ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಾಸುಕಿ: ಭಾರತದಲ್ಲಿ ಪತ್ತೆಯಾದ ಅತಿದೊಡ್ಡ ಹಾವು 50 ಅಡಿಯ ಮೊಸಳೆಯಂತೆ ಇತ್ತು, ನೀವು ತಿಳಿಯಬೇಕಾದ 10 ಅಂಶಗಳಿವು

ವಾಸುಕಿ: ಭಾರತದಲ್ಲಿ ಪತ್ತೆಯಾದ ಅತಿದೊಡ್ಡ ಹಾವು 50 ಅಡಿಯ ಮೊಸಳೆಯಂತೆ ಇತ್ತು, ನೀವು ತಿಳಿಯಬೇಕಾದ 10 ಅಂಶಗಳಿವು

ಭಾರತದಲ್ಲಿ 2005ರಲ್ಲಿ ಪತ್ತೆಯಾದ ಪಳೆಯುಳಿಕೆ ಮೊಸಳೆಯದ್ದಲ್ಲ, ಅತಿ ದೊಡ್ಡ ಹಾವಿನದ್ದು ಎಂಬ ಅಂಶದ ಕಡೆಗೆ ಐಐಟಿ ರೂರ್ಕಿ ತಂಡ ಗಮನಸೆಳೆದಿದೆ. ಭಾರತದಲ್ಲಿ ಪತ್ತೆಯಾದ ಅತಿದೊಡ್ಡ ಹಾವು 50 ಅಡಿಯ ಮೊಸಳೆಯಂತೆ ಇತ್ತು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ 10 ಅಂಶಗಳು ಇಲ್ಲಿವೆ.

ವಾಸುಕಿ: ಭಾರತದಲ್ಲಿ ಪತ್ತೆಯಾದ ಅತಿದೊಡ್ಡ ಹಾವು 50 ಅಡಿಯ ಮೊಸಳೆಯಂತೆ ಇತ್ತು, ವಾಸುಕಿಯನ್ನು ಹಗ್ಗವಾಗಿ ಬಳಸಿರುವ ಸಮುದ್ರ ಮಂಥನದ ನೋಟ (ಎಡ ಚಿತ್ರ), ಕಛ್‌ನ ಉತ್ಖನನ ಪ್ರದೇಶದಲ್ಲಿ ಅತಿದೊಡ್ಡ ಹಾವಿನ ಪಳೆಯುಳಿಕೆ ಸಿಕ್ಕ ಸ್ಥಳ (ಬಲ ಚಿತ್ರ)
ವಾಸುಕಿ: ಭಾರತದಲ್ಲಿ ಪತ್ತೆಯಾದ ಅತಿದೊಡ್ಡ ಹಾವು 50 ಅಡಿಯ ಮೊಸಳೆಯಂತೆ ಇತ್ತು, ವಾಸುಕಿಯನ್ನು ಹಗ್ಗವಾಗಿ ಬಳಸಿರುವ ಸಮುದ್ರ ಮಂಥನದ ನೋಟ (ಎಡ ಚಿತ್ರ), ಕಛ್‌ನ ಉತ್ಖನನ ಪ್ರದೇಶದಲ್ಲಿ ಅತಿದೊಡ್ಡ ಹಾವಿನ ಪಳೆಯುಳಿಕೆ ಸಿಕ್ಕ ಸ್ಥಳ (ಬಲ ಚಿತ್ರ) (Nature)

