ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Youtuber Income: ಯೂಟ್ಯೂಬ್‌ ಮೂಲಕ 1 ಕೋಟಿ ಸಂಪಾದಿಸಿದ ತಸ್ಲಿಮ್‌ ಮನೆಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ

Youtuber Income: ಯೂಟ್ಯೂಬ್‌ ಮೂಲಕ 1 ಕೋಟಿ ಸಂಪಾದಿಸಿದ ತಸ್ಲಿಮ್‌ ಮನೆಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ

Youtuber income tax raid: ಉತ್ತರ ಪ್ರದೇಶದ ಯೂಟ್ಯೂಬರ್‌ ತಸ್ಲಿಮ್‌ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆತ Trading Hub 3.0 ಎಂಬ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದಾನೆ. ದಾಳಿ ಸಮಯದಲ್ಲಿ ನಗದು, ಚಿನ್ನಾಭರಣ ಪತ್ತೆಯಾಗಿದೆ. ಯೂಟ್ಯೂಬ್‌ ಮೂಲಕ ಆದಾಯ ಗಳಿಸುವ ಯೂಟ್ಯೂಬರ್‌ಗಳು ಸರಕಾರಕ್ಕೆ ತೆರಿಗೆ ಪಾವತಿಸುವುದು ಕಡ್ಡಾಯ.

Youtuber Income: ಯೂಟ್ಯೂಬ್‌  ಮೂಲಕ 1 ಕೋಟಿ ಸಂಪಾದಿಸಿದ ತಸ್ಲಿಮ್‌ ಮನೆಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ
Youtuber Income: ಯೂಟ್ಯೂಬ್‌ ಮೂಲಕ 1 ಕೋಟಿ ಸಂಪಾದಿಸಿದ ತಸ್ಲಿಮ್‌ ಮನೆಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ

ಈಗ ಭಾರತದಲ್ಲಿ ಹಲವು ಜನರು ಯೂಟ್ಯೂಬ್‌ ಮೂಲಕ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ. ಈ ರೀತಿ ಯೂಟ್ಯೂಬ್‌ನಲ್ಲಿ ಹಣ ಸಂಪಾದನೆ ಮಾಡುವವರು ತಮ್ಮ ಆದಾಯಕ್ಕೆ ತಕ್ಕಂತೆ ಸರಕಾರಕ್ಕೆ ತೆರಿಗೆ ಪಾವತಿಸಬೇಕು. ಜತೆಗೆ, ತಮ್ಮ ಆದಾಯವನ್ನು ಮುಚ್ಚಿಡಲು ಪ್ರಯತ್ನಿಸಬಾರದು. ಉತ್ತರ ಪ್ರದೇಶದಲ್ಲಿ ಈಗಾಗಲೇ ಯೂಟ್ಯೂಬ್‌ ಮೂಲಕ ಒಂದು ಕೋಟಿಯವರೆಗೆ ಆದಾಯ ಗಳಿಸಿರುವ ತಸ್ಲಿಮ್‌ ಎಂಬ ವ್ಯಕ್ತಿಯ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಟ್ರೇಡಿಂಗ್‌ ಹಬ್‌ 3.0 ಎಂಬ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಈತನ ಮನೆಗೆ ದಾಳಿ ಮಾಡಿದ ಸಮಯದಲ್ಲಿ 24 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ನಗದು ಮಾತ್ರವಲ್ಲದೆ ಚಿನ್ನಾಭರಣ ಸೇರಿದಂತೆ ಬೆಳೆಬಾಳುವ ಸಾಕಷ್ಟು ವಸ್ತುಗಳು ಆತನ ಮನೆಯಲ್ಲಿ ದೊರಕಿದೆ.

ಟ್ರೆಂಡಿಂಗ್​ ಸುದ್ದಿ

ಯೂಟ್ಯೂಬ್‌ ಮೂಲಕ ಸಂಪಾದನೆ

ತಸ್ಲಿಮ್‌ ಅವರು 2018ರಿಂದ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದಾರೆ. ಟ್ರೇಡಿಂಗ್‌ ಹಬ್‌ ಎನ್ನುವುದು ಇವರ ಜನಪ್ರಿಯ ಯೂಟ್ಯೂಬ್‌ ಚಾನೆಲ್‌. ಯೂಟ್ಯೂಬ್‌ ಮೂಲಕವೇ ಸುಮಾರು 1 ಕೋಟಿ ರೂಪಾಯಿವರೆಗೆ ಸಂಪಾದನೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಈತ ಕಾನೂನುಬಾಹಿರವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ, ಈ ದೂರನ್ನು ಆತನ ಕುಟುಂಬ ನಿರಾಕರಿಸಿದೆ.

