Chetak Helicopter: ಕೇರಳದ ಕೊಚ್ಚಿಯ ನೌಕಾನೆಲೆಯ ರನ್‌ವೇನಲ್ಲಿ ಚೇತಕ್ ಕಾಪ್ಟರ್ ಪತನ -ವರದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Chetak Helicopter: ಕೇರಳದ ಕೊಚ್ಚಿಯ ನೌಕಾನೆಲೆಯ ರನ್‌ವೇನಲ್ಲಿ ಚೇತಕ್ ಕಾಪ್ಟರ್ ಪತನ -ವರದಿ

Chetak Helicopter: ಕೇರಳದ ಕೊಚ್ಚಿಯ ನೌಕಾನೆಲೆಯ ರನ್‌ವೇನಲ್ಲಿ ಚೇತಕ್ ಕಾಪ್ಟರ್ ಪತನ -ವರದಿ

ಕೇರಳದ ಕೊಚ್ಚಿಯಲ್ಲಿರುವ ಐಎನ್‌ಎಸ್ ಗರುಡಾ ನೆಲೆಯ ರನ್‌ವೇನಲ್ಲಿ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಪತನವಾಗಿರುವುದಾಗಿ ಸುದ್ದಿಯಾಗಿದೆ. ಮಾಧ್ಯಮ ವರದಿಗಳ ಹೊರತಾಗಿ, ನೌಕಾಪಡೆ ಇದನ್ನು ದೃಢೀಕರಿಸಿಲ್ಲ.

ಕೇರಳದ ಕೊಚ್ಚಿಯ ಐಎನ್‌ಎಸ್ ಗರುಡಾ ನೆಲೆಯ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನವಾಗಿರುವ ಸುದ್ದಿ ಬಂದಿದೆ. (ಸಾಂಕೇತಿಕ ಚಿತ್ರ)
ಕೇರಳದ ಕೊಚ್ಚಿಯ ಐಎನ್‌ಎಸ್ ಗರುಡಾ ನೆಲೆಯ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನವಾಗಿರುವ ಸುದ್ದಿ ಬಂದಿದೆ. (ಸಾಂಕೇತಿಕ ಚಿತ್ರ)

ತಿರುವನಂತಪುರ: ಕೊಚ್ಚಿಯ ಐಎನ್‌ಎಸ್ ಗರುಡಾದ ನೌಕಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಶನಿವಾರ ಚೇತಕ್ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ನೌಕಾಪಡೆಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ತರಬೇತಿ ಹಾರಾಟದಲ್ಲಿದ್ದ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಲಿಫ್ಟ್ ಆಫ್ ಆದ ಕೂಡಲೇ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಅಪಘಾತದಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಚಾಪರ್‌ನ ರೋಟರ್ ಬ್ಲೇಡ್‌ಗಳಿಗೆ ಡಿಕ್ಕಿ ಹೊಡೆದು ರನ್‌ವೇಯಲ್ಲಿದ್ದ ನೌಕಾಪಡೆಯ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಮನೋರಮಾ ನ್ಯೂಸ್ ವರದಿ ಮಾಡಿದೆ.

ಭಾರತೀಯ ನೌಕಾಪಡೆ ಹೆಲಿಕಾಪ್ಟರ್ ಪತನದ ಕುರಿತು ಅಧಿಕೃತವಾಗಿ ಏನೂ ಹೇಳಿಲ್ಲ.

ಹೆಲಿಕಾಪ್ಟರ್ ಪತನ ಹೇಗಾಯಿತು- ಮಾಧ್ಯಮ ವರದಿ ಹೇಳುವುದೇನು

ಕೊಚ್ಚಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿರುವ ಐಎನ್‌ಎಸ್ ಗರುಡ ರನ್‌ವೇಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಧ್ಯಾಹ್ನ 2.30ರ ಸುಮಾರಿಗೆ ದಿನನಿತ್ಯದ ತರಬೇತಿ ವೇಳೆ ಚೇತಕ್ ಹೆಲಿಕಾಪ್ಟರ್ ಪತನಗೊಂಡಿದೆ. ಅಪಘಾತದಲ್ಲಿ ಹೆಲಿಕಾಪ್ಟರ್‌ನ ಪೈಲಟ್ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ ಎಂದು ಆರಂಭಿಕ ಮಾಹಿತಿ ತಿಳಿಸಿದೆ. ಅವರು ನೌಕಾ ಕೇಂದ್ರದ ಸಂಜೀವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮನೋರಮಾ ನ್ಯೂಸ್ ವರದಿ ಮಾಡಿದೆ.

ಐಎನ್‌ಎಸ್ ಗರುಡಾ ವಿಶೇಷ

ಐಎನ್‌ಎಸ್‌ ಗರುಡವು ಐಎನ್‌ಎಸ್‌ ವೆಂಡುರುತಿಯ ಪಕ್ಕದಲ್ಲಿದೆ. ದಕ್ಷಿಣ ನೌಕಾ ಕಮಾಂಡ್‌ನ ಪ್ರಧಾನ ಕಚೇರಿಯಾಗಿದೆ. ಐಎನ್‌ಎಸ್‌ ಗರುಡಾ ಒಂದು ಪ್ರಮುಖ ನೌಕಾ ವಾಯು ತರಬೇತಿ ಕೇಂದ್ರ ಮತ್ತು ಕಾರ್ಯಾಚರಣೆಯ ನೆಲೆಯಾಗಿದೆ.

ಐಎನ್‌ಎಸ್‌ ಗರುಡಾ ಎರಡು ಛೇದಿಸುವ ರನ್‌ವೇಗಳನ್ನು ಹೊಂದಿದ್ದು, ಬಹುತೇಕ ಎಲ್ಲಾ ಕಾರ್ಯಾಚರಣೆಯ ವಿಮಾನಗಳು ಇಳಿಯಲು ಮತ್ತು ಟೇಕ್ ಆಫ್ ಮಾಡಲು ಅನುವು ಮಾಡಿಕೊಡುತ್ತದೆ.

ಐಎನ್‌ಎಸ್‌ ಗರುಡ ಭಾರತೀಯ ನೌಕಾಪಡೆಯ ಕಾರ್ಯತಂತ್ರದ ಕಾರ್ಯಾಚರಣಾ ಕೇಂದ್ರವಾಗಿ ಉಳಿದಿದೆ, ಹಲವಾರು ತರಬೇತಿ ಶಾಲೆಗಳು, ಗುಪ್ತಚರ ಕೇಂದ್ರಗಳು, ನಿರ್ವಹಣೆ ಮತ್ತು ದುರಸ್ತಿ ಸೌಲಭ್ಯಗಳು ಮತ್ತು ಪ್ರಾಯೋಗಿಕ ಕೇಂದ್ರಗಳು ಇಲ್ಲಿ ನೆಲೆಗೊಂಡಿವೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.