲಿ ಇಂದಿನ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: ಚೆನ್ನೈನಲ್ಲಿ 54,570 ರೂ., ಮುಂಬೈನಲ್ಲಿ 54,150 ರೂ., ದೆಹಲಿಯಲ್ಲಿ 54,300 ರೂ., ಕೋಲ್ಕತಾದಲ್ಲಿ 54,150 ರೂ., ಹೈದರಾಬಾದ್‌ 54,150 ರೂ., ಕೇರಳ 54,150 ರೂ., ಪುಣೆ 54,150 ರೂ., ಅಹಮದಾಬಾದ್‌ 54,200 ರೂ., ಜೈಪುರ 54,300 ರೂ., ಲಖನೌ 54,300 ರೂ., ಕೊಯಮುತ್ತೂರು 54,570 ರೂ., ಮಧುರೈ 54,570 ರೂ. ಹಾಗೂ ವಿಜಯವಾಡ 54,150 ರೂ., ಇದೆ.

24 ಕ್ಯಾರೆಟ್‌ ಚಿನ್ನದ ದರ: ಚೆನ್ನೈನಲ್ಲಿ 59,560 ರೂ., ಮುಂಬೈನಲ್ಲಿ 59,070 ರೂ., ದೆಹಲಿಯಲ್ಲಿ 59,220 ರೂ., ಕೋಲ್ಕತಾದಲ್ಲಿ 59,070 ರೂ., ಹೈದರಾಬಾದ್‌ 59,070 ರೂ., ಕೇರಳ 59,070 ರೂ., ಪುಣೆ 59,070 ರೂ., ಅಹಮದಾಬಾದ್‌ 59,120 ರೂ., ಜೈಪುರ 59,220 ರೂ., ಲಖನೌ 59,220 ರೂ., ಕೊಯಮುತ್ತೂರು 59,560 ರೂ., ಮದುರೈ 59,560, ವಿಜಯವಾಡ 59,070 ರೂ. ಇದೆ.

ಬೆಳ್ಳಿ ದರ ಎಷ್ಟು?

ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರ ತುಸು ಏರಿಕೆ ಕಂಡಿದೆ ನೀವು ಒಂದು ಕೆಜಿ ಬೆಳ್ಳಿ ಖರೀದಿಸುವುದಾದರೆ ನಿನ್ನೆಗಿಂತ 450 ರೂಪಾಯಿ ಹೆಚ್ಚು ಹಣ ನೀಡಬೇಕು. ಒಂದು ಗ್ರಾಂ ಬೆಳ್ಳಿಗೆ 71.70 ರೂ., 8 ಗ್ರಾಂ ಬೆಳ್ಳಿಗೆ 573.60 ರೂ., 10 ಗ್ರಾಂ ಬೆಳ್ಳಿ ದರ 717 ರೂ., 100 ಗ್ರಾಂ ಬೆಳ್ಳಿಗೆ 7,170 ಮತ್ತು 1 ಕೆ.ಜಿ. ಬೆಳ್ಳಿ ದರ 71,700 ರೂಪಾಯಿ ಇದೆ.

ಚಿನ್ನದ ದರ ಇಳಿಕೆ ಅಥವಾ ಏರಿಕೆಯ ಮೇಲೆ ಜಾಗತಿಕ ಪ್ರಭಾವವೂ ಇರುತ್ತದೆ. ಅಮೆರಿಕ ಮತ್ತು ಚೀನಾದ ಸಂಬಂಧ, ಷೇರುಪೇಟೆಯ ಏರಿಳಿತ, ಹೂಡಿಕೆದಾರರ ಸೆಂಟಿಮೆಂಟ್‌ ಇತ್ಯಾದಿಗಳು ಬುಲಿಯನ್‌ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.