Gyanvapi Mosque: ಎಎಸ್‌ಐ ಸಮೀಕ್ಷೆಯ ನಡುವೆ ಜ್ಞಾನವಾಪಿ ಸಮಿತಿಯ ವಿಲೇವಾರಿಯಾದ ಮನವಿಗೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gyanvapi Mosque: ಎಎಸ್‌ಐ ಸಮೀಕ್ಷೆಯ ನಡುವೆ ಜ್ಞಾನವಾಪಿ ಸಮಿತಿಯ ವಿಲೇವಾರಿಯಾದ ಮನವಿಗೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್‌

Gyanvapi Mosque: ಎಎಸ್‌ಐ ಸಮೀಕ್ಷೆಯ ನಡುವೆ ಜ್ಞಾನವಾಪಿ ಸಮಿತಿಯ ವಿಲೇವಾರಿಯಾದ ಮನವಿಗೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್‌

Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಪುರಾತತ್ತ್ವ ಸರ್ವೇಕ್ಷಣಾಲಯದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿರುವಾಗಲೇ ಜು.24ರಂದು ಅಚಾತುರ್ಯದಿಂದಾಗಿ ಮಸೀದಿ ಸಮಿತಿಯ ಅರ್ಜಿ ವಿಲೇವಾರಿಯಾಗಿತ್ತು. ಸುಪ್ರೀಂ ಕೋರ್ಟ್‌ ಬುಧವಾರ ಆ ಅರ್ಜಿಗೆ ಮರುಜೀವ ನೀಡಿತು.

ಎಎಸ್‌ಐ ತಂಡವು ಸೋಮವಾರ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ಸಂದರ್ಭ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿಯ ಕಾವಲು.
ಎಎಸ್‌ಐ ತಂಡವು ಸೋಮವಾರ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ಸಂದರ್ಭ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿಯ ಕಾವಲು. (HT_PRINT / ANI)

ನವದೆಹಲಿ: ಜ್ಞಾನವಾಪಿ ಮಸೀದಿ (Gyanvapi Mosque) ಆವರಣದಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ (Archaeological Survey of India ) ಕೆಲಸ ಪ್ರಗತಿಯಲ್ಲಿರುವಾಗಲೇ ಜುಲೈ 24ರಂದು 'ಅಚಾತುರ್ಯದಿಂದ' ವಿಲೇವಾರಿ ಆಗಿದ್ದ ಜ್ಞಾನವಾಪಿ ಸಮಿತಿಯ ಮನವಿಗೆ ಸುಪ್ರೀಂ ಕೋರ್ಟ್ (Supreme Court Of India) ಬುಧವಾರ ಮರುಜೀವ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ನೇತೃತ್ವದ ಪೀಠವು ಜ್ಞಾನವಾಪಿ ಮಸೀದಿಯ ನಿರ್ವಹಣಾ ಸಮಿತಿಯ ಅಂಜುಮನ್ ಇಂತೆಜಾಮಿಯಾವನ್ನು ಪ್ರತಿನಿಧಿಸುವ ಹಿರಿಯ ವಕೀಲ ಹುಜೆಫಾ ಅಹ್ಮದಿ ಅವರು ಮಂಡಿಸಿದ ವಾದವನ್ನು ಅಂಗೀಕರಿಸಿತು. ಎಎಸ್‌ಐ ಕೆಲಸವನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಮನವಿಗೆ ವ್ಯತಿರಿಕ್ತವಾಗಿ ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಅಜಾಗರೂಕತೆಯಿಂದ ಮುಖ್ಯ ಮನವಿಯನ್ನು ವಿಲೇವಾರಿ ಮಾಡಿದೆ ಎಂದು ಅಹ್ಮದಿ ಹೇಳಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಉತ್ತರ ಪ್ರದೇಶ ಸರ್ಕಾರ ಮತ್ತು ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ ಸ್ಪೆಷಲ್‌ ಲೀವ್‌ ಪಿಟಿಷನ್‌ನ ಪುನರುಜ್ಜೀವನಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದರು.

ಪ್ರಾಥಮಿಕ ಮನವಿಯಲ್ಲಿ, ಮಸೀದಿ ಸಮಿತಿಯು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಪ್ರೊಸೀಜರ್ ಕೋಡ್‌ನ ಆದೇಶ VII ನಿಯಮ 11 (ಸಿ) ಅಡಿಯಲ್ಲಿ ಹಿಂದು ಸಂಘಟನೆಗಳು ಸಲ್ಲಿಸಿದ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿತ್ತು. ವಜಾಗೊಳಿಸಲು ಆಧಾರವಾಗಿ ಅಸಮರ್ಪಕವಾಗಿ "ಸ್ಟ್ಯಾಂಪ್ ಮಾಡಿದ ಮತ್ತು ಅಧಿಕೃತ" ಕಾಗದದ ಮೇಲೆ ಫೈಲಿಂಗ್ ಮಾಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಗತಿಯಲ್ಲಿದೆ ಅಲಹಾಬಾದ್‌ ಹೈಕೋರ್ಟ್‌ನಲ್ಲಿರುವ ಪ್ರಕರಣದ ವಿಚಾರಣೆ