ನವದೆಹಲಿ/ ರೂರ್ಕಿ: ವಾಸುಕಿ ಸರ್ಪ ಇದ್ದದ್ದು ನಿಜವಾ ಎಂದು ಹುಬ್ಬೇರಿಸುವುದಕ್ಕೆ ಕಾರಣವಾಗಿರುವುದು, ಈ ಕುರಿತು ಚರ್ಚೆಗೆ ಗ್ರಾಸ ಒದಗಿಸುರುವುದು ಗುಜರಾತ್‌ನಲ್ಲಿ ಸಿಕ್ಕ 50 ಅಡಿ ವಾಸುಕಿ ಇಂಡಿಕಸ್ ಪಳೆಯುಳಿಕೆ. ರೂರ್ಕಿ ಐಐಟಿ ತಂಡದ ಉತ್ಖನನ ವರದಿ ಪ್ರಕಾರ ಕಛ್‌ ಪ್ರದೇಶದಲ್ಲಿ ಪತ್ತೆಯಾದ 50 ಅಡಿ ಉದ್ದದ ಅತಿದೊಡ್ಡ ಹಾವು 50 ಅಡಿಯ ಮೊಸಳೆಯಂತೆ ಇತ್ತು.

ಟ್ರೆಂಡಿಂಗ್​ ಸುದ್ದಿ

ಗುಜರಾತ್‌ನ ಕಛ್‌ ಪ್ರದೇಶದಲ್ಲಿ 2005 ರಲ್ಲಿ ಪತ್ತೆಯಾದ ಪಳೆಯುಳಿಕೆ ಮತ್ತು ಇದುವರೆಗೆ ದೈತ್ಯ ಮೊಸಳೆ ಎಂದು ನಂಬಲಾಗಿತ್ತು. ಆದರೆ ಈಗ ಇದು ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವುಗಳಲ್ಲಿ ಒಂದು ಎಂದು ಅಧ್ಯಯನದ ಬಳಿಕ ಸಂಶೋಧಕರು ತೀರ್ಮಾನಕ್ಕೆ ಬಂದಿದ್ದಾರೆ.

ವಾಸುಕಿ ಇಂಡಿಕಸ್‌ ಪತ್ತೆಯಾಗಿರುವುದು ಭೂಮಿಯ ಮೇಲೆ ಜೀವವೈವಿಧ್ಯ ವಿಕಸನ ಪ್ರಕ್ರಿಯೆ, ಭೂಖಂಡದ ಬದಲಾವಣೆ ಮತ್ತು ಅನೇಕ ಜಾತಿಗಳ, ವಿಶೇಷವಾಗಿ ಸರೀಸೃಪಗಳ ಮೂಲಕ್ಕೆ ಒಂದು ಕೊಂಡಿಯಾಗಲಿದೆ ಎಂಬುದು ಸಂಶೋಧಕರ ಅಚಲ ನಂಬಿಕೆ.

ವಾಸುಕಿ ಇಂಡಿಕಸ್‌ ಕುರಿತು ಇದುವರೆಗೆ ತಿಳಿದಿರುವ 10 ಅಂಶಗಳು

1) ಗುಜರಾತ್‌ನ ಕಛ್‌ ಪ್ರದೇಶದಲ್ಲಿ 2005 ರಲ್ಲಿ ಪತ್ತೆಯಾದ ಪಳೆಯುಳಿಕೆ ಮತ್ತು ಇದುವರೆಗೆ ದೈತ್ಯ ಮೊಸಳೆ, ಭಾರತದಲ್ಲಿ ಪತ್ತೆಯಾದ ಇದುವರೆಗಿನ ಅತಿದೊಡ್ಡ ಹಾವು ಎಂಬುದು ಅಧ್ಯಯನದಿಂದ ಸಾಬೀತು.

2) ಕಛ್ ಪ್ರದೇಶದಲ್ಲಿ ಸಿಕ್ಕ ಅತಿ ಉದ್ದದ ಹಾವಿನ ಪಳೆಯುಳಿಕೆ 50 ಅಡಿ ಉದ್ದ, 1000 ಕಿಲೋ ತೂಕ ಎಂದು ಅಂದಾಜಿಸಿದೆ ಅಧ್ಯಯನ ತಂಡ.

3) ಐಐಟಿ ರೂರ್ಕಿಯ ಭೂ ವಿಜ್ಞಾನ ವಿಭಾಗ ಮುಖ್ಯಸ್ಥ ಸುನಿಲ್ ಬಾಜಪೇಯಿ ಅವರ ಪ್ರಕಾರ, ಈ ಸರ್ಪವು ಹಿಂದೊಮ್ಮೆ ಕೊಲಂಬಿಯಾದಲ್ಲಿ ವಾಸಿಸುತ್ತಿದ್ದ ಈಗ ಅಳಿವಿನಂಚಿನಲ್ಲಿರುವ ಟೈಟಾನೊಬೊವಾಕ್ಕಿಂತ ಮತ್ತು ಹೆಬ್ಬಾವಿಗಿಂತ ಉದ್ದ ಅಂದರೆ 11 ಮೀ (36 ಅಡಿ) ಮತ್ತು 15 ಮೀ (49.22 ಅಡಿ) ಉದ್ದ ಇದ್ದಿರಬಹುದು.

4) ಪೌರಾಣಿಕ ಕಥೆಗಳಲ್ಲಿರುವ ಸರ್ಪಗಳ ರಾಜನ ಹೆಸರನ್ನು ಈ ಬೃಹತ್‌ ಗಾತ್ರದ ಸರ್ಪಕ್ಕೆ ಇಡಲಾಗಿದೆ. “ವಾಸುಕಿ ಇಂಡಿಕಸ್‌” ಎಂದು ಗುರುತಿಸಿ ಅಧ್ಯಯನವನ್ನು ಈ ತಂಡ ಕೈಗೊಂಡಿದೆ. ಪೌರಾಣಿಕ ಚಿತ್ರಗಳನ್ನು ಗಮನಿಸಿದರೆ, ಕಥೆಗಳಲ್ಲಿ ಕೂಡ ವಾಸುಕಿಯ ಚಿತ್ರಣವಿದೆ. ಇದು ಭಗವಾನ್ ಶಿವನ ಕತ್ತಿನಲ್ಲಿ ಹಾರದಂತೆ, ಸಮುದ್ರ ಮಂಥನ ನಡೆಯುವಾಗ ಹಗ್ಗದಂತೆ ಬಳಕೆಯಾದ ಉಲ್ಲೇಖವೂ ಇದೆ.

5) ಬೃಹತ್ ಗಾತ್ರದ ಕಾರಣ ಅತ್ಯಂತ ನಿಧಾನಗತಿಯ ಚಲನೆ ಮತ್ತು ಅನಕೊಂಡಾದಂತೆ ಹೊಂಚು ದಾಳಿಯಲ್ಲಿ ಪರಿಣತಿ ಹೊಂದಿರುವಂಥದ್ದು ಎಂದು ಅಧ್ಯಯನ ತಂಡ ವಿಶ್ಲೇಷಿಸಿದೆ.

ಮೊಸಳೆಯದ್ದು ಎಂದು ನಂಬಲಾಗಿದ್ದ ಪಳೆಯುಳಿಕೆ ಹಾವಿನದ್ದು

6) ಅತಿದೊಡ್ಡ ಮ್ಯಾಡ್ಸೊಯಿಡ್ ಹಾವು ಅಳವಿನಂಚಿನ ಗೊಂಡ್ವಾನಾ ಹಾವುಗಳ ಖಂಡಾಂತರ ಪ್ರಸರಣವನ್ನು ಇದು ಸೂಚಿಸುತ್ತದೆ ಎಂದು ಸ್ಪ್ರಿಂಗರ್ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಹೇಳಿದೆ.

7) ಸುನಿಲ್ ಬಾಜಪೇಯಿ ಮತ್ತು ಪೋಸ್ಟ್ ಡಾಕ್ಟೋರೆಲ್ ಫೆಲೋ ದೇಬಜಿತ್ ದತ್ತಾ ಅವರು, "ಈ ಹಾವಿನ ಪಳೆಯುಳಿಕೆಯು ಕಛ್‌ನಲ್ಲಿರುವ ಪನಾಂಧ್ರೋ ಲಿಗ್ನೈಟ್ ಗಣಿಯಲ್ಲಿ ಪತ್ತೆಯಾಗಿದ್ದು, ಇದು ಸುಮಾರು 47 ದಶಲಕ್ಷ ವರ್ಷಗಳ ಹಿಂದೆ ಮಧ್ಯ ಇಯಸೀನ್ ಅವಧಿಗೂ ಹಿಂದಿನ ಕಾಲಮಾನದ್ದಾಗಿರಬಹುದು ಎಂದು ಹೇಳಿದ್ದಾರೆ.

8) ಪರಿಶೋಧನೆಯ ಸಮಯದಲ್ಲಿ, ಸಂಶೋಧಕರು ಸಂಪೂರ್ಣವಾಗಿ ಬೆಳೆದ ಸರೀಸೃಪದ್ದು ಎಂದು ಕಂಡ ಬಂದ 27 ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಕಶೇರುಖಂಡಗಳನ್ನು ಶೇಖರಿಸಿದರು. ಇವುಗಳ ಉದ್ದ ಇದುವರೆಗೆ ತಿಳಿದಿರುವ ಅತಿದೊಡ್ಡ ಮ್ಯಾಡ್ಟ್ಸೊಯಿಡ್ ಹಾವು ಎಂಬುದನ್ನು ಬಿಂಬಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ

9) ಕಛ್‌ನಲ್ಲಿ 2005ರಲ್ಲೇ ಈ ಪಳೆಯುಳಿಕೆ ಪತ್ತೆಯಾಗಿತ್ತು. ಆದರೂ ಇದರ ಅಧ್ಯಯನ ಶುರುವಾಗಿದ್ದು 2022ರಲ್ಲಿ. ಆರಂಭಿಕ ಕಾಲಘಟ್ಟದಲ್ಲಿ ಸಂಶೋಧಕರು ಈ ಪಳೆಯುಳಿಕೆಗಳ ಗಾತ್ರವನ್ನು ಗಮನಿಸಿ ಇದು ಮೊಸಳೆಯದ್ದು ಇರಬಹುದು ಎಂದು ಅಂದಾಜಿಸಿ ಹೇಳಿದ್ದರು.

10) ಅಧ್ಯಯನ ಮಾಡುತ್ತಿರುವಾಗ ಪಳೆಯುಳಿಕೆಗಳಲ್ಲಿ ಹಾವಿನ ಅಸ್ಥಿಯ ಗುಣಲಕ್ಷಣಗಳು ಗೋಚರಿಸಿದ್ದು, ಅದು ದೃಢವಾದ ಬಳಿಕ ಬೃಹತ್ ಹಾವು ಎಂಬುದನ್ನು ಖಚಿತಪಡಿಸಲಾಗಿದೆ ಎಂದು ಸಂಶೋಧಕರು ವರದಿಯಲ್ಲಿ ತಿಳಿಸಿದ್ದಾರೆ.

ಸೈಂಟಿಫಿಕ್ ಅಮೇರಿಕನ್ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022 ರವರೆಗೆ ಪಳೆಯುಳಿಕೆಯನ್ನು ಅವರ ಪ್ರಯೋಗಾಲಯದಲ್ಲಿ ಹಾಕಲಾಯಿತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು. ಅಲ್ಲಿಂದೀಚೆಗೆ ಅಧ್ಯಯನದಲ್ಲೂ ಪ್ರಗತಿಯಾಗಿದ್ದು ಹಂತ ಹಂತವಾಗಿ ವಿವಿಧ ವಿಷಯಗಳು ಬಹಿರಂಗವಾಗುತ್ತಿವೆ.

IPL_Entry_Point