Meftal: ನೋವು ನಿವಾರಕ ಮೆಫ್ಟಾಲ್ ಸೇವನೆಯಿಂದ ಅಡ್ಡ ಪರಿಣಾಮ ಸಾಧ್ಯತೆ; ವೈದ್ಯರು, ರೋಗಿಗಳಿಗೆ ಎಚ್ಚರಿಕೆ ನೀಡಿದ ಆಯೋಗ
ನೋವು ನಿವಾರಕ ಮೆಫ್ಟಾಲ್ ಸೇವನೆಯು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು ಎಂದು ದಿ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (IPC) ಎಚ್ಚರಿಸಿದೆ. ಇದರಿಂದ ಡ್ರೆಸ್ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು ಎಂದು ಐಪಿಸಿ ವರದಿ ತಿಳಿಸಿದೆ.
ಸಾಮಾನ್ಯವಾಗಿ ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರು ನಾವು ಮೊದಲು ಮಾಡುವ ಕೆಲಸ ಪೇನ್ ಕಿಲ್ಲರ್ ಮಾತ್ರೆ ನುಂಗುವುದು. ಬಹುತೇಕರು ಮೆಫ್ಟಾಲ್‌ನಂತಹ ಔಷಧಿ, ಮಾತ್ರೆ ಸೇವಿಸುವ ಮೂಲಕ ತಾತ್ಕಾಲಿಕವಾಗಿ ನೋವು ಶಮನ ಮಾಡಿಕೊಳ್ಳುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಮೆಫ್ಟಾಲ್ ಸೇವಿಸುವವರಿಗೆ ಇಲ್ಲಿದೆ ಒಂದು ಆಘಾತಕಾರಿ ಸುದ್ದಿ.
ದಿ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (IPC) ನೋವು ನಿವಾರಕ (Painkiller) ಮೆಫ್ಟಾಲ್ ((Meftal) ಸೇವನೆಯ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದೆ. ಮೆಫ್ಟಾಲ್‌ನಲ್ಲಿನ ಮೆಫೆನಾಮಿಕ್ ಆಮ್ಲವು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಐಪಿಸಿ ಎಚ್ಚರಿಸಿದೆ. ಮೆಫೆನಾಮಿಕ್, ಇದನ್ನು ಮೆಫ್ಟಾಲ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಇದನ್ನು ನೋವು ನಿವಾರಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮೆಫ್ಟಾಲ್ ಅನ್ನು ಸಾಮಾನ್ಯವಾಗಿ ಸಂಧಿವಾತ, ಅಸ್ಥಿಸಂಧಿವಾತ, ಡಿಸ್ಮೆನೊರಿಯಾ, ಉರಿಯೂತ, ಹಲ್ಲು ನೋವಿನ ಚಿಕಿತ್ಸೆಗಾಗಿ ಒಳಸಲಾಗುತ್ತದೆ. ಇದನ್ನು ಔಷಧಿಯ ರೂಪದಲ್ಲಿ ಮಕ್ಕಳಿಗೂ ನೀಡಲಾಗುತ್ತದೆ. ಮಕ್ಕಳನ್ನು ಬಾಧಿಸುವ ಹೊಟ್ಟೆ ನೋವಿನಂತಹ ಸಮಸ್ಯೆ ನಿವಾರಣೆಗೆ ಇದನ್ನು ನೀಡಲಾಗುತ್ತದೆ.
ಡ್ರೆಸ್ ಸಿಂಡ್ರೋಮ್
ಫಾರ್ಮಾಕೋವಿಜಿಲೆನ್ಸ್ ಪೋಗ್ರಾಂ ಆಫ್ ಇಂಡಿಯಾ (PvPI) ಔಷಧಿಯ ಪ್ರತಿಕೂಲ ಪರಿಣಾಮಗಳು ಹಾಗೂ ಈ ಉತ್ಪನ್ನಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮಗಳ ಘಟನೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದೆ. ಅದರ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ ಮೆಫೆನಾಮಿಕ್ ಆಮ್ಲವು ಇಯೊಸಿನೊಫಲಿಯಾ ಮತ್ತು ಇನ್ನಿತರ ರೋಗ ಲಕ್ಷಣಗಳನ್ನು ಪ್ರಚೋದಿಸುತ್ತದೆ. ಇದನ್ನು ಡ್ರೆಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಎಂದು ಐಪಿಸಿ ವರದಿ ತಿಳಿಸಿದೆ. ಇದು ತೀವ್ರ ಅರ್ಲಜಿಯ ಪ್ರತಿಕ್ರಿಯೆಯಾಗಿದೆ. ಇದರ ರೋಗಲಕ್ಷಣಗಳಲ್ಲಿ ಚರ್ಮದ ದದ್ದು, ಜ್ವರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಔಷಧಿಯನ್ನು ತೆಗೆದುಕೊಂಡ ಎರಡರಿಂದ ಎಂಟು ವಾರಗಳ ನಡುವೆ ಈ ಸಮಸ್ಯೆ ಕಾಣಿಸಬಹುದು ಎಂದೂ ಅದು ಹೇಳಿದೆ.
ನವೆಂಬರ್ 30ರಂದು ಐಪಿಸಿ ಎಚ್ಚರಿಕೆಯ ಪ್ರಕಟಣೆ ಹೊರಡಿಸಿದ್ದು, ಆರೋಗ್ಯ ಕಾರ್ಯಕರ್ತರು, ರೋಗಿಗಳು ಈ ಔಷಧಿ ಬಳಕೆಗೆ ಸಂಬಂಧಿಸಿದ ಪ್ರತಿಕೂಲ ಪರಿಣಾಮದ ಸಾಧ್ಯತೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದೆ.
ಮೆಫ್ಟಾಲ್ ಸೇವನೆಯ ನಂತರ ಈ ರೀತಿಯ ರೋಗಲಕ್ಷಣಗಳು ಕಾಣಿಸಿದರೆ ಜನರು www.ipc.gov.in ಈ ವೆಬ್‌ಸೈಟ್ ಅಥವಾ ಅಂಡ್ರಾಯ್ ಮೊಬೈಲ್ ಆಪ್ ಎಡಿಆರ್, ಪಿವಿಪಿಐ ಮತ್ತು ಪಿವಿಪಿಐ ಸಹಾಯವಾಣಿಯ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಆಯೋಗದ ಅಡಿಯಲ್ಲಿ ಪಿವಿಪಿಐ ರಾಷ್ಟ್ರೀಯ ಸಮನ್ವಯ ಕೇಂದ್ರಕ್ಕೆ ವಿಷಯವನ್ನು ವರದಿ ಮಾಡಬೇಕು. 1800-180-3024 ಸಂಖ್ಯೆ ಹೀಗಿದೆʼ ಎಂದು ಇದು ತನ್ನ ವರದಿಯಲ್ಲಿ ತಿಳಿಸಿದೆ.
ವಿಭಾಗ