ಏತನ್ಮಧ್ಯೆ, ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚಿಸಿದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ಪುನರಾರಂಭಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಮಂಗಳವಾರ ಪ್ರಕರಣದ ವಾದಗಳನ್ನು ಆಲಿಸಿದರು ಮತ್ತು ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಎಎಸ್‌ಐ ಸಮೀಕ್ಷೆಯನ್ನು ಮಂಗಳವಾರ, ಬುಧವಾರ ಸಂಜೆ 5 ಗಂಟೆಯವರೆಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಿದ ನಂತರ ಸುಪ್ರೀಂ ಕೋರ್ಟ್, ಮಸೀದಿಯ ನಿರ್ವಹಣೆಯ ಜವಾಬ್ದಾರಿಯುತ ಅಂಜುಮನ್ ಇಂತೇಜಾಮಿಯಾ ಮಸೀದಿಯು ಹೈಕೋರ್ಟ್‌ಗೆ ಮೊರೆ ಹೋಗಿದೆ. ಕೆಳ ನ್ಯಾಯಾಲಯದ ನಿರ್ದೇಶನವನ್ನು ಪ್ರಶ್ನಿಸಲು ಮಸೀದಿ ಆಡಳಿತ ಸಮಿತಿಗೆ ಅವಕಾಶವನ್ನು ಸುಪ್ರೀಂ ಕೋರ್ಟ್‌ ನೀಡಿತು.

ಸಮಿತಿಯನ್ನು ಪ್ರತಿನಿಧಿಸಿ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ಅವರು, ಸುಪ್ರೀಂ ಕೋರ್ಟ್‌ನ ಆದೇಶವು ಬುಧವಾರದಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ತುರ್ತಾಗಿ ಈ ಪ್ರಕರಣವನ್ನು ಉಲ್ಲೇಖಿಸಿ, ಪ್ರಕರಣದ ತ್ವರಿತ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ದಿವಾಕರ್‌ಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಎಲ್ಲಾ ಪಕ್ಷಗಳು ಸಹಮತವಿದ್ದರೆ ಈ ವಿಷಯವನ್ನು ಆಲಿಸಲು ಇಚ್ಛೆ ವ್ಯಕ್ತಪಡಿಸಿದರು. ಪ್ರತಿವಾದಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ರಾಮಮಂದಿರ ಪ್ರಕರಣದಲ್ಲಿ ಎಎಸ್‌ಐ ಸಮೀಕ್ಷೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಲಾಗಿದೆ ಮತ್ತು ಅಂಗೀಕರಿಸಲಾಗಿದೆ ಎಂಬುದನ್ನು ಹೈಲೈಟ್ ಮಾಡಿದರು.

ವಾರಾಣಸಿಯ ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿದೆ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಹಿಂದೂ ದಾವೆದಾರರು ಅದೇ ಸ್ಥಳದಲ್ಲಿ ಹಿಂದೆ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಖಚಿತಪಡಿಸಿಕೊಳ್ಳಲು ಸಮೀಕ್ಷೆಯನ್ನು ಕೋರಿದ್ದರು.

ವಾರಾಣಸಿ ಜಿಲ್ಲಾ ನ್ಯಾಯಾಲಯವು ಎಎಸ್‌ಐಗೆ ಅತ್ಯಾಧುನಿಕ ತಂತ್ರಜ್ಞಾನಗಳಾದ ನೆಲಕ್ಕೆ ನುಗ್ಗುವ ರಾಡಾರ್ ಮತ್ತು ಉತ್ಖನನಗಳಂತಹ ಸಮೀಕ್ಷೆಯನ್ನು ಅಗತ್ಯವಿದ್ದಲ್ಲಿ ಕೈಗೊಳ್ಳಲು ಶುಕ್ರವಾರ ಸೂಚಿಸಿದೆ. ಆದರೆ, ಸೋಮವಾರ ಸುಪ್ರೀಂ ಕೋರ್ಟ್‌ನ ಆದೇಶವು ಆ ಸಮಯದಲ್ಲಿ ಮಸೀದಿ ಸಂಕೀರ್ಣದೊಳಗೆ ಎಎಸ್‌ಐ ತಂಡ ನಡೆಸುತ್ತಿದ್ದ ಸಮೀಕ್ಷೆಯನ್ನು ಸ್ಥಗಿತಗೊಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.