ತಸ್ಲಿಮ್‌ 2018ರಲ್ಲಿ ಟ್ರೇಡಿಂಗ್‌ ಹಬ್‌ 3.0 ಎಂಬ ಚಾನೆಲ್‌ ಆರಂಭಿಸಿದ್ದ. ಇದರಲ್ಲಿ ಷೇರುಮಾರುಕಟ್ಟೆಗೆ ಕುರಿತಾದ ಕಂಟೆಂಟ್‌ಗಳನ್ನು ಪ್ರಕಟಿಸುತ್ತಿದ್ದ. 101 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಈ ಚಾನೆಲ್‌ ಹೊಂದಿದೆ. ಇದು ಮಾತ್ರವಲ್ಲದೆ ಲಾಜಿಕ್‌ ಟ್ರೇಡಿಂಗ್‌ ಎಂಬ ಇನ್ನೊಂದು ಯೂಟ್ಯೂಬ್‌ ಚಾನೆಲ್‌ ಅನ್ನೂ ಈತ ಹೊಂದಿದ್ದಾನೆ. ಇದರಲ್ಲಿಯೂ 41 ಸಾವಿರಕ್ಕೂ ಹೆಚ್ಚು ಚಂದಾದಾರರು ಇದ್ದಾರೆ.

ತಸ್ಲಿಮ್‌ ಅನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತನ ಸಹೋದರ ಹೇಳಿದ್ದಾರೆ. ತನ್ನ 1.2 ಕೋಟಿ ರೂಪಾಯಿ ಆದಾಯಕ್ಕೆ 4 ಲಕ್ಷ ರೂಪಾಯಿ ತೆರಿಗೆ ಪಾವತಿಸಿರುವುದಾಗಿ ತಸ್ಲಿಮ್‌ ಸಹೋದರ ಫೆರೋಜ್‌ ಹೇಳಿದ್ದಾರೆ. "ನಾವು ಯಾವುದೇ ತಪ್ಪು ಕೆಲಸ ಮಾಡಿಲ್ಲ. ನಾವು ಯೂಟ್ಯೂಬ್‌ ಚಾನೆಲ್‌ ಹೊಂದಿದ್ದೇವೆ. ಇದರ ಮೂಲಕ ಅತ್ಯುತ್ತಮ ಆದಾಯ ದೊರಕುತ್ತಿದೆ. ಇದು ಸತ್ಯ. ಆದರೆ, ಆದಾಯ ತೆರಿಗೆ ಅಧಿಕಾರಿಗಳ ದಾಳಿಯು ತಪ್ಪಾದ ದಾಳಿ" ಎಂದು ಈತನ ಹೇಳಿಕೆಯನ್ನು ಎನ್‌ಡಿಟಿವಿ ವರದಿ ಮಾಡಿದೆ.

ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ಆದಾಯದ ಮೇಲೆ ಕಣ್ಣು

ಆನ್‌ಲೈನ್‌ ಕಂಟೆಂಟ್‌ ಕ್ರಿಯೆಟರ್‌ಗಳು ಮತ್ತು ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ಆದಾಯದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟಟ್ಟಿದೆ. ಉತ್ಪನ್ನ ಖರೀದಿ, ಸೇವೆ, ಬ್ರಾಂಡ್‌ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಇವರು ಹೊಂದಿದ್ದಾರೆ. ಇಂತಹ ಜನರು ಸೋಷಿಯಲ್‌ ಮೀಡಿಯಾದ ಮೂಲಕ ಸಾಕಷ್ಟು ಆದಾಯ ಗಳಿಸುತ್ತಾರೆ. ಆದರೆ, ತಮ್ಮ ಆದಾಯವನ್ನು ಸರಕಾರದಿಂದ ಮುಚ್ಚಿಡುತ್ತಾರೆ. ಡೇಟಾ ಅನಾಲಿಟಿಕ್ಸ್‌ ತನಿಖೆಯ ಸಂದರ್ಭದಲ್ಲಿ ಇಂತಹ ಮಾಹಿತಿ ಸರಕಾರಕ್ಕೆ ದೊರಕಿದೆ.

ಈ ರೀತಿ ಯೂಟ್ಯೂಬ್‌ ಇತ್ಯಾದಿಗಳ ಮೂಲಕ ಆದಾಯ ಗಳಿಸುವವರು ತಮ್ಮ ಆದಾಯವನ್ನು ಐಟಿಆರ್‌ನಲ್ಲಿ ದಾಖಲಿಸಬೇಕು. ಇಲ್ಲವಾದರೆ, ಇವರು ಸರಕಾರಕ್ಕೆ ತೆರಿಗೆ ಕಟ್ಟದೆ ಮೋಸ ಮಾಡುವವರು ಎಂದು ಪರಿಗಣಿಸಲಾಗುತ್ತದೆ. ಇವರ ವಿರುದ್ಧ ತೆರಿಗೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಈ ರೀತಿ ತಮ್ಮ ಆದಾಯ ತೋರಿಸದ ಹಲವು ಯೂಟ್ಯೂಬರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಕಳುಹಿಸಿದೆ.

IPL_Entry_